ಪಿಎಂಇಂಡಿಯಾ
ಗೌರವಾನ್ವಿತ ಪ್ರಧಾನಮಂತ್ರಿಗಳು ಹಾಗೂ ನನ್ನ ಸ್ನೇಹಿತರಾದ
ಶ್ರೀ ಮಾರ್ಕ್ ರುಟ್ಟೆರವರೇ
ಗೌರವಾನ್ವಿತ ಪ್ರತಿನಿಧಿಗಳೇ,
ಮಾಧ್ಯಮ ಮಿತ್ರರೇ,
ಸ್ನೇಹಿತರೇ,
ಪ್ರಧಾನಮಂತ್ರಿಗಳಾದ ಶ್ರೀ ಮಾರ್ಕ್ ಮತ್ತು ಅವರ ದೇಶದಿಂದ ಬಂದಿರುವಂತಹ ನಿಯೋಗಕ್ಕೆ ನನ್ನ ಹಾರ್ದಿಕ ಸ್ವಾಗತಗಳು. ನೆದರ್ ಲ್ಯಾಂಡ್ ನಿಂದ ಭಾರತಕ್ಕೆ ಸನ್ಮಾನ್ಯ ಪ್ರಧಾನಮಂತ್ರಿಗಳಾದ ಮಾರ್ಕ್ ಜತೆ ಆಗಮಿಸಿರುವಂತಹ ನಾಲ್ವರು ಸಚಿವರು, ಹೇಗ್ ಪಟ್ಟಣದ ಮೇಯರ್ ಮತ್ತು 200ಕ್ಕೂ ಹೆಚ್ಚು ಉದ್ಯಮ ಪ್ರತಿನಿಧಿಗಳು ಇಲ್ಲಿಗೆ ಆಗಮಿಸಿದ್ದು ಅವರಿಗೆ ನಾನು ಅಭಿನಂದನೆಯನ್ನು ಸಲ್ಲಿಸುತ್ತೇನೆ. ಭಾರತಕ್ಕೆ ನೆದರ್ ಲ್ಯಾಂಡ್್ ನಿಂದ ಇಷ್ಟು ದೊಡ್ಡ ಮಟ್ಟದ ಉದ್ಯಮಿಗಳ ನಿಯೋಗವು ಯಾವತ್ತೂ ಬಂದಿರಲಿಲ್ಲ. ಇದು ನಮ್ಮ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳಲ್ಲಿ ಅದೆಷ್ಟು ಮಟ್ಟಿಗಿನ ಚೈತನ್ಯದಾಯಕವಾಗಿದೆ ಎನ್ನುವುದು ಇದರಿಂದಲೇ ಅರ್ಥವಾಗುತ್ತದೆ. ಸಾಕಷ್ಟು ಅವಕಾಶಗಳು ಅಲ್ಲಿವೆ. 2015ರಲ್ಲಿ ಮೊದಲ ಬಾರಿ ಪ್ರಧಾನಮಂತ್ರಿಗಳಾದ ಶ್ರೀ ರುಟ್ಟೆ ಅವರು ಭಾರತಕ್ಕೆ ಬೇಟಿ ನೀಡಿದ್ದರು. 2017ರಲ್ಲಿ ನಾನು ನೆದರ್ ಲ್ಯಾಂಡ್ ಗೆ ಭೇಟಿ ನೀಡಿದ್ದೆ. ಮತ್ತು ಇಂದು ನನ್ನ ಮತ್ತು ಅವರ ನಡುವಿನ ಮೂರನೇ ಭೇಟಿಯಾಗಿದೆ.
