Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನ್ಯೂಯಾರ್ಕ್ ನಲ್ಲಿ ಬ್ಲೂಮ್ ಬರ್ಗ್ ಜಾಗತಿಕ ವಾಣಿಜ್ಯ ವೇದಿಕೆ ಉದ್ದೇಶಿಸಿ ಪ್ರಧಾನಿ ಮಾಡಿದ ಭಾಷಣದ ಪಠ್ಯ


ಗೆಳೆಯರೇ,
ಜಾಗತಿಕ ವಾಣಿಜ್ಯ ಮತ್ತು ಆರ್ಥಿಕತೆಯ ಪ್ರಮುಖ ಕೇಂದ್ರವಾಗಿರುವ ನ್ಯೂಯಾರ್ಕ್ ನಲ್ಲಿ ನಿಮ್ಮೊಡನೆ ಇರುವುದು ನನಗೆ ಹೆಮ್ಮೆ ಎನಿಸುತ್ತಿದೆ. ಭಾರತದ ಭಾವನೆಗಳನ್ನು ಮತ್ತು ದೂರದೃಷ್ಟಿಯನ್ನು, ಭಾರತದ ನಿರೀಕ್ಷೆಗಳು ಮತ್ತು ಆಶೋತ್ತರಗಳನ್ನು, ಭಾರತದ ಪ್ರಗತಿಗಾಥೆ ಮತ್ತು ಅದರ ಭವಿಷ್ಯದ ದಿಕ್ಸೂಚಿಯ ಬಗ್ಗೆ ಮಾತನಾಡಲು ಅವಕಾಶ ನೀಡಿದ ಬ್ಲೂಮ್ ಬರ್ಗ್ ಜಾಗತಿಕ ವಾಣಿಜ್ಯ ವೇದಿಕೆಗೆ ನಾನು ತುಂಬಾ ಆಬಾರಿಯಾಗಿದ್ದೇನೆ.
ಗೆಳೆಯರೇ,
ಇಂದು ಭಾರತದಲ್ಲಿ ಅದೇ ಸರ್ಕಾರವನ್ನು ನೋಡುತ್ತಿದ್ದೀರಿ ಐದು ವರ್ಷಗಳ ತನ್ನ ಸಾಧನೆಯನ್ನು ಜನತೆಯ ಮುಂದಿಟ್ಟುಕೊಂಡು ಹೋದ ಸರ್ಕಾರ, ಈ ಬಾರಿ ಇನ್ನು ಹೆಚ್ಚಿನ ಸಂಖ್ಯೆಯೊಂದಿಗೆ ಅಧಿಕಾರಕ್ಕೆ ಬಂದಿದೆ. ನಿಮ್ಮ ಸಮಾಲೋಚನೆಗಳಲ್ಲಿ ಆಗಾಗ್ಗೆ ವಾಣಿಜ್ಯ ಹೇಳಿಕೆಗಳ ಬಗ್ಗೆ ಮಾತನಾಡುತ್ತೀರಿ. ಈ ಭಾರಿಯ ಚುನಾವಣೆಯಲ್ಲಿ 130 ಕೋಟಿ ಭಾರತೀಯರು ಕೇವಲ ತಮ್ಮ ಭಾವನೆಗಳನ್ನು ಅಭಿವ್ಯಕ್ತಪಡಿಸಿಲ್ಲ, ಅವರು ಅಭಿವೃದ್ಧಿಯೇ ಅತಿದೊಡ್ಡ ಆದ್ಯತೆ ಎಂದು ತೀರ್ಪು ನೀಡಿದ್ದಾರೆ. ಇಲ್ಲಿ ಕುಳಿತಿರುವ ವಾಣಿಜ್ಯ ನಾಯಕರು ಈ ಬಲಿಷ್ಠ ಜನಾದೇಶ ಅಭಿವೃದ್ಧಿಯ ಪರವಾಗಿರುವುದು ಮತ್ತು ವಾಸ್ತವದಲ್ಲಿ ಭಾರತದಲ್ಲಿ ಹೊಸ ಅವಕಾಶಗಳ ಸೃಷ್ಟಿಸುವುದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು, ಇಂದು