Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪಿಟಿಐ ಸಂದರ್ಶನದಲ್ಲಿ ಬಜೆಟ್, ಸುಧಾರಣೆಗಳು ಮತ್ತು ಭಾರತದ ಬೆಳವಣಿಗೆಯ ಕಥೆಯ ಒಳನೋಟಗಳನ್ನು ಹಂಚಿಕೊಂಡಿರುವ  ಪ್ರಧಾನಮಂತ್ರಿ


ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ)ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಆರ್ಥಿಕ ಮತ್ತು ಅಭಿವೃದ್ಧಿ ಪಥವನ್ನು ರೂಪಿಸುವ ವ್ಯಾಪಕ ಶ್ರೇಣಿಯ ವಿಷಯಗಳ ಬಗ್ಗೆ ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಂಡರು.

ಈ ವರ್ಷದ ಕೇಂದ್ರ ಬಜೆಟ್ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ ಅವರು, ಅಂತರ್ಗತ ಬೆಳವಣಿಗೆಗೆ ಚಾಲನೆ ನೀಡುವಲ್ಲಿ ಮತ್ತು ಜಾಗತಿಕ ಆರ್ಥಿಕತೆಯಲ್ಲಿ ಭಾರತದ ಸ್ಥಾನವನ್ನು ಬಲಪಡಿಸುವಲ್ಲಿ ಅದರ ಪಾತ್ರವನ್ನು ಬಿಂಬಿಸಿದರು. ಪಾರದರ್ಶಕತೆ, ದಕ್ಷತೆ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ರಚನಾತ್ಮಕ ಸುಧಾರಣೆಗಳಿಗೆ ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳಿದ ಅವರು, “ಸುಧಾರಣಾ ಎಕ್ಸ್ ಪ್ರೆಸ್” ನ ವೇಗವನ್ನು ಒತ್ತಿ ಹೇಳಿದರು.

ಈ ಸಂಬಂಧ ಎಕ್ಸ್ ಖಾತೆಯಲ್ಲಿ ಶ್ರೀ ನರೇಂದ್ರ ಮೋದಿ ಅವರು ಈ ರೀತಿ ಬರೆದಿದ್ದಾರೆ:

“ಪಿಟಿಐಗೆ ನೀಡಿದ ಈ ಸಂದರ್ಶನದಲ್ಲಿ, ಈ ವರ್ಷದ ಬಜೆಟ್, ರಿಫಾರ್ಮ್ ಎಕ್ಸ್ ಪ್ರೆಸ್ (ಸುಧಾರಣಾ ಎಕ್ಸ್ ಪ್ರೆಸ್), ಜಗತ್ತು ಭಾರತದೊಂದಿಗೆ ಏಕೆ ವ್ಯವಹಾರ ಮಾಡಲು ಬಯಸುತ್ತದೆ, ಎಂಎಸ್ಎಂಇಗಳಿಗಾಗಿ ಎನ್ ಡಿ ಎ ಸರ್ಕಾರದ ಪ್ರಯತ್ನಗಳು, ಸ್ಟಾರ್ಟ್ಅಪ್ ಗಳು, ರಕ್ಷಣೆಗೆ ಒತ್ತು ಮತ್ತು ಹೆಚ್ಚಿನವುಗಳಂತಹ ವೈವಿಧ್ಯಮಯ ವಿಷಯಗಳ ಬಗ್ಗೆ ನನ್ನ ಆಲೋಚನೆಗಳನ್ನು ವ್ಯಕ್ತಪಡಿಸಿದ್ದೇನೆ.”