Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನಾಲ್ಕು ದಶಕಗಳಿಗೂ ಹೆಚ್ಚು ಸಮಯದ ನಂತರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಪ್ರಧಾನಮಂತ್ರಿ ಅಭಿನಂದನೆ


ನಾಲ್ಕು ದಶಕಗಳಿಗೂ ಹೆಚ್ಚು ಸಮಯದ ನಂತರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಈ ಯಶಸ್ಸು ಅತ್ಯುತ್ತಮ ಕೌಶಲ್ಯ ಮತ್ತು ತಂಡದ ಒಗ್ಗಟ್ಟಿನ ಫಲಿತಾಂಶ ಎಂದು ಹೇಳಿದ ಪ್ರಧಾನಮಂತ್ರಿ, ತಂಡದ ದೃಢಸಂಕಲ್ಪವನ್ನು ಸ್ಫೂರ್ತಿದಾಯಕ ಎಂದು ಶ್ಲಾಘಿಸಿದರು.

ತಂಡದ ಮುಂದಿನ ಪ್ರಯತ್ನಗಳಿಗೆ ಶ್ರೀ ಮೋದಿ ಅವರು ಶುಭ ಹಾರೈಸಿದರು ಮತ್ತು ಈ ಯಶಸ್ಸು ದೇಶಾದ್ಯಂತ ಹಾಕಿ ಕ್ರೀಡೆಯ ಜನಪ್ರಿಯತೆಗೆ ಕೊಡುಗೆ ನೀಡಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.

‘ಎಕ್ಸ್’ ನಲ್ಲಿನ ಪೋಸ್ಟ್‌ನಲ್ಲಿ ಪ್ರಧಾನಮಂತ್ರಿಯವರ ಕಚೇರಿ ಹೀಗೆ ಹೇಳಿದೆ:

“ಭಾರತೀಯ ಹಾಕಿಗೆ ಇದೊಂದು ಅತ್ಯಂತ ವಿಶೇಷ ಕ್ಷಣ!

ನಾಲ್ಕು ದಶಕಗಳಿಗೂ ಹೆಚ್ಚು ಸಮಯದ ನಂತರ ಏಷ್ಯನ್ ಕ್ರೀಡಾಕೂಟದಲ್ಲಿ ಪ್ರತಿಷ್ಠಿತ ಚಿನ್ನದ ಪದಕವನ್ನು ಗೆದ್ದು ತಂದಿರುವ ಮಹಿಳಾ ಹಾಕಿ ತಂಡದ ಯಶಸ್ಸನ್ನು ಭಾರತದ ಜನರು ಸಂಭ್ರಮಿಸುತ್ತಿದ್ದಾರೆ. ಇದು ಅತ್ಯುತ್ತಮ ಕೌಶಲ ಮತ್ತು ತಂಡದ ಒಗ್ಗಟ್ಟಿನ ಫಲಿತಾಂಶವಾಗಿದೆ. ಅವರ ದೃಢಸಂಕಲ್ಪವೂ ಅತ್ಯಂತ ಸ್ಫೂರ್ತಿದಾಯಕವಾಗಿದೆ. ತಂಡದ ಮುಂದಿನ ಪ್ರಯತ್ನಗಳಿಗೆ ನನ್ನ ಶುಭಾಶಯಗಳು.

ಈ ಯಶಸ್ಸು ದೇಶಾದ್ಯಂತ ಹಾಕಿ ಕ್ರೀಡೆಯ ಜನಪ್ರಿಯತೆಗೆ ಕೊಡುಗೆ ನೀಡಲಿ: ಪ್ರಧಾನಮಂತ್ರಿ @narendramodi“

 

*****