Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದೇಶಾದ್ಯಂತ ಆಶಾ, ಎ.ಎನ್.ಎಂ., ಮತ್ತು ಅಂಗನವಾಡಿ ಕಾರ್ಯಕರ್ತರ ಜೊತೆ ವೀಡಿಯೋ ಸಂವಾದ ಮೂಲಕ ಪ್ರಧಾನ ಮಂತ್ರಿ ಅವರು ಮಾಡಿದ ಭಾಷಣದ ಇಂಗೀಷ್ ಅವತರಣಿಕೆ.


ನಿಮ್ಮೆಲ್ಲರೊಂದಿಗೆ ನೇರ ಮಾತುಕತೆ-ಸಂವಾದ ನಡೆಸುವ ನಿಟ್ಟಿನಲ್ಲಿ ನನ್ನ ಕಡೆಯಿಂದಾಗಿರುವ ಮೊದಲ ಪ್ರಯತ್ನ ಇದು. ದೇಶದ ಪ್ರತೀ ಬ್ಲಾಕ್ ನಿಂದ ನೀವು ನನ್ನ ಜೊತೆ ನೇರ ಸಂವಾದ ನಡೆಸುತ್ತೀರಿ ಎಂದು ನನಗೆ ತಿಳಿಸಲಾಗಿದೆ. ಆಶಾ ಕಾರ್ಯಕರ್ತರು , ಅಂಗನವಾಡಿ ಕಾರ್ಯಕರ್ತರು ಮತ್ತು ಎ.ಎನ್.ಎಂ. ಗಳು , ಇವರೆಲ್ಲ ದೇಶ ಕಟ್ಟುವ ನಿಟ್ಟಿನಲ್ಲಿ ಮೊದಲ ಸಾಲಿನ ಸೈನಿಕರು. ನಿಮ್ಮನ್ನು ಹೊರತುಪಡಿಸಿ ಆರೋಗ್ಯ ಪೂರ್ಣ ತಾಯ್ತನವನ್ನು ಕಲ್ಪಿಸಿಕೊಳ್ಳುವುದೂ ಕಷ್ಟ. ತಾವೆಲ್ಲ ದೇಶದ ಭವಿಷ್ಯತ್ತಿನಲ್ಲಿ ಮತ್ತು ನೆಲೆಗಟ್ಟನ್ನು ಭದ್ರಪಡಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿರುವುದು ನನಗೆ ಹರ್ಷವನ್ನುಂಟುಮಾಡಿದೆ.

ಪ್ರತೀ ಮಗು ಮತ್ತು ತಾಯಿಯ ಸುರಕ್ಷಾ ವಲಯವನ್ನು ಬಲಪಡಿಸುವ ಜವಾಬ್ದಾರಿಯನ್ನು ನಿಮ್ಮ ಹೆಗಲ ಮೇಲೆ ಹೊತ್ತುಕೊಂಡಿರುವಿರಿ. ಈ ಸುರಕ್ಷಾ ವೃತ್ತದಲ್ಲಿ ಮೂರು ಅಂಶಗಳಿವೆ. ಮೊದಲನೆಯದ್ದು ಸೂಕ್ತ ಪೋಷಣೆ ಅಂದರೆ ಸೂಕ್ತ ಆಹಾರ, ಎರಡನೇಯದ್ದು ಚುಚ್ಚುಮದ್ದು ಮತ್ತು ಮೂರನೇಯದ್ದು ಸ್ವಚ್ಚತೆ. ಈ ಸಂಬಂಧಿ ಯೋಜನೆಗಳು, ಕಾರ್ಯಕ್ರಮಗಳು ಬರುವುದಕ್ಕೆ ಮೊದಲು ಇಂತಹ ಅಂಶಗಳ ಬಗ್ಗೆ ಜನತೆಗೆ ತಿಳಿದಿರಲಿಲ್ಲ ಎಂದು ಹೇಳುವುದು ತಪ್ಪಾಗುತ್ತದೆ. ಸ್ವಾತಂತ್ರ್ಯಾ ನಂತರದ ವರ್ಷಗಳಲ್ಲಿ ಈ ಅಂಶಗಳಿಗೆ ಸಂಬಂಧಿಸಿದಂತೆ ಹಲವಾರು ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತಾದರೂ , ಅವುಗಳಿಗೆ ಅಲ್ಪ ಪ್ರಮಾಣದ ಯಶಸ್ಸು ಮಾತ್ರವೇ ಸಿದ್ದಿಸಿತು. ಕಡಿಮೆ ಸಂಪನ್ಮೂಲಗಳನ್ನು ಹೊಂದಿರುವ ದೇಶಗಳು ಈ ವಿಷಯಗಳಲ್ಲಿ ನಮಗಿಂತ ಮುಂದಿವೆ. ಅವರು ನಮಗಿಂತ ಉತ್ತಮವಾಗಿ ಈ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಪರಿಸ್ಥಿತಿಯಿಂದ ಹೊರಬರಲು 2014 ರಲ್ಲಿ ನಾವು ಹೊಸ ವ್ಯೂಹದ ನಿಟ್ಟಿನಲ್ಲಿ ಕಾರ್ಯಾರಂಭಕ್ಕೆ ತೊಡಗಿದೆವು.

