ಪಿಎಂಇಂಡಿಯಾ
ಹರಿಯಾಣದ ರಾಜ್ಯಪಾಲರಾದ ಶ್ರೀ ಸತ್ಯದೇವ್ ನಾರಾಯಣ ಆರ್ಯ ಅವರೇ, ಇಲ್ಲಿನ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ ಮನೋಹರ್ ಲಾಲ್ ಖಟ್ಟರ್ ಅವರೇ, ನನ್ನ ಸಂಪುಟ ಸಹೋದ್ಯೋಗಿಗಳಾದ ಶ್ರೀ ಚೌಧರಿ ವೀರೇಂದ್ರ ಸಿಂಗ್ ಮತ್ತು ಶ್ರೀ ರಾವ್ ಇಂದ್ರಜಿತ್ ಸಿಂಗ್ ಅವರೇ, ವೇದಿಕೆಯ ಮೇಲೆ ಮತ್ತು ಮುಂಭಾಗದಲ್ಲಿ ಉಪಸ್ಥಿತರಿರುವ ರಾಜ್ಯ ಸರಕಾರದ ಮಂತ್ರಿಗಳೇ, ಇಲ್ಲಿ ಅಗಾಧ ಸಂಖ್ಯೆಯಲ್ಲಿ ನೆರೆದಿರುವ ಹರಿಯಾಣದ ನನ್ನ ಆತ್ಮೀಯ ಸಹೋದರ-ಸಹೋದರಿಯರೇ.
ಹರಿಯಾಣದ ಮುಖ್ಯಮಂತ್ರಿಗಳು ಈಗಷ್ಟೇ ನನ್ನೊಂದಿಗೆ ಮಾತನಾಡುತ್ತ, “ಹರಿಯಾಣದ ಜನರೊಂದಿಗೆ ಕಾಲ ಕಳೆಯುವ ಅವಕಾಶ ನಿಮಗೆ ಹಲವು ಬಾರಿ ಸಿಕ್ಕಿದೆ,’’ ಎಂದರು. ಈಗ ನಾನು ಮತ್ತೊಮ್ಮೆ -ಕೆಲವೇ ದಿನಗಳ ಅಂತರದಲ್ಲಿ- ಇಲ್ಲಿಗೆ ಬಂದಿದ್ದೇನೆ. ಕಳೆದ ಸಲ ಇಲ್ಲಿಗೆ ಬಂದಿದ್ದಾಗ ನನಗೆ ಚೌಧರಿ ಛೋಟು ರಾಮ್ ಅವರ ಭವ್ಯವಾದ ಪ್ರತಿಮೆಯನ್ನು ಅನಾವರಣಗೊಳಿಸುವ ಸದವಕಾಶ ನನ್ನದಾಗಿತ್ತು. ಈ ಪ್ರತಿಮೆಯು ಹರಿಯಾಣದ ಹೆಮ್ಮೆಯ/ಪ್ರತಿಷ್ಠೆಯ ಸಂಕೇತವಾಗಿದೆ. ಇವತ್ತು ನಾನು ಪುನಃ ಹರಿಯಾಣಕ್ಕೆ ಬಂದಿದ್ದೇನೆ. ಕೇಂದ್ರ ಸರಕಾರದಿಂದ ರಾಜ್ಯಕ್ಕೆ 3,300 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಕೊಡಲಾಗಿದೆ. ಸಮಗ್ರ ಅಭಿವೃದ್ಧಿಯ ಕಡೆಗೆ ಹರಿಯಾಣವು ಇವತ್ತು ಇನ್ನೊಂದು ಹೆಜ್ಜೆ ಎತ್ತಿಟ್ಟಿದೆ.
ಸ್ನೇಹಿತರೇ,
ಹರಿಯಾಣದಲ್ಲಿ ಕೇವಲ ಜ್ಞಾನದ ದೀವಿಗೆಯಷ್ಟೇ ಅಲ್ಲ, ಧೈರ್ಯ-ಶೌರ್ಯಗಳ ಸಾಹಸಗಾಥೆಗಳೂ ಸಾಕಷ್ಟಿವೆ. ನಿನ್ನೆಯಷ್ಟೆ ನಾವು ಲಡಖ್ ವಲಯದಲ್ಲಿರುವ ರೆಝಾಂಗ್ಲಾ ಪಾಸ್ ಯುದ್ಧದ 56ನೇ ವರ್ಷಾಚರಣೆಯನ್ನು ಮಾಡಿದೆವು. ಅದು 18,000 ಅಡಿಗಳಷ್ಟು ಎತ್ತರದಲ್ಲಿ ನಡೆದ ಯುದ್ಧವಾಗಿದೆ. ಪರಮವೀರ ಚಕ್ರ ಪುರಸ್ಕೃತ ಮೇ.ಶೈತಾನ್ ಸಿಂಗ್ ಅವರ ನೇತೃತ್ವದಲ್ಲಿ ಹರಿಯಾಣದ ವೀರಪುತ್ರರು ಆ ಯುದ್ಧದಲ್ಲಿ ಕೆಚ್ಚಿನಿಂದ ಹೋರಾಡಿದರು. ಆ ಸಮರದಲ್ಲಿ ದೇಶಕ್ಕಾಗಿ ಪ್ರಾಣವನ್ನೇ ಕೊಟ್ಟು ಹುತಾತ್ಮರಾದ ಹಲವರು ಹರಿಯಾಣದವರು. ರೆಝಾಂಗ್ ಲಾ ಪೋಸ್ಟ್ ಸಮಯದಲ್ಲಿ ಧೈರ್ಯದಿಂದ ಹೋರಾಡಿ, ಬಲಿದಾನ ಮಾಡಿದ ಧೈರ್ಯಶಾಲಿ ಯೋಧರಿಗೆ ನಾನು ನನ್ನ ಗೌರವವನ್ನು ಸಮರ್ಪಿಸುತ್ತಿದ್ದೇನಲ್ಲದೆ, ಅವರೆಲ್ಲರಿಗೂ ನಮಸ್ಕರಿಸುತ್ತಿದ್ದೇನೆ.
ಮಿತ್ರರೇ,
ಹರಿಯಾಣ ಪಾಲಿಗೆ ಇಂದಿನ ದಿನವು ತುಂಬಾ ಮಹತ್ತ್ವದ್ದಾಗಿದೆ. ಏಕೆಂದರೆ, ಕುಂಡಲಿ-ಮಾನೇಸರ್-ಪಲ್ವಾಲ್ ನಡುವಿನ ಎಕ್ಸ್ ಪ್ರೆಸ್ ಹೆದ್ದಾರಿಯನ್ನು ರಾಷ್ಟ್ರಕ್ಕೆ ಸಮರ್ಪಿಸುವ ಅವಕಾಶ ನನಗೆ ಸಿಕ್ಕಿದೆ. ಈ ಯೋಜನೆಯ ಮೊದಲನೇ ಹಂತವನ್ನು ಎರಡು ವರ್ಷಗಳ ಹಿಂದೆ ಪೂರ್ಣಗೊಳಿಸಲಾಗಿತ್ತು. ಕುಂಡಲಿ-ಮಾನೇಸರ್ ನಡುವಿನ 83 ಕಿ.ಮೀ.ಉದ್ದದ ಎರಡನೇ ಹಂತವನ್ನು ಇಂದು ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ. ಇದರೊಂದಿಗೆ 135 ಕಿ.ಮೀ. ಉದ್ದದ ಎಕ್ಸ್ ಪ್ರೆಸ್ ಹೆದ್ದಾರಿ ಈಗ ಸಿದ್ಧವಾಗಿದೆ. ಇದರ ಜತೆಯಲ್ಲಿ, 500 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ವಲ್ಲಭಗಢ-ಮುಜೇಸರ್ ನಡುವಿನ ಮೆಟ್ರೊ ರೈಲು ಮಾರ್ಗವನ್ನು ಕೂಡ ಇಂದು ಉದ್ಘಾಟಿಸಲಾಗಿದೆ. ಈ ಎರಡು ಯೋಜನೆಗಳು ಹರಿಯಾಣದ ಈ ಭಾಗದಲ್ಲಿ ಸಂಪರ್ಕ ಕ್ರಾಂತಿಯನ್ನೇ ಉಂಟುಮಾಡಲಿವೆ. ಅಲ್ಲದೆ, ಇಲ್ಲಿರುವ ಶ್ರೀ ವಿಶ್ವಕರ್ಮ ಕೌಶಲ್ಯ ವಿಶ್ವವಿದ್ಯಾಲಯದ ಮೂಲಕ ಈ ಸೀಮೆಯ ಯುವಜನರಿಗೆ ಒಳ್ಳೆಯ ಉತ್ತೇಜನ ಸಿಗಲಿದೆ.
