ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಸಾರ್ವಜನಿಕ ವಲಯದ ಬ್ಯಾಂಕ್ ಗಳಿಗೆ ಪರ್ಯಾಯ ವ್ಯವಸ್ಥೆ (ಎ.ಎಂ.) ಮೂಲಕ ವಿಲೀನವಾಗಲು ತನ್ನ ತಾತ್ವಿಕ ಅನುಮೋದನೆ ನೀಡಿದೆ. ಈ ನಿರ್ಧಾರವು, ಸದೃಢವಾದ ಮತ್ತು ಸ್ಪರ್ಧಾತ್ಮಕವಾದ ಬ್ಯಾಂಕುಗಳನ್ನು ರೂಪಿಸಲು ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಅವಕಾಶ ಕಲ್ಪಿಸಲಿದೆ.
ಪ್ರಮುಖ ಅಂಶಗಳು:
ಸಾರ್ವಜನಿಕ ವಲಯದ ಬ್ಯಾಂಕ್ ಗಳ ಪರಿಗಣನೆಗಾಗಿ ಅನುಮೋದಿತ ಚೌಕಟ್ಟಿನ ಪ್ರಮುಖ ಅಂಶಗಳು ಈ ಕೆಳಕಂಡಂತಿವೆ:
· ಸದೃಢ ಮತ್ತು ಸ್ಪರ್ಧಾತ್ಮಕ ಬ್ಯಾಂಕುಗಳನ್ನು ರೂಪಿಸುವ ನಿರ್ಧಾರವು ವಾಣಿಜ್ಯ ಪರಿಗಣನೆಗಳ ಮೇಲೆ ಮಾತ್ರವೇ ಆಧಾರಿತವಾಗಿರುತ್ತದೆ.
· ಈ ಪ್ರಸ್ತಾಪಗಳು ಬ್ಯಾಂಕ್ ಗಳ ಮಂಡಳಿಯಿಂದಲೇ ಆರಂಭವಾಗಬೇಕು.
· ವಿಲೀನಕ್ಕೆ ಯೋಜನೆಗಳನ್ನು ರೂಪಿಸಲು ತಾತ್ವಿಕ ಒಪ್ಪಿಗೆಗಾಗಿ ಬ್ಯಾಂಕ್ ಗಳಿಂದ ಸ್ವೀಕರಿಸಲಾಗುವ ಪ್ರಸ್ತಾಪಗಳನ್ನು ಪರ್ಯಾಯ ವ್ಯವಸ್ಥೆ (ಎ.ಎಂ.)ಮುಂದೆ ಮಂಡಿಸಬೇಕು.
· ತಾತ್ವಿಕ ಒಪ್ಪಿಗೆಯ ಬಳಿಕ, ಕಾನೂನಿನ ಅನ್ವಯ ಮತ್ತು ಸೆಬಿ ಅಗತ್ಯಗಳಿಗೆ ಅನುಗುಣವಾಗಿ ಬ್ಯಾಂಕ್ ಗಳು ಕ್ರಮ ಕೈಗೊಳ್ಳುತ್ತವೆ.
· ಭಾರತೀಯ ರಿಸರ್ವ್ ಬ್ಯಾಂಕ್ ನೊಂದಿಗೆ ಸಮಾಲೋಚಿಸಿದ ತರುವಾಯ ಕೇಂದ್ರ ಸರ್ಕಾರ ಅಂತಿಮ ಯೋಜನೆಯ ಅಧಿಸೂಚನೆ ಹೊರಡಿಸುತ್ತದೆ.
