Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪುಣೆಯಲ್ಲಿ ನಡೆದ ಸ್ಮಾರ್ಟ್ ಸಿಟಿ ಮಿಷನ್ ಪ್ರಾಜೆಕ್ಟಿನ ಉಧ್ಘಾಟನಾ ಸಮಾರಂಭದಲ್ಲಿ ಪ್ರಧಾನಿಯವರು ಮಾಡಿದ ಭಾಷಣ

ಪುಣೆಯಲ್ಲಿ ನಡೆದ ಸ್ಮಾರ್ಟ್ ಸಿಟಿ ಮಿಷನ್ ಪ್ರಾಜೆಕ್ಟಿನ ಉಧ್ಘಾಟನಾ ಸಮಾರಂಭದಲ್ಲಿ ಪ್ರಧಾನಿಯವರು ಮಾಡಿದ ಭಾಷಣ

ಪುಣೆಯಲ್ಲಿ ನಡೆದ ಸ್ಮಾರ್ಟ್ ಸಿಟಿ ಮಿಷನ್ ಪ್ರಾಜೆಕ್ಟಿನ ಉಧ್ಘಾಟನಾ ಸಮಾರಂಭದಲ್ಲಿ ಪ್ರಧಾನಿಯವರು ಮಾಡಿದ ಭಾಷಣ


ನಮ್ಮ ದೇಶದಲ್ಲಿ ಈ ಹಿಂದೆ ಕೆಲಸ ಆಗ್ತಿರಲ್ಲಿಲ್ಲ ಅಂತೇನು ಅಲ್ಲ ಅಥವಾ ಸರ್ಕಾರ ತನ್ನ ಬಜೆಟ್ ನ ಹಣವನ್ನು ಖರ್ಚು ಮಾಡ್ತಿರಲ್ಲಿಲ್ಲ ಅಂತಾನು ಅಲ್ಲ. ಆದರೆ ಇಷ್ಟೆಲ್ಲಾ ಆದ್ರೂ ವಿಶ್ವದಲ್ಲಿ ನಮ್ಮ ನಂತರ ಸ್ವಾತಂತ್ರ್ಯ ಪಡೆದ ಆನೇಕ ರಾಷ್ಟ್ರಗಳು ನಮಗಿಂತ ಮುಂದುವರೆದುಬಿಟ್ಟವು. ಅರ್ಥಿಕವಾಗಿ ಹಿಂದುಳಿದಿದ್ದ ಈ ರಾಷ್ಟ್ರಗಳು  ನಮಗಿಂತ ಮುಂದೆ ಹೋದವು. ಕಾರಣ ಏನಿರಬಹುದು ಅಂತಾ ಹಲವಾರು ಬಾರಿ ನನ್ನನ್ನು ನಾನೇ ಪ್ರಶ್ನಿಸಿ ಕೊಂಡಿದ್ದುಂಟು. ಹಲವಾರು ಬಾರಿ ಯೋಚಿಸಿದ್ದುಂಟು, ಹಲವರೊಂದಿಗೆ ಈ ಬಗ್ಗೆ ಚರ್ಚಿಸಿದ್ದುಂಟು. ಕೆಲವೊಮ್ಮೆ ನನ್ನನ್ನು ನಾನೇ ಅನುಭವದ ಆಧಾರದ ಮೇಲೆ ವಿಶ್ಲೇಷಿಸಿ ಕೊಂಡಿದ್ದೇನೆ. 
 
ಈ ತುಮುಲ ನನ್ನಲ್ಲಿ ನಿರಂತರವಾಗಿ ನಡದೇ ಇದೆ. ಕೊನೆಗೆ ನಾನು ತಿಳಿದಿದ್ದು ಇಷ್ಟು – ಸರ್ಕಾರದಲ್ಲಿ ಕುಳಿತಿರೋ ನಾವು, ಸರ್ಕಾರದಲ್ಲಿ,  ವ್ಯವಸ್ಥೆಯಲ್ಲಿ, ಲಕ್ಷಾಂತರ ಮಂದಿ ನೌಕರರ ಸೈನ್ಯ ದಲ್ಲಿ ಗುಮಾಸ್ತನಿಂದ ಹಿಡಿದು  ಅಧಿಕಾರಿ ವರ್ಗದವರೆವಿಗೂ, ಪಂಚಾಯಿತಿ ಚೇರ್ಮನ್ ನಿಂದ ಹಿಡಿದು ಪ್ರಧಾನ ಮಂತ್ರಿಯವರೆವಿಗೂ, ಹಳ್ಳಿಯ ಶಾನುಭೋಗರಿಂದ ಹಿಡಿದು ಮಂತ್ರಿ ಮಂಡಲದ ಕಾರ್ಯದರ್ಶಿಯ ವರೆವಿಗೂ ಲಕ್ಷ ಲಕ್ಷ ಸಂಖ್ಯೆಯಲ್ಲಿದಾಗ್ಯೂ ನಮಗಿಂತ ಯಾರಾದರು ಸ್ಮಾರ್ಟ್ ಅನ್ನಿಸಿಕೊಳ್ಳುವವರಿದ್ದಲ್ಲಿ ಅವರು ನಮ್ಮ ದೇಶದ ನಾಗರೀಕರು.
 
