ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನೀತಿ ಆಯೋಗ ಮತ್ತು ರಷ್ಯಾ ಒಕ್ಕೂಟದ ಆರ್ಥಿಕ ಅಭಿವೃದ್ಧಿ ಸಚಿವಾಲಯ(ಎಂಇಡಿಆರ್ ಎಫ್) ನಡುವೆ ಸಾಮಾಜಿಕ, ಆರ್ಥಿಕ, ಕೈಗಾರಿಕಾ ಮತ್ತು ಪ್ರಾದೇಶಿಕ ಅಭಿವೃದ್ಧಿ ಕಾರ್ಯಕ್ರಮಗಳ ವಲಯದಲ್ಲಿಒಡಂಬಡಿಕೆಗೆ ಸಚಿವ ಸಂಪುಟ ಅನುಮೋದನೆ ನೀಡಿತು.
ಸಾಮಾಜಿಕ, ಆರ್ಥಿಕ, ಕೈಗಾರಿಕಾ ಮತ್ತು ಪ್ರದೇಶಾಭಿವೃದ್ಧಿ ಕಾರ್ಯಕ್ರಮಗಳ ಸಿದ್ಧತೆ ಮತ್ತು ಅವುಗಳ ಅನುಷ್ಠಾನ ಕಾರ್ಯತಂತ್ರಗಳ ಕುರಿತು ಸಹಕಾರದ ಮಾರ್ಗೋಪಾಯವನ್ನು ಕಂಡುಕೊಳ್ಳುವುದು ಈ ಒಡಂಬಡಿಕೆಯ ಉದ್ದೇಶವಾಗಿದೆ. ಅಲ್ಲದೆ ಇದರಿಂದಾಗಿ ಎರಡೂ ದೇಶಗಳು ತಮ್ಮ ಸಾಮರ್ಥ್ಯ, ಮಾರುಕಟ್ಟೆ, ತಂತ್ರಜ್ಞಾನ ನೀತಿಗಳನ್ನು ಅರ್ಥೈಸಿಕೊಳ್ಳುವುದು ಮತ್ತು ಅದಕ್ಕೆ ಪೂರಕ ವಾತಾವರಣ ಹಾಗೂ ನೀತಿಯನ್ನು ರೂಪಿಸಲು ಅವಕಾಶವಿದೆ.
ಒಡಂಬಡಿಕೆ ಈ ಕೆಳಗಿನ ವಿಭಾಗಗಳ ವ್ಯಾಪ್ತಿಯನ್ನು ಒಳಗೊಂಡಿದೆ.