ಸಹೋದರರೇ ಮತ್ತು ಸಹೋದರಿಯರೇ.,
ಇಂದಿನ ಈ ಸಮಾರಂಭವು ಎರಡು ಪರಿಸ್ಥಿತಿಗಳನ್ನು ಪರಸ್ಪರ ತುಲನೆ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಅದೇನೆಂದರೆ, ಸಂಕಲ್ಪ ಶಕ್ತಿಯೊಂದಿಗೆ ನಾವು ಒಂದು ಕೆಲಸವನ್ನು ಮಾಡಿದಾಗ ಅದು ಸಂಪೂರ್ಣವಾಗಿ ದಡ ಸೇರುತ್ತದೆ. ಇದನ್ನು ಇವತ್ತಿನ ಈ ಸಮಾರಂಭವೇ ಸಾದರಪಡಿಸುತ್ತಿದೆ. ಇದು ಭಾರತೀಯ ಜನತಾ ಪಕ್ಷವು ಚುಕ್ಕಾಣಿ ಹಿಡಿದಿರುವ ಸರಕಾರಗಳ ಕಾರ್ಯಶೀಲ ಸಂಸ್ಕೃತಿ ಮತ್ತು ಕಾರ್ಯವಿಧಾನಗಳನ್ನು ಪ್ರತಿನಿಧಿಸುತ್ತದೆ. ಎರಡನೆಯ ಪರಿಸ್ಥಿತಿಯು ಹಿಂದಿನ ಸರಕಾರಗಳು ಹೇಗೆ ಕೆಲಸ ಮಾಡುತ್ತಿದ್ದವು ಎನ್ನುವುದನ್ನು ಸದಾ ನಮಗೆ ನೆನಪಿಸುತ್ತದೆ. ನಿಮಗೆ 8-9 ವರ್ಷಗಳ ಹಿಂದೆಯೇ ಈ ಎಕ್ಸ್ ಪ್ರೆಸ್ ಹೆದ್ದಾರಿಯ ಸೌಲಭ್ಯ ಸಿಕ್ಕಬೇಕಾಗಿತ್ತು. ಆದರೆ, ಹಾಗಾಗಲಿಲ್ಲ ಎನ್ನುವುದು ನಿಜ. ಏಕೆಂದರೆ, ಹಿಂದಿನ ಸರಕಾರ ಮೈಗೂಡಿಸಿಕೊಂಡಿದ್ದ ಕಾರ್ಯಸಂಸ್ಕೃತಿ ಇದಕ್ಕೆ ಕಾರಣ. ಅದರಿಂದಾಗಿ ಈ ಎಕ್ಸ್-ಪ್ರೆಸ್ ಹೆದ್ದಾರಿಯ ಕೆಲಸ 12 ವರ್ಷಗಳಾದರೂ ಮುಗಿಯಲಿಲ್ಲ.
ಮಿತ್ರರೇ,
ಈ ಎಕ್ಸ್-ಪ್ರೆಸ್ ಹೆದ್ದಾರಿಯ ಕಾಮಗಾರಿಯು ಕಾಮನ್ವೆಲ್ಸ್ ಕ್ರೀಡಾಕೂಟದ ವೇಳೆಯಲ್ಲೇ ಮುಗಿಯಬೇಕಾಗಿತ್ತು. ಆದರೆ, ಕಾಮನ್ವೆಲ್ಸ್ ಕ್ರೀಡಾಕೂಟಕ್ಕೆ ಬಂದ ದುರ್ಗತಿಯೇ ಈ ಎಕ್ಸ್-ಪ್ರೆಸ್ ಹೆದ್ದಾರಿಯದೂ ಆಯಿತು. ಹಲವು ಯೋಜನೆಗಳು ಯಾವ್ಯಾವ ಹಂತದಲ್ಲಿವೆ ಎನ್ನುವುದನ್ನು ಪರಿಶೀಲಿಸಲು ನಾನು `ಪ್ರಗತಿ’ ಸಭೆಗಳನ್ನು ನಡೆಸುತ್ತೇನೆ. ಆ ಸಭೆಗಳಲ್ಲಿ ನನಗೆ, ಹಲವು ಯೋಜನೆಗಳಿಗೆ ಸಂಬಂಧಿಸಿದಂತೆ ಲೋಪದೋಷಗಳು ಕಂಡುಬಂದಿವೆ. ಆದರೆ, ಹರಿಯಾಣದಲ್ಲಿ ಬಿಜೆಪಿ ಸರಕಾರವು ಅಧಿಕಾರಕ್ಕೆ ಬಂದಮೇಲೆ ಈ ಯೋಜನೆಗಳಿಗೆ ಸಂಬಂಧಿಸಿದ ಕೆಲಸಕಾರ್ಯಗಳನ್ನು ಚುರುಕುಗೊಳಿಸಲಾಯಿತು. ಇನ್ನೊಂದೆಡೆ, ಈ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರವು ನಿರಂತರವಾಗಿ ಅನುಸರಣ ಕಾರ್ಯವನ್ನು ಮಾಡಿಕೊಂಡು ಬರುತ್ತಿದೆ. ಹೀಗಾಗಿ, ಇಂದು ನಿಮಗೆ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸುವಂತಹ ಫಲಿತಾಂಶ ಬಂದಿದೆ. ಜತೆಗೆ, ನಮ್ಮ ಕಾರ್ಯಸಂಸ್ಕೃತಿಯು ಬಹು ದೀರ್ಘಕಾಲದ ಕಾಯುವಿಕೆಗೂ ತೆರೆ ಎಳೆದಿದೆ.
