Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದೇಶಾದ್ಯಂತದ ಆಶಾ ಪ್ರತಿನಿಧಿಗಳಿಂದ ಪ್ರಧಾನಮಂತ್ರಿ ಭೇಟಿ

ದೇಶಾದ್ಯಂತದ ಆಶಾ ಪ್ರತಿನಿಧಿಗಳಿಂದ ಪ್ರಧಾನಮಂತ್ರಿ ಭೇಟಿ

ದೇಶಾದ್ಯಂತದ ಆಶಾ ಪ್ರತಿನಿಧಿಗಳಿಂದ ಪ್ರಧಾನಮಂತ್ರಿ ಭೇಟಿ

ದೇಶಾದ್ಯಂತದ ಆಶಾ ಪ್ರತಿನಿಧಿಗಳಿಂದ ಪ್ರಧಾನಮಂತ್ರಿ ಭೇಟಿ


 

ದೇಶಾದ್ಯಂತದಿಂದ ಆಗಮಿಸಿದ್ದ 90 ಆಶಾ ಪ್ರತಿನಿಧಿಗಳ ಗುಂಪು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ತಮಗೆ ನೀಡಲಾಗುತ್ತಿರುವ ಪ್ರೋತ್ಸಾಹಕಗಳ ಹೆಚ್ಚಳ ಮತ್ತು ವಿಮಾ ಸೌಲಭ್ಯಕ್ಕೆ ಧನ್ಯವಾದ ಅರ್ಪಿಸಿ, ಸಂತಸ ವ್ಯಕ್ತಪಡಿಸಿದರು.
 
ಪ್ರಧಾನಮಂತ್ರಿಯವರು ಇತ್ತೀಚೆಗೆ ತಾವು ವಿಡಿಯೋ ಸಂವಾದದ ಮೂಲಕ ದೇಶಾದ್ಯಂತದ ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರೊಂದಿಗೆ ನಡೆಸಿದ ಸಂವಾದವನ್ನು ಸ್ಮರಿಸಿದರು. ಆಶಾ ಪ್ರತಿನಿಧಿಗಳು ಆ ದಿನ ತಮ್ಮೊಂದಿಗೆ ಹಂಚಿಕೊಂಡ ಅನುಭವ ಮತ್ತು ಕಾರ್ಯವನ್ನು ಅವರು ಪ್ರಶಂಸಿಸಿದರು ಮತ್ತು ಇದು ಖಂಡಿತವಾಗಿಯೂ ಹಲವರಿಗೆ ಪ್ರೇರಣೆ ನೀಡುತ್ತದೆ ಎಂದರು.
 
ಇಂದು, ಆಶಾ ಕಾರ್ಯಕರ್ತೆಯರು ಮತ್ತೆ ಕೆಲವು ವಿಷಯಗಳನ್ನು ಹಂಚಿಕೊಂಡು, ತಮ್ಮ ಸಕಾಲಿಕ ಮಧ್ಯಪ್ರವೇಶದಿಂದಾಗಿ ಹೇಗೆ ಬಡ ಮಾತೆಯರ ಮತ್ತು ಮಕ್ಕಳ ಜೀವ ಉಳಿದಿದೆ ಎಂಬುದನ್ನು ವಿವರಿಸಿದರು.
 
ಪ್ರಧಾನಮಂತ್ರಿಯವರು ಆಶಾ ಕಾರ್ಯಕರ್ತೆಯರ ಕೌಶಲ ಮತ್ತು ಸಮರ್ಪಣಾ ಮನೋಭಾವನ್ನು ಶ್ಲಾಘಿಸಿದರು ಮತ್ತು ಬಿಲ್ ಮತ್ತು ಮಿಲಿಂದಾ ಗೇಟ್ಸ್ ಅವರು ಕೂಡ ಕಾಲಾ ಅಜರ್ ನಂಥ ಕಾಯಿಲೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಆಶಾ ಕಾರ್ಯಕರ್ತರ ಪ್ರಯತ್ನಗಳನ್ನು ಶ್ಲಾಘಿಸಿರುವುದನ್ನು ಸ್ಮರಿಸಿದರು.
 
ಇತರ ಸರ್ಕಾರಿ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯ ನಿರ್ವಹಿಸಿ, ತಮ್ಮ ಗ್ರಾಮಗಳ ಜೀವನ ಮಟ್ಟ ಸುಧಾರಣೆ ಮಾಡಲು ತಮ್ಮ ಶಕ್ತಿ ಮೀಸಲಿಡುವಂತೆ ಪ್ರೋತ್ಸಾಹಿಸಿದರು. ಸರ್ಕಾರದ ಯೋಜನೆಗಳು ಮತ್ತು ಉಪಕ್ರಮಗಳು ಬಡತನದ ವಿರುದ್ಧ ಹೋರಾಡಲು ಹೇಗೆ ಬಡಜನರನ್ನು ಸಬಲೀಕರಿಸುತ್ತಿದೆ ಎಂಬುದನ್ನು ವಿವರಿಸಿದರು.
 
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀ ಜೆ.ಪಿ. ನಡ್ಡಾ ಈ ಸಂದರ್ಭದಲ್ಲಿ ಹಾಜರಿದ್ದರು.