ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಪೋಲ್ಯಾಂಡ್ ನಡುವೆ ನಾಗರಿಕ ವಿಮಾನಯಾನ ಸಹಕಾರ ಉತ್ತೇಜನಕ್ಕಾಗಿ ತಿಳಿವಳಿಕೆ ಒಪ್ಪಂದ (ಎಂ.ಓ.ಯು.) ಗೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ. ಈ ತಿಳಿವಳಿಕೆ ಒಪ್ಪಂದಕ್ಕೆ ಎರಡೂ ಸರ್ಕಾರಗಳ ಅನುಮೋದನೆಯ ಬಳಿಕ ಎರಡೂ ದೇಶಗಳ ಪರಿವಾಗಿ ಅಂಕಿತ ಹಾಕಲಾಗುತ್ತದೆ. ಈ ತಿಳಿವಳಿಕೆ ಒಪ್ಪಂದವು ಐದು ವರ್ಷಗಳ ಅವಧಿಯದಾಗಿರುತ್ತದೆ.
ಈ ತಿಳಿವಳಿಕೆ ಒಪ್ಪಂದದ ಉದ್ದೇಶವು, ನಾಗರಿಕ ವಿಮಾನಯಾನ ಅದರಲ್ಲೂ ಭಾರತದಲ್ಲಿ ಪ್ರಾದೇಶಿಕ ವಾಯು ಸಂಪರ್ಕ ಸುಧಾರಣೆ ಮತ್ತು ಸ್ಥಾಪನೆಯ ಮಹತ್ವ ಕುರಿತಂತೆ ಪರಸ್ಪರರ ಲಾಭವನ್ನು ಗುರುತಿಸುವುದಾಗಿದೆ. ಜೊತೆಗೆ ಎರಡೂ ಕಡೆಯವರು ಪರಿಸರ ಪರೀಕ್ಷೆ ಅಥವಾ ಅನುಮೋದನೆಗಳು, ವಿಮಾನಗಳ ಸಿಮ್ಯುಲೇಟರ್ಗಳ ಮೇಲ್ವಿಚಾರಣೆ ಮತ್ತು ಅನುಮೋದನೆ, ವಿಮಾನ ನಿರ್ವಹಣೆಯ ಸೌಲಭ್ಯಗಳ ಅನುಮೋದನೆ, ನಿರ್ವಹಣಾ ಸಿಬ್ಬಂದಿಯ ಅನುಮೋದನೆ ಮತ್ತು ವಿಮಾನ ಸಿಬ್ಬಂದಿ ಸದಸ್ಯರ ಅನುಮೋದನೆಯನ್ನು ಮಾನ್ಯಗೊಳಿಸುತ್ತವೆ.
ಈ ತಿಳಿವಳಿಕೆ ಒಪ್ಪಂದದ ಮುಖ್ಯ ಕ್ಷೇತ್ರವು ಈ ಕೆಳಗಿನ ಪರಸ್ಪರ ಸಹಕಾರವನ್ನು ಉತ್ತೇಜಿಸುವ ಮತ್ತು ಒದಗಿಸುವುದಾಗಿದೆ:
a. ಭಾರತ ಮತ್ತು ಪೋಲ್ಯಾಂಡ್ ನಡುವಿನ ಸಹಕಾರಕ್ಕೆ ಪ್ರತೀಕೂಲ ಪರಿಣಾಮ ಬೀರದ ರೀತಿಯಲ್ಲಿ ಕಾನೂನಾತ್ಮಕ ಮತ್ತು ಪ್ರಕ್ರಿಯಾತ್ಮಕ ವಿಚಾರಗಳನ್ನು ಪರಾಮರ್ಶಿಸಿ ನಾಗರಿಕ ವಿಮಾನಯಾನ ಮಾರುಕಟ್ಟೆಗೆ ಬೆಂಬಲ ನೀಡುವುದು.
d.ವಿಮಾನಯಾನ ಸಂಬಂಧಿತ ಸಮಾಲೋಚನೆಗಳು, ಜಂಟಿ ಸಂಘಟನೆ ಮತ್ತು / ಅಥವಾ ಸಮ್ಮೇಳನಗಳ ನಿರ್ವಹಣೆ ಮತ್ತು ವೃತ್ತಿಪರ ವಿಚಾರಸಂಕಿರಣಗಳು, ಕಾರ್ಯಾಗಾರಗಳು, ಮಾತುಕತೆಗಳು ಮತ್ತು ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ಸಂಬಂಧಿಸಿದ ಪಕ್ಷಕಾರರ ಪ್ರತಿನಿಧಿಗಳ ಭಾಗವಹಿಸುವಿಕೆಯೊಂದಿಗೆ ವಾಯುಯಾನ ಸುರಕ್ಷತೆಯ ಇತರ ಚಟುವಟಿಕೆಗಳು; ಮತ್ತು / ಅಥವಾ
e. ಸಚಿವಾಲಯಗಳ ನಡುವೆ ಮಾಹಿತಿ, ಜ್ಞಾನ, ತಜ್ಞತೆ ಮತ್ತು ಅನುಭವಗಳ ವಿನಿಮಯಕ್ಕಾಗಿ ನಿಯಮಿತ ಮಾತುಕತೆ ಅಥವಾ ಸಭೆ; ಮತ್ತು ಎರಡೂ ಪಕ್ಷಕಾರರ ಪರಸ್ಪರ ಹಿತದೃಷ್ಟಿಯಿಂದ ಸಂಬಂಧಿತ ನಾಗರಿಕ ವಿಮಾನಯಾನ ಸುರಕ್ಷತೆ ಸಂಬಂಧಿತ ಅಭಿವೃದ್ಧಿ;
f.ವಾಯುಯಾನ ಸುರಕ್ಷತೆ ಹಿತದ ವಿಚಾರಗಳು ಮತ್ತು ವಿಷಯಗಳ ಕುರಿತಂತೆ ಸಂಶೋಧನೆಗಳು ಮತ್ತು ಅಧ್ಯಯನಕ್ಕೆ ಸಹಯೋಗ.
g. ಮೇಲೆ ಪ್ರಸ್ತಾಪಿಸಲಾದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಇತರ ಯಾವುದೇ ವಿಷಯದ ಸಹಕಾರ.
*********