ಒಂದು ವೇಳೆ ಈ ದೇಶದ 125 ಕೋಟಿ ಜನಸಂಖ್ಯೆಯುಳ್ಳ ನಾಗರೀಕರ ಸಾಮರ್ಥ್ಯವನ್ನು ಕೆಣಕಿ ಎಚ್ಚರಿಸಿದಲ್ಲಿ ಮತ್ತು ಅವರನ್ನು ಒಳ್ಳೆಯ ಕೆಲಸಗಳಿಗೆ ತೊಡಗಿಸಿಕೊಂಡಿದ್ದೇ ಆದಲ್ಲಿ ಸರ್ಕಾರ ನಡೆಸುವಲ್ಲಿ ಯಾವ ತೊಂದರೆಯು ಆಗದು. ಈ ಪ್ರಪಂಚ ತನ್ನಷ್ಟಕ್ಕೆ ತಾನೇ ಸಾಗಲು ಮತ್ತು ಓಡಲು ಪ್ರಾರಂಭಿಸುತ್ತದೆ. ಹೀಗಾಗಿ ಸ್ಮಾರ್ಟ್ ಸಿಟಿ ಯೋಜನೆಯ ಪರಿಕಲ್ಪನೆಯೇನಿದೆ  ಅದು ಇಂತಿಂಥ ನಗರಾಭಿವೃದ್ಥಿಗೆ ಇಷ್ಟಿಷ್ಟು ಹಣ ಖರ್ಚು ಮಾಡಿದೆವು ಎಂಬುದಲ್ಲ. ಇದೊಂದು ರೀತಿಯಲ್ಲಿ ಜನಾಂದೋಲನ . ಇದು   ನಿನ್ನೆಯ ಅವುಭವದ ಆಧಾರದ ಮೇಲೆ ನಾಳಿನ ಭವಿಷ್ಯಕ್ಕೆ ಅಡಿಪಾಯ ಹಾಕುವಲ್ಲಿ ಸಾರ್ಥಕ ಪ್ರಯತ್ನ . ಇದು ಯಶಸ್ವಿಯಾಗುತ್ತದೆ ಎಂಬುದು ನನ್ನ ಅನುಭವಕ್ಕೆ ಬಂದಿದೆ.    
 
ಮೊದಮೊದಲು  ನಮ್ಮ ಕಾರ್ಯದರ್ಶಿಯವರು ನನ್ನ ಬಳಿ ಬರುತ್ತಿದ್ದರು. ವೆಂಕಯ್ಯನವರೊಂದಿಗೆವಿಭಾಗಗಳಲ್ಲಿ ನಗರಗಳನ್ನು ಆರಿಸುವುದು ಹೇಗೆಂದು ತಲೆ ಕೆಡಿಸಿ ಕೊಂಡಿದ್ದುಂಟು,  ಅವರ ಮನಸ್ಸಿನಲ್ಲೂ ಸಾಕಷ್ಟು ಗೊಂದಲಗಳು ಇರುತ್ತಿದ್ದವು. ಯಾವ ನಗರವನ್ನ ಯಾವ ರೀತಿ ಆಯ್ಕೆ ಮಾಡುವುದು, ಕಾರಣ ನಮ್ಮ ನಗರಗಳಲ್ಲಿ ರಸ್ತೆಯ ಈ ಬದಿಯಲ್ಲಿ ಯಾವುದೇ ಕಾರ್ಯ ಪ್ರಾರಂಭಿಸಿದರೆ, ರಸ್ತೆಯ ಆ ಬದಿಯ ಜನ ತಕ್ಷಣವೆ ಹರತಾಳ, ಮುಷ್ಕರಗಳನ್ನು ಪ್ರಾರಂಬಿಸಿಬಿಡುತ್ತಿದ್ದರು. ನಮ್ಮಕಡೆಯಿಂದಲೇ ಏಕೆ ಆರಂಭವಾಗಬಾರದೆಂದು  . ಇದು ಈ ದೇಶದ ವೈಶಿಷ್ಟ್ಯವೂ ಹೌದು. ಅಂತಹುದರಲ್ಲಿ ಯಾವುದಾದರೊಂದು ನಗರವನ್ನು ಆಯ್ಕೆ ಮಾಡಿಕೊಂಡರೂ ಮತ್ತೊಬ್ಬರ ಕೋಪವನ್ನು ತಣಿಸಲಾಗುವುದಿಲ್ಲ. ಹೀಗಾಗಿ ಮತ್ತಷ್ಟು ಜನರನ್ನ ಎದುರು ಹಾಕಿಕೊಳ್ಳ ಬೇಕಾದ ಸಂದರ್ಭವೇ ಹೆಚ್ಚು.
 