ಭಾರತದ ಜನ ಸರ್ಕಾರದ ಜೊತೆ ನಿಂತಿದ್ದಾರೆ. ಹಾಗಾಗಿ ವಾಣಿಜ್ಯ ವಾತಾವರಣವನ್ನು ಸುಧಾರಿಸಲು ಅತ್ಯಂತ ಕಠಿಣ ಮತ್ತು ಬಹುದೊಡ್ಡ ನಿರ್ಧಾರಗಳನ್ನು ಕೈಗೊಳ್ಳಲು ಹಿಂಜರಿಯುವುದಿಲ್ಲ. ಇಂದು ಭಾರತದಲ್ಲಿ ಇರುವ ಸರ್ಕಾರ ಜಾಗತಿಕ ಉದ್ಯಮವನ್ನು ಮತ್ತು ಸಂಪತ್ತು ಸೃಷ್ಟಿಯನ್ನು ಗೌರವಿಸುವಂತಹದು,
ಗೆಳೆಯರೇ,
ಕೆಲವೇ ದಿನಗಳ ಹಿಂದೆ ನಾವು ಕಾರ್ಪೊರೇಟ್ ತೆರಿಗೆಯನ್ನು ಗಣನೀಯವಾಗಿ ಇಳಿಕೆ ಮಾಡಿದ್ದೇವೆ, ಇದು ನಿಮ್ಮ ಮಾಹಿತಿಗಾಗಿ, ಈ ನಿರ್ಧಾರ ಹೂಡಿಕೆ ಮಟ್ಟದಲ್ಲಿ  ಅತ್ಯಂತ ಕ್ರಾಂತಿಕಾರಿಯದ್ದಾಗಿದೆ ಮತ್ತು ಈ ನಿರ್ಧಾರದ ನಂತರ ನಾನು ಯಾವ ವಾಣಿಜ್ಯ ಜಗತ್ತಿನ ಜನರನ್ನು ಭೇಟಿ ಮಾಡಿದ್ದೇನೆಯೋ ಅಥವಾ ಸಮಾಲೋಚನೆ ನಡೆಸಿದ್ದೇನೆಯೋ ಅವರೆಲ್ಲ ಈ ನಿರ್ಧಾರ ಐತಿಹಾಸಿಕ ಎಂದು ಪರಿಗಣಿಸಿದ್ದಾರೆ. ಈ ಅವಧಿಯಲ್ಲಿ ಸರ್ಕಾರ ಬಂಡವಾಳ ಹೆಚ್ಚಳಕ್ಕೆ ಹಲವು ನಿರ್ಧಾರಗಳನ್ನು ಒಂದಾದ ನಂತರ ಒಂದು ಪ್ರಕಟಿಸಿದೆ. ಅಭಿವೃದ್ಧಿ ಕೆಲಸಗಳಿಗೆ ತೊಡಕು ಉಂಟುಮಾಡುತ್ತಿದ್ದ 50ಕ್ಕೂ ಅಧಿಕ ಹಳೆಯ ಕಾನೂನುಗಳನ್ನು ನಾವು ರದ್ದುಗೊಳಿಸಿದ್ದೇವೆ. ನಾನು ನಿಮಗೆ ನೆನಪಿಸುವುದೆಂದರೆ ನಮ್ಮ ಹೊಸ ಸರ್ಕಾರ ಬಂದು ಇನ್ನು ಮೂರ್ನಾಲ್ಕು ತಿಂಗಳಿಗೂ ಅಧಿಕವಾಗಿಲ್ಲ. ಇಂದು ಈ ವೇದಿಕೆಯಲ್ಲಿ ನಾನು ಹೇಳುವುದೆಂದರೆ ಇದು ಕೇವಲ ಆರಂಭವಷ್ಟೆ, ಇನ್ನು ದೀರ್ಘಕಾಲ ಮುನ್ನಡೆಯಬೇಕಿದೆ. ಅಭಿವೃದ್ಧಿಯ ಪಯಣದಲ್ಲಿ ಭಾರತದೊಂದಿಗೆ ಪಾಲುದಾರಿಕೆ ಹೊಂದಲು ವಿಶ್ವದ ಎಲ್ಲ ವಾಣಿಜ್ಯ ಜಗತ್ತಿಗೆ ಇದೊಂದು ಸುವರ್ಣಾವಕಾಶವಾಗಿದೆ.
