ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕಳೆದ ಜೂನ್ ನಲ್ಲಿ 1,000 ಕೋಟಿ ರೂಪಾಯಿ ಕಾಪು ನಿಧಿಯೊಂದಿಗೆ ಸ್ಥಾಪಿಸಲಾದ ನವೋದ್ಯಮಗಳ ನಿಧಿಯ ನಿಧಿ (ಎಫ್.ಎಫ್.ಎಸ್.)ಗೆ ಸಂಬಂಧಿಸಿದ ಈ ಕೆಳಗಿನ ಪ್ರಸ್ತಾವಗಳಿಗೆ ತನ್ನ ಅನುಮೋದನೆ ನೀಡಿದೆ.
i. ಎಫ್.ಎಫ್.ಎಸ್.ನಿಂದ ಬೆಂಬಲಿತವಾದ ಪರ್ಯಾಯ ಹೂಡಿಕೆ ನಿಧಿ (ಎ.ಐ.ಎಫ್.ಗಳು) ಗಳು ಕನಿಷ್ಠ ದಿನಾಂಕ 17.02.2016ರ ಗೆಜೆಟ್ ಅಧಿಸೂಚನೆ ಜಿ.ಎಸ್.ಆರ್.180 (ಇ)ಯನ್ವಯ ಅರ್ಹವಾಗುವ ನವೋದ್ಯಮಗಳಿಗೆ ಎಫ್.ಎಫ್.ಎಸ್.ನಿಂದ ಪಡೆಯಲಾದ ಕೊಡುಗೆಯ ಮೊತ್ತದ ಕನಿಷ್ಠ ಎರಡರಷ್ಟು ಹೂಡಿಕೆ ಮಾಡಬೇಕು. ತರುವಾಯ, ನವೋದ್ಯಮಕ್ಕೆ ನೀಡಲು ಬದ್ಧವಾದ ಮೊತ್ತವು ಸಂಪೂರ್ಣವಾಗಿ ನವೋದ್ಯಮಗಳು ನಿಲ್ಲುವ ಮುನ್ನ ಬಿಡಗಡೆ ಮಾಡದಿದ್ದಲ್ಲಿ ಫಂಡಿಂಗ್ ನ ಬಾಕಿ ಆನಂತರ ಮುಂದುವರಿಯುತ್ತದೆ.
ii. ಕಾನೂನು ಮತ್ತು ತಾಂತ್ರಿಕ ಅಂದಾಜು, ವೆಂಚರ್ ಬಂಡವಾಳ ಹೂಡಿಕೆ ಸಮಿತಿ ಸಭೆ ಆಯೋಜನೆ, ತೊಡಗಿಕೊಳ್ಳುವ ಇತ್ಯಾದಿ ನಡೆಸಲು ತಗಲುವ ಕಾರ್ಯನಿರ್ವಹಣಾ ವೆಚ್ಚಗಳನ್ನು ಎಐಎಫ್ ಗಳ ಮತ್ತು ಬಾಕಿಗೆ ಮಾಡಿದ ಬದ್ಧತೆಯ ಶೇ.0.50ರಷ್ಟನ್ನು ಎಫ್.ಎಫ್.ಎಸ್.ನಿಂದ ಭರಿಸಲೂ ನಿರ್ಧರಿಸಲಾಗಿದೆ. ಇದನ್ನು ಪ್ರತಿ ಅರ್ಧ ವಾರ್ಷಿಕ ಆರಂಭದಲ್ಲಿ ಅಂದರೆ ಏಪ್ರಿಲ್ 1 ಮತ್ತು ಅಕ್ಟೋಬರ್ 1ರಂದು ನಿಧಿಗೆ ಡೆಬಿಟ್ ಮಾಡಲಾಗುತ್ತದೆ.