ನಮ್ಮ ಸಂಬಂಧಗಳ ನಡುವೆ ಹಲವು ಬಾರಿ ಉನ್ನತ ಮಟ್ಟದ ಭೇಟಿಗಳನ್ನು ಮಾಡುವಂತಹ ಅತ್ಯುತ್ತಮವಾದ ಬಾಂಧವ್ಯಗಳನ್ನು ಬೆಳೆಸಿಕೊಂಡಿರುವ ಕೆಲವೇ ಕೆಲವು ದೇಶಗಳಿವೆ. ನೆದರ್ ಲ್ಯಾಂಡ್ ಜತೆ ಸಂಬಂಧವನ್ನು ಬೆಳೆಸಿಕೊಳ್ಳಲು ಆದ್ಯತೆ ನೀಡುವ ವೈಯಕ್ತಿಕ ಆಸಕ್ತಿಯನ್ನು ನಾವು ಬೆಳೆಸಿಕೊಂಡಿದ್ದೇವೆ. ಇಂತಹ ಬಾಂಧವ್ಯವನ್ನು ಹೊಂದಿರುವುದಕ್ಕಾಗಿ ನಾನು ಪ್ರಧಾನಮಂತ್ರಿಗಳಾಧ ರುಟ್ಟೆ ಅವರಿಗೆ ನಾನು ಅತ್ಯಂತ ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ
ಸ್ನೇಹಿತರೇ,
ಇಂದು ನಾವು ಇಬ್ಬರೂ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧದ ಪ್ರಗತಿಯ ಬಗ್ಗೆ ಅವಲೋಕನವನ್ನು ಮಾಡಿದ್ದೇವೆ. ಪ್ರಾದೇಶಿಕ ಮತ್ತು ಜಾಗತಿಕ ಅಭಿವೃದ್ಧಿಗೆ ನಮ್ಮದೇ ಆದ ಕಾರ್ಯ ಯೋಜನೆಗಳ ಬಗ್ಗೆ ಈ ಮಾತುಕತೆಯ ವೇಳೆ ಅಭಿಪ್ರಾಯಗಳನ್ನು ಹಂಚಿಕೆ ಮಾಡಿಕೊಂಡಿದ್ದೇವೆ. ಎರಡೂ ದೇಶಗಳ ಪ್ರತಿಷ್ಠಿತ ಸಿಇಒಗಳನ್ನು ಇಬ್ಬರೂ ನಾಯಕರೂ ಭೇಟಿ ಮಾಡಿದ್ದೇವೆ. ನಾನು ಕಳೆದ ಬಾರಿ ನೆದರ್ ಲ್ಯಾಂಡ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನನ್ನ ಆತ್ಮೀಯರೂ ಆದ ಮಾರ್ಕ್ ಅವರನ್ನು ಅಂತಾರಾಷ್ಟ್ರೀಯ ಸೌರ ಮೈತ್ರಿಯೊಳಗೆ ಸೇರಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದೆ. ಸೌರಶಕ್ತಿ ಕ್ಷೇತ್ರದಲ್ಲಿ ನೆದರ್ ಲ್ಯಾಂಡ್ ಹೊಂದಿರುವಂತಹ ಅನುಭವ, ತಂತ್ರಜ್ಞಾನ ಮತ್ತು ಪರಿಣಿತಿಯ ಲಾಭವನ್ನು ಇಡೀ ಜಗತ್ತೂ ಪಡೆದುಕೊಳ್ಳಬೇಕಿದೆ.ಅವರು ಈ ಗುಂಪನ್ನು ಸೇರಿರುವುದಕ್ಕೆ ಪ್ರಧಾನಮಂತ್ರಿಗಳಾಧ ಮಾರ್ಕ್ ರುಟ್ಟೆ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ವಿಶ್ವ ಸಂಸ್ಥೆಯ ಬಹಪಕ್ಷೀಯ ರಫ್ತು ನಿಯಂತ್ರಣ ನೀತಿಯ ಜತೆ ಭಾರತ ಮತ್ತು ನೆದರ್ ಲ್ಯಾಂಡ್ ದೇಶಗಳೆರಡೂ ಅತ್ಯಂತ ಹತ್ತಿರದ ಸಂಬಂಧ ಮತ್ತು ಸಹಯೋಗವನ್ನು ಹೊಂದಿವೆ. ಇದೀಗ ಅಂತಾರಾಷ್ಟ್ರೀಯ ಸೌರಸಕ್ತಿ ಸಮೂಹದಲ್ಲಿ ನೆದರ್ ಲ್ಯಾಂಡ್್ ಪ್ರವೇಶವು ಸೌರ ಮೈತ್ರಿಗೆ ಹೊಸದೊಂದು ಆಯಾಮವನ್ನು ನೀಡಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿ ಮಾಡಲಿದೆ.