ಸಹೋದರರೇ ಮತ್ತು ಸಹೋದರಿಯರೇ,
ಇಂತಹ ಯೋಜನೆಗಳಿಗೆ ಸಂಬಂಧಿಸಿದ ಕೆಲಸಕಾರ್ಯಗಳನ್ನು ನಿಲ್ಲಿಸಿದ್ದರಿಂದ ಹರಿಯಾಣ ಮತ್ತು ದೇಶದ ರಾಜಧಾನಿಯಾದ ನವದೆಹಲಿ ವಲಯದಲ್ಲಿರುವ ಜನರಿಗೆ ಎಷ್ಟೊಂದು ಹಾನಿಯಾಗಿದೆ ಎನ್ನುವುದನ್ನು ಹಾಗೆಯೇ ಊಹಿಸಿಕೊಳ್ಳಿ. ಹಿಂದಿನ ಸರಕಾರವು ಸಾರ್ವಜನಿಕರ ಹಣವನ್ನು ಹೇಗೆ ಪೋಲು ಮಾಡಿದೆ ಮತ್ತು ಇಲ್ಲಿಯ ಜನರಿಗೆ ಎಷ್ಟೊಂದು ಅನ್ಯಾಯವೆಸಗಿದೆ ಎಂಬುದು ಒಂದು ಕ್ಷೇತ್ರಾಧ್ಯಯನಕ್ಕೆ ಹೇಳಿಮಾಡಿಸಿದ ವಸ್ತುವಾಗಿದೆ. ಈ ಯೋಜನೆಯನ್ನು ಮೊದಲಿಗೆ ಕೈಗೆತ್ತಿಕೊಂಡಾಗ ಇದರ ಅಂದಾಜು ವೆಚ್ಚ ಕೇವಲ 1,200 ಕೋಟಿ ರೂ.ಗಳಾಗಿದ್ದವು. ಆದರೆ, ಇಷ್ಟು ವರ್ಷಗಳ ಕಾಲ ಇದರ ಕಾಮಗಾರಿಯನ್ನೇ ಸ್ಥಗಿತಗೊಳಿಸಿದ್ದರಿಂದ ಯೋಜನೆಯ ಅಂದಾಜು ವೆಚ್ಚವು ಮೂರು ಪಟ್ಟು ಹೆಚ್ಚಾಯಿತು. ಈ ಪೆರಿಫೆರಲ್ ಎಕ್ಸ್-ಪ್ರೆಸ್ ಹೆದ್ದಾರಿಯ ಕಾಮಗಾರಿಯನ್ನು ನಿಗದಿತ ಗಡುವಿನಲ್ಲೇ ಮುಗಿಸಿದ್ದಿದ್ದರೆ ದೆಹಲಿಯ ಸಂಚಾರ ವ್ಯವಸ್ಥೆಯ ಚಿತ್ರಣವೇ ಬೇರೆಯಾಗಿರುತ್ತಿತ್ತು. ಈ ಎಕ್ಸ್-ಪ್ರೆಸ್ ಹೆದ್ದಾರಿ ಈಗ ಸಾಕಾರಗೊಂಡಿದೆ. ಹೀಗಾಗಿ, ಇನ್ನುಮುಂದೆ ಬೇರೆಬೇರೆ ರಾಜ್ಯಗಳಿಂದ ಬರುವ ಭಾರೀ ವಾಹನಗಳು ದೆಹಲಿ ನಗರವನ್ನು ಪ್ರವೇಶಿಸುವುದು ನಿಲ್ಲಲಿದ್ದು, ಅವು ಹೊರವಲಯದಿಂದಲೇ ಹಾದು ಹೋಗಲಿವೆ. ಹೀಗಾಗಿ ದೆಹಲಿಯಲ್ಲಿನ ಸಂಚಾರ ವ್ಯವಸ್ಥೆ ಇನ್ನು ಸುಗಮವಾಗಲಿದೆ. ಜತೆಗೆ, ಈ ಹೆದ್ದಾರಿಯಿಂದಾಗಿ ದೆಹಲಿ ನಗರವನ್ನು ಪ್ರವೇಶಿಸುವ ವಾಹನಗಳ ಸಂಖ್ಯೆಯೂ ಕಡಿಮೆಯಾಗಲಿದೆ.
ಮಿತ್ರರೇ,
ದೆಹಲಿ ಮತ್ತು ಸುತ್ತಮುತ್ತಲಿನ/ಹತ್ತಿರದ ಪ್ರದೇಶಗಳಲ್ಲಿನ ಮಾಲಿನ್ಯದ ಪ್ರಮಾಣವನ್ನು ತಗ್ಗಿಸುವಲ್ಲೂ ಈ ಹೆದ್ದಾರಿಯು ಪ್ರಮುಖ ಪಾತ್ರ ವಹಿಸಲಿದೆ. ಈ ಹೆದ್ದಾರಿಯು ಒಂದು ವಿಧದಲ್ಲಿ ಆರ್ಥಿಕತೆ ಮತ್ತು ಪರಿಸರದ ಅಂಶಗಳೊಂದಿಗೆ ಸುಗಮ ಜೀವನ ಮತ್ತು ಸುಗಮ ಸಂಚಾರದ ಪರಿಕಲ್ಪನೆಗಳನ್ನೂ ಉತ್ತೇಜಿಸಲಿದೆ. ಈ ಎಕ್ಸ್-ಪ್ರೆಸ್ ಹೆದ್ದಾರಿಗಾಗಿ ನಾನು, ಹರಿಯಾಣ ಮತ್ತು ರಾಷ್ಟ್ರ ರಾಜಧಾನಿ ದೆಹಲಿ ವಲಯದ (ಎನ್ ಸಿಆರ್) ಜನರನ್ನು ಅಭಿನಂದಿಸುತ್ತೇನೆ. ಒಟ್ಟಿನಲ್ಲಿ, ದೆಹಲಿಯ ಸುತ್ತಮುತ್ತ ಈಗ 270 ಕಿ.ಮೀ. ಉದ್ದದ ಎಕ್ಸ್ ಪ್ರೆಸ್ ಹೆದ್ದಾರಿಗಳ ಜಾಲವನ್ನು ಸಂಪೂರ್ಣಗೊಳಿಸಲಾಗಿದೆ.
ಸೋದರ-ಸೋದರಿಯರೇ,
ಇಂದು ವಲ್ಲಭಗಢಕ್ಕೆ ಕೂಡ ಮೆಟ್ರೊ ರೈಲು ಸಂಪರ್ಕವನ್ನು ಕಲ್ಪಿಸಲಾಗಿದೆ. ಇದರೊಂದಿಗೆ ವಲ್ಲಭಗಢವು ಕೂಡ ದೇಶದ ಮೆಟ್ರೊ ನಕಾಶೆಯಲ್ಲಿ ಸ್ಥಾನ ಪಡೆದುಕೊಂಡಿದೆ. ಮೆಟ್ರೊ ರೈಲಿನಿಂದಾಗಿ ಇಲ್ಲಿಯ ಜನರು ದೆಹಲಿಗೆ ಬಂದು, ಹೋಗಿ ಮಾಡುವುದು ಸುಲಭವಾಗುವುದರ ಜತೆಗೆ ಅವರ ಸಮಯ ಮತ್ತು ಹಣ ಕೂಡ ಉಳಿಯುತ್ತದೆ.