ಹಿನ್ನೆಲೆ
22/06/2016ರಂದು ನಡೆದ ಕೇಂದ್ರ ಸಚಿವ ಸಂಪುಟದ ಸಭೆಯಲ್ಲಿ 14 ಮತ್ತು 15ನೇ ಹಣಕಾಸು ಆಯೋಗದ ಆವರ್ತನದಲ್ಲಿ ಅನುಷ್ಠಾನದ ಪ್ರಗತಿ ಮತ್ತು ನಿಧಿಯ ಲಭ್ಯತೆಯ ಆಧಾರದ ಮೇಲೆ ನವೋದ್ಯಮಗಳಿಗೆ ಒಟ್ಟು 10,000 ಕೋಟಿ ರೂಪಾಯಿ ಮೊತ್ತದ ಕಾಪಿನೊಂದಿಗೆ ನಿಧಿಯ ನಿಧಿ (ಎಫ್.ಎಫ್.ಎಸ್.) ಸ್ಥಾಪಿಸುವ ಪ್ರಸ್ತಾಪಕ್ಕೆ ಅನುಮೋದನೆ ನೀಡಲಾಗಿತ್ತು. ಎಫ್.ಎಫ್.ಎಸ್. ಪರ್ಯಾಯ ಹೂಡಿಕೆ ನಿಧಿಗಳಿಗೆ (ಎ.ಐ.ಎಫ್.ಗಳಿಗೆ) ವಿವಿಧ ನವೋದ್ಯಮಗಳಲ್ಲಿ ಆರಂಭಿಕ ಹಂತದಲ್ಲಿ, ಅದರ ಅಂಕುರಾರ್ಪಣೆಯ ಹಂತ ಮತ್ತು ಪ್ರಗತಿಯ ಹಂತದಲ್ಲಿ ಈಕ್ವಿಟಿ ಸಂಪರ್ಕಿತ ಹೂಡಿಕೆ ಮತ್ತು ಈಕ್ವಿಟಿಯ ಹೂಡಿಕೆಗಾಗಿ ಕೊಡುಗೆ ನೀಡಬೇಕು ಎಂದೂ ನಿರ್ಧರಿಸಲಾಗಿತ್ತು.
ಎಫ್.ಎಫ್.ಎಸ್. ಅನ್ನು ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (ಎಸ್.ಐ.ಡಿ.ಬಿ.ಐ.) ಕಾರ್ಯನಿರ್ವಹಿಸುತ್ತದೆ. ಎಫ್.ಎಫ್.ಎಸ್. ಸೆಬಿಗೆ ನೋಂದಾಯಿತ ಪರ್ಯಾಯ ಹೂಡಿಕೆ ನಿಧಿ (ಎ.ಐ.ಎಫ್.ಗಳು) ಎ.ಐ.ಎಫ್.ನ ಕಾಫು ನಿಧಿಗೆ ಸಂಬಂಧಿಸಿದಂತೆ ಗರಿಷ್ಠ ಶೇ.35ರಷ್ಟು ಕೊಡುಗೆ ನೀಡಬಹುದಾಗಿದೆ.
22.06.2016ರಂದು ನಡೆದ ಸಂಪುಟ ಸಭೆ, ಪರ್ಯಾಯ ಹೂಡಿಕೆನಿಧಿ(ಎ.ಐ.ಎಫ್.)ತೆಗೆದುಕೊಂಡ ನಿಧಿಯ ಜೊತೆ ಕಾಪು ನಿಧಿಯ ನಿಧಿಯಲ್ಲಿ ಎಫ್.ಎಫ್.ಎಸ್. ಈಕ್ವಿಟಿಯನ್ನು ಪಡೆಯುವ ಮೂಲಕ ನವೋದ್ಯಮಗಳಲ್ಲಿ ಸಂಪೂರ್ಣವಾಗಿ ಹೂಡಿಕೆ ಮಾಡಲೂ ನಿರ್ಧರಿಸಲಾಗಿತ್ತು. ಎ.ಐ.ಎಫ್.ಗಳ ಹೂಡಿಕೆದಾರರಾದ ವಿವಿಧ ಬಾಧ್ಯಸ್ಥರೊಂದಿಗೆ ಸಂವಾದ ನಡೆಸುವಾಗ ಎ.ಐ.ಎಫ್.ಗಳ ಖಾತೆಯು ಹೂಡಿಕೆಯ ಅಪಾಯವನ್ನು ಸಮರ್ಪಕವಾಗಿ ನಿರ್ವಹಹಿಸಲು ವೈವಿಧ್ಯಮಯವಾಗಿದ್ದು, ಮತ್ತು ಎ.ಐ.ಎಫ್.ನ ನಿಧಿಯ ಸಂಪೂರ್ಣ ಮೊತ್ತವನ್ನು ನವೋದ್ಯಮಗಳಲ್ಲಿ ಹೂಡಿಕೆ ಮಾಡಿದರೆ, ಅದು ಎ.ಐ.ಎಫ್.ನಲ್ಲಿನ ಹೂಡಿಕೆದಾರರು ಒಪ್ಪಿಕೊಳ್ಳಲಾಗದಂಥಹ ಅಪಾಯವನ್ನು ತಂದೊಡ್ಡುತ್ತದೆ ಎಂಬ ಅಂಶ ಇಲಾಖೆಗೆ ತಿಳಿಸಿಕೊಡಲಾಯಿತು.
