ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ಕಂದಮಾತೆಯ ದೈವಿಕ ಅನುಗ್ರಹವನ್ನು ವಿವರಿಸುವ ಮತ್ತು ಎಲ್ಲರ ಯೋಗಕ್ಷೇಮಕ್ಕಾಗಿ ಆಕೆಯ ದೈವಿಕ ಆಶೀರ್ವಾದವನ್ನು ಕೋರುವ ಸಂಸ್ಕೃತ ಸುಭಾಷಿತವನ್ನು ಇಂದು ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಬರೆದಿದ್ದಾರೆ:
“ದೇವಿ ಸ್ಕಂದ ಮಾತೆಯನ್ನು ಕೈಮುಗಿದು ಪ್ರಾರ್ಥಿಸುವೆ! ಮಮತಾಮಯಿ ದೇವಿಯು ವಾತ್ಸಲ್ಯ ಮತ್ತು ಆಶೀರ್ವಾದದಿಂದ ಎಲ್ಲರ ಜೀವನ ಬೆಳಗಿಸಲಿ.”
ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕರದ್ವಯಾ|
ಶುಭದಾऽಸ್ತು ಸದಾ ದೇವಿ ಸ್ಕಂದಮಾತಾ ಯಶಸ್ವಿನೀ||
सिंहासनगता नित्यं पद्माश्रितकरद्वया।
शुभदाऽस्तु सदा देवी स्कन्दमाता यशस्विनी॥”
ಸಿಂಹದ ಮೇಲೆ ಸದಾ ಆಸೀನಳಾಗಿರುವ, ಎರಡೂ ಕೈಗಳಲ್ಲಿ ಕಮಲದ ಹೂವುಗಳನ್ನು ಹಿಡಿದಿರುವ ಮಹಿಮಾನ್ವಿತ ದೇವಿ ಸ್ಕಂದಮಾತೆಯು ಯಾವಾಗಲೂ ನಮಗೆ ಶುಭ ಫಲವನ್ನು ದಯಪಾಲಿಸಲಿ.
*****
देवी स्कन्दमाता की करबद्ध प्रार्थना! मेरी कामना है कि अपने ममतामयी स्नेह और आशीर्वाद से वे सबका जीवन आलोकित करें।
— Narendra Modi (@narendramodi) March 23, 2026
सिंहासनगता नित्यं पद्माश्रितकरद्वया।
शुभदाऽस्तु सदा देवी स्कन्दमाता यशस्विनी॥ pic.twitter.com/sUdbx4Zpkg