ಮಿತ್ರರೇ,
ನಮ್ಮ ಸರಕಾರವು ಸಂಪರ್ಕ ವ್ಯವಸ್ಥೆಯನ್ನು ಯಃಕಶ್ಚಿತ್ ಒಂದು ಅಗತ್ಯವೆಂದುಕೊಂಡಿಲ್ಲ. ಬರಲಿಗೆ, ಇದನ್ನು ಅಭಿವೃದ್ಧಿ, ಭದ್ರತೆ ಮತ್ತು ಸಬಲೀಕರಣಗಳನ್ನು ಸಾಕಾರಗೊಳಿಸುವ ಒಂದು ಮಾಧ್ಯಮವೆಂದೂ ಪರಿಗಣಿಸಿದೆ. ಹೀಗಾಗಿ ನಾವು ವ್ಯವಸ್ಥಿತವಾದ ರಸ್ತೆಗಳು, ರೈಲು ಸಂಪರ್ಕ, ಜಲಸಂಪರ್ಕ, ಹೆದ್ದಾರಿ ಮತ್ತು ಅಂತರ್ಜಾಲದ ಮೂಲಸೌಲಭ್ಯಗಳ ಜಾಲವನ್ನೇ ನಿರ್ಮಿಸಲು ಪ್ರಯತ್ನಗಳನ್ನು ಕೈಗೊಂಡಿದ್ದೇವೆ. ಈ ಮೂಲಕ 21ನೇ ಶತಮಾನದ ಅಗತ್ಯಗಳನ್ನು ಇವು ಪೂರೈಸಬೇಕು ಮತ್ತು ಪರಸ್ಪರ ಬೆಂಬಲ ನೀಡಬೇಕೆನ್ನುವುದು ನಮ್ಮ ಆಶಯವಾಗಿದೆ. ಸದ್ಯಕ್ಕೆ, ದೇಶಾದ್ಯಂತ ಅಭೂತಪೂರ್ವ ಬಗೆಯಲ್ಲಿ ರೈಲ್ವೆ ಕಾರಿಡಾರ್ ಮತ್ತು ಹೆದ್ದಾರಿಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ದೇಶದ ಹಲವು ನಗರಗಳಲ್ಲಿ ಸಮಗ್ರ ಸಂಚಾರ ನಿರ್ವಹಣಾ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ಕೆಲಸ ಕ್ಷಿಪ್ರಗತಿಯಲ್ಲಿ ಸಾಗಿದೆ. ಜನರು ಆದಷ್ಟೂ ಕಡಿಮೆ ಸಮಯದಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ಪಯಣಿಸಬೇಕು, ಸಂಚಾರ ದಟ್ಟಣೆಯು ಕಡಿಮೆಯಾಗಬೇಕು ಮತ್ತು ಜನರಿಗೆ ಆಧುನಿಕವೂ ಪರ್ಯಾಯವೂ ಆದ ಸಂಚಾರ ಸೌಲಭ್ಯಗಳು ಸಿಗಬೇಕು ಮತ್ತು ಉದ್ದಿಮೆಗಳಿಗೆ ಅಗ್ಗದ ಸಾರಿಗೆ ಸೌಲಭ್ಯಗಳು ದೊರೆಯಬೇಕೆನ್ನುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಈ ಎಲ್ಲ ಪ್ರಯತ್ನಗಳ ಜತೆಗೆ ನಾವು ಪರಿಸರ ಸಂರಕ್ಷಣೆಯನ್ನೂ ಖಾತ್ರಿಪಡಿಸಿಕೊಳ್ಳಬೇಕಾಗಿದೆ. ಇದಕ್ಕಾಗಿ, ಪರಿಸರಕ್ಕೆ ಪೂರಕವಾದಂತಹ ಮತ್ತು ಮಾಲಿನ್ಯವನ್ನು ಕಡಿಮೆ ಮಾಡುವಂತಹ ಸಂಚಾರ-ಸಾರಿಗೆ ವಿಧಾನಗಳನ್ನೇ ಉತ್ತೇಜಿಸುತ್ತಿದ್ದೇವೆ. ವಿದ್ಯುತ್ ಚಾಲಿತ ರೈಲ್ವೆ ಮಾರ್ಗಗಳ ವಿಸ್ತರಣೆ ಮತ್ತು ವಿದ್ಯುತ್ ಚಾಲಿತ ಕಾರುಗಳ ಅಭಿವೃದ್ಧಿಯು ನಮ್ಮನ್ನು ಈ ದಿಕ್ಕಿನತ್ತ ಕೊಂಡೊಯ್ಯುತ್ತಿವೆ.
ಮಿತ್ರರೇ,
ರಾಷ್ಟ್ರದಲ್ಲಿ ಇಂದು ಹೊಸ ಬಗೆಯ, ಹೊಸ ತಲೆಮಾರಿನ ಮೂಲಸೌಲಭ್ಯಗಳನ್ನು ತ್ವರಿತ ಗತಿಯಲ್ಲಿ ಅಭಿವೃದ್ಧಿಪಡಿಸಲು ಗಮನ ನೀಡಿದ್ದೇವೆ. ನಮ್ಮ ಸರಕಾರವು ಕಳೆದ ನಾಲ್ಕು ವರ್ಷಗಳಲ್ಲಿ 3 ಲಕ್ಷ ಕೋಟಿ ರೂ.ಗಳ ವೆಚ್ಚದಲ್ಲಿ 33,000 ಕಿ.ಮೀ.ಗಿಂತಲೂ ಹೆಚ್ಚು ಹೆದ್ದಾರಿಗಳನ್ನು ನಿರ್ಮಿಸಿದೆ. ಹಿಂದಿನ ಸರಕಾರವು ಏಳೂವರೆ ವರ್ಷಗಳ ಅವಧಿಯಲ್ಲಿ ನಿರ್ಮಿಸಿದ ಹೆದ್ದಾರಿಗಿಂತ ಹೆಚ್ಚು ಉದ್ದದ ಹೆದ್ದಾರಿಗಳನ್ನು ನಾವು ಕೇವಲ ನಾಲ್ಕು ವರ್ಷಗಳಲ್ಲಿ ನಿರ್ಮಿಸಿದ್ದೇವೆ.
ಗೆಳೆಯರೇ,
ಜನರಿರಲಿ, ಕೆಲಸಗಾರರಿರಲಿ, ಅಧಿಕಾರಿಗಳಿರಲಿ, ಅಥವಾ ಕಡತಗಳೇ ಇರಲಿ, ಇವುಗಳ ನಡುವೆ ಯಾವ ವ್ಯತ್ಯಾಸವೂ ಇಲ್ಲ. ಆದರೆ, ನಮಗೆ ಇಚ್ಛಾಶಕ್ತಿ ಮತ್ತು ಸಂಕಲ್ಪಬಲವಿದ್ದರೆ ನಾವು ಎಂತಹ ಗುರಿಯನ್ನಾದರೂ ಸಾಧಿಸಬಹುದು. 2014ಕ್ಕಿಂತ ಮೊದಲು ದೇಶದಲ್ಲಿ ದಿನವೊಂದಕ್ಕೆ ಕೇವಲ 12 ಕಿ.ಮೀ. ನಷ್ಟು ಹೆದ್ದಾರಿ ಮಾತ್ರ ನಿರ್ಮಾಣವಾಗುತ್ತಿತ್ತು. ಆದರೆ, ಇಂದು ಈ ಪ್ರಮಾಣ 27 ಕಿ.ಮೀ.ಗಳಿಗೆ ಏರಿದೆ. ಇದಕ್ಕೆ ನಮ್ಮ ಇಚ್ಛಾಶಕ್ತಿ ಮತ್ತು ಸಂಕಲ್ಪಶಕ್ತಿಗಳೇ ಕಾರಣ. ಭಾರತಮಾಲಾ ಯೋಜನೆಯಡಿ ನಾವು ಇದೇ ಕ್ಷಿಪ್ರಗತಿಯಲ್ಲಿ 35,000 ಕಿ.ಮೀ.ಗಳಷ್ಟು ಹೆದ್ದಾರಿಯನ್ನು ನಿರ್ಮಿಸುತ್ತಿದ್ದೇವೆ. ನಾವು ಕೇವಲ ಹೆದ್ದಾರಿಗಳನ್ನಷ್ಟೆ ತ್ವರಿತವಾಗಿ ನಿರ್ಮಿಸುತ್ತಿಲ್ಲ. ಬದಲಿಗೆ, ರೈಲ್ವೆ ಸಂಪರ್ಕವನ್ನು ಕಲ್ಪಿಸುವ ವಿಚಾರದಲ್ಲೂ ನಮ್ಮ ಧೋರಣೆ ಇದೇ ಆಗಿದೆ. ನಾಲ್ಕು ವರ್ಷಗಳ ಹಿಂದೆ ಹಳಿಗಳೂ ಇಲ್ಲದಿದ್ದಂತಹ ಪ್ರದೇಶಗಳಿಗೆ ಕೂಡ ನಾವು ರೈಲು ಸಂಪರ್ಕವನ್ನು ಇಂದು ಒದಗಿಸಿದ್ದೇವೆ; ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲೆಲ್ಲ ರೈಲು ಹಳಿಗಳನ್ನು ನಾವು ಹಾಕುತ್ತಿದ್ದೇವೆ.
