ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ,ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯದ ಅಡಿಯಲ್ಲಿ ಬರುವ ಕೈಗಾರಿಕಾ ನೀತಿ ಮತ್ತು ಪ್ರೋತ್ಸಾಹ ಇಲಾಖೆ ಮತ್ತು ಸಿಂಗಪೂರ ಸರ್ಕಾರದ ಕಾನೂನು ಸಚಿವಾಲಯದ ಬೌದ್ಧಿಕ ಆಸ್ತಿ ಕಚೇರಿ (ಐ.ಪಿ.ಓ.ಸ್.) ನಡುವೆ ಕೈಗಾರಿಕಾ ಆಸ್ತಿ ಕ್ಷೇತ್ರದ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ತನ್ನ ಅನುಮೋದನೆ ನೀಡಿದೆ. ಪ್ರಧಾನಮಂತ್ರಿಯವರು ಬರುವ 2016ರ ಅಕ್ಟೋಬರ್,4-7ರ ನಡುವೆ ಕೈಗೊಳ್ಳಲಿರುವ ಸಿಂಗಾಪೂರ ಭೇಟಿ ವೇಳೆ ಈ ಒಪ್ಪಂದಕ್ಕೆ ಅಂಕಿತ ಹಾಕಲಾಗುತ್ತದೆ.
ಪೇಟೆಂಟ್, ಟ್ರೇಡ್ ಮಾರ್ಕ್ ಮತ್ತು ಕೈಗಾರಿಕಾ ವಿನ್ಯಾಸಗಳ ಕುರಿತ ಕೈಗಾರಿಕಾ ಆಸ್ತಿ ಹಕ್ಕಿನ ವಿಚಾರದಲ್ಲಿ ಈ ತಿಳಿವಳಿಕೆ ಒಪ್ಪಂದ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸಲಿದೆ. ಇದು ಎರಡೂ ವಲಯದಲ್ಲಿ ನಾವಿನ್ಯ, ಸೃಜನಶೀಲತೆ ಮತ್ತು ತಂತ್ರಜ್ಞಾನ ಉನ್ನತೀಕರಣಕ್ಕೆ ಉತ್ತೇಜನ ನೀಡುವ ಉದ್ದೇಶ ಹೊಂದಿದೆ. ಈ ತಿಳಿವಳಿಕೆ ಒಪ್ಪಂದದ ಅಡಿ ಆದ್ಯತೆಯ ಉಪಕ್ರಮಗಳು ಇಂತಿವೆ:
•ಉತ್ತಮ ಪದ್ಧತಿ, ಅನುಭವ ಮತ್ತು ಜ್ಞಾನ ವಿನಿಮಯದ ಮೂಲಕಎರಡೂ ರಾಷ್ಟ್ರಗಳಸಾರ್ವಜನಿಕರು, ವಾಣಿಜ್ಯೋದ್ಯಮ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಭೌದ್ಧಿಕ ಆಸ್ತಿಯ ಅರಿವು ಮೂಡಿಸುವುದು.
•ಬೌದ್ಧಿಕ ಆಸ್ತಿ ಕ್ಷೇತ್ರದಲ್ಲಿ ವಿಶೇಷ ಪರಿಣತಿ ಹೊಂದಿದವರ ವಿನಿಮಯ.
•ಕೈಗಾರಿಕೆಗಳು, ವಿಶ್ವವಿದ್ಯಾಲಯಗಳು, ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು ಮತ್ತು ಸಣ್ಣ ಹಾಗೂ ಮಧ್ಯಮ ಉದ್ಯಮಗಳ ನಡುವೆ ಉತ್ತಮ ಪದ್ಥತಿ, ಅನುಭವ ಮತ್ತು ಜ್ಞಾನ ಪ್ರಸರಣ ಮತ್ತು ವಿನಿಮಯ.
•ಆಧುನೀಕರಣ ಯೋಜನೆಗಳ ಜಾರಿ ಮತ್ತು ಸ್ವಯಂ ಅಭಿವೃದ್ಧಿಗೆ ಸಹಕಾರ.
•ಸ್ಥಳೀಯ ಐಪಿ ಮತ್ತು ವಾಣಿಜ್ಯ ಸಮುದಾಯಕ್ಕೆ ಐಪಿ ಸಂಬಂಧಿತ ತರಬೇತಿಯಲ್ಲಿ ಪಾಲುದಾರಿಕೆ.
ಎರಡೂ ಕಡೆಯ ಉದ್ಯಮಗಳಿಗೆ, ಹೂಡಿಕೆದಾರರಿಗೆ ಮತ್ತು ವಾಣಿಜ್ಯೋದ್ಯಮಕ್ಕೆ ಸುಸ್ಥಿರ ಲಾಭ ತರುತ್ತಿರುವ ನಾವಿನ್ಯ ಮತ್ತು ಐಪಿ ಪರಿಸರ ವ್ಯವಸ್ಥೆಯ ಅನುಭವವನ್ನು ವಿನಿಮಯ ಮಾಡಿಕೊಳ್ಳಲು ಈ ತಿಳಿವಳಿಕೆ ಒಪ್ಪಂದ ಭಾರತಕ್ಕೆ ಅವಕಾಶ ಕಲ್ಪಿಸುತ್ತದೆ. ಎರಡೂ ರಾಷ್ಟ್ರಗಳ ನಡುವಿನ ಉತ್ತಮ ಪದ್ಧತಿಗಳ ವಿನಿಮಯದಿಂದ ಭಾರತದ ಶ್ರೇಣಿಯಲ್ಲಿ ಅದರ ಜನರ ವೈವಿಧ್ಯಮಯ ಇವು ಬೌದ್ಧಿಕ ಸೃಷ್ಟಿಗಳ ವ್ಯಾಪ್ತಿಯ ಬಗ್ಗೆ ಸುಧಾರಿತ ರಕ್ಷಣೆ ಮತ್ತು ಅರಿವು ಮೂಡಿಸುತ್ತದೆ.ಜಾಗತಿಕ ನಾವಿನ್ಯ ಕ್ಷೇತ್ರದಲ್ಲಿ ಪ್ರಮುಖ ಶಕ್ತಿ ಆಗುವ ನಿಟ್ಟಿನಲ್ಲಿ ಭಾರತದ ಪಯಮಕ್ಕೆ ಇದು ಒಂದು ಹೆಗ್ಗುರುತಿನ ಕ್ರಮವಾಗಿದೆ ಮತ್ತು ಇದು ರಾಷ್ಟ್ರೀಯ ಐ.ಪಿ.ಆರ್. ನೀತಿ 2016ರ ಉದ್ದೇಶಗಳಿಗೆ ಇಂಬು ನೀಡುತ್ತದೆ.
AKT/VBA/SH