ಹಿನ್ನೆಲೆ:
1991ರಲ್ಲಿ ಭಾರತದಲ್ಲಿ ಕಡಿಮೆ ಇದ್ದರೂ ಸದೃಢವಾದ ಸಾರ್ವಜನಿಕ ಬ್ಯಾಂಕ್ ಗಳು ಇರಬೇಕು ಎಂಬ ಸಲಹೆ ಮಾಡಲಾಗಿತ್ತು. ಆದಾಗ್ಯೂ, 2016ರ ಮೇ ನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಆರು ಬ್ಯಾಂಕ್ ಗಳನ್ನು ವಿಲೀನಗೊಳಿಸುವ ಪ್ರಕಟಣೆಯೊಂದಿಗೆ ಸಾರ್ವಜನಿಕ ವಲಯದ ಬ್ಯಾಂಕ್ ಗಳನ್ನು ಸದೃಢಗೊಳಿಸುವ ಸಮರ್ಥ ಕ್ರಮ ಆರಂಭಿಸಲಾಯಿತು. ಈ ಹಿಂದೆ ಸ್ಟೇಟ್ ಬ್ಯಾಂಕ್ಸ್ ಆಫ್ ಇಂದೋರ್ ಮತ್ತು ಸೌರಾಷ್ಟ್ರಗಳ ವಿಲೀನಗಳಂತಲ್ಲದೆ, ದಾಖಲೆಯ ಅವಧಿಯಲ್ಲಿ ವಿಲೀನ ಪ್ರಕ್ರಿಯೆ ಪೂರ್ಣಗೊಳಿಸಲಾಯಿತು.
ಎಸ್.ಬಿ.ಐ. ಈಗ 24,000 ಶಾಖೆಗಳನ್ನು ಮತ್ತು 59000 ಎ.ಟಿ.ಎಂ.ಗಳನ್ನು, 6 ಲಕ್ಷ ಪಿಓಎಸ್ ಯಂತ್ರಗಳನ್ನು ಮತ್ತು 50,000 ವಾಣಿಜ್ಯ ಪ್ರತಿನಿಧಿಗಳನ್ನು ಒಳಗೊಂಡ ಏಕೈಕ ಬ್ಯಾಂಕ್ ಆಗಿದ್ದು, ದೂರ ದೂರದ ಪ್ರದೇಶವೂ ಸೇರಿ ದೇಶದ ಎಲ್ಲ ಭಾಗಗಳಲ್ಲೂ ಸೇವೆ ಒದಗಿಸುತ್ತಿದೆ. ಎಸ್.ಬಿ.ಐ. ಜಾಲದ ಶೇ.70ರಷ್ಟು ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿವೆ. ಆ ಅರ್ಥದಲ್ಲಿ, ಬ್ಯಾಂಕ್ ಏಕರೂಪದ ಬ್ಯಾಂಕಿಂಗ್ ಸಂಸ್ಕೃತಿಯೊಂದಿಗೆ ಭಾರತವನ್ನು ಒಗ್ಗೂಡಿಸುತ್ತಿದೆ. ಜೊತೆಗೆ ಗಣನೀಯ ಅಂತಾರಾಷ್ಟ್ರೀಯ ಅಸ್ತಿತ್ವವನ್ನೂ ಹೊಂದಿದೆ, ಮತ್ತು ಇದು ಜಾಗತಿಕವಾಗಿ ಅತಿ ದೊಡ್ಡ ಬ್ಯಾಂಕ್ ಗಳಲ್ಲಿ ಒಂದಾಗಿದೆ. ಅದರ ಗಾತ್ರ, ಆರ್ಥಿಕ ಶಕ್ತಿ ಮತ್ತು ಪ್ರಭಾವ ವಿಶ್ವಾದ್ಯಂತ ಎಲ್ಲ ಸಮಯಗಳ ವಲಯದಲ್ಲಿ ವಿಶ್ವಾದ್ಯಂತದ ಜಾಲದಲ್ಲಿ ಗ್ರಾಹಕರ ಸೇವೆ ಸಾಧ್ಯಮಾಡಿದೆ, ಜೊತೆಗೆ ವಿಸ್ತೃತವಾದ ವಿಧದ ಬ್ಯಾಂಕಿಂಗ್ ಉತ್ಪನ್ನಗಳು ಮತ್ತು ಅತ್ಯುತ್ಕೃಷ್ಟ ತಂತ್ರಜ್ಞಾನವನ್ನೂ ಹೊಂದಿದೆ.