ಮಿತ್ರರೇ,
ನಮ್ಮ ಸರಕಾರವು ದೇಶದ ಅಗತ್ಯಗಳನ್ನು ಮತ್ತು ದೇಶವಾಸಿಗಳ ನಿರೀಕ್ಷೆಗಳನ್ನು ಗಂಭೀರವಾಗಿ ತೆಗೆದುಕೊಂಡಿದೆ. ಇದಕ್ಕೆ ತಕ್ಕಂತೆ ನಾವು ದೇಶಾದ್ಯಂತ ಸಂಚರಿಸುವ ರೈಲುಗಳ ವೇಗವನ್ನು ಹೆಚ್ಚಿಸಿದ್ದೇವೆ; ರೈಲುಗಳು ಮತ್ತು ರೈಲು ನಿಲ್ದಾಣಗಳನ್ನು ಆಧುನೀಕರಿಸಿದ್ದೇವೆ. ಆಧುನಿಕ ರೈಲು ಹೇಗಿದೆಯೆಂದರೆ ಅದಕ್ಕೆ ಎಂಜಿನ್ನೇ ಬೇಕಾಗಿಲ್ಲ! ಇದನ್ನು ನೀವೆಲ್ಲರೂ ನೋಡಿರಲೇಬೇಕು. ಇಂತಹ ಎಂಜಿನ್-ರಹಿತ ರೈಲು ಸದ್ಯದಲ್ಲೇ ಭಾರತದ ಹಳಿಗಳ ಮೇಲೆ ಸಂಚರಿಸಲಿದೆ. ಈ ರೈಲು `ಮೇಕ್ ಇನ್ ಇಂಡಿಯಾ’ ಪರಿಕಲ್ಪನೆಯನ್ನು ಮತ್ತಷ್ಟು ಹಿಗ್ಗಿಸಲಿದೆ.
ಸೋದರ-ಸೋದರಿಯರೇ,
ನಮ್ಮ ಸರಕಾರವು ದೇಶದಲ್ಲಿರುವ ಮಾನವ ಸಂಪನ್ಮೂಲ ಮತ್ತು ಜಲ ಸಂಪನ್ಮೂಲಗಳನ್ನು ಗರಿಷ್ಠ ಮಟ್ಟದಲ್ಲಿ ಸದ್ಬಳಕೆ ಮಾಡಿಕೊಳ್ಳಲು ಒತ್ತು ನೀಡಿದೆ. ಹೀಗಾಗಿ, ದೇಶಾದ್ಯಂತ 100 ಜಲಮಾರ್ಗಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಕೆಲವೇ ದಿನಗಳ ಹಿಂದೆ ದೇಶದ ಪ್ರಪ್ರಥಮ ಸರಕು ಸಾಗಣೆ ವಾಹನವು ಜಲಮಾರ್ಗದಲ್ಲಿ ವಾರಣಾಸಿಯನ್ನು ತಲುಪಿದೆ. ಉತ್ತರ ಪ್ರದೇಶದ ಬನಾರಸ್-ಹಾಲ್ಡಿಯಾ ನಡುವೆ ಈಗ ಹಡುಗಗಳೀಗ ಸರಕು ಸಾಗಣೆ ಮಾಡುತ್ತಿವೆ. ಮಾತೆ ಎನಿಸಿಕೊಂಡಿರುವ ಗಂಗಾ ನದಿಯ ಮೂಲಕ ಉತ್ತರಪ್ರದೇಶವನ್ನು ಈಗ ಈಶಾನ್ಯ ಭಾಗದ ರಾಜ್ಯಗಳೊಂದಿಗೆ ಬೆಸೆಯಲಾಗಿದೆ. ಇದೇ ರೀತಿಯಲ್ಲಿ, ದೇಶದಲ್ಲಿ ವಿಮಾನ ಸಂಚಾರವನ್ನು ಅಗ್ಗಗೊಳಿಸಬೇಕು ಎನ್ನುವ ದೃಷ್ಟಿಯಿಂದ `ಉಡಾನ್’ ಯೋಜನೆಗೆ ಚಾಲನೆ ನೀಡಿದ್ದೇವೆ. ಹರಿಯಾಣದ ಹಿಸ್ಸಾರ್ ನಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗುತ್ತಿದ್ದು, ಇಲ್ಲಿಗೆ `ಉಡಾನ್’ ಯೋಜನೆಯಡಿ ವಿಮಾನ ಸಂಪರ್ಕ ಸಿಗಲಿದೆ. ಸೋದರ-ಸೋದರಿಯರೇ, ನಮ್ಮ ಸರಕಾರದ ಜನಪರ ನೀತಿಗಳಿಂದಾಗಿ ಇಂದು ಒಬ್ಬ ಶ್ರೀಸಾಮಾನ್ಯ ಕೂಡ ವಿಮಾನದಲ್ಲಿ ಪ್ರಯಾಣ ಮಾಡುವುದು ಸಾಧ್ಯವಾಗಿದೆ.
ಮಿತ್ರರೇ,
ನಮ್ಮ ಸರಕಾರದ `ಡಿಜಿಟಲ್ ಇಂಡಿಯಾ’ ಯೋಜನೆಯಡಿ ದೇಶದ ಪಂಚಾಯಿತಿಗಳನ್ನೆಲ್ಲ ಬ್ರಾಡ್-ಬ್ಯಾಂಡ್ ಅಂತರ್ಜಾಲ ಸೌಲಭ್ಯದೊಂದಿಗೆ ಬೆಸೆಯುವ ಯೋಜನೆ ತ್ವರಿತ ಗತಿಯಲ್ಲಿ ನಡೆಯುತ್ತಿದೆ. ಹಿಂದಿನ ಸರಕಾರವು ಇಡೀ ದೇಶದಲ್ಲಿ ಕೇವಲ 59 ಪಂಚಾಯಿತಿಗಳಿಗಷ್ಟೇ ಆಪ್ಟಿಕಲ್ ಫೈಬರ್ ಕೇಬಲ್ ಸೌಲಭ್ಯವನ್ನು ಒದಗಿಸಿತ್ತು. ಆದರೆ, ನಮ್ಮ ಸರಕಾರವು ಕೇವಲ ನಾಲ್ಕು ವರ್ಷಗಳಲ್ಲಿ ದೇಶದ ಒಂದು ಲಕ್ಷ ಪಂಚಾಯಿತಿಗಳಿಗೆ ಈ ಸೌಲಭ್ಯವನ್ನು ನೀಡಿದೆ ಎನ್ನುವುದನ್ನು ದಯವಿಟ್ಟು ನೆನಪಿನಲ್ಲಿ ಇಟ್ಟುಕೊಂಡಿರಿ. ಒಂದೆಡೆ, ಕೇವಲ 59 ಪಂಚಾಯಿತಿಗಳು; ಇನ್ನೊಂದೆಡೆ, ಒಂದು ಲಕ್ಷ ಪಂಚಾಯಿತಿಗಳು!