ಈಗಷ್ಟೇ ಶ್ರೀಮತಿ ವಸುಂಧರ ಜೀ ನನ್ನನ್ನು ಅಭಿನಂದಿಸಿರುತ್ತಾರೆ. ಜಯಪುರ ಮತ್ತು ಉದಯಪುರ ನಗರಗಳನ್ನು ಆಯ್ಕೆ ಮಾಡಿರುವುದಕ್ಕೆ ಶ್ರೀಯುತ ವೆಂಕಯ್ಯನವರನ್ನು ಅಭಿನಂದಿಸಿರುತ್ತಾರೆ. ನಾನು ವಸುಂಧರ ಜೀ ಯವರಿಗೆ ಹೇಳುವುದಿಷ್ಟೆ ನಾವು ನೀವಂದುಕೊಂಡಿರುವಂತೆ ನಗರಗಳನ್ನು ಆಯ್ಕೆ ಮಾಡಿಲ್ಲ. ನೀವು ನಮಗೆ ಸಲ್ಲಿಸಿದ ಅಭಿನಂದನೆಗಳನ್ನು ಹಿಂದಕ್ಕೆ ಪಡೆಯಿರಿ. ಈ ನಗರಗಳನ್ನು ಆಯ್ಕೆ ಮಾಡಿರುವುದು ಜಯಪುರ ಮತ್ತು ಉದಯಪುರ ನಗರವಾಸಿಗಳೇ ಹೊರತು ನಾವಲ್ಲ. ಅವರುಗಳು ಈ ಸ್ಪರ್ದೆಯಲ್ಲಿ ವಿಜೇತರಾಗಿದ್ದಾರೆ. ನಾವು ಹಾಕಿದ ಮಾಪಕದಲ್ಲಿನ ಹಂತಗಳನ್ನು ಪೂರೈಸಿರುತ್ತಾರೆ. ತಮ್ಮ ಕಠಿಣ ಪರಿಶ್ರಮದಿಂದ ನಾವು ನಿಗಧಿ ಪಡಿಸಿದ ಸಮಯಾವಧಿಯಲ್ಲಿ ನಮ್ಮ ಬೇಕು-ಬೇಡವನ್ನು ತಿಳಿದು ಅದರಂತೆ ನಡೆದು ಕೊಂಡು ಸ್ಪರ್ದೆಯಲ್ಲಿ ವಿಜೇತರಾಗಿರುತ್ತಾರೆ. 
 
ಇಂದು 20 ನಗರಗಳ ಆಯ್ಕೆಯೇನಿದೆಯೊ ಮತ್ತು ಅದರ ನೀಲನಕ್ಷೆ ಸಿದ್ದಗೊಂಡಿದೆಯೋ ಅವುಗಳಲ್ಲಿ ಕೆಲವೊಂದು ನಗರಗಳಲ್ಲಿ ಕಾರ್ಯ ಪ್ರಾರಂಭಗೊಂಡಿದೆ.
 
ಬಹಳಷ್ಟು ಕೆಲಸಗಳ ಬಗ್ಗೆ ಈಗತಾನೆ ವೆಂಕಯ್ಯನವರು   ಲೆಕ್ಕ ಹಾಕುತ್ತಿದ್ದರೋ ಅವುಗಳು ಈಗ ತ್ವರಿತಗೊಂಡಿವೆ.. ಇದರ ಮೂಲ ಕಾರಣ ನೇತೃತ್ವ ವಹಿಸಿರುವ ಮುಂದಾಳುಗಳು. ನಗರಪಾಲಿಕೆಗಳಲ್ಲಿ ಕುಳಿತಿರುವ ಅಧಿಕಾರಿಗಳು ಮತ್ತು ಆ ಕಾರ್ಪೋರೇಷನ್ನಿನಲ್ಲಿ ಕೆಲಸಮಾಡವ ನೌಕರ ಬಂಧು ಭಗಿನಿಯರು ಮತ್ತು ಅಲ್ಲಿಯ ಜಾಗೃತ  ನಾಗರೀಕರು. ಅವರೆಲ್ಲರ ಸಾಮೂಹಿಕ ಪ್ರಯತ್ನ ಮತ್ತು ನಮ್ಮ ನಗರವನ್ನು ದೇಶದಲ್ಲಿ ನಂಬರ್ ಓನ್ ಮಾಡಬೇಕೆನ್ನುವ ಹುರುಪು-ಹುಮ್ಮಸ್ಸುನೊಂದಿಗೆ ಒಂದು ಆಸೆ ಅವರಲ್ಲಿ ಮೂಡಿದೆ..
 
ದೇಶದಲ್ಲಿ  ತಮ್ಮನ್ನು ತಾವು ಹಿಂದುಳಿದವರು ಬಡವರು ಎಂದು ಗುರುತಿಸಿ ಕೊಳ್ಳಲಿಕ್ಕೆ ಸ್ಪರ್ದೆ ನಡೆದಿತ್ತು. ಹಿಂದುಳಿದವರು ಎಂಬ ಹಣೆಪಟ್ಟಿಯನ್ನು ಪಡೆಯಲಿಕ್ಕೆ ಹಾತೊರೆಯುತ್ತಿದ್ದರು ಹಾಗೂ ಅದಕ್ಕಾಗಿ ಮಾರ್ಗಗಳನ್ನು ಹುಡುಕುತ್ತಿದ್ದರು. ಆದರೆ ಈ ಸರ್ಕಾರವು  ಮುಂದುವರೆಯಲು   ಯಾವ ಮಾರ್ಗಗಳಿವೆ ಎಂದು ಆಲೋಚಿಸಿರುತ್ತದೆ.
 