ಇಂಧ್ರ ಧನುಷ್ ಆಂದೋಲನದ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ಇದರಡಿಯಲ್ಲಿ ದೇಶದ ಹಿಂದುಳಿದ, ಹಳ್ಳಿಗಾಡಿನ ಪ್ರದೇಶದ ಮಕ್ಕಳಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಲಾಯಿತು. ನೀವು ಇದನ್ನು ತ್ವರಿತಗತಿಯಲ್ಲಿ ಮುಂದೆ ಕೊಂಡೊಯ್ದಿರಿ ಮತ್ತು 85 ಲಕ್ಷಕ್ಕೂ ಅಧಿಕ ಗರ್ಭಿಣಿ ಮಹಿಳೆಯರಿಗೆ ಚುಚ್ಚುಮದ್ದು ಪಡೆದುಕೊಳ್ಳಲು ಸಹಾಯ ಮಾಡಿದಿರಿ. ಪೂರ್ವ ಭಾರತ ಮತ್ತು ಪೂರ್ವ ಭಾಗದ ಉತ್ತರ ಪ್ರದೇಶಗಳ ಕಾರ್ಯಕರ್ತರು ಮಕ್ಕಳು ಎನ್ಸೆಫ್ಯಾಲಿಸ್ ಖಾಯಿಲೆಗೆ ತುತ್ತಾಗುವ ಅಪಾಯವನ್ನು ಕಂಡಿದ್ದರು. ಈ ಖಾಯಿಲೆಯ ವಿರುದ್ದ ಹೋರಾಡಲು ಜಪಾನೀಸ್ ಎನ್ಸೆಫ್ಯಾಲೀಸ್ ಸಹಿತ 5 ಹೊಸ ಚುಚ್ಚುಮದ್ದುಗಳನ್ನು /ಲಸಿಕೆಗಳನ್ನು ಸಾರ್ವತ್ರಿಕ ಲಸಿಕೆ ಕಾರ್ಯಕ್ರಮದಡಿಯಲ್ಲಿ ಆರಂಭಿಸಲಾಯಿತು. ಎರಡು ವರ್ಷಗಳ ಹಿಂದೆ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನವನ್ನು ಆರಂಭಿಸಲಾಯಿತು. ಅದರ ಅನುಷ್ಟಾನದಲ್ಲಿ ನಿಮ್ಮ ಕೊಡುಗೆ ಬಹಳ ಪ್ರಮುಖವಾದುದು. ನೀವು ನನ್ನ ಸಹಚರರು. ಮೊದಲೆಲ್ಲಾ ದೇವರು ಸಾವಿರ ಕೈಗಳನ್ನು ಹೊಂದಿದ್ದ ಎಂದು ಹೇಳಲಾಗುತ್ತಿತ್ತು. ವಾಸ್ತವವಾಗಿ ಸಾವಿರ ಕೈಗಳನ್ನು ಸೇರಿಸಲಾಗದು. ಅದರ ಅರ್ಥ ಆತನ ತಂಡದಲ್ಲಿ 500 ಜನ ಇದ್ದರು, ಅವರು ದೇವರಿಗೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸಹಾಯಹಸ್ತ ನೀಡುತ್ತಿದ್ದರು. ಇಂದು ದೇಶದ ಪ್ರಧಾನ ಮಂತ್ರಿ ಹೇಳಬಹುದು ಏನೆಂದರೆ ಆತನಿಗೆ ಸಾವಿರಾರು ಅಲ್ಲ ಲಕ್ಷಾಂತರ ಕೈಗಳಿವೆ ಎಂದು.ಮತ್ತು ನೀವೆಲ್ಲಾ ನನ್ನ ಕೈಗಳು ಸ್ನೇಹಿತರೇ.