ಮಿತ್ರರೇ,
ಸಂಪರ್ಕ ವ್ಯವಸ್ಥೆಯ ಬೆಳವಣಿಗೆಯು ತನ್ನ ಜತೆಯಲ್ಲಿ ಹೊಸಹೊಸ ಉದ್ಯೋಗಾವಕಾಶಗಳನ್ನೂ ತರುತ್ತದೆ. ಹೆದ್ದಾರಿ, ಮೆಟ್ರೊ ಅಥವಾ ರೈಲು ಅಥವಾ ಜಲಸಾರಿಗೆ ಮಾರ್ಗಗಳ ಜಾಲವು ಸಾರಿಗೆ, ನಿರ್ಮಾಣ ಕಾಮಗಾರಿ, ಉತ್ಪಾದನೆ ಮತ್ತು ಸೇವಾವಲಯಗಳಿಗೆ ನೆರವು ನೀಡಲಿದೆ. ಹರಿಯಾಣ ಸರಕಾರವು ಯುವಜನರಿಗೆ ಕೇವಲ ಉದ್ಯೋಗಗಳನ್ನಷ್ಟೇ ನೀಡದೆ ಹೊಸ ಬಗೆಯ ವೃತ್ತಿಗಳಿಗೆ ಅವರನ್ನು ಸಜ್ಜುಗೊಳಿಸುವುದಕ್ಕೆ ಒತ್ತು ನೀಡುತ್ತಿರುವುದನ್ನು ಕಂಡು ನನಗೆ ಸಂತೋಷವಾಗಿದೆ. ಶ್ರೀ ವಿಶ್ವಕರ್ಮ ಕೌಶಲ್ಯ ವಿಶ್ವವಿದ್ಯಾಲಯಕ್ಕೆ ಇಂದು ಶಂಕುಸ್ಥಾಪನೆ ನೆರವೇರಿಸಿರುವುದು ಈ ನಿಟ್ಟಿನಲ್ಲಿ ಒಂದು ಬಹುದೊಡ್ಡ ಹೆಜ್ಜೆಯಾಗಿದೆ. ಕಸುಬುಗಳ ಚಹರೆಗಳು ಬದಲಾಗುತ್ತಿರುವುದಕ್ಕೆ ತಕ್ಕಂತೆ ಈ ವಿಶ್ವವಿದ್ಯಾಲಯವು ಹರಿಯಾಣದ ಯುವಜನರಿಗೆ ಕೌಶಲ್ಯಗಳನ್ನು ಪೂರೈಸಲಿದೆ. ಇಲ್ಲಿನ ಯುವಜನರು ತಮ್ಮದೇ ಆದ ವ್ಯಾಪಾರ-ವಹಿವಾಟು, ವಾಣಿಜ್ಯೋದ್ಯಮಗಳನ್ನು ಕೈಗೊಳ್ಳಲು ಬೇಕಾದ ಶಿಕ್ಷಣ ಮತ್ತು ಸಬಲೀಕರಣ ಮಂತ್ರಗಳನ್ನು ಈ ವಿಶ್ವವಿದ್ಯಾಲಯವು ಕೊಡಲಿದೆ. ಕುಶಲಕರ್ಮಗಳ ಅಧಿದೇವತೆಯಾದ ಭಗವಾನ್ ವಿಶ್ವಕರ್ಮನ ಆಶೀರ್ವಾದದ ಬಲದೊಂದಿಗೆ, ಈ ವಿಶ್ವವಿದ್ಯಾಲಯದಲ್ಲಿ ಕಲಿಯುವ ವಿದ್ಯಾರ್ಥಿಗಳ ಭವಿಷ್ಯದ ಹಾದಿಯು ಸುಗಮವಾಗಿರಲಿದೆ ಎಂದು ನಾನು ಪ್ರಾಮಾಣಿಕವಾಗಿ ನಂಬಿದ್ದೇನೆ.
ಸೋದರರೇ ಮತ್ತು ಸೋದರಿಯರೇ,
ರಫ್ತು ವಹಿವಾಟಿನ ದೃಷ್ಟಿಯಿಂದ ಇಂದು ಹರಿಯಾಣವು ಅಗ್ರಪಂಕ್ತಿಯಲ್ಲಿರುವ ರಾಜ್ಯಗಳಲ್ಲಿ ಒಂದಾಗಿದೆ. ಈ ಶ್ರೇಯಸ್ಸಿಗೆ 22,000ಕ್ಕೂ ಹೆಚ್ಚು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಸ್ವರೂಪದ ಕೈಗಾರಿಕೆಗಳು ಗಮನಾರ್ಹವಾದ ಕೊಡುಗೆಯನ್ನು ನೀಡಿವೆ. ಇಲ್ಲಿ ತಲೆಯೆತ್ತಲಿರುವ ಕೌಶಲ್ಯ ವಿಶ್ವವಿದ್ಯಾಲಯವು ಈ ಭಾಗದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಸ್ವರೂಪದ ಕೈಗಾರಿಕೆಗಳಿಗೆ ಬಲ ತುಂಬಲಿದೆ. ಈ ವಿಶ್ವವಿದ್ಯಾಲಯದಿಂದ ತೇರ್ಗಡೆಯಾಗುವ ವಿದ್ಯಾರ್ಥಿಗಳು ನೂರಕ್ಕೆ ನೂರು ಗುಣಮಟ್ಟವಿರುವಂತಹ ಉತ್ಪನ್ನಗಳನ್ನು ತಯಾರಿಸುವ ಮೂಲಕ `ಮೇಕ್ ಇನ್ ಇಂಡಿಯಾ’ ಪರಿಕಲ್ಪನೆಯನ್ನು ವಿಸ್ತರಿಸಲಿದ್ದಾರೆ.
ಮಿತ್ರರೇ,
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಸ್ವರೂಪದ ಕೈಗಾರಿಕೆಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಇತ್ತೀಚೆಗೆ ಅತ್ಯಂತ ಮಹತ್ತ್ವದ 12 ನಿರ್ಧಾರಗಳನ್ನು ತೆಗೆದುಕೊಂಡಿದ್ದು ನಿಮಗೆಲ್ಲ ಗೊತ್ತಿರಬಹುದು. ಹೀಗಾಗಿ ಈಗ ಜಿಎಸ್ ಟಿ ಹೊಂದಿರುವ ಹರಿಯಾಣದ ಯಾವುದೇ ಸಣ್ಣ ಉದ್ಯಮಿಯೊಬ್ಬ ಕೇವಲ 59 ನಿಮಿಷಗಳಲ್ಲಿ ಒಂದು ಕೋಟಿ ರೂ.ಗಳಷ್ಟು ಸಾಲವನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಇದರ ಜತೆಗೆ ಈ ವಲಯದ ಉತ್ಪಾದನೆಯನ್ನು ಹೆಚ್ಚಿಸಲು, ಮಾರುಕಟ್ಟೆಯನ್ನು ಹಿಗ್ಗಿಸಲು ಮತ್ತು ಇದು ಸುಗಮವಾಗಿ ಕೆಲಸ ಮಾಡುವಂತೆ ಮಾಡಲು ಕೂಡ ಅನೇಕ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.