ನಾನಿಂದು ಈ ವೇದಿಕೆಯ ಮೇಲೆ ವಿರಾಜಮಾನರಾಗಿರುವ  ಸುದ್ದಿ ಮಾಧ್ಯಮದವರನ್ನು ಅಭಿನಂದಿಸುತ್ತೇನೆ. ಹಲವಾರು ಸುದ್ದಿ ಮಾದ್ಯಮ ಪತ್ರಿಕೆಗಳಂತೂ ಇದನ್ನು ಆದ್ಯತೆಯ ಮೇಲೆ ಕೈಗೆತ್ತಿ ಕೊಂಡವು  ಜನಜಾಗೃತಿಯನ್ನು ಮೂಡಿಸಿದವು. ನಗರಗಳ ಅಭಿವೃದ್ಧಿಯ ಕಡೆಗೆ ನಾಗರೀಕರ ಗಮನ ಸೆಳೆಯುವಲ್ಲಿ ಯಶಸ್ವಿಯಾದವು. ಮೈಸೂರು  ಸ್ವಚ್ಛತೆಯಲ್ಲಿ ದೇಶದ ನಂಬರ್ ಒನ್ ನಗರ ಅನ್ನಿಸಿಕೊಂಡಾಗ ಬೆಂಗಳೂರಿನಲ್ಲಿ ಒಂದು ಬಿರುಗಾಳಿಯೆದ್ದಿತು.  ಇಲ್ಲಿನ ಜನ ದೇಶದ ನಂಬರ್ ಒನ್  ಸ್ಥಾನದಲ್ಲಿ ನಮ್ಮೂರು ಏಕಿಲ್ಲ ಎಂದು ಪ್ರಶ್ನಿಸಿ ಕೊಂಡರು. ಅದಕ್ಕಾಗಿ ತಮ್ಮೆಲ್ಲ ಶ್ರಮ ಮತ್ತು ಆಸಕ್ತಿಯನ್ನು ಪ್ರದರ್ಶಿಸಿದರು. ನಮಗೆ ಬೇಕಿರುವುದು ಇಂಥ ಒಂದು ಆರೋಗ್ಯಕರ ಸ್ಪರ್ದೆ. ಇದನ್ನೇ ನಾವು ಮುಂದು ವರೆಸಿಕೊಂಡು ಹೋಗ ಬೇಕಾಗಿದೆ. 
 
ಇಂಥ ಒಂದು ಸ್ಪರ್ಧಾತ್ಮಕ ವಾತಾವರಣವನ್ನು ಉಳಿಸಿ ಬೆಳಸ ಬೇಕಾಗಿದೆ. ಇದು ಸಾಧ್ಯವಾಗ ಬೇಕಾದರೆ ಜನ ಸ್ಪಂದಿಸಬೇಕು ಮತ್ತು ಆದರಲ್ಲಿ ಪ್ರತಿಯೊಬ್ಬರು ತಮ್ಮನ್ನು ತಾವು ತೊಡಗಿಕೊಳ್ಳಬೇಕಾದ ಅವಶ್ಯಕತೆಯಿದೆ.
 
ಇವತ್ತು ಒಂದು ವೇದಿಕೆಯನ್ನು ಸಿದ್ದಗೊಳಿಸಲಾಗಿದೆ. ಪುಣೆ ಹೇಗಿರಬೇಕೆಂಬುದನ್ನು ದೆಹಲಿಯವರು ಯೋಚಿಸಲು ಸಾಧ್ಯವೇ ಇಲ್ಲ.  ಅದನ್ನು ಪುಣೆಯವರೇ ಯೋಚಿಸುತ್ತಾರೆ. ಭುವನೇಶ್ವರ ಹೇಗಿರಬೇಕು, ಭುವನೇಶ್ವರದ ರಸ್ತೆಗಳಲ್ಲಿ ಯಾವ ಯಾವ ಕೆಲಸ ಕಾರ್ಯಗಳಾಗಬೇಕು. ನಡೆದಾಡುವ ರಸ್ತೆ ಎಲ್ಲಿರಬೇಕು, ಸೈಕಲ್ ಹಾದಿ ಎಲ್ಲಿ ಹಾದು ಹೋಗಬೇಕು. ಕೆರೆ ಕುಂಟೆಗಳು, ನೀರಿನ ಕಾರಂಜಿಗಳು ಎಲ್ಲಿರ ಬೇಕು ಹೇಗಿರಬೇಕು,  ಅಸ್ಪತ್ರೆಯ ಜಾಗದ ಆಯ್ಕೆ, ವಾಹನಗಳ ಪಾರ್ಕಿಂಗ್ ನ ವ್ಯವಸ್ಥೆ ಮುಂತಾಗಿ ಭುವನೇಶ್ವರ ರೂಪು ರೇಷೆಗಳ ನಿರ್ಧಾರವನ್ನು  ದೆಹಲಿಯಲ್ಲಿ ಕುಳಿತು ಮಾಡುವುದಿಲ್ಲ. ಆದರೆ ಅದು ವೆಬ್ ಮುಖಾಂತರ ಜೋಧಪುರದವರ ವಿಚಾರವನ್ನು  ನೋಡಿದಾಗ  ಭುವನೇಶ್ವರದವನಿಗೆ ಅದನ್ನು ನೋಡಿ  ಈ ಹೊಸ ಆಲೋಚನೆಯನ್ನು ನಾವೇಕೆ ಅಳವಡಿಸಿಕೊಳ್ಳಬಾರದು ಎಂಬ ಆಲೋಚನೆ ಬರುವಂತಿರಬೇಕು. ಅಭಿವೃದ್ಥಿಯ ಕಾರ್ಯದಲ್ಲಿ ಭಾಗವಹಿಸುವ ಪ್ರಕ್ರಿಯೆ ಮತ್ತು ಸಮಗ್ರಪ್ರತಿಭೆಯ ಬಳಕೆ ಅಗತ್ಯವಾಗಿ ಬೇಕಾಗಿದೆ. ಹೀಗಾದಲ್ಲಿ ಇದು ಮುಂಬರುವ ದಿನಗಳಲ್ಲಿ ಒಂದು ಬದಲಾವಣೆಯ ಕ್ರಾಂತಿಕಾರಕ ಹೆಜ್ಜೆಯಾಗಬಹುದು ಎನ್ನುವುದು ನನ್ನ ನಂಬಿಕೆ.
 
