Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದ್ವಾರಕಾದ ಡಿಡಿಎ ಮೈದಾನದಲ್ಲಿ ನಡೆದ ದಸರಾ ಸಂಭ್ರಮಾಚರಣೆಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಭಾಗಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿರುವ ದ್ವಾರಕಾದ ಡಿಡಿಎ ಮೈದಾನದಲ್ಲಿಂದು ನಡೆದ ದಸರಾ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು. ಪ್ರಧಾನಮಂತ್ರಿಗಳು ವಿಜಯದಶಮಿ ಅಂಗವಾಗಿ ಎಲ್ಲ ಭಾರತೀಯರಿಗೂ ಶುಭ ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಗಳು, ಭಾರತ ಹಬ್ಬಗಳ ಮಾತೃಭೂಮಿ. ನಮ್ಮ ವೈವಿಧ್ಯಮಯ ಸಂಸ್ಕೃತಿಯಿಂದಾಗಿ ಭಾರತದ ಒಂದಲ್ಲಾ ಒಂದು ಭಾಗದಲ್ಲಿ ಸದಾ ಹಬ್ಬಗಳು ಇರುತ್ತವೆ. ಭಾರತದ ಹಬ್ಬಗಳ ಮೂಲಕ ನಾವು ನಮ್ಮ ಸಂಸ್ಕೃತಿಯ ಪ್ರಮುಖ ಅಂಶಗಳನ್ನು ಆಚರಿಸುತ್ತೇವೆ. ನಾವು ನಾನಾ ಬಗೆಯ ಸಂಗೀತ, ಕಲೆ, ಹಾಡು ಮತ್ತು ನೃತ್ಯವನ್ನು ತಿಳಿದುಕೊಳ್ಳುತ್ತೇವೆ ಎಂದು ಅವರು ಹೇಳಿದರು.

ಭಾರತದ ನೆಲ ಶಕ್ತಿ ಸಾಧನೆಗೆ ಹೆಸರಾಗಿದೆ. ಕಳೆದ 9 ದಿನಗಳಿಂದ ನಾವು ಮಾತೆಯನ್ನು ಪೂಜಿಸಿದ್ದೇವೆ. ಆ ಸ್ಪೂರ್ತಿಯನ್ನು ಮುಂದುವರಿಸಿಕೊಂಡು ನಾವು ಮಹಿಳೆಯರ ಸಬಲೀಕರಣವನ್ನು ಕೈಗೊಳ್ಳಬೇಕು, ಅದರ ಜೊತೆಗೆ ಮಹಿಳೆಯರ ಘನತೆ ಎತ್ತಿಹಿಡಿಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮನೆಯ ಲಕ್ಷ್ಮೀ ಎಂದು ಹೇಳಿದ್ದನ್ನು ನೆನಪು ಮಾಡಿಕೊಂಡ ಪ್ರಧಾನಿ, ಈ ಬಾರಿಯ ದೀಪಾವಳಿಯಲ್ಲಿ ನಮ್ಮ ನಾರಿ ಶಕ್ತಿಯ ಸಾಧನೆಗಳನ್ನು ಆಚರಿಸೋಣ ಎಂದು ಕರೆ ನೀಡಿದರು. ಇಂದು ವಿಜಯದಶಮಿ ಮತ್ತು ವಾಯುಪಡೆ ದಿನವೂ ಸಹ ಹೌದು ಎಂದು ಪ್ರಧಾನಿ ಹೇಳಿದರು. ನಮ್ಮ ವಾಯುಪಡೆಯ ಬಗ್ಗೆ ಭಾರತಕ್ಕೆ ಅಸಾಧಾರಣ ಹೆಮ್ಮೆಯಿದೆ ಎಂದರು.

ಮಹಾತ್ಮಾಗಾಂಧಿ ಅವರ 150ನೇ ಜನ್ಮ ದಿನದ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರು ವಿಜಯದಶಮಿ ದಿನದಂದು ಒಂದು ಮನವಿಯನ್ನು ಮಾಡಿದರು, ಅದೆಂದರೆ, ಜನರು ಈ ವರ್ಷ ಒಂದು ಯೋಜನೆಯನ್ನು ಕೈಗೆತ್ತಿಕೊಂಡು ಅದನ್ನು ಸಾಧಿಸಲು ಕಾರ್ಯೋನ್ಮುಖವಾಗಬೇಕು ಎಂದು ಕರೆ ನೀಡಿದರು. ಆ ಯೋಜನೆ- ಆಹಾರವನ್ನು ವ್ಯಯ ಮಾಡದೇ ಇರುವುದಾಗಿರಬಹುದು, ಇಂಧನ ಸಂರಕ್ಷಿಸುವುದಾಗಿರಬಹುದು ಅಥವಾ ನೀರನ್ನು ಉಳಿಸುವುದಾಗಿರಬಹುದು. ಸಾಮೂಹಿಕ ಶಕ್ತಿಯನ್ನು ನಾವು ಅರ್ಥೈಸಿಕೊಳ್ಳಬೇಕಾದರೆ ನಾವು ಭಗವಾನ್ ಶ್ರೀಕೃಷ್ಣ ಮತ್ತು ಭಗವಾನ್ಶ್ರೀ ರಾಮನಿಂದ ಸ್ಪೂರ್ತಿ ಪಡೆಯಬೇಕು ಎಂದರು.

ಪ್ರಧಾನಮಂತ್ರಿ ಅವರು ದ್ವಾರಕ ಶ್ರೀ ರಾಮ ಲೀಲಾ ಸೊಸೈಟಿ ಆಯೋಜಿಸಿದ್ದ ರಾಮ್ ಲೀಲಾ ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ನಡೆದ ದುಷ್ಟತನದ ವಿರುದ್ಧ ಒಳ್ಳೆಯತನಕ್ಕೆ ವಿಜಯದ ಸಂಕೇತವಾಗಿ ರಾವಣ, ಕುಂಭಕರ್ಣ ಮತ್ತು ಮೇಗಂಧ್ ಪ್ರತಿಕೃತಿಗಳ ದಹನಕ್ಕೂ ಪ್ರಧಾನಿ ಸಾಕ್ಷಿಯಾದರು.