ಸೋದರ-ಸೋದರಿಯರೇ,
ನಮ್ಮ ಸರಕಾರವು ದೇಶದ ಉದ್ಯಮಿಗಳ ಸಬಲೀಕರಣವನ್ನು ಬಯಸುತ್ತಿದೆಯಲ್ಲದೆ, ಆವಿಷ್ಕಾರಗಳ ಮೂಲಕ ಯುವಜನರನ್ನು ಹೆಚ್ಚುಹೆಚ್ಚಾಗಿ ಕೈಗಾರಿಕೋದ್ಯಮದಲ್ಲಿ ತೊಡಗಿಸಲು ಪ್ರೋತ್ಸಾಹ ನೀಡುತ್ತಿದೆ. ಇಂತಹವರಿಗೆ ಯಾವುದೇ ರೀತಿಯಲ್ಲೂ ಬಂಡವಾಳದ ಕೊರತೆ ಎದುರಾಗದಂತೆ ನಾವು ಜಾಗ್ರತೆ ವಹಿಸಿದ್ದೇವೆ. ಏಕೆಂದರೆ, ಬಂಡವಾಳವಿಲ್ಲದೆ ನಮ್ಮ ಉದ್ಯಮಿಗಳ/ಯುವಜನರ ಔದ್ಯಮಿಕ ಪರಿಕಲ್ಪನೆಗಳು ಸೋಲು ಕಾಣಬಾರದು. ಇದನ್ನು ಗಮನಿಸಿಯೇ `ಸ್ಟ್ಯಾಂಡಪ್ ಇಂಡಿಯಾ’ ಮತ್ತು `ಸ್ಟಾರ್ಟಪ್ ಇಂಡಿಯಾ’ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಈ ಆಲೋಚನೆಯಿಂದ ಎಷ್ಟೊಂದು ಪ್ರಯೋಜನವಾಗಿದೆಯೆಂದರೆ, ದೇಶದ ಯುವಜನರಿಗೆ `ಮುದ್ರಾ’ ಯೋಜನೆಯಡಿ ಯಾವ ಬ್ಯಾಂಕ್ ಖಾತ್ರಿಯೂ ಇಲ್ಲದೆ 6 ಲಕ್ಷ 70 ಸಾವಿರ ಕೋಟಿ ರೂ.ಗಳನ್ನು ನಮ್ಮ ಸರಕಾರ ಸಾಲದ ರೂಪದಲ್ಲಿ ನೀಡಿದೆ. ಇದರಲ್ಲಿ ಬಹಳ ಮುಖ್ಯವಾದ ಅಂಶವೇನೆಂದರೆ, `ಮುದ್ರಾ’ ಯೋಜನೆಯ ಮೂಲಕ ಸಾಲ ಪಡೆಯುತ್ತಿರುವವರ ಪೈಕಿ ಶೇಕಡ 70ಕ್ಕಿಂತ ಹೆಚ್ಚಿನವರು ಮಹಿಳೆಯರಾಗಿದ್ದಾರೆ. ಈ ಯೋಜನೆಯು ಒಂದು ಬಗೆಯಲ್ಲಿ ಸ್ತ್ರೀಯರು ಸ್ವಯಂ ಉದ್ಯೋಗವನ್ನು ಕೈಗೊಳ್ಳಲು ಪ್ರಮುಖ ಮಾಧ್ಯಮವಾಗಿದೆ. ಹರಿಯಾಣದ ನಮ್ಮ ಹೆಣ್ಣುಮಕ್ಕಳು ಮತ್ತು ಸಹೋದರಿಯರು ಕೂಡ ಈ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎನ್ನುವುದು ನಿಸ್ಸಂಶಯದ ವಿಚಾರವಾಗಿದೆ.
ಮಿತ್ರರೇ,
ನಮ್ಮ ಸರಕಾರವು ಮಹಿಳೆಯರ ಜೀವನವನ್ನು ಆದಷ್ಟೂ ಸುಗಮಗೊಳಿಸಲು ಅವಿರತವಾಗಿ ಶ್ರಮಿಸುತ್ತಿದೆ. ದೇಶಾದ್ಯಂತ 9 ಕೋಟಿ ಶೌಚಾಲಯಗಳನ್ನು ನಿರ್ಮಿಸಿದ `ಸ್ವಚ್ಛ ಭಾರತ’ ಯೋಜನೆಯೇ ಇರಬಹುದು; ಅಥವಾ ಅಂದಾಜು 6 ಕೋಟಿ ಮನೆಗಳಿಗೆ ಅಡುಗೆ ಅನಿಲ ಸಂಪರ್ಕವನ್ನು ಕಲ್ಪಿಸಿರುವ `ಉಜ್ವಲಾ’ ಯೋಜನೆಯೇ ಇರಬಹುದು. ಇವೆರಡೂ ಯೋಜನೆಗಳು ನಮ್ಮ ಮಹಿಳೆಯರ ಬದುಕನ್ನು ಸುಗಮಗೊಳಿಸಿವೆ. ಕೇಂದ್ರ ಸರಕಾರವು ಹೊಂದಿರುವ ದೂರದೃಷ್ಟಿಯ ಯೋಜನೆಗಳನ್ನು ಉತ್ತೇಜಿಸಲು ಹರಿಯಾಣ ಸರಕಾವು ಸಂಪೂರ್ಣವಾಗಿ ಸಹಕರಿಸುತ್ತಿದೆ. `ಬೇಟಿ ಬಚಾವೋ, ಬೇಟಿ ಪಡಾವೋ’, ಮತ್ತು `ಖೇಲೋ ಇಂಡಿಯಾ’ ಯೋಜನೆಗಳು ಕಂಡಿರುವ ಯಸ್ಸೇ ಇದಕ್ಕೆ ಅತ್ಯುತ್ತಮ ಉದಾಹರಣೆಗಳಾಗಿವೆ. ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ ಹರಿಯಾಣದ ಕ್ರೀಡಾಪಟುಗಳೇ ಅತ್ಯಧಿಕ ಸಂಖ್ಯೆಯಲ್ಲಿ ಪದಕಗಳನ್ನು ಮಡಿಲಿಗೆ ಹಾಕಿಕೊಂಡಿದ್ದಾರೆ. ಕಾಮನ್ವೆಲ್ತ್ ಕ್ರೀಡಾಕೂಟವೇ ಇರಲಿ, ಏಷ್ಯನ್ ಗೇಮ್ಸ್ ಕ್ರೀಡಾಕೂಟವೇ ಇರಲಿ, ಹರಿಯಾಣದ ಯುವ ಕ್ರೀಡಾಪಟುಗಳ ಯಶೋಗಾಥೆಯು ಜಗತ್ತಿನಾದ್ಯಂತ ಅನುರಣಿಸುತ್ತಿದೆ.