ಇಂದು ನಮಗೆ ಸ್ವಚ್ಛತೆ ಎನ್ನುವುದು ಪ್ರಿಯವಾದ ವಿಷಯವಾಗಿ ಪರಿಣಮಿಸಿದೆ. ಅದೊಂದು ಕಾಲವಿತ್ತು, ಸರ್ಕಾರ ಯಾವುದೇ ಒಂದು ಯೋಜನೆ  ಪ್ರಾರಂಭಿಸಿದಲ್ಲಿ ಅದನ್ನು ಸರ್ಕಾರಿ ಖಜಾನೆಯಿಂದ ತಮ್ಮ ಜೇಬಿಗೊಂದಿಷ್ಟು, ಕೆಲವರ ಹೊಟ್ಟೆ ತುಂಬಿಸಿಕೊಳ್ಳಲು ಒಂದಿಷ್ಟು, ತಮಗೆ ಬೇಕಾದ ಹಳ್ಳಿಗೊಂದಿಷ್ಟು ಸಂದಾಯವಾಗುವಂತಹ ಕೆಲವಷ್ಟು ಮಂದಿ ಸ್ವಾಗತಿಸುತ್ತಿದ್ದರು ಹೀಗಾಗಿ ಇದು ಕೆಲವರಿಗೆ ಮಾತ್ರ ಒಳ್ಳೆಯ ಯೋಜನೆಯಾಗಿ ಪರಿಣಮಿಸುತ್ತಿತ್ತು.
 
ಮೊದಲ ಬಾರಿ ಇದರಲ್ಲಿ ಒಂದಿಷ್ಟು ಬದಲಾವಣೆ ಬಂದಿದೆ. ಇಲ್ಲಿ ಪ್ರಧಾನ ಮಂತ್ರಿ ಏನನ್ನೂ ನೀಡುತ್ತಿಲ್ಲ. ಅಬ್ಬಾಬ್ಬ ಎಂದಲ್ಲಿ ಒಂದಿಷ್ಟು ಸಲಹೆಯನ್ನು ನೀಡಬಹುದಷ್ಟೆ. ನಗರ ಸ್ವಚ್ಛವಾಗಿಡಿ ಎಂಬ ಹೇಳಿಕೆಯನ್ನು ನೀಡಬಹುದು. ನಾವೆಲ್ಲರು ಸ್ವಚ್ಛವಾಗಿರಬೇಕೆಂಬ ಕಳಕಳಿ, ಮನೆ ಮನೆಗಳಿಂದ ಹಿಡಿದು ಹಾದಿ ಬೀದಿಗಳ ವರೆವಿಗೂ, ನಗರದ ಸೌಂದರ್ಯವನ್ನು ಕಾಪಾಡಿಕೊಳ್ಳುವಲ್ಲಿ ನಾಗರೀಕರು ತೋರುವ ಕಾಳಜಿ ಹೊಗಳಿಕೆಗೆ ಅರ್ಹವಾಗಿದೆ.. ಅವರಿಗೆ ಸರ್ಕಾರ ಏನನ್ನೂ ನೀಡುತ್ತಿಲ್ಲ ಆದರೆ ಜನರೇ ಹೇಳುತ್ತಿದ್ದಾರೆ.  ಸಮೀಕ್ಷೆಯನ್ನು ಮಾಡಿ ನೋಡಿ, ಸುದ್ದಿ ಮಾದ್ಯಮಗಳ ಸಮೀಕ್ಷೆಗಳನ್ನು ಅಧ್ಯಯನವನ್ನು ಮಾಡಿ. ಎಲ್ಲದರಲ್ಲೂ ಒಂದು ವಿಷಯ ಎದ್ದು ಕಾಣುವ. ಜನಪ್ರಿಯ ಯೋಜನೆ ಎಂದರೆ ಅದು ನೈರ್ಮಲ್ಯೀಕರಣ ಅಥವಾ ಸ್ವಚ್ಛತೆಯೇ ಆಗಿರುತ್ತದೆ. ಅಂದರೆ ಇದುವರೆವಿಗೂ ಜನರಲ್ಲಿ ಇದ್ದಂತಹ ಆಲೋಚನೆಯಲ್ಲಿ ಬದಲಾವಣೆ ಬಂದಿದೆ ಎಂದರ್ಥ. ನಮಗೇನು ಸಿಗುತ್ತೆ, ಎಂಬ ಭಾವನೆ  ವ್ಯವಸ್ಥೆಯಿಂದಾಚೆಗೆ ತೊಲಗಿದೆ.
 