ಬಾಧ್ಯಸ್ಥರು ಪ್ರಸ್ತಾಪಿಸಿದ ಇತರ ವಿಷಯಗಳೆಂದರೆ, ಎ.ಐ.ಎಫ್. ನಿಂದ ನವೋದ್ಯಮಗಳಿಗೆ ಫಂಡಿಂಗ್ ಮಾಡುವ ಪ್ರಕ್ರಿಯೆಯಲ್ಲಿ ಎ.ಐ.ಎಫ್.ನ ಬದ್ಥತೆಯು ಮತ್ತು ನಿಧಿಯ ಪಾಲಿನ ಬಿಡುಗಡೆಯು ನವೋದ್ಯಮದ ಮೂಲಕ ಆರಂಭವಾಗುವುದಕ್ಕೆ ಅತಿ ದೀರ್ಘಾವಧಿಯದ್ದಾಗಿದೆ. ಹೀಗಾಗಿ ಅಂತಿಮ ಕಂತಿನ ಬಿಡುಗಡೆಗೆ ಮುನ್ನ ನವೋದ್ಯಮದ ವಹಿವಾಟು 25 ಕೋಟಿ ರೂಪಾಯಿಗಳಾದರೂ, ಅದರ ವೃದ್ಧಿಯ ಅಗತ್ಯವನ್ನು ಪೂರೈಸಲು ಅದಕ್ಕೆ ಹಣದ ಅಗತ್ಯ ಇರುತ್ತದೆ. ಜೊತೆಗೆ ನವೋದ್ಯಮಗಳು ತಮ್ಮ ಜೀವನದ ಆವರ್ತನದಲ್ಲಿ ಅಂದರೆ ಆರಂಭಿಕ ಹಂತ, ಅಂಕುರಾರ್ಪಣೆಯ ಹಂತ ಮತ್ತು ವೃದ್ಧಿಯ ಹಂತದಲ್ಲಿ ಅವಕ್ಕೆ ಹಣದ ಅಗತ್ಯ ಇರುತ್ತದೆ ಎಂಬುದಾಗಿತ್ತು.
ಎಸ್.ಐ.ಡಿ.ಬಿ.ಐ. ನ ಹಾಲಿ ನಿಬಂಧನೆಗಳು ಸೆಐಡಿಬಿಐಗೆ ಎ.ಐ.ಎಫ್.ಗಳಿಗೆ ಮಂಜೂರಾತಿಗೆ ಮುನ್ನ ನಡೆವ ಚಟುವಟಿಕೆಗಳಿಗೆ ಪರಿಹಾರ ಪಡೆಯುವ ಅವಕಾಶ ನೀಡುವುದಿಲ್ಲ ಎಂಬುದನ್ನೂ ಇಲಾಖೆ ಗುರುತಿಸಿತು.
ಈ ನಿರ್ಧಾರಗಳನ್ನು ಮೇಲಿನ ಕಳಕಳಿಯ ಹಿನ್ನೆಲೆಯಲ್ಲಿ ಕೈಗೆತ್ತಿಕೊಳ್ಳಲಾಗಿತ್ತು.
AKT/VBA/SH