ಗೆಳೆಯರೇ,
ಭಾರತ ಇಂದು ವಿಭಿನ್ನ ಸ್ಥಿತಿಯಲ್ಲಿದೆ, ಇಲ್ಲಿ ನಮ್ಮ ಕ್ಷಿಪ್ರ ಬೆಳವಣಿಗೆಯಿಂದಾಗಿ ನಾವು ವಿಭಿನ್ನ ಬೇಡಿಕೆಗಳನ್ನು ಪೂರೈಸಬೇಕಾಗಿದೆ. ನಮ್ಮ ಜನರು ಬಡತನವನ್ನು ಕ್ಷಿಪ್ರವಾಗಿ ಸೋಲಿಸಿ, ಆರ್ಥಿಕತೆಯಲ್ಲಿ ಮೇಲೇರುತ್ತಿದ್ದಾರೆ ಮತ್ತು ಅವರ ಬಳಕೆ ಭಿನ್ನವಾಗುತ್ತಿದೆ ಹಾಗಾಗಿ ನೀವು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕಾದರೆ ಭಾರತಕ್ಕೆ ಬನ್ನಿ, ನಮ್ಮ ಮಧ್ಯಮ ವರ್ಗ ಅತಿದೊಡ್ಡ ವಲಯವಾಗಿದ್ದು, ಆ ವರ್ಗದ ಜನರಿಗೆ ಆಶೋತ್ತರಗಳಿವೆ ಮತ್ತು ಜಾಗತಿಕ ದೃಷ್ಟಿಕೋನವಿದೆ. ಆದ್ದರಿಂದ ಇತ್ತೀಚಿನ ಟ್ರೆಂಡ್ ಮತ್ತು ಸ್ವರೂಪವನ್ನು ಹೊಂದಿರುವ ಮಾರುಕಟ್ಟೆಯಲ್ಲಿ ನೀವು ಬಂಡವಾಳ ತೊಡಗಿಸಬೇಕಾದರೆ ಭಾರತಕ್ಕೆ ಬನ್ನಿ ನಮ್ಮ ಯುವಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಪ್ ಆಧಾರಿತ ಆರ್ಥಿಕತೆಯನ್ನು ಬಳಸುತ್ತಿದ್ದಾರೆ. ಆಹಾರದಿಂದ ಸಾರಿಗೆವರೆಗೆ, ಚಲನಚಿತ್ರಗಳಿಂದ ಹಿಡಿದು ಸ್ಥಳೀಯ ಬೇಡಿಕೆಗಳ ಪೂರೈಕೆವರೆಗೆ ನವೋದ್ಯಮಗಳು ಸೇರಿದಂತೆ ಎಲ್ಲ ವಲಯಗಳಲ್ಲಿ ಅವಕಾಶವಿದೆ. ಆದ್ದರಿಂದ ಭಾರೀ ಮಾರುಕಟ್ಟೆ ಇರುವ ನವೋದ್ಯಮಗಳಲ್ಲಿ ಹೂಡಿಕೆ ಮಾಡಬೇಕೆಂದರೆ ನೀವು ಭಾರತಕ್ಕೆ ಬನ್ನಿ. ನಮ್ಮ ಮೂಲಸೌಕರ್ಯ ವಿಸ್ತರಣೆ ಕಾರ್ಯ ಅನಿರೀಕ್ಷಿತ ವೇಗದಲ್ಲಿ ಮುಂದುವರಿದಿದೆ. ಹೆದ್ದಾರಿಯಿಂದ ಮೆಟ್ರೋವರೆಗೆ, ರೈಲ್ವೆಯಿಂದ ಬಂದರುಗಳವರೆಗೆ, ವಿಮಾನ ನಿಲ್ದಾಣಗಳಿಂದ ಸರಕು ಸಾಗಣೆವರೆಗೆ ಪ್ರತಿ ವಲಯದಲ್ಲೂ ಭಾರೀ ಬಂಡವಾಳ ಹೂಡಿಕೆಗೆ ವಿಫುಲ ಅವಕಾಶಗಳಿವೆ. ಆದ್ದರಿಂದ ಅತಿದೊಡ್ಡ ಮೂಲಸೌಕರ್ಯ ವ್ಯವಸ್ಥೆಯಲ್ಲಿ ನೀವು ಬಂಡವಾಳ ತೊಡಗಿಸಬೇಕೆಂದರೆ ಭಾರತಕ್ಕೆ ಬನ್ನಿ, ನಾವು ನಮ್ಮ ನಗರಗಳನ್ನು ಅತ್ಯಂತ ಕ್ಷಿಪ್ರವಾಗಿ ಆಧುನೀಕರಣಗೊಳಿಸುತ್ತಿದ್ದೇವೆ ಮತ್ತು ಅವುಗಳನ್ನು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಪರಿಸರಸ್ನೇಹಿ ಮೂಲಸೌಕರ್ಯಗಳನ್ನು ಒದಗಿಸಿ ಸಜ್ಜುಗೊಳಿಸುತ್ತಿದ್ದೇವೆ. ಹಾಗಾಗಿ ನೀವು ನಗರೀಕರಣದಲ್ಲಿ ಬಂಡವಾಳ ತೊಡಗಿಸಬೇಕೆಂದರೆ ಭಾರತಕ್ಕೆ ಬನ್ನಿ. ನಾವು ನಮ್ಮ ರಕ್ಷಣಾ ವಲಯದಲ್ಲೂ ಸಹ ಬಂಡವಾಳ ಹೂಡಿಕೆಗೆ ಮುಕ್ತಗೊಳಿಸಿದ್ದೇವೆ. ಅದು ಹಿಂದಿನಂತಿಲ್ಲ, ನೀವು ಭಾರತದಲ್ಲಿ ಉತ್ಪಾದಿಸಬೇಕಾದರೆ ಮತ್ತು ವಿಶ್ವ ಹಾಗೂ ಭಾರತಕ್ಕೆ ಉತ್ಪಾದಿಸಬೇಕಾದರೆ ಭಾರತಕ್ಕೆ ಬನ್ನಿ.