ನಾವು ನಮ್ಮ ದೇಶದ ಸಮರ್ಥಜನರಿಗೆ ಅನ್ಯಾಯ ಮಾಡಿದ್ದೇವೆ . ಅವರು ನಮ್ಮ ಕೈಗೆ ಸಿಗದ ಜನ, ನಮ್ಮ ಮಟ್ಟಕ್ಕೆ ತಲುಪದ ಜನ ಇತ್ಯಾದಿಯಾದ ಆಲೋಚನೆಗಳನ್ನು ಸೃಷ್ಟಿಸಿ ಅವರನ್ನು ದೂರ ಇಟ್ಟಿರುತ್ತೇವೆ. ಇವರು ಎಲ್ಲರಂತಲ್ಲ. ನಮ್ಮ ದೇಶವಾಸಿಗಳೇ, ಏನಾದರು ಹೊಸತನ್ನು ಹೆಕ್ಕಿ ತೆಗೆಯಲು ತವಕಿಸುತ್ತಿದ್ದಾರೆ. ಮನ. ನಾವು ದೇಶಕ್ಕೇನಾದರೂ ಮಾಡಬೇಕೆಂದಿದ್ದೇವೆ. ನಮಗೂ ಒಂದು ಅವಕಾಶ ಕೊಡಿ ಎಂದು ಬಯಸುತ್ತಾರೆ. ಸ್ವಚ್ಛತೆಯ ಅಂದೋಳನ ಇಂಥ ಒಂದು ಉದಾಹರಣೆ. ಈಗ ಸಾಮಾನ್ಯ ಜನರಿಗೂ ಅನ್ನಿಸದೇ ತುಂಬಾ ಆಯ್ತು.. ಇನ್ನಾದರು ಬದಲಾವಣೆಯನ್ನು ತರಬೇಕು ಎಂದು ಅವರೂ ಬಯಸುವುದಿಲ್ಲವೇ.
 
