Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನೇಪಾಳದ ಮಾಜಿ ಪ್ರಧಾನಮಂತ್ರಿ ಶ್ರೀ ಶೇರ್ ಬಹಾದ್ದೂರ್ ದೇವೂಬಾ ಅವರಿಂದ ಪ್ರಧಾನಿ ಭೇಟಿ

ನೇಪಾಳದ ಮಾಜಿ ಪ್ರಧಾನಮಂತ್ರಿ ಶ್ರೀ ಶೇರ್ ಬಹಾದ್ದೂರ್ ದೇವೂಬಾ ಅವರಿಂದ ಪ್ರಧಾನಿ ಭೇಟಿ


ನೇಪಾಳದ ಮಾಜಿ ಪ್ರಧಾನಮಂತ್ರಿ ಶ್ರೀ ಶೇರ್ ಬಹಾದ್ದೂರ್ ದೇವೂಬಾ ಅವರು ನಿನ್ನೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು.

ಭೂಕಂಪೋತ್ತರ ನೇಪಾಳದ ಪುನರ್ ನಿರ್ಮಾಣ ಪ್ರಯತ್ನಕ್ಕೆ ಸಂಪೂರ್ಣ ಬೆಂಬಲ ನೀಡಲು ಭಾರತವು ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದರು.

ನೇಪಾಳದಲ್ಲಿ ಬಾಕಿ ಉಳಿದಿರುವ ಸಾಂವಿಧಾನಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಾಧಿಸಿರುವ ಪ್ರಗತಿಯ ಬಗ್ಗೆ ಪ್ರಧಾನಮಂತ್ರಿಯವರು ಮೆಚ್ಚುಗೆ ವ್ಯಕ್ತಪಡಿಸಿದರು, ಮತ್ತು ಅಂಥ ಎಲ್ಲ ಸಮಸ್ಯೆಗಳೂ ಸಹಕಾರ ಮತ್ತು ಸಹಯೋಗದ ಸ್ಫೂರ್ತಿಯಲ್ಲಿ ಶೀಘ್ರವೇ ಪರಿಹಾರವಾಗಲಿವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

***

AKT/NT