ಪಿಎಂಇಂಡಿಯಾ
ಗೃಹ ಸಚಿವಾಲಯದ ಅಖಿಲ ಭಾರತ ಗಿಡ ನೆಡುವ ಅಭಿಯಾನದ ಅಡಿಯಲ್ಲಿ 40 ಮಿಲಿಯನ್ ಸಸಿಗಳನ್ನು ನೆಡಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅವರು ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಈ ಅಭಿಯಾನ ಮಹತ್ವದ್ದಾಗಿದ್ದು ಇದಕ್ಕೆ ಕೇಂದ್ರ ಮೀಸಲು ಪೊಲೀಸ್ ಪಡೆ(CAPF) ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ.
ಅಮಿತ್ ಶಾ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ,
“ಇದೊಂದು ಮಹತ್ವದ ದೊಡ್ಡ ಸಾಧನೆ! ಗೃಹ ಸಚಿವಾಲಯದ ಈ ಗಿಡ ನೆಡುವ ಅಭಿಯಾನವು ಪರಿಸರ ಮತ್ತು ಪ್ರಕೃತಿಯ ಸಂರಕ್ಷಣೆಯ ದಿಕ್ಕಿನಲ್ಲಿ ಪ್ರತಿಯೊಬ್ಬರನ್ನು ಪ್ರೇರೇಪಿಸಲಿದೆ.”ಎಂದು ಬರೆದಿದ್ದಾರೆ.
***
शानदार उपलब्धि! पर्यावरण और प्रकृति के संरक्षण की दिशा में गृह मंत्रालय का यह वृक्षारोपण अभियान हर किसी को प्रेरित करने वाला है। https://t.co/HLHX4g9l4e
— Narendra Modi (@narendramodi) August 19, 2023