ನಮ್ಮ ದೇಶದಲ್ಲಿ ಒಂದು ಕಾಲವಿತ್ತು. ನೀವು ಹಳೆ ದಿನಪತ್ರಿಕೆಗಳನ್ನು ತೆಗೆದು ನೋಡಿದಲ್ಲಿ ಸಾಕಷ್ಟು ಲೇಖನಗಳನ್ನು ಇದರ ಬಗ್ಗೆ ಓದುವಿರಿ. ಸಾಕಷ್ಟು ವಿಶ್ಲೇಷಣೆಯನ್ನು, ವಿಮರ್ಶೆಗಳನ್ನು ಓದುತ್ತೀರಿ. ನಗರೀಕರಣ ಒಂದು ದೊಡ್ಡ ಸಮಸ್ಯೆಯಾಗಿರುವುದು ಕಂಡು ಬರುತ್ತದೆ. ಪ್ರತಿಬಾರಿ ನಗರೀಕರಣದ ವಿಷಯ ಬಂದಾಗಲೆಲ್ಲ ಏನಾಗುತ್ತೆ, ಹೇಗಾಗುತ್ತೆ ಎಂಬುದೇ ಚರ್ಚೆಯ ವಿಷಯ. ನನ್ನ ಆಲೋಚನೆಯೇ ಬೇರೆ. ನಗರೀಕರಣವನ್ನು ಸಮಸ್ಯೆಯನ್ನಾಗಿ ಸ್ವೀಕರಿಸದೆ ಅದನ್ನು ನಾವು ನಮಗೆ ದೊರೆತ ಅವಕಾಶ ಎಂದು ಪರಿಗಣಿಸ ಬೇಕು. ಶಹರೀಕರಣವನ್ನು ಒಂದು ಸಮಸ್ಯೆಯನ್ನಾಗಿ ಸ್ವೀಕರಿಸಲೇ ಬೇಡಿ. ಸವಾಲು ಎಂದು ಪರಿಗಣಿಸಿ. ಅವಕಾಶ ಎಂದು ಪರಿಗಣಿಸಿ. ದಾರಿ ತಂತಾನೆ ಕಂಡು ಬರುತ್ತದೆ. ಒಂದಿಷ್ಟು ಜನ ಎಲ್ಲೊ ಬಂದು ನೆಲಸಿದರೆ, ಅದರಿಂದ ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ, ಶಾಲೆಯ ಸಮಸ್ಯೆ ಹೀಗೆ ಹಲವಾರು ತಲೆ ತಿನ್ನುವ ಸಮಸ್ಯೆಗಳು ನಮ್ಮ ಮುಂದೆ ಎದ್ದು ನಿಲ್ಲುತ್ತವೆ. ಆದರೆ ಇದನ್ನು ಸಮಸ್ಯೆಯನ್ನಾಗಿ ನೋಡದೆ ಅವಕಾಶ ಎಂದು ಭಾವಿಸಿ ಕಾರ್ಯತತ್ಪರರಾದರೆ, 2016ರ ಪುಣೆ ಹೀಗಿತ್ತು. 2025 ಪುಣೆ ಹೀಗಾಗಬೇಕು ಎಂದು ದೃಡ ನಿರ್ಧಾರ ಮಾಡಿ ಮುನ್ನುಗಿದರೆ ದಾರಿ ತನ್ನಷ್ಟಕ್ಕೆ ತಾನೇ ತೆರೆದು ಕೊಳ್ಳುತ್ತದೆ. ಈ ದಿಕ್ಕಿನಲ್ಲಿ ಸಾಗಿದರೆ ಆಕಾಶದೆದವರೆಗೂ  ಸಾಗಬಹುದು, ವೇಗವನ್ನು ಕಂಡು ಕೊಳ್ಳಬಹುದು. ಒಳ ಚರಂಡಿಯಲ್ಲಿ ನೀರು ಹರಿಯುತ್ತೆ. ವ್ಯವಸ್ಥೆಯಲ್ಲಿ ಈಗಿನಿಂದಲೆ ಆಲೋಚಿಸಿ..ಯೋಚನೆಯೆನ್ನುವುದು ಅವಕಾಶವನ್ನು ಬದಲಾಯಿಸುತ್ತದೆ. ಇದರಿಂದ ಪ್ರೇರಿತನಾಗಿಯೇ ನಾನು ನಗರೀಕರಣವನ್ನು ಒಂದು ಅವಕಾಶವನ್ನಾಗಿ ಪರಿವರ್ತಿಸಲು ಹೊರಟ್ಟಿದ್ದೇನೆ.
 
