ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ದ್ವೀಪಗಳ ಸಮಗ್ರ ಅಭಿವೃದ್ಧಿಗಾಗಿ ಕೈಗೊಂಡ ಕ್ರಮಗಳ ಪರಾಮರ್ಶೆಗಾಗಿ ಮಂಗಳವಾರ ನಡೆದ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನಿಯವರಿಗೆ ನೀತಿ ಆಯೋಗ, ಗೃಹ ವ್ಯವಹಾರಗಳ ಸಚಿವಾಲಯ ಮತ್ತು ಇತರ ಹಿರಿಯ ಅಧಿಕಾರಿಗಳ ಮಾಹಿತಿ ಒಳಗೊಂಡ ಸಮಗ್ರ ಅಭಿವೃದ್ಧಿ ನೋಟದ ಪ್ರಾತ್ಯಕ್ಷಿಕೆಯನ್ನು ತೋರಿಸಲಾಯಿತು.
ಭಾರತವು ಒಟ್ಟು 1282 ಕಚಲಾಚೆಯ ದ್ವೀಪಗಳನ್ನು ಒಳಗೊಂಡಿದೆ, ಇವುಗಳ ಪೈಕಿ ಅಧಿಕಾರಿಗಳು 26 ದ್ವೀಪಗಳನ್ನು ಸಮಗ್ರ ಅಭಿವೃದ್ಧಿಗೆ ಪರಿಗಣಿಸಿದ್ದಾರೆ. ಈ 26 ದ್ವೀಪಗಳು ಭಾರತದ ಕರಾವಳಿಯ ವಿವಿಧ ಪ್ರದೇಶಗಳಲ್ಲಿವೆ, ಇವುಗಳ ಪೈಕಿ ಕೆಲವು ಅಂಡಮಾನ್ ಮತ್ತು ಲಕ್ಷದ್ವೀಪದಲ್ಲೂ ಇವೆ. ಈ ಅಭಿವೃದ್ಧಿಯಲ್ಲಿ ಮೂಲ ಸೌಕರ್ಯ, ಪ್ರವಾಸೋದ್ಯಮ, ಕೃಷಿ (ಸಾವಯವ ಕೃಷಿ ಮತ್ತು ಮೀನುಗಾರಿಕೆ) ಮತ್ತು ತಟಸ್ಥ ಇಂಗಾಲದ ವಿದ್ಯುತ್ ಉತ್ಪಾದನೆಯೂ ಸೇರಿದೆ ಎಂದು ಅಧಿಕಾರಿಗಳು ಪ್ರಧಾನಮಂತ್ರಿಯವರಿಗೆ ತಿಳಿಸಿದರು.
ಬಾರತದ ದ್ವೀಪಗಳ ಸಂಪತ್ತಿನ ಕಾರ್ಯತಂತ್ರಾತ್ಮಕ ಮಹತ್ವವನ್ನು ಪ್ರತಿಪಾದಿಸಿದ ಪ್ರಧಾನಮಂತ್ರಿಯವರು, ಈ ಕ್ಷೇತ್ರದಲ್ಲಿನ ಪ್ರವಾಸೋದ್ಯಮ ಸಾಮರ್ಥ್ಯದ ಬಗ್ಗೆಯೂ ಒತ್ತಿ ಹೇಳಿದರು. ದ್ವೀಪಗಳ ಅಭಿವೃದ್ಧಿಗೆ ದೃಢ ಮತ್ತು ವೇಗವಾದ ಯೋಜನೆ ಮಾಡುವಂತೆ ಅಧಿಕಾರಿಗಳಿಗೆ ಪ್ರಧಾನಿ ಸೂಚಿಸಿದರು. ಈ ಪ್ರಯತ್ನದಲ್ಲಿ ಸೌರ ವಿದ್ಯುತ್ ಅನ್ನು ಹೆಚ್ಚಾಗಿ ಬಳಸಿಕೊಳ್ಳುವಂತೆಯೂ ಹೇಳಿದರು.
AKT/HS