ಗೆಳೆಯರೇ,
ಇಂದು ನಮ್ಮ ಸರ್ಕಾರ ಭಾರತದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ನಮ್ಮ ಸರ್ಕಾರ ಹಿಂದೆಂದೂ ಹೂಡಿಕೆ ಮಾಡದಷ್ಟು ಹಣವನ್ನು ಹೂಡಿಕೆ ಮಾಡುತ್ತಿದೆ. ಮುಂಬರುವ ವರ್ಷಗಳಲ್ಲಿ ಆಧುನಿಕ ಮೂಲಸೌಕರ್ಯಕ್ಕಾಗಿ ನಾವು ನೂರು ಲಕ್ಷ ಕೋಟಿ ರೂಪಾಯಿಗಳು ಅಂದರೆ ಸುಮಾರು 1.3 ಟ್ರಿಲಿಯನ್ ಡಾಲರ್ ಹಣವನ್ನು ಖರ್ಚು ಮಾಡುತ್ತೇವೆ. ಇದಲ್ಲದೆ ಭಾರತದ ಸಾಮಾಜಿಕ ಮೂಲಸೌಕರ್ಯಕ್ಕೆ ಲಕ್ಷಾಂತರ ಕೋಟಿ ರೂಪಾಯಿಗಳನ್ನು ವ್ಯಯ ಮಾಡಲಾಗುವುದು. ಭಾರತದ ಪ್ರಗತಿಗಾಥೆಯಲ್ಲಿ ಗುಣಾತ್ಮಕ ಹಾಗೂ ಸಕಾರಾತ್ಮಕ ಮಾರ್ಗಸೂಚಿ ಜಾರಿಯಾಗುತ್ತಿದೆ. ಇದೀಗ ಭಾರತ ದೇಶದ ಆರ್ಥಿಕತೆಯನ್ನು 5 ಸಾವಿರ ಟ್ರಿಲಿಯನ್ ಡಾಲರ್ ಗೇರಿಸುವ ಬಹುದೊಡ್ಡ ಗುರಿಯನ್ನು ಹಾಕಿಕೊಂಡಿದೆ.
ಗೆಳೆಯರೇ,
ನಾವು 2014ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ದೇಶದ ಆರ್ಥಿಕತೆ ಸುಮಾರು ಎರಡು ಟ್ರಿಲಿಯನ್ ಡಾಲರ್ ಇತ್ತು. ಕಳೆದ ಐದು ವರ್ಷಗಳಲ್ಲಿ ನಾವು ಸುಮಾರು ಒಂದು ಟ್ರಿಲಿಯನ್ ಡಾಲರ್ ಅನ್ನು ಅದಕ್ಕೆ ಸೇರ್ಪಡೆಗೊಳಿಸಿದ್ದೇವೆ ಮತ್ತು ಇದೀಗ ನಾವು ಐದು ಟ್ರಿಲಿಯನ್ ಆರ್ಥಿಕತೆ ಗುರಿ ಸಾಧಿಸಲು ಕಠಿಣ ಕಾರ್ಯೋನ್ಮುಖವಾಗಿದ್ದೇವೆ.
ಗೆಳೆಯರೇ,
ಈ ಭಾರೀ ಗುರಿಯನ್ನು ಸಾಧಿಸಲು ನಮ್ಮಲ್ಲಿ ಸಾಮರ್ಥ್ಯ ಮತ್ತು ಧೈರ್ಯವಿದೆ ಹಾಗೂ ಪರಿಸ್ಥಿತಿ ಕೂಡ ನಮ್ಮ ಪರವಾಗಿಯೇ ಇದೆ. ಭಾರತದ ಪ್ರಗತಿಗಾಥೆಗೆ ನಾಲ್ಕು ಪ್ರಮುಖ ಅಂಶಗಳು ಇಂದು ಕಾರಣವಾಗಿವೆ, ಅವುಗಳು ವಿಶ್ವದಲ್ಲಿ ಬೇರೆ ಯಾವ ದೇಶಗಳಲ್ಲೂ ಪಾಲಿಸುವುದು ಕಷ್ಟವಾಗಿದೆ. ಆ ನಾಲ್ಕು ಅಂಶಗಳೆಂದರೆ ಡೆಮಾಕ್ರಸಿ(ಪ್ರಜಾಪ್ರಭುತ್ವ), ಡೆಮೋಗ್ರಫಿ(ಜನಸಂಖ್ಯೆ), ಡಿಮ್ಯಾಂಡ್(ಬೇಡಿಕೆ) ಹಾಗೂ ಡಿಸಿಸಿವ್ ನೆಸ್(ನಿರ್ಣಾಯಕ). ನಾನು ಮೊದಲನೇ ಅಂಶದ ಬಗ್ಗೆ ಮಾತನಾಡುವುದಾದರೆ ಹಲವು ದಶಕಗಳ ನಂತರ ಭಾರತದಲ್ಲಿ ಇಂತಹ ರಾಜಕೀಯ ಸ್ಥಿರತೆ ಮತ್ತು ಅವಕಾಶ ದೊರೆತಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಇರುವೆಡೆ ರಾಜಕೀಯ ಸ್ಥಿರತೆ ನಿರೀಕ್ಷಿತ ನೀತಿ ಮತ್ತು ಸ್ವತಂತ್ರ ನ್ಯಾಯಾಂಗಗಳಿರಲಿದ್ದು, ಅವು ಸಹಜವಾಗಿಯೇ ಸುರಕ್ಷತೆ, ಭದ್ರತೆ ಮತ್ತು ಹೂಡಿಕೆಯ ಬೆಳವಣಿಗೆಗೆ ದಾರಿಮಾಡಿಕೊಡುತ್ತವೆ.
