Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನಾಳೆ ನಾಗ್ಪುರಕ್ಕೆ ಭೇಟಿ ನೀಡಲಿರುವ ಪ್ರಧಾನಿ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ಅಂಬೇಡ್ಕರ್ ಜಯಂತಿ ಸಂದರ್ಭದಲ್ಲಿ ನಾಳೆ ನಾಗಪುರಕ್ಕೆ ಭೇಟಿ ನೀಡಲಿದ್ದಾರೆ.
ತಮ್ಮ ಟ್ವಿಟರ್ ಖಾತೆಯಿಂದ ಸರಣಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿಯವರು, ‘ಅಂಬೇಡ್ಕರ್ ಜಯಂತಿಯ ವಿಶೇಷ ಸಂದರ್ಭದಲ್ಲಿ ನಾಗಪುರಕ್ಕೆ ಭೇಟಿ ನೀಡುತ್ತಿರುವುದು ತಮಗೆ ಗೌರವದ ಸಂಗತಿಯಾಗಿದೆ.

ನಾಗಪುರದಲ್ಲಿ ನಾನು ಡಾ. ಅಂಬೇಡ್ಕರ್ ಅವರು ಆಪ್ತ ನಂಟು ಹೊಂದಿದ್ದ ಪವಿತ್ರ ತಾಣ ದೀಕ್ಷಭೂಮಿಯಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದೇನೆ.
ನಾಳೆ ನಾಗಪುರದಲ್ಲಿ ಹಲವು ಅಭಿವೃದ್ಧಿ ಯೋಜನೆಗಳು ಉದ್ಘಾಟನೆಯಾಗಲಿದ್ದು, ಅವು ಜನರ ಜೀವನದ ಮೇಲೆ ಧನಾತ್ಮಕ ಪರಿಣಾಮ ಬೀರಲ್ಲವಾಗಿವೆ.

ಈ ಅಭಿವೃದ್ಧಿ ಯೋಜನೆಗಳಲ್ಲಿ ಐಐಐಟಿ, ಐಐಎಂ. ಮತ್ತು ಎಐಐಎಂಎಸ್ ಮತ್ತು ಕೊರಾಡಿ ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಉದ್ಘಾಟನೆಯೂ ಸೇರಿದೆ. ನಾನು ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಲಿದ್ದೇನೆ.

ಡಿಜಿ ಧನ್ ಮೇಳದ ಸಮಾರೋಪದಲ್ಲೂ ನಾನು ಭಾಗಿಯಾಗಲಿದ್ದೇನೆ. ಅಲ್ಲಿ, ನಾನು ಲಕ್ಕಿ ಗ್ರಾಹಕ್ ಯೋಜನೆ ಮತ್ತು ಡಿಜಿ ಧನ್ ವ್ಯಾಪಾರ್ ಯೋಜನೆಯ ಮೆಗಾ ಡ್ರಾ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದೇನೆ.

ಡಾ. ಅಂಬೇಡ್ಕರ್ ಅವರ ಕನಸಾಗಿದ್ದ ಬಲಿಷ್ಠ, ಸಮೃದ್ಧ ಮತ್ತು ಸಮಗ್ರ ಭಾರತ ನಿರ್ಮಾಣದ ಪ್ರಯತ್ನದಲ್ಲಿ ನಾವು ಅಚಲರಾಗಿದ್ದೇವೆ.” ಎಂದು ಪ್ರಧಾನಿ ತಿಳಿಸಿದ್ದಾರೆ.

****

AKT/AK