ಸ್ನೇಹಿತರೇ,

ಆರೋಗ್ಯ ಎನ್ನುವುದು ನೇರವಾಗಿ ಪೋಷಣೆಯ ಜೊತೆ ಸಂಪರ್ಕಿಸಲ್ಪಟ್ಟಿದೆ. ಅದಕ್ಕಿಂತ ಹೆಚ್ಚಾಗಿ ಪೋಷಣೆ ಎನ್ನುವುದು ’ಯಾರು ಏನನ್ನು ತಿನ್ನಬೇಕು, ಯಾರು ಹೇಗೆ ತಿನ್ನ ಬೇಕು “ ಎಂಬುದಕ್ಕೆ ಸೀಮಿತವಾದುದಲ್ಲ. ಸ್ವಚ್ಚತೆ ಮತ್ತು ಲಸಿಕೆ ಕೂಡಾ ಅವಶ್ಯಕ. ಕಿರಿಯ ವಯಸ್ಸಿನಲ್ಲಿ ಮದುವೆ ಕೂಡಾ ಈ ಸಮಸ್ಯೆಗೆ ಪ್ರಮುಖ ಕಾರಣ ಎಂಬುದನ್ನು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಮದುವೆ ಮತ್ತು ಗರ್ಭಿಣಿಯಾಗುವುದು ಸಕಾಲದಲ್ಲಿ ಆಗಬೇಕು. ಸಣ್ಣ ವಯಸ್ಸಿನಲ್ಲಿ ಗರ್ಭಿಣಿಯಾಗುವುದೆಂದರೆ ಅದರಿಂದ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಅಪಾಯವಿದೆ.

ಊಟಕ್ಕಿಂತ ಮೊದಲು ಕಡ್ಡಾಯವಾಗಿ ಕೈತೊಳೆಯುವುದು ಹೇಗೆ ? ಇಂತಹ ಹಲವು ವಿಷಯಗಳು ಪೋಷಣೆಯಲ್ಲಿ ಅಡಕವಾಗಿವೆ. ಇದನ್ನು ಮನಸ್ಸಿನಲ್ಲಿಟ್ಟು , ರಾಷ್ಟ್ರೀಯ ಪೋಷಣೆ ಆಂದೋಲನವನ್ನು ದೇಶಾದ್ಯಂತ ರಾಜಸ್ತಾನದ “ಜುಂಜುನು”ವಿನಿಂದ ಈ ವರ್ಷ ಆರಂಭಿಸಲಾಯಿತು. ಇದು ಮಹತ್ವಾಕಾಂಕ್ಷೆಯ ಆಂದೋಲನ. ಇದು ದೊಡ್ಡ ಸವಾಲು , ಆದರೆ ಇದನ್ನು ಬರೇ ನನಗಾಗಿ ನಾನು ಆಯ್ದುಕೊಂಡದ್ದಲ್ಲ. ಇದನ್ನು ಅಂಗೀಕರಿಸಿರುವುದರ ಹಿಂದೆ ನೀವು ನನ್ನ ಮೇಲಿಟ್ಟ ನಂಬಿಕೆ ಅಡಗಿದೆ. ನೀವು ನಿಮ್ಮ ಮೌಲ್ಯವನ್ನು ಸಾಬೀತು ಮಾಡಿದ್ದೀರಿ ಮತ್ತು ಅದನ್ನು ಮತ್ತೊಮ್ಮೆ ತೋರ್ಪಡಿಸಲೂ ಸಿದ್ದರಿದ್ದೀರಿ. ನಾವು ಈ ಸವಾಲನ್ನು ಬರೇ ನಂಬಿಕೆಯ ಕಾರಣಕ್ಕಾಗಿ ಕೈಗೆತ್ತಿಕೊಂಡೆವು. ನಾವು ಪೋಷಣೆ ಆಂದೋಲನದ ಈ ಉದ್ದೇಶಗಳನ್ನು ಪ್ರತೀ ತಾಯಿ ಮತ್ತು ಮಗುವಿಗೆ ತಲುಪಿಸುವಲ್ಲಿ ಸಫಲರಾದದ್ದೇ ಆದಲ್ಲಿ , ಆಗ ಲಕ್ಷಾಂತರ ಜೀವಗಳು ರಕ್ಷಿಸಲ್ಪಡುತ್ತವೆ. ಇದು ದೇಶದ ಅಭಿವೃದ್ಧಿಗೆ ಹೊಸ ವೇಗವನ್ನು ನೀಡುತ್ತದೆ.