ಗೆಳೆಯರೇ,
ಈ ಪ್ರಗತಿ ಭಾರತದ ಜನಸಂಖ್ಯೆಗೆ ದೊಡ್ಡ ನೆರವು ನೀಡಿದ್ದು, ವಿಶೇಷವಾಗಿ ಯುವ ಮತ್ತು ಭಾರತದ ಪ್ರತಿಭಾವಂತ ಶಕ್ತಿಗೆ ಅವಕಾಶ ಒದಗಿಸಿದೆ. ಇಂದು ಭಾರತ ಇಡೀ ಜಗತ್ತಿನಲ್ಲಿಯೇ ಅತ್ಯಂತ ಬಲಿಷ್ಠ ಸಂಶೋಧನಾ ಮತ್ತು ಅಭಿವೃದ್ಧಿ ವ್ಯವಸ್ಥೆ ಹಾಗೂ ಇಂಜಿನಿಯರಿಂಗ್ ಶಿಕ್ಷಣದ ಆಧಾರ ಹೊಂದಿರುವ ರಾಷ್ಟ್ರವಾಗಿದೆ. ಭಾರತೀಯ ಯುವಕರಿಗೆ ನೀಡುತ್ತಿರುವ ಉತ್ತೇಜನದಿಂದಾಗಿ ಅವರು ಹೊಸ ಹೊಸ ಆವಿಷ್ಕಾರಗಳಲ್ಲಿ ತೊಡಗುತ್ತಿದ್ದು, ಯೂನಿಕಾರ್ನ್ ನಲ್ಲಿ ಅಮೆರಿಕ ಮತ್ತು ಚೀನಾ ನಂತರ ಭಾರತ ಮೂರನೇ ಶ್ರೇಯಾಂಕದಲ್ಲಿದೆ.
ಗೆಳೆಯರೇ,
ಮೂರನೇ ಅಂಶ ಬೇಡಿಕೆಯಾಗಿದೆ. ಭಾರತದ ಅತಿದೊಡ್ಡ ಜನಸಂಖ್ಯೆ ಆರ್ಥಿಕವಾಗಿ ಸಬಲೀಕರಣಗೊಳ್ಳುತ್ತಿದೆ ಮತ್ತು ಅದು ಅವರ ಖರೀದಿ ಸಾಮರ್ಥ್ಯ ಹೆಚ್ಚಾಗುತ್ತಿದೆ ಹಾಗೂ ಬೇಡಿಕೆಯೂ ಸಹ ಹೆಚ್ಚುತ್ತಿದೆ. ಉದಾಹರಣೆಗೆ ಕಳೆದ ಕೆಲವು ವರ್ಷಗಳಿಂದೀಚೆಗೆ ವಿಮಾನ ಪ್ರಯಾಣ ದಟ್ಟಣೆ ಎರಡಂಕಿ ಬೆಳವಣಿಗೆ ಕಂಡಿದೆ. ಅದರಿಂದಾಗಿ ಇಂದು ಭಾರತ ವಿಶ್ವದ ಮೂರನೇ ಅತಿದೊಡ್ಡ ವಿಮಾನಯಾನ ಮಾರುಕಟ್ಟೆಯನ್ನು ಹೊಂದಿದಂತಾಗಿದೆ.
ಗೆಳೆಯರೇ,
ಪ್ರಜಾಪ್ರಭುತ್ವ, ಜನಸಂಖ್ಯೆ ಮತ್ತು ಬೇಡಿಕೆ ಅಲ್ಲದೆ, ಭಾರತ ಇಂದು ವಿಶೇಷ ರೀತಿಯಲ್ಲಿ ಹೆಸರಾಗಿರುವುದು ನಿರ್ಣಾಯಕ ನಿರ್ಧಾರಗಳಿಗೆ. ನಮ್ಮಲ್ಲಿ ವಿಭಿನ್ನ ಮತ್ತು ಒಕ್ಕೂಟ ಪ್ರಜಾತಂತ್ರವಿದ್ದರೂ, ಕಳೆದ ಐದು ವರ್ಷಗಳಿಂದೀಚೆಗೆ ಇಡೀ ಭಾರತದಲ್ಲಿ ಸಮಗ್ರ ಮತ್ತು ಪಾರದರ್ಶಕ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಲಾಗಿದೆ.
