Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನವದೆಹಲಿಯ ಕೆಂಪುಕೋಟೆಯ ಮಾಧವ ದಾಸ್ ಉದ್ಯಾನದಲ್ಲಿ ದಸರಾ ಆಚರಣೆಯಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಅನುವಾದ


ವಿಜಯದಶಮಿಯ ದಿನದ ಪವಿತ್ರ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯಗಳು.

ಹಬ್ಬಗಳು ಒಂದು ರೀತಿಯಲ್ಲಿ ನಮ್ಮ ಸಾಮಾಜಿಕ ಮೌಲ್ಯಗಳ ಪ್ರತಿಬಿಂಬವಾಗಿವೆ ಮತ್ತು ಸಮಾಜಕ್ಕೆ ಕಲಿಕೆಯಾಗಿವೆ. ಪ್ರತಿಯೊಂದು ಹಬ್ಬವೂ ನಮ್ಮ ಸಂಘಟಿತ ಶಕ್ತಿ, ಸಾಮಾಜಿಕ ಜವಾಬ್ದಾರಿಗಳಿಗೆ ಸೂಕ್ಷ್ಮ ಸಂವೇದನೆ ಹೆಚ್ಚಿಸಲು ಮತ್ತು ಸಾಮಾಜಿಕ ಪಿಡುಗುಗಳನ್ನು ದೂರಮಾಡುವ ನಿಟ್ಟಿನಲ್ಲಿ ಅವಿಶ್ರಾಂತವಾಗಿ ದುಡಿಯುವ ನಮ್ಮ ಸಂಪ್ರದಾಯವನ್ನು ಪ್ರದರ್ಶಿಸುತ್ತದೆ.  ನಮ್ಮ ಹಬ್ಬಗಳು ಕೃಷಿ ಮತ್ತು ಸುಗ್ಗಿಯೊಂದಿಗೆ, ನದಿ ಮತ್ತು ಪರ್ವತಗಳೊಂದಿಗೆ, ನಮ್ಮ ಇತಿಹಾಸ ಮತ್ತು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯೊಂದಿಗೆ ನಂಟು ಹೊಂದಿವೆ.

ಸಾವಿರಾರು ವರ್ಷಗಳು ಉರುಳಿವೆ ಆದರೂ, ಭಗವಂತ ಶ್ರೀರಾಮನ, ಕೃಷ್ಣನ ಪುರಾಣಗಳು ನಮ್ಮ ಸಾಮಾಜಿಕ ಪರಿಸರದಲ್ಲಿ ಸ್ಫೂರ್ತಿಯ ಸೆಲೆಯಾಗಿವೆ.ಅವು ನಮ್ಮಲ್ಲಿ ಜಾಗೃತಿಯ ಮೂಲವಾಗಿವೆ. ನವರಾತ್ರಿಯ ಪವಿತ್ರ ಪರ್ವದ ಬಳಿಕ, ಇಂದು ವಿಜಯದಶಮಿಯನ್ನು ಆಚರಿಸುತ್ತಿದ್ದೇವೆ, ಇದರಲ್ಲಿ ರಾವಣನ ಪ್ರತಿಕೃತಿಯ ದಹನದ ಸಂಪ್ರದಾಯವೂ ಇದೆ. ಇದು ಕೂಡ ನಮ್ಮ ಶ್ರೇಷ್ಠ ಪರಂಪರೆಯ ಭಾಗವಾಗಿದೆ. ಆದಾಗ್ಯೂ, ಜವಾಬ್ದಾರಿಯುತ ಪ್ರಜೆಯಾಗಿ, ದುಷ್ಟ ಶಕ್ತಿಯನ್ನು ನಿಗ್ರಹಿಸಲು, ಇದು ನಮ್ಮ ಬದ್ಧತೆಯ ಕರ್ತವ್ಯವಾಗಿದೆ ಮತ್ತು ಈ ವಿಷಯದಲ್ಲಿ ಜಾಗೃತಿ ಮೂಡಿಸಲು ಸಮಾಜದಲ್ಲಿ ಆವೇಗವನ್ನು ಮೂಡಿಸಬೇಕಾಗಿದೆ.