ಸ್ನೇಹಿತರೇ,
ಡಚ್ ಕಂಪನಿಗಳಿಗೆ ಭಾರತವು ಹೊಸ ಪರಿಚಯವೇನೂ ಅಲ್ಲ. ಹಲವು ವರ್ಷಗಳಿಂದಲೂ ಡಚ್ ನ ನೂರಾರು ಕಂಪನಿಗಳು ಭಾರತದಲ್ಲಿ ವ್ಯವಹಾರವನ್ನು ಮಾಡುತ್ತಿವೆ. ಭಾರತದ ನೇರ ಬಂಡವಾಳ ಹೂಡಿಕೆಯಲ್ಲಿ ನೆದರ್ ಲ್ಯಾಂಡ್ ದೇಶವು ಐದನೇ ಬೃಹತ್ ಮೂಲ ಎನಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಅದು ಮೂರನೇ ಬೃಹತ್ ಹೂಡಿಕೆ ಮೂಲ ಎನಿಸಿಕೊಂಡಿದೆ. ಅದೇ ರೀತಿ ನೆದರ್ ಲ್ಯಾಂಡ್ ಕೂಡಾ ಭಾರತ ಮೂಲದ ಕಂಪನಿಗಳಿಗೆ ಹೂಡಿಕೆ ಮಾಡುವಂತಹ ಅತ್ಯುತ್ತಮವಾದ ತಾಣ ಎನಿಸಿಕೊಂಡಿದೆ. ಇದೇ ಕಾರಣದಿಂದ ಎರಡೂ ದೇಶಗಳ ಸಿಇಒಗಳ ನಡುವ ಸಭೆ ಯನ್ನು ನಡೆಸಲಾಗಿದೆ. ಭಾರತದಲ್ಲಿ ಅವಕಾಶಗಳನ್ನು ಕಲ್ಪಿಸಿಕೊಟ್ಟಿರುವುದಕ್ಕಾಗಿ ನೆದರ್ ಲ್ಯಾಂಡ್ ನ ಉದ್ಯಮಿಗಳು ಉಲ್ಲಾಸಿತಗೊಂಡಿದ್ದಾರೆಂದು ನಾನು ಭಾವಿಸಿದ್ದೇನೆ.
ಭಾರತದಲ್ಲಿ ಆರ್ಥಿಕ ಸುಧಾರಣೆಗಳನ್ನು ಅತ್ಯಂತ ಧನಾತ್ಮಕವಾಗಿ ಮಾಡುವು ಭರವಸೆಯನ್ನು ನೀಡಿದ್ದೇನೆ. ಕೃಷಿ ಮತ್ತು ಆಹಾರ ಪದಾರ್ಥಗಳ ಸಂಸ್ಕರಣೆ ಭಾರತದ ಪಾಲಿಗೆ ಮಹತ್ತರವಾದ ಕ್ಷೇತ್ರಗಳೆನಿಸಿವೆ. ಇದು ನಮ್ಮ ಆಹಾರ ಭದ್ರತೆಗೆ ಸಂಬಂಧಿಸಿದೆ. ಅದೇ ರೀತಿ ಭಾರತದ ರೈತರ ಆದಾಯವನ್ನು ದ್ವಿಗುಣಗೊಳಿಸುವ ನಮ್ಮ ಗುರಿಯನ್ನು ಸಾಧಿಸಲು ಅವಕಾಶವನ್ನು ಮಾಡಿಕೊಡುತ್ತಿದೆ. ನೆದರ್ ಲ್ಯಾಂಡ್ ಸರ್ಕಾರವು ಈ ಕ್ಷೇತ್ರದಲ್ಲಿ ಅತ್ಯಂತ ಪ್ರಯೋಗಶೀಲವಾಗಿದೆ. ವಿಶ್ವ ಆಹಾರ ಭಾರತ ಸಮ್ಮೇಳನದಲ್ಲಿ ನೆದರ್ ಲ್ಯಾಂಡ್ ಕಳೆದ ಬಾರಿ ಪಾಲ್ಗೊಂಡಿತ್ತು. 2019ರಲ್ಲಿ ಇದರ ಮುಂದಿನ ಸಮ್ಮೇಳನವಿದೆ. ಬಾರಾಮತಿಯಲ್ಲಿ ತರಕಾರಿಗಾಗಿಯೇ ಭಾರತ-ಡಚ್ ಎಕ್ಸ್ ಲೆನ್ಸ್ ಸೆಂಟರ್ ಆರಂಭಗೊಳ್ಳುತ್ತಿರುವುದಕ್ಕೆ ನನಗೆ ಸಂತೋಷ ಎನಿಸುತ್ತಿದೆ. ಇಂತಹ ಅನೇಕ ಕೇಂದ್ರಗಳನ್ನು ತೆರೆಯುವ ಉತ್ಸಾಹ ನಮ್ಮಲ್ಲಿದೆ. ಅಲ್ಲದೇ ನಗರ ಅಭಿವೃದ್ದಿಯಲ್ಲೂ ನಮ್ಮ ಸಹಕಾರ ಅತ್ಯಂತ ಚೈತನ್ಯದಾಯಕವಾಗಿದೆ. ವಡೋಧರಾ ಮತ್ತು ದೆಹಲಿಯಲ್ಲಿರುವ ತ್ಯಾಜ್ಯ ನೀರು ನಿರ್ವಹಣಾ ಘಟಕಗಳು ಉತ್ತಮವಾಗಿ ಪ್ರಗತಿಯನ್ನು ಕಾಣುತ್ತಿವೆ. ವಿಜ್ಞಾನ ಮತ್ತು ತಂತ್ರಜ್ಞಾನದ ಸಹಕಾರದಲ್ಲಿ ನಾವು 10 ವರ್ಷಗಳನ್ನು ಪೂರೈಸುತ್ತಿದ್ದೇವೆ. ಟೆಕ್ ಸಮಿಟ್ ನಲ್ಲಿ ನೆದರ್ ಲ್ಯಾಂಡ್ ಭಾಗಿಯಾಗುವ ದೇಶವಾಗಿದ್ದು ಈ ಸಂಬಂಧ ಇನ್ನಷ್ಟು ಬಲಿಷ್ಠವಾಗಲಿದೆ . 2019ರಲ್ಲಿ ಈ ಸಮ್ಮೇಳನವು ಭಾರತದಲ್ಲಿ ನಡೆಯಲಿದೆ.