•       ಹಿಂದೆ ಭಾರತದಲ್ಲಿ ತೆರಿಗೆಗಳ ಜಾಲವಿತ್ತು. ಇದೀಗ ಜಿ ಎಸ್ ಟಿ ಅಡಿಯಲ್ಲಿ ಏಕರೂಪದ ಪರೋಕ್ಷ ತೆರಿಗೆ ವ್ಯವಸ್ಥೆಯಿದೆ ಮತ್ತು ಅದು ಇಡೀ ದೇಶದ ವ್ಯಾಪಾರ ಸಂಸ್ಕೃತಿಯ ಭಾಗವಾಗಿದೆ.
•       ಅಲ್ಲದೆ ನಾವು ಐಪಿಆರ್ ಮತ್ತು ಟ್ರೇಡ್ ಮಾರ್ಕ್ ವ್ಯವಸ್ಥೆಯನ್ನು ಬಲವರ್ಧನೆಗೊಳಿಸಲು ಕಠಿಣ ರೀತಿಯಲ್ಲಿ ಕಾರ್ಯೋನ್ಮುಖವಾಗಿದ್ದೇವೆ.
•       ದಿವಾಳಿತನ ಮತ್ತು ದಿವಾಳಿ ಪ್ರಕರಣಗಳನ್ನು ಇತ್ಯರ್ಥಪಡಿಸಲು ದಿವಾಳಿತನ ಮತ್ತು ಬ್ಯಾಂಕ್ ಕರಪ್ಸಿ ಸಂಹಿತೆ ಸೃಷ್ಟಿಸಲಾಗಿದೆ.
•       ತೆರಿಗೆ ಸಂಬಂಧಿತ ಕಾನೂನುಗಳಲ್ಲಿ ಅಗತ್ಯ ಸುಧಾರಣೆ ತರುವುದನ್ನು ನಾವು ಮುಂದುವರಿಸುತ್ತೇವೆ ಮತ್ತು ಜಾಗತಿಕ ತೆರಿಗೆ ಪದ್ಧತಿಗೆ ಅನುಗುಣವಾಗಿ ಈಕ್ವಿಟಿ ಹೂಡಿಕೆಗಳ ಮೇಲೆ ತೆರಿಗೆ ವಿಧಿಸಲಾಗುವುದು.
ತೆರಿಗೆ ಸುಧಾರಣೆಗಳಲ್ಲದೆ, ಅತ್ಯಲ್ಪ ಅವಧಿಯಲ್ಲಿಯೇ ಭಾರತದಲ್ಲಿ  ಜಗತ್ತಿನ ಅತಿದೊಡ್ಡ ಆರ್ಥಿಕ ಒಳಗೊಳ್ಳುವಿಕೆ(ಸೇರ್ಪಡೆ) ಪ್ರಕ್ರಿಯೆ ನಡೆದಿದೆ. ಕಳೆದ ನಾಲ್ಕೈದು ವರ್ಷಗಳಲ್ಲಿ ಇದೇ ಮೊದಲ ಬಾರಿ ಸುಮಾರು 370 ಮಿಲಿಯನ್ ಜನರು ಬ್ಯಾಂಕಿಂಗ್ ವ್ಯವಸ್ಥೆಗೆ ಸೇರ್ಪಡೆಗೊಂಡಿದ್ದಾರೆ. ಇಂದು ಬಹುತೇಕ ಭಾರತದ ಪ್ರತಿಯೊಬ್ಬ ಪ್ರಜೆಯೂ ವಿಶಿಷ್ಟ ಗುರುತಿನ ಸಂಖ್ಯೆ, ಮೊಬೈಲ್ ಫೋನ್ ಮತ್ತು ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ಇದರಿಂದಾಗಿ ನಿಗದಿತ ಸೇವಾ ವಿತರಣೆ ಹೆಚ್ಚಾಗಿದ್ದು, ಸೋರಿಕೆಗಳನ್ನು ತಡೆಗಟ್ಟಲಾಗಿದೆ ಮತ್ತು ಹಲವು ಪಾರದರ್ಶಕತೆ ಹಲವು ಪಟ್ಟು ಹೆಚ್ಚಾಗಿದೆ.
 
ಗೆಳೆಯರೇ,
ಹೊಸ ಭಾರತದಲ್ಲಿ ನಾವು ನಿಯಂತ್ರಣಗಳ ಅಡತಡೆ, ಪರವಾನಿಗೆ ಸಮಸ್ಯೆಗಳು ಮತ್ತು ಇತರೆ ಅಡೆತಡೆಗಳನ್ನು ನಿವಾರಿಸಲು ಅಭಿಯಾನ ಆರಂಭಿಸಿದ್ದೇವೆ. ಅಂತಹ ಸುಧಾರಣೆಗಳಿಂದಾಗಿ ಭಾರತ ಪ್ರತಿಯೊಂದು ಜಾಗತಿಕ ಶ್ರೇಯಾಂಕದಲ್ಲೂ ನಿರಂತರವಾಗಿ ಉತ್ತಮ ಸಾಧನೆ ಮಾಡುತ್ತಿದೆ. ಲಾಜಿಸ್ಟಿಕ್ಸ್ ಸಾಧನೆ ಸೂಚ್ಯಂಕದಲ್ಲಿ 10 ಅಂಕಗಳು, ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ 13 ಅಂಕ ಮೇಲೇರಿದೆ, ಜಾಗತಿಕ ಆವಿಷ್ಕಾರಿ ಸೂಚ್ಯಂಕದಲ್ಲಿ 24 ಅಂಕ ಮೇಲೇರಿದೆ. ಅಲ್ಲದೆ ವಿಶ್ವ ಬ್ಯಾಂಕ್ ನ ವ್ಯಾಪಾರಕ್ಕೆ ಪೂರಕ ವಾತಾವರಣ ಸೂಚ್ಯಂಕದಲ್ಲಿ 65 ಶ್ರೇಯಾಂಕ ಮೇಲೇರಿದೆ. ಗೆಳೆಯರೇ, ಈ ಸೂಚ್ಯಂಕಗಳೆಲ್ಲ ಸುಮ್ಮನೆ ಹಾಗೆ ವೃದ್ಧಿಯಾಗುವುದಿಲ್ಲ ಎಂಬುದು ನಿಮಗೆ ಅರಿವಿದೆ. ನಾವು ಎಲ್ಲ ವ್ಯವಸ್ಥೆಗಳನ್ನು ಮತ್ತು ಪದ್ಧತಿಗಳನ್ನು ಸುಧಾರಣೆ ತಂದು ತಳಮಟ್ಟದಲ್ಲಿ ಅತ್ಯಂತ ಸುಲಭ ಮಾಡಿಕೊಟ್ಟಿದ್ದೇವೆ. ಅದಕ್ಕೆ ಒಂದು ಉದಾಹರಣೆ ನೀಡುವುದಾದರೆ ಹಿಂದೆ ಕೈಗಾರಿಕೆಗಳಿಗೆ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲು ಹಲವು ವರ್ಷಗಳೇ ಬೇಕಾಗುತ್ತಿತ್ತು. ಇದೀಗ ಕೆಲವೇ ದಿನಗಳಲ್ಲಿ ವಿದ್ಯುತ್ ಸಂಪರ್ಕವನ್ನು ಒದಗಿಸಲಾಗುತ್ತಿದೆ. ಅಂತೆಯೇ ಹಿಂದೆ ಕಂಪನಿಗಳನ್ನು ನೋಂದಣಿ ಮಾಡಿಸಲು ಹಲವು ವಾರಗಳು ತೆಗೆದುಕೊಳ್ಳುತ್ತಿತ್ತು, ಇದೀಗ ಕಂಪನಿ ನೋಂದಣಿ ಕೆಲವೇ ಗಂಟೆಗಳಲ್ಲಿ ಮಾಡಬಹುದಾಗಿದೆ. ಕಳೆದ ಐದು ವರ್ಷಗಳಲ್ಲಿ ಏನೇನು ಬದಲಾವಣೆಯಾಗಿದೆ ಎಂಬ ಉದಾಹರಣೆಯನ್ನು ನಿಮಗೆ ನೀಡುತ್ತಿದ್ದೇನೆ. ಕಳೆದ ಐದು ವರ್ಷಗಳಲ್ಲಿ ಭಾರತಕ್ಕೆ 286 ಬಿಲಿಯನ್ ಅಮೆರಿಕನ್ ಡಾಲರ್ ಎಫ್ ಡಿ ಐ ಬಂದಿದೆ. ಇದು ಕಳೆದ 20 ವರ್ಷಗಳಿಂದೀಚೆಗೆ ಭಾರತಕ್ಕೆ ಹರಿದು ಬಂದಿರುವ ಒಟ್ಟಾರೆ ಎಫ್ ಡಿ ಐನ ಅರ್ಧದಷ್ಟಾಗಿದೆ, ಅಮೆರಿಕ ಹೂಡಿಕೆ ಮಾಡಿರುವ ಶೇಕಡ 50ರಷ್ಟು ಹೂಡಿಕೆ ಕಳೆದ ನಾಲ್ಕು ವರ್ಷದಲ್ಲಿ ಹರಿದುಬಂದಿದೆ. ಇದು ಆಗಿರುವುದು ಇಡೀ ವಿಶ್ವದೆಲ್ಲೆಡೆ ಎಫ್ ಡಿ ಐ ಹರಿವಿನ ಪ್ರಮಾಣ ಇಳಿಕೆಯಾಗಿರುವ ಸಂದರ್ಭದಲ್ಲಿ ಎಂಬುದು ಗಮನಾರ್ಹ. ಇದರಲ್ಲಿ ಮತ್ತೊಂದು ಆಸಕ್ತಿಕರ ಅಂಶವೆಂದರೆ ಶೇಕಡ 90ರಷ್ಟು ಎಫ್ ಡಿ ಐ ಸಮಾನ್ಯ ಮಾರ್ಗದಲ್ಲಿ ಮತ್ತು ಶೇ. 40ರಷ್ಟು ಗ್ರೀನ್ ಫೀಲ್ಡ್ ಹೂಡಿಕೆಯಾಗಿದೆ. ಇದರಅರ್ಥ ಇಂದು ಭಾರತದ ಮೇಲಿನ ಹೂಡಿಕೆದಾರರ ವಿಶ್ವಾಸ ವೃದ್ಧಿಯಾಗಿದೆ ಮತ್ತು ಅವರು ಇಲ್ಲಿಗೆ ದೀರ್ಘಕಾಲವಿರಲು ಬರುತ್ತಿದ್ದಾರೆ ಎಂಬುದು.
ಗೆಳೆಯರೇ,
ಬ್ಲೂಮ್ ಬರ್ಗ್ ತನ್ನದೇ ಆದ ವರದಿಯಲ್ಲಿ ಭಾರತದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಉಲ್ಲೇಖಿಸಿದೆ. ಬ್ಲೂಮ್ ಬರ್ಗ್ ನ ನ್ಯಾಷನಲ್ ಬ್ರ್ಯಾಂಡ್ ಟ್ರ್ಯಾಕರ್ – 2018ರ ಸಮೀಕ್ಷೆಯಲ್ಲಿ ಹೂಡಿಕೆ ವಲಯದಲ್ಲಿ ಭಾರತ ಏಷ್ಯಾದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ. ರಾಜಕೀಯ ಸ್ಥಿರತೆ, ಕರೆನ್ಸಿ ಸ್ಥಿರತೆ, ಗುಣಮಟ್ಟದ ಉತ್ಪನ್ನಗಳು, ಭ್ರಷ್ಟಾಚಾರ ವಿರೋಧಿ, ತಗ್ಗಿದ ಉತ್ಪಾದನಾ ವೆಚ್ಚ, ಕಾರ್ಯತಂತ್ರ ಗುರುತಿಸುವಿಕೆ ಮತ್ತು ಐಪಿಆರ್ ಹತ್ತು ಮಾನದಂಡಗಳಲ್ಲಿ ಏಳು ಅಂಕಗಳಿಸಿ ಒಂದನೇ ಸ್ಥಾನದಲ್ಲಿದೆ. ಭಾರತ ಇತರೆ ಮಾನದಂಡಗಳಲ್ಲೂ ಕೂಡ ಉತ್ತಮ ಸ್ಥಾನಗಳಿಸಿದೆ.
ಗೆಳೆಯರೇ,
ನಿಮ್ಮ ಆಸೆ ಮತ್ತು ನಮ್ಮ ಕನಸುಗಳು ಸರಿಯಾಗಿ ಹೊಂದುತ್ತವೆ: ನಿಮ್ಮ ತಂತ್ರಜ್ಞಾನ ಮತ್ತು ನಮ್ಮ ಪ್ರತಿಭೆ ಸೇರಿದರೆ ಜಗತ್ತನ್ನೇ ಬದಲಿಸಬಹುದು. ನಿಮ್ಮ ಎತ್ತರ ಮತ್ತು ನಮ್ಮ ಕೌಶಲ್ಯ ಜಾಗತಿಕ, ಆರ್ಥಿಕ ಬೆಳವಣಿಗೆಯನ್ನು ತ್ವರಿತಗೊಳಿಸುತ್ತದೆ: ನಿಮ್ಮ ವಿವೇಕ  ಮತ್ತು ನಮ್ಮ ಲೌಕಿಕ(ಪ್ರಾಗ್ಮಟಿಕ್) ಮನಸ್ಥಿತಿ ನಿರ್ವಹಣೆಯಲ್ಲಿ ಹೊಸ ಕತೆಯನ್ನು ಬರೆಯಬಹುದು. ನಿಮ್ಮ ಉದಾರವಾದ ಮಾರ್ಗ ಮತ್ತು ಮಾನವೀಯ ಮೌಲ್ಯಗಳು ವಿಶ್ವ ಎದುರು ನೋಡುತ್ತಿರುವ ದಾರಿಯನ್ನು ತೋರಿಸುತ್ತವೆ. ಇದರಲ್ಲಿ ಯಾವುದೇ ಅಂತರವಿದ್ದರೂ, ಅದನ್ನು ನಿವಾರಿಸಲು ನಾನೇ ಸ್ವತಃ ಸೇತುವೆಯಾಗಿ ಕಾರ್ಯನಿರ್ವಹಿಸುತ್ತೇನೆ.
 
ಧನ್ಯವಾದಗಳು