ಹಬ್ಬಗಳು ಕೇವಲ ಮನರಂಜನೆಗಾಗಿ ಮಾತ್ರವಲ್ಲ, ಅದರ ಹಿಂದೆ ಒಂದು ಉದ್ದೇಶವಿರಬೇಕು. ನಾವು ನಮ್ಮ ದೇಶಕ್ಕೆ ಧನಾತ್ಮಕವಾಗಿ ಏನಾದರೂ ಮಾಡುವ ಸಂಕಲ್ಪ ಮಾಡಬೇಕು. ಪ್ರಭು ಶ್ರೀರಾಮ ಅಯೋಧ್ಯೆಯಲ್ಲಿ ಉಟ್ಟಬಟ್ಟೆಯಲ್ಲೇ ಹೊರಟು ರಸ್ತೆಯಲ್ಲಿ ನಡೆಯುತ್ತಾ ಸಂಘಟನ ಶಕ್ತಿಯ ಇಷ್ಟು ದೊಡ್ಡ ಕೌಶಲವನ್ನು ತಿಳಿಸಿದನೆಂದರೆ, ಶ್ರೀಲಂಕಾ ವಿಜಯದಲ್ಲಿ ಸಮಾಜದ ಎಲ್ಲ ವರ್ಗದ ವ್ಯಕ್ತಿಗಳೂ ಆತನೊಂದಿಗೆ ಕೈಜೋಡಿಸುತ್ತಾ ಹೋದರು ಎಂಬುದನ್ನು ಯಾರಾದರೂ ಕಲ್ಪಿಸಿಕೊಳ್ಳಲು ಸಾಧ್ಯವೇ. ನರರು, ವಾನರರು, ಪ್ರಕೃತಿ ಎಲ್ಲರೂ ರಾಮನಿಗೆ ಬೆಂಬಲ ನೀಡಿದರು. ಇದು ಆತನ ಅದ್ಭುತ ಶಕ್ತಿ. ಆಗ ಪ್ರಭು ಶ್ರೀರಾಮಚಂದ್ರ ಇಷ್ಟು ದೊಡ್ಡ ಸಾಮರ್ಥ್ಯವನ್ನು ಜೋಡಿಸುತ್ತಾ ಹೋದರು. ಅವರ ವಿಜಯದ ನಂತರವೂ, ರಾಮ, ಅಷ್ಟೇ ನಮ್ರತೆಯೊಂದಿಗೆ ಜನ ಸಮಾಜಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದರು.

ಈ ವಿಜಯದಶಮಿಯ ದಿನ, ನಾವು ಭಾರತ 2022ರಲ್ಲಿ 75ನೇ ಸ್ವಾತಂತ್ರ್ಯೋತ್ಸವ ಆಚರಿಸುವ  ಹೊತ್ತಿಗೆ, ನಾವು ನಮ್ಮ ದೇಶಕ್ಕೆ ಧನಾತ್ಮಕವಾಗಿ ಏನಾನ್ನಾದರೂ ಕೊಡುಗೆ ನೀಡುವ ಸಂಕಲ್ಪ ಮಾಡೋಣ. ನಮ್ಮ ಸಂಕಲ್ಪ ಸಿದ್ಧಿಗಾಗಿ ಇರಬೇಕು. ಈ ದೇಶದ ಹೆಮ್ಮೆಯ ನಾಗರಿಕರಾಗಿ ನಾವು 2022ರ ಹೊತ್ತಿಗೆ ಈ ದೇಶಕ್ಕಾಗಿ ಧನಾತ್ಮಕ ಕೊಡುಗೆ ನೀಡುವ ಸಂಕಲ್ಪ ಮಾಡಿದರೆ, ನಮ್ಮ ಸ್ವಾತಂತ್ರ್ಯಯೋಧರು ಕಂಡ ನವ ಭಾರತದ ಕನಸು ನನಸು ಮಾಡಲು ಸಾಧ್ಯವಾಗುತ್ತದೆ. ನಾವು ಕೂಡ ಪ್ರಭು ಶ್ರೀರಾಮನಂತೆ ನಮ್ಮ ದೇಶಕ್ಕೆ ಧನಾತ್ಮಕವಾಗಿ ಏನನ್ನಾದರೂ ನೀಡುವ ಸಂಕಲ್ಪ ಮಾಡೋಣ. ನಿಮ್ಮೆಲ್ಲರಿಗೂ ತುಂಬಾ ತುಂಬಾ ಶುಭ ಕಾಮನೆಗಳು. ಮತ್ತೊಮ್ಮೆ ನಿಮ್ಮೆಲ್ಲರಿಗೂ ಹೃತ್ಪೂರ್ವಕವಾಗಿ ವಿಜಯ ದಶಮಿ ಶುಭಾಶಯಗಳು..

  ****