ಎಸ್.ಬಿ.ಐ. ಅತ್ಯಂತ ಕಡಿಮೆ ಬಡ್ಡಿ ದರ ವಿಧಿಸುತ್ತಿದ್ದು, ಸಣ್ಣ ವ್ಯಾಪಾರಸ್ಥ ಪುರುಷರು ಅಥವಾ ಮಹಿಳೆಯರು ಮತ್ತು ಕೃಷಿಕರಿಗೆ ಸಾಲ ಒದಗಿಸುತ್ತಿದೆ. 8.6 ಲಕ್ಷ ವ್ಯಾಪಾರಸ್ಥರು ಭೀಮ್, ಆಧಾರ್, ಭಾರತ್ ಕ್ಯುಆರ್ ಮತ್ತು ಪಿಓಎಸ್ ಗಳನ್ನು ಬಳಸುತ್ತಿದ್ದು, ಡಿಜಿಟಲ್ ಬ್ಯಾಂಕಿಂಗ್ ನ ಹೆಜ್ಜೆಗುರುತುಗಳು ಹೆಚ್ಚಳವಾಗುತ್ತಿವೆ. ಎಸ್.ಬಿ.ಐ. ಯಶಸ್ವಿಯಾಗಿ 15,000 ಕೋಟಿ ಕ್ಯುಐಪಿಗೆ ಏರಿದೆ.
ಎಸ್.ಬಿ.ಐ. ಹೊರತಾಗಿ ಪ್ರಸ್ತುತ 20 ಪಿ.ಎಸ್.ಬಿ.ಗಳಿವೆ. ಬ್ಯಾಂಕ್ ಗಳ ರಾಷ್ಟ್ರೀಕರಣವಾದ 1970/80ರ ತರುವಾಯ, ಖಾಸಗಿ ವಲಯದ ಬ್ಯಾಂಕ್ ಗಳ ಮತ್ತು ಬ್ಯಾಂಕಿಂಗ್ ಏತರ ಹಣಕಾಸು ಸಂಸ್ಥೆಗಳ, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳ, ಪೇಮೆಂಟ್ ಬ್ಯಾಂಕ್ ಗಳ ಮತ್ತು ಸಣ್ಣ ಹಣಕಾಸು ಬ್ಯಾಂಕ್ ಗಳ ಹೆಚ್ಚಳದೊಂದಿಗೆ ಬ್ಯಾಂಕಿಂಗ್ ಸನ್ನಿವೇಶ ಬದಲಾಗಿದೆ. ಈ ನಿರ್ಧಾರವು ಬೆಳೆಯುತ್ತಿರುವ ಆರ್ಥಿಕತೆಯಲ್ಲಿ ಸಾಲದ ಅಗತ್ಯಗಳನ್ನು ಪೂರೈಸಲು ಮತ್ತು ಸರ್ಕಾರದ ಬೊಕ್ಕಸ ಮೇಲೆ ಅನುಗುಣವಾಗಿ ಅವಲಂಬಿತವಾಗದೆ ಸಂಪನ್ಮೂಲಗಳನ್ನು ಸಂಗ್ರಹಿಸುವ ಸಾಮರ್ಥ್ಯಕ್ಕಾಗಿ ಸಾರ್ವಜನಿಕ ವಲಯದಲ್ಲಿ ಸದೃಢ ಮತ್ತು ಸ್ಪರ್ಧಾತ್ಮಕ ಬ್ಯಾಂಕ್ ಗಳ ರಚನೆಗೆ ಅವಕಾಶ ಮಾಡಿಕೊಡುವುದಾಗಿದೆ.