ಸ್ನೇಹಿತರೇ,
ವಿದೇಶದಲ್ಲಿರುವ ಭಾರತೀಯ ಮೂಲದ ನಾಗರಿಕರಿಗೆ ವಿಶೇಷ ಗಮನವನ್ನು
ಹರಿಸುವುದು ನಮ್ಮ ವಿದೇಶಾಂಗ ನೀತಿಯ ಪ್ರಮುಖ ಉದ್ಧೇಶವಾಗಿದೆ.
2017ರ ಸೆಪ್ಟೆಂಬರ್ ನಲ್ಲಿ ಸಿಂಟ್ ಮಾರೆಟೆನ್ ನಲ್ಲಿ ಉಂಟಾದ ಚಂಡಮಾರುತದ ಸಂದರ್ಭದಲ್ಲಿ ಭಾರತೀಯ ಮೂಲದವರ ಸ್ಥಳಾಂತರಕ್ಕೆ ಸಹಕಾರವನ್ನು ನೀಡಿದ ನೆದರ್ ಲ್ಯಾಂಡ್ ನ ಪ್ರಧಾನಮಂತ್ರಿಗಳಾದ ರುಟ್ಟೆ ಅವರಿಗೆ ನಾನು ವಿಶೇಷವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಗೌರವಾನ್ವಿತರೇ,
ನಿಮ್ಮೆಲ್ಲರನ್ನೂ ಮತ್ತು ನಿಮ್ಮ ನಿಯೋಗವನ್ನು ನಾನು ಮತ್ತೊಮ್ಮೆ ಭಾರತಕ್ಕೆ ಹಾರ್ದಿಕವಾಗಿ ಸ್ವಾಗತಿಸುತ್ತೇನೆ.
ಧನ್ಯವಾದಗಳು..
ಅನಂತಾನಂತ ಧನ್ಯವಾದಗಳು.
Held extensive talks with PM Mark Rutte. We discussed India-Netherlands cooperation in a wide range of areas including trade, energy, food processing, science and technology. @MinPres pic.twitter.com/byrPtZ8dU5
— Narendra Modi (@narendramodi) May 24, 2018
Delighted that Netherlands is joining the International Solar Alliance. The strides made by Netherlands in the energy sector are commendable and their participation will strengthen the Solar Alliance. pic.twitter.com/bA9s5nGgFh
— Narendra Modi (@narendramodi) May 24, 2018
PM Rutte and I interacted with CEOs from India and Netherlands.
— Narendra Modi (@narendramodi) May 24, 2018
Spoke about India's reform trajectory and invited Dutch companies to invest in India. @MinPres pic.twitter.com/B0FXwSQ9Wt
Sharing my remarks at the joint press meet with PM Rutte. @MinPres https://t.co/2HPwgn0sl5 pic.twitter.com/PfM1QGz6UU
— Narendra Modi (@narendramodi) May 24, 2018