ನೀರು ಪಾಲಾಗುತ್ತಿದ್ದ ವ್ಯಕ್ತಿಯನ್ನು ಯಾರೋ ಒಬ್ಬರು ರಕ್ಷಿಸಿದರು ಎಂಬ ಸುದ್ದಿಯನ್ನು ನಾವು ಕೇಳುತ್ತೇವೆ. ಆ ವ್ಯಕ್ತಿ ಆತನ ಗ್ರಾಮದಲ್ಲಿ ಪ್ರಖ್ಯಾತನಾಗುತ್ತನೆ. ಕೆಲವೊಮ್ಮೆ ಆ ವ್ಯಕ್ತಿಯು ರೈಲಿನಡಿಯಲ್ಲಿ ಬೀಳುತ್ತಿದ್ದ ವ್ಯಕ್ತಿಯನ್ನೂ ರಕ್ಷಿಸಿದ ಎಂಬ ಸುದ್ದಿಯನ್ನೂ ಕೇಳುತ್ತೇವೆ. ಎಲ್ಲಾ ಟೆಲಿವಿಷನ್ ವಾಹಿನಿಗಳು ಮತ್ತು ಪತ್ರಿಕೆಗಳು ಇದನ್ನು ಪ್ರಮುಖವಾಗಿ ಪ್ರಸಾರಿಸುತ್ತವೆ. ಆದರೆ ನೀವು ದಿನ ನಿತ್ಯ ನಿಮ್ಮ ಕಠಿಣ ಪರಿಶ್ರಮ, ತ್ಯಾಗ, ತಪಸ್ಸಿನಿಂದಾಗಿ ಸಣ್ಣ, ಮುಗ್ಧ ಮಕ್ಕಳನ್ನು ರಕ್ಷಿಸುತ್ತಿರುವಿರಿ. ವೈದ್ಯರು ತಮ್ಮ ಜೀವನದುದ್ದಕ್ಕೂ ಹಲವಾರು ಜನರ ಜೀವವನ್ನು ಉಳಿಸುತ್ತಾರೆ. ಅಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರು ಅದಕ್ಕಿಂತ ಹೆಚ್ಚು ಜೀವಗಳನ್ನು ರಕ್ಷಿಸುತ್ತಾರೆ ಎಂಬುದಾಗಿ ಕೆಲವೊಮ್ಮೆ ನನಗನಿಸುತ್ತದೆ.

ಈ ಪೋಷಣ ಮಾಸವನ್ನು ಯಶಸ್ಸುಗೊಳಿಸಲು ಕಠಿಣ ಪರಿಶ್ರಮ ಪಡುತ್ತಿರುವ 24 ಲಕ್ಷಕ್ಕೂ ಅಧಿಕ ಕಾರ್ಯಕರ್ತರನ್ನು, ಅವರ ಕೊಡುಗೆ ಮತ್ತು ಜನರ ಜೀವವನ್ನು ಉಳಿಸಲು ಹಗಲು ರಾತ್ರಿ ನಡೆಸುವ ಪ್ರಯತ್ನಕ್ಕಾಗಿ ವಂದಿಸುತ್ತೇನೆ. ಇಂದು ನಿಮಗೆ ವಂದಿಸುವ ಅವಕಾಶ ನನಗೆ ಸಿಕ್ಕಿದೆ. ಆಂದೋಲನ ಸಂದರ್ಭ ನಿಮ್ಮೆದುರು ಇರುವ ಸವಾಲುಗಳನ್ನು, ಸಲಹೆಗಳನ್ನು ಮತ್ತು ಅನುಭವಗಳನ್ನು ಕೇಳಲು ತಯಾರಾಗಿದ್ದೇನೆ, ಯಾಕೆಂದರೆ ನೀವು ನೀಡುವ ಮಾಹಿತಿಗಳು, ವಿವರಗಳು, ಯೋಜನೆಯ ಲೋಪಗಳನ್ನು ನಿವಾರಿಸಲು ಸಹಾಯ ಮಾಡುತ್ತವೆ. ನಮ್ಮಂತಹ ಜನರು ಸದಾ ಹವಾನಿಯಂತ್ರಿತ ಕೊಠಡಿಗಳಲ್ಲಿ ಇರುವವರು, ನೀವು ತಳಮಟ್ಟದಲ್ಲಿ ದಿನ ನಿತ್ಯ ಎದುರಿಸುವ ಸಮಸ್ಯೆಗಳನ್ನು ಪರಿಹರಿಸಲಾರರು. ಇಡೀ ದೇಶ ನಿಮ್ಮನ್ನು ಆಲಿಸುವಾಗ, ಲಕ್ಷಾಂತರ ಇತರ ಸೋದರಿಯರು ಮತ್ತು ಕಾರ್ಯಕರ್ತರು ನಿಮ್ಮ ಅನುಭವಗಳಿಂದ ಕಲಿಯಬಲ್ಲರು. ಆ ಕಾರಣಕ್ಕಾಗಿ ನಾನು ನಿಮ್ಮ ಅಭಿಪ್ರಾಯವನ್ನು ಕೇಳಲು ಇಚ್ಚಿಸಿದ್ದೇನೆ.

***