ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ನಾಲ್ಕನೇ ಭಾರತ- ಜರ್ಮನಿ ಅಂತರ ಸರ್ಕಾರೀಯ ಸಮಾಲೋಚನೆಗಾಗಿ ಸೋಮವಾರ ಬರ್ಲಿನ್ ಗೆ ಆಗಮಿಸಿದರು. ಇದು ಜರ್ಮನಿಗೆ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಎರಡನೇ ದ್ವಿಪಕ್ಷೀಯ ಭೇಟಿಯಾಗಿದೆ.
ಛಾನ್ಸಲರ್ ಆಂಗೆಲಾ ಮರ್ಖೆಲ್ ಅವರು ಪ್ರಧಾನಮಂತ್ರಿ ಮೋದಿ ಅವರಿಗಾಗಿ ಬರ್ಲಿನ್ ಹೊರವಲಯ ಸ್ಕಲಾಸ್ ಮೆಸೆಬರ್ಗ್ ನಲ್ಲಿ ಔಪಚಾರಿಕ ಔತಣವನ್ನೂ ಏರ್ಪಡಿಸಿದ್ದರು. ಸುಮಾರು ಮೂರು ಗಂಟೆಗಳ ಕಾಲ ಸಮಾಲೋಚನೆ ನಡೆಸಲಾಯಿತು. ಸ್ಮಾರ್ಟ್ ಸಿಟಿಗಳು, ಕೌಶಲ ಅಭಿವೃದ್ಧಿ, ಶುದ್ಧ ಇಂಧನ ಇತ್ಯಾದಿ ಸೇರಿದಂತೆ ಪರಸ್ಪರ ಹಿತದ ವಿವಿಧ ವಿಚಾರಗಳ ಚರ್ಚೆಗೆ ಬಂದವು. ಜಿಎಸ್ಟಿ ಸೇರಿದಂತೆ ಭಾರತದ ಆರ್ಥಿಕ ಸುಧಾರಣೆಯ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಯಿತು.
ನಾಯಕರಿಬ್ಬರೂ ಪ್ರಾದೇಶಿಕ ಮತ್ತು ಜಾಗತಿಕ ವಿಚಾರಗಳ ಪರಾಮರ್ಶೆ ನಡೆಸಿದರು. ಪ್ರಧಾನಮಂತ್ರಿ ಮೋದಿ ಅವರು ಐರೋಪ್ಯ ಒಕ್ಕೂಟದ ಸಹಕಾರದ ಮಹತ್ವವನ್ನು ಪುನರುಚ್ಚರಿಸಿದರು ಮತ್ತು ವಿಶ್ವದ ಸ್ಥಿರತೆಯಲ್ಲಿ ಅದೊಂದು ಮಹತ್ವದ ಶಕ್ತಿ ಎಂದರು.
ಆಫ್ಘಾನಿಸ್ತಾನ ಕುರಿತಂತೆ ಇಬ್ಬರೂ ನಾಯಕರು, ಆಫ್ಘನ್ ನೇತೃತ್ವದ – ಆಪ್ಘನ್ ಸ್ವಾಮ್ಯದ ಸಾಮರಸ್ಯ ಪ್ರಕ್ರಿಯೆಯ ಮಹತ್ವವನ್ನೂ ಪ್ರತಿಪಾದಿಸಿದರು. ವಿಲಕ್ಷಣೀಕರಣ ಮತ್ತು ಭಯೋತ್ಪಾದನೆ ವಿಚಾರವೂ ಚರ್ಚೆಯಲ್ಲಿ ಬಂತು. ಚೀಣಾದ ಸೀಮೆ ಮತ್ತು ರಸ್ತೆ ಉಪಕ್ರಮ ಹಾಗೂ ಹವಾಮಾನ ಬದಲಾವಣೆಯ ವಿಚಾರಗಳೂ ಚರ್ಚೆಯಲ್ಲಿ ಬಂದವು.
ಇದಕ್ಕೂ ಮುನ್ನ ಸ್ಕಲಾಸ್ ಮೆಸೆಬರ್ಗ್ ಗೆ ಆಗಮಿಸಿದ ಪ್ರಧಾನಮಂತ್ರಿ ಮೋದಿ ಅವರು ಭೇಟಿ ಪುಸ್ತಕದಲ್ಲಿ ಸಹಿ ಹಾಕಿದರು. ಇಬ್ಬರೂ ನಾಯಕರು ದೇಶೀ ನಿವಾಸದ ಹುಲ್ಲುಹಾಸುಗಳ ಮೇಲೆ ಸುತ್ತಾಡಿದರು.
*****
AKT/NT
In Deutschland angekommen. pic.twitter.com/kcudTH3IGj
— Narendra Modi (@narendramodi) May 29, 2017
Ich bin sicher, dieser Besuch wird zu vorteilhaften Ergebnissen führen und die deutsch-indische Freundschaft vertiefen. pic.twitter.com/jgbL3UOjVe
— Narendra Modi (@narendramodi) May 29, 2017
Reached Germany. I am sure this visit will lead to beneficial outcomes & deepen India-Germany friendship. pic.twitter.com/RdYLWUYeMn
— Narendra Modi (@narendramodi) May 29, 2017
Had a very good interaction with Chancellor Merkel. pic.twitter.com/5SQb5l205M
— Narendra Modi (@narendramodi) May 29, 2017