Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನೇಪಾಳ ಪ್ರಧಾನಿಯೊಂದಿಗೆ ಪ್ರಧಾನಮಂತ್ರಿ ಶ್ರೀ. ಮೋದಿ ಭೇಟಿ


ನೇಪಾಳದ ಪ್ರಧಾನಿ ಗೌರವಾನ್ವಿತ ಶ್ರೀ ಕೆ.ಪಿ. ಶರ್ಮಾ ಓಲಿ ಅವರು ಮೇ 30, 2019 ರಂದು ನಡೆದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡರು.

ಮೇ 31, 2019ರಂದು ಪ್ರಧಾನಮಂತ್ರಿಯವರೊಂದಿನ ದ್ವಿಪಕ್ಷೀಯ ಭೇಟಿಯಲ್ಲಿ ಪ್ರಧಾನಿ ಶ್ರೀ ಓಲಿಯವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಸಾರ್ವತ್ರಿಕ ಚುನಾವಣೆಗಳ ಗೆಲುವಿಗಾಗಿ ಅಭಿನಂದಿಸಿದರು. ಶುಭಾಶಯಗಳಿಗಾಗಿ ಪ್ರಧಾನಿ ಮೋದಿ ಅವರಿಗೆ ವಂದನೆ ಸಲ್ಲಿಸಿದರು. ಭಾರತ ಮತ್ತು ನೇಪಾಳದ ನಡುವಿನ ಸಾಂಪ್ರದಾಯಿಕ ಮತ್ತು ಬಹುಮುಖಿ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ನೇಪಾಳದೊಂದಿಗೆ ಕೆಲಸ ಮಾಡುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.

ದ್ವಿಪಕ್ಷೀಯ ಯೋಜನೆಗಳು ಮತ್ತು ಉಪಕ್ರಮಗಳ ಅನುಷ್ಠಾನದಲ್ಲಿ ಸಾಧಿಸಿದ ಪ್ರಗತಿಯ ಬಗ್ಗೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು.