Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪರಿಷ್ಕೃತ ವಿಶೇಷ ಪ್ರೋತ್ಸಾಹ ಪ್ಯಾಕೇಜ್ ಯೋಜನೆಯಲ್ಲಿ ತಿದ್ದುಪಡಿಗೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ವಿದ್ಯುನ್ಮಾನ ಕ್ಷೇತ್ರದಲ್ಲಿ ಹೂಡಿಕೆಯನ್ನು ಪ್ರೋತ್ಸಾಹಿಸಲು ಮತ್ತು 2020ರ ವೇಳೆಗೆ “ನಿವ್ವಳ ಶೂನ್ಯ ಆಮದು’ ಗುರಿಯತ್ತ ಸಾಗಲು ಪರಿಷ್ಕೃತ ವಿಶೇಷ ಪ್ರೋತ್ಸಾಹಧನ ಪ್ಯಾಕೇಜ್ ಯೋಜನೆ (ಎಂ.-ಎಸ್.ಐ.ಪಿ.ಎಸ್)ಗೆ ತಿದ್ದುಪಡಿ ತರಲು ತನ್ನ ಅನುಮೋದನೆ ನೀಡಿದೆ.

ವಿದ್ಯುನ್ಮಾನ ವ್ಯವಸ್ಥೆಯ ವಿನ್ಯಾಸ ಮತ್ತು ಭಾರತದ ಉತ್ಪಾದನಾ ವಲಯ (ಇ.ಎಸ್.ಡಿ.ಎಂ.) ಹೂಡಿಕೆಯನ್ನು ಕೈಗೊಳ್ಳುವುದರ ಜೊತೆಗೆ ಎಂ-ಸಿಪ್ಸ್ ತಿದ್ದುಪಡಿಗಳು ಆಮದಿನ ಮೇಲಿನ ಅವಲಂಬನೆ ಕಡಿಮೆ ಮಾಡಿ, ಉದ್ಯೋಗಾವಕಾಶ ಹೆಚ್ಚಿಸುತ್ತವೆ ಎಂದು ನಿರೀಕ್ಷಿಸಲಾಗಿದೆ. ಈ ಯೋಜನೆ ಅಡಿಯಲ್ಲಿ ಈಗಾಗಲೇ ಪಡೆಯಲಾಗಿರುವ ಸ್ಕೀಂಗಳು ಹತ್ತುಲಕ್ಷ ಜನರಿಗೆ (ನೇರ ಮತ್ತು ಪರೋಕ್ಷ) ಉದ್ಯೋಗ ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿವೆ. ಈ ನೀತಿಯುವ ಎಲ್ಲ ರಾಜ್ಯಗಳು ಮತ್ತು ಜಿಲ್ಲೆಗಳನ್ನು ತಲುಪಲಿದೆ ಮತ್ತು ವಿದ್ಯುನ್ಮಾನ ಉತ್ಪಾದನೆಯಲ್ಲಿ ಹೂಡಿಕೆಯನ್ನು ಆಕರ್ಷಿಸುವ ಅವಕಾಶವನ್ನು ಒದಗಿಸಲಿದೆ. ಈವರೆಗೆ 243 ಅರ್ಜಿಗಳು ಯೋಜನೆಯ ಅಡಿಯಲ್ಲಿ ಸ್ವೀಕೃತವಾಗಿವೆ, ಈ ಪೈಕಿ 75 ಅರ್ಜಿಗಳನ್ನು ಅನುಮೋದಿಸಲಾಗಿದ್ದು, ಇವು 17,997 ಕೋಟಿ ರೂಪಾಯಿಗಳ ಪ್ರಸ್ತಾವನೆಗಳಾಗಿವೆ.

ತಿದ್ದುಪಡಿಯ ಮುಖ್ಯಾಂಶಗಳು ಇಂತಿವೆ:

a) ಈ ಯೋಜನೆಯಡಿ ಅರ್ಜಿಗಳನ್ನು 2018ರ ಡಿಸೆಂಬರ್ 31ರವರೆಗೆ ಅಥವಾ ಪ್ರೋತ್ಸಾಹ ಬದ್ಧತೆ ರೂ. 10,000 ಕೋಟಿ ರೂಪಾಯಿ ತಲುಪುವರೆಗೆ, ಯಾವುದು ಮೊದಲೋ ಅಲ್ಲಿಯವರೆಗೆ ಸ್ವೀಕರಿಸಲಾಗುವುದು. ಒಂದೊಮ್ಮೆ ಪ್ರೋತ್ಸಾಹದ ಬದ್ಧತೆ ರೂ. 10,000 ತಲುಪಿದರೆ, ಹೆಚ್ಚಿನ ಹಣಕಾಸು ಬದ್ಧತೆಯ ನಿರ್ಧಾರಕ್ಕೆ ಪರಾಮರ್ಶೆ ನಡೆಸಲಾಗುವುದು.

b) ಹೊಸ ಅನುಮೋದನೆಗಳಿಗೆ, ಯೋಜನೆಯಡಿ ಪ್ರೋತ್ಸಾಹಕವು ಯೋಜನೆ ಅನುಮೋದನೆಗೊಂಡ ದಿನದಿಂದ ದೊರಕಲಿದೆ ಮತ್ತು ಅರ್ಜಿ ಸ್ವೀಕೃತಿ ಆದ ದಿನದಿಂದ ದೊರಕುವುದಿಲ್ಲ.

c) ಯೋಜನೆ ಅನುಮೋದನೆಗೊಂಡ ದಿನಾಂಕದಿಂದ 5 ವರ್ಷಗಳೊಳಗೆ ಮಾಡಲಾದ ಹೂಡಿಕೆಗೆ ಮಾತ್ರವೇ ಪ್ರೋತ್ಸಾಹಕ ಲಭ್ಯವಾಗುತ್ತದೆ.

d) ಅರ್ಹ ಅರ್ಜಿಗಳಿಗೆ ಸಾಮಾನ್ಯವಾಗಿ ಅನುಮೋದನೆಯನ್ನು ಸಂಪೂರ್ಣ ಅರ್ಜಿಯನ್ನು ಸಲ್ಲಿಸಿದ 120 ದಿನಗಳ ಒಳಗಾಗಿ ನೀಡಲಾಗುತ್ತದೆ.

e) ಯೋಜನೆಯಡಿ ಪ್ರೋತ್ಸಾಹಕ ಪಡೆಯುವ ಘಟಕಗಳು, ಮೂರು ವರ್ಷಗಳ ಕಾಲ ವಾಣಿಜ್ಯ ಉತ್ಪಾದನೆಯಲ್ಲಿ ಮುಂದುವರಿಯುವುದಾಗಿ ಮುಚ್ಚಳಿಕೆ ಒದಗಿಸಬೇಕಾಗುತ್ತದೆ.

f) ಯೋಜನೆಯ ಅನುಮೋದನೆಗೆ ಶಿಫಾರಸು ಮಾಡುವ ಅಂದಾಜು ಸಮಿತಿಯ ಅಧ್ಯಕ್ಷತೆಯನ್ನು ಐಟಿ ಮತ್ತು ವಿದ್ಯುನ್ಮಾನ ಸಚಿವಾಲಯದ ಕಾರ್ಯದರ್ಶಿ ವಹಿಸಲಿದ್ದಾರೆ.

g) 6850 ಕೋಟಿ ರೂಪಾಯಿ (ಅಂದಾಜು 1 ಶತಕೋಟಿ ಅಮೆರಿಕನ್ ಡಾಲರ್) ಹೂಡಿಕೆಯನ್ನು ಒಳಗೊಂಡಬೃಹತ್ ಯೋಜನೆಗಳಿಗೆ ಸಂಬಂಧಿಸಿದಂತೆ, ನೀತಿ ಆಯೋಗದ ಸಿಇಓ, ವೆಚ್ಚ ವಿಭಾಗದ ಕಾರ್ಯದರ್ಶಿ, ಮೆಯಿಟ್ ವೈ ಕಾರ್ಯದರ್ಶಿ ಅವರನ್ನೊಳಗೊಂಡ ಹಾಗೂ ಸಂಪುಟ ಕಾರ್ಯದರ್ಶಿಗಳ ಅಧ್ಯಕ್ಷತೆಯ ಪ್ರತ್ಯೇಕ ಸಮಿತಿ ರಚಿಸಲಾಗುತ್ತದೆ.

ಹಿನ್ನೆಲೆ

ವಿದ್ಯುನ್ಮಾನ ವ್ಯವಸ್ಥೆಯ ವಿನ್ಯಾಸ ಮತ್ತು ಉತ್ಪಾದನೆ (ಇಸ್ಡಿಎಂ)ವಲಯದಲ್ಲಿ ಬೃಹತ್ ಪ್ರಮಾಣದ ಉತ್ಪಾದನೆಯನ್ನು ಉತ್ತೇಜಿಸಲು 2012ರ ಜುಲೈನಲ್ಲಿ ಸಂಪುಟ ಸಭೆಯು ಎಂ-ಸಿಪ್ಸ್ ಗೆ ಅನುಮೋದನೆ ನೀಡಿತ್ತು. ಈ ಯೋಜನೆಯು – ವಿಶೇಷ ಆರ್ಥಿಕ ವಲಯ(ಎಸ್.ಇ.ಜಡ್)ಗಳಿಗೆ ಶೇ.20ರಷ್ಟು ಮತ್ತು ಎಸ್.ಇ.ಜೆಡ್ ಏತರಕ್ಕೆ ಶೇ.25 ರಷ್ಟು ಬಂಡವಾಳ ವೆಚ್ಚದ ಸಬ್ಸಿಡಿಯನ್ನೂ ಒದಗಿಸುತ್ತದೆ. ಪ್ರಕ್ರಿಯೆ ಸರಳೀಕರಿಸಲು ಮತ್ತು ಅದರ ಸ್ವರೂಪ ಹೆಚ್ಚಿಸಲು ಈ ಯೋಜನೆಯನ್ನು 2015ರ ಆಗಸ್ಟ್ ನಲ್ಲಿ ತಿದ್ದುಪಡಿ ಮಾಡಲಾಯಿತು. ಈ ಯೋಜನೆಯು ಇ.ಎಸ್.ಡಿ.ಎಂ. ವಲಯದಲ್ಲಿ 1,26,838 ಕೋಟಿ ರೂಪಾಯಿಗಳಷ್ಟು ಮೊತ್ತದ ಹೂಡಿಕೆಯನ್ನು ಆಕರ್ಷಿಸಿದೆ, ಈ ಪೈಕಿ, 17,997 ಕೋಟಿ ರೂಪಾಯಿ ಹೂಡಿಕೆಯನ್ನು ಮೆಯಿಟ್ ವೈ ಅನುಮೋದಿಸಿದೆ. ಎಂ-ಸಿಪ್ಸ್ ವಿದ್ಯುನ್ಮಾನ ವಲಯದಲ್ಲಿನ ಹೂಡಿಕೆ ಮೇಲೆ ಧನಾತ್ಮಕ ಪರಿಣಾಮ ಬೀರಬಲ್ಲದಾಗಿದೆ.

****

AKT/VBA/SH