ಸಹೋದರ-ಸಹೋದರಿಯರೇ,
ಕೇಂದ್ರ ಮತ್ತು ರಾಜ್ಯಗಳಲ್ಲಿರುವ ಬಿಜೆಪಿ ಸರಕಾರಗಳು -ಅದು ಹರಿಯಾಣವಾಗಿರಲಿ ರಾಜಸ್ತಾನವಾಗಿರಲಿ, ಮಧ್ಯಪ್ರದೇಶವಿರಲಿ ಛತ್ತೀಸಗಢವಿರಲಿ, ಉತ್ತರಪ್ರದೇಶವಿರಲಿ ಅಥವಾ ಈಶಾನ್ಯ ಭಾರತವಿರಲಿ- `ಸಬ್ ಕಾ ಸಾತ್, ಸಬ್ ಕಾ ವಿಕಾಸ್’ (ಎಲ್ಲರೊಂದಿಗೆ, ಎಲ್ಲರ ವಿಕಾಸ) ಎನ್ನುವ ಮಂತ್ರದೊಂದಿಗೆ ಕೆಲಸ ಮಾಡುತ್ತಿವೆ. ಇದು ಎಂತಹ ಅದ್ಭುತವಾದ ಫಲಿತಾಂಶವನ್ನು ತಂದುಕೊಟ್ಟಿದೆ ಎನ್ನುವುದು ಇಂದು ಎಲ್ಲರಿಗೂ ಗೊತ್ತಾಗುತ್ತಿದೆ. ಹರಿಯಾಣದ ಜನರು ನಮ್ಮ ಈ ಎಲ್ಲ ಪ್ರಯತ್ನಗಳೊಂದಿಗೆ ಸಕ್ರಿಯವಾಗಿ ಕೈ ಜೋಡಿಸಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಇಂದು ಇಲ್ಲಿ ನಡೆದ ಶಂಕುಸ್ಥಾಪನಾ ಸಮಾರಂಭ ಮತ್ತು ಪಶ್ಚಿಮ ಪೆರಿಫೆರಲ್ ಎಕ್ಸ್-ಪ್ರೆಸ್ ಹೆದ್ದಾರಿಯ ಒಂದು ಭಾಗವನ್ನು, ಮೆಟ್ರೋ ರೈಲು ಸೇವೆಯನ್ನು ಮತ್ತು ಕೌಶಲ್ಯ ವಿಶ್ವವಿದ್ಯಾಲಯವನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಸಮಾರಂಭದಲ್ಲಿ ಭಾಗವಹಿಸಿದ್ದಕ್ಕಾಗಿ ಮತ್ತೊಮ್ಮೆ ನಾನು ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ. ನಿಮ್ಮೆಲ್ಲರಿಗೂ ಧನ್ಯವಾದಗಳು!
अभी कुण्डली- मानेसर-पलवल एक्सप्रेस-वे को देश को समर्पित करने का मौका मिला है।
— PMO India (@PMOIndia) November 19, 2018
इसका पहला चरण 2 वर्ष पहले पूरा हो गया था।
दूसरा चरण, जो कुण्डली से मानेसर तक, 83 किलोमीटर लंबा है, उसका आज लोकार्पण किया गया है।
इसके साथ ही अब 135 km का ये एक्सप्रेसवे पूरा हो गया है: PMA
इसके साथ ही करीब 500 करोड़ की लागत से बनी बल्लभगढ़ मुजेसर मेट्रो लाइन की शुरुआत भी हो गई है।
— PMO India (@PMOIndia) November 19, 2018
ये दोनों योजनाएं जहां कनेक्टिविटी को लेकर इस क्षेत्र में नई क्रांति लाएंगी,
वहीं श्री विश्वकर्मा कौशल विश्वविद्यालय के जरिए यहां के युवाओं को नई ताकत मिलेगी: PM
आज का ये अवसर दो तस्वीरों को याद करने का भी है।
— PMO India (@PMOIndia) November 19, 2018
एक तस्वीर वर्तमान की है।
ये तस्वीर भाजपा सरकारों की कार्यसंस्कृति की है, हमारे काम करने के तरीके की है।
वहीं दूसरी तस्वीर हमें पहले की सरकार के समय में कैसे काम होता था, इसकी याद दिलाती है: PM
वो तस्वीर याद दिलाती है कि इस एक्सप्रेसवे पर 12 साल से काम चल रहा था।
— PMO India (@PMOIndia) November 19, 2018
वो तस्वीर याद दिलाती है कि ये एक्सप्रेसवे आपको 8-9 साल पहले ही मिल जाना चाहिए था।
लेकिन ऐसा हुआ नहीं.. पहले की सरकारों के जो तौर-तरीके थे, उसने इस एक्सप्रेसवे को पूरा होने में 12 साल लगा दिए: PM
इस एक्सप्रेस-वे का इस्तेमाल कामनवेल्थ गेम्स में होना था। लेकिन कामनवेल्थ खेल जो गति की गई, वही कहानी इस एक्सप्रेस वे की भी है।
— PMO India (@PMOIndia) November 19, 2018
मुझे ध्यान है कि जब प्रगति की बैठकों में मैंने इस प्रोजेक्ट की समीक्षा करनी शुरु की थी, तो कितने सारे पेंच पता चले थे: PM
पहले की सरकार में जिस तरह काम हुआ, वो एक केस स्टडी है कि कैसे जनता के पैसे को बर्बाद किया जाता है।
— PMO India (@PMOIndia) November 19, 2018
जब ये प्रोजेक्ट शुरू हुआ था, तो अनुमान लगाया गया था कि इस पर 1200 करोड़ रुपए खर्च होंगे।
आज इतने वर्षों की देरी की वजह से इसकी लागत बढ़कर 3 गुना से ज्यादा हो गई: PM
ये एक्सप्रेसवे, दिल्ली और आसपास के इलाके में प्रदूषण को कम करने में बड़ी भूमिका निभाएगा।
— PMO India (@PMOIndia) November 19, 2018
एक तरह से देखें, तो ये एक्सप्रेसवे
Economy
Environment
Ease of Travelling के साथ ही
Ease of living की सोच को भी गति देगा: PM
लोग वहीं हैं, काम करने वाले वही हैं, लेकिन जब इच्छाशक्ति हो, संकल्पशक्ति हो, तो कोई भी लक्ष्य हासिल किया जा सकता है।
— PMO India (@PMOIndia) November 19, 2018
यही वजह है कि जहां साल 2014 से पहले देश में एक दिन में सिर्फ 12 किलोमीटर हाईवे बनते थे, आज लगभग 27 किलोमीटर हाईवे का प्रतिदिन निर्माण हो रहा है: PM
किसी भी क्षेत्र में बढ़ती हुई कनेक्टिविटी, अपने साथ, रोजगार के नए अवसर भी लेकर आती है।
— PMO India (@PMOIndia) November 19, 2018
ये हाईवे का बनना, मेट्रो या रेल का बनना, जल मार्ग का विकसित होना, एक पूरा इकोसिस्टम बनाता है।
इस का फायदा, ट्रांसपोर्ट, कंस्ट्रक्शन से लेकर मैन्यूफैक्चरिंग और सर्विस सेक्टर तक को होता है: PM
ये सरकर देश में कारोबारियों को ताकत देना चाहती है, युवाओं को गति देना चाहती है।
— PMO India (@PMOIndia) November 19, 2018
युवाओं को इनोवेशन से इंडस्ट्री की दिशा में आगे बढ़ा रही है। उनके कांसेप्ट को कैपिटल की कमी न हो इसका ध्यान रख रही है।
स्टार्ट अप इंडिया, स्टैंड अप इंडिया योजनाएं इसी सोच के साथ चल रहीं हैं: PM
केंद्र सरकार के विजन को आगे बढ़ाने में हरियाणा ने पूरा सहयोग दिया है।
— PMO India (@PMOIndia) November 19, 2018
बेटी बचाओ - बेटी पढ़ाओ योजना और खेलो इंडिया की सफलता इसका बड़ा उदाहरण हैं।
खेलों में देश के लिए सबसे ज्यादा मेडल यहां के ही बेटी और बेटे ही ला रहे हैं।
हरियाणा के युवाओं का डंका पूरे दुनिया में बजा है: PM