ನೀವು ಯಾವರೀತಿಯಲ್ಲಾದರು ಭಾವಿಸಿ, ಪ್ರತಿಯೊಂದು ನಗರಕ್ಕೂ ತನ್ನದೇ ಆದ ವೈಶಿಷ್ಟ್ಯವಿರುತ್ತದೆ. ನಂಬಿದರೆ ನಂಬಿ ಬಿಟ್ಟರೆ ಬಿಡಿ ನಗರಗಳಿಗೆ ತಮ್ಮದೇ ಅದ ತಾಕತ್ತಿರುತ್ತದೆ,ಅದನ್ನು ನಮ್ಮ ಆರ್ಥಿಕ ತಜ್ಞರು ತಮ್ಮದೇ ಆದದೃಷ್ಟಿಯಲ್ಲಿ ನೋಡಿ, ಅದತ್ತೆ ತಾಂತ್ರಿಕ ಪರಿಭಾಷೆಯಲ್ಲಿ growth sector ಎಂಬುದಾಗಿ ಕರೆಯುತ್ತಾರೆ. ನಾನಿದನ್ನು ಬೇರೆ ರೀತಿಯಲ್ಲಿಯೆ ಕಾಣುತ್ತೇನೆ. ಬಡತನವೆಂಬ ಶಕ್ತಿಯನ್ನು ಅರಗಿಸಿಕೊಳ್ಳಬಲ್ಲ ಶಕ್ತಿ ಯಾವುದುಕ್ಕಾದರು ಇದಲ್ಲಿ. ಅದು ನಮ್ಮ ನಗರಗಳಿಗೇ ಹೊರತು ಬೇರೆಯವಕ್ಕಿಲ್ಲ. ನಗರವೆಂಬುದು ಬಡತನವನ್ನು ತನ್ನ ಹೊಟ್ಟೆಯಲ್ಲಿ ಹಾಕಿಕೊಳ್ಳುತ್ತದೆ. ಒಡಲೊಳಗೆ ಹಾಕಿಕೊಂಡು ಬಿಡುತ್ತದೆ. ಈ ಕಾರಣದಿಂದಲೇ ಬಡತನದ ರೇಖೆಯಲ್ಲಿರುವ ಜನ ಹಳ್ಳಿಗಾಡುಗಳಿಂದ ನಗರ ಪ್ರದೇಶಗಳಿಗೆ ವಲಸೆ ಹೋಗುವುದು. ಅಲ್ಲಿ ಅವರಿಗೆ   ನಾವಿಲ್ಲಿ ಬದುಕ ಬಹುದು, ನೆಮ್ಮದಿಯ ಬಾಳನ್ನು ಕಂಡು ಕೊಳ್ಳಬಹುದು ಅಂತಾ ಎಲ್ಲೋ ಒಂದು ಆಶಾ ಕಿರಣ ಕಾಣುತ್ತೆ.. ಕೆಲಸದ ಅವಕಾಶಗಳು ಹೇರಳವಾಗಿರುತ್ತೆ. ಎಲ್ಲಿಯೋ ಒಂದು ಕಡೆ ಕೆಲಸ ಕಂಡು ಕೊಳ್ಳಬಹುದು ಎಂದು. ಹಗಲ್ಲೆಲ್ಲ ದುಡಿದು ಸಂಜೆಯ ವೇಳೆಗೆ ಉಂಡು ಮಲಗ ಬಹುದು, ಸಲಹಿದ ತಂದೆ ತಾಯಿಯರಿಗೆ 50-100 ರೂಪಾಯಿಗಳನ್ನು ಕಳುಹಿಸ ಬಹುದು ಎಂಬ ಆಶಾಭಾವ ಅವರದು. ಗಾಡಿ ರಿಪೇರಿ ಮಾಡುವುದೊ ಅಥವಾ ಸೈಕಲ್ಲು ಚಕ್ರಗಳಿಗೆ ಗಾಳಿ ತುಂಬುವ ಕೆಲಸವನ್ನಾದರೂ ದೊರೆಕಿಸಿ ಕೊಳ್ಳ ಬಹುದು. ಆತ ಏನ್ನನ್ನಾದರು ಬದುಕಿನ ಹಾದಿ ನಗರ ಪ್ರದೇಶಗಳಲ್ಲಿ ಕಂಡು ಕೊಳ್ಳಬಲ್ಲ. ನಾನು ಈ ಕಾರಣದಿಂದಲೇ ಕೆಟ್ಟು ಪಟ್ಟಣ ಸೇರು ಎನ್ನುವುದು..   ನಗರಗಳಿಗೆ ಬಡತನವನ್ನು ಆರಗಿಸಿ ಕೊಳ್ಳಬಲ್ಲ ಶಕ್ತಿಯನ್ನು ತುಂಬುವುದು ಈಗ ನಮ್ಮ ಮುಂದಿರುವ ಜವಾಬ್ದಾರಿ. ಈ ಬಡತನವನ್ನು ಆರಗಿಸಿಕೊಂಡದ್ದರಿಂದ ಬರುವ ಶಕ್ತಿಯ ಮೂಲಕ  ಅಭಿವೃದ್ಥಿ ಪಥದತ್ತ ಸಾಗುವುದು. ಹೊಸ ಆಯಾಮಗಳನ್ನು ಕಂಡು ಕೊಳ್ಳುವುದು. ಈ ದಿಕ್ಕಿನಲ್ಲಿ ಆಲೋಚನೆಗಳು ಸಾಗಿವೆ.
 
 ಇದು ಅಸಾಧ್ಯವೇನಲ್ಲ ಸಾಧ್ಯ.   ಪ್ರತಿಯೊಂದು ನಗರವನ್ನು ಆದರ ಕಟ್ಟಡಗಳ ಮತ್ತು ರಸ್ತೆಗಳ ಆಧಾರದ ಮೇಲೆ ಗುಣಮಟ್ಟವನ್ನು ನಿರ್ಧರಿಸಲು ಬರುವುದಿಲ್ಲ. ಪ್ರತಿಯೊಂದು ಊರು ತನ್ನದೆ ಆದ ವಿಶಿಷ್ಟತೆಯನ್ನು ಹೊಂದಿರುತ್ತದೆ. ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುತ್ತದೆ. ತನ್ನದೇ ಆದ ಮಣ್ಣಿನ ಗುಣ ವೈಶಿಷ್ಟ್ಯವನ್ನು ಹೊಂದಿರುತ್ತದೆ. ಆದೇ ಅದರ ಆತ್ಮ. ಹೆಗ್ಗುರುತು. ನಾವು ನಮ್ಮ ಸ್ಮಾರ್ಟ್ ಸಿಟಿಯ ಬಗ್ಗೆ ಮಾತಾನಾಡುವಾಗ ಇವಗಳೆಲ್ಲವನ್ನು ಪರಿಗಣಿಸ ಬೇಕು. ಅಲ್ಲಿನ ಜನರನ್ನು  ಒಗ್ಗೂಡಿಸಿ ಸಲಹೆಗಳನ್ನು ಪಡೆಯಬೇಕು. ಅದನ್ನೆ ಮಾಡುತ್ತೇವೆ. ಉದಾಹರಣೆಗೆ  ಜಯಪುರದ ವಿಷಯವನ್ನೇ ತೆಗೆದು ಕೊಳ್ಳಿ. ಜನರ ಸಲಹೆಯ ಪ್ರಕಾರ ಪ್ರವಾಸಿಗರಿಗೆಂದೇ ಪರಂಪರೆ (Heritage)ರಾತ್ರಿ ವಿಹಾರ, ವಾಯು ವಿಹಾರ  ಏರ್ಪಡಿಸುವುದು. ಒಳ್ಳೆಯ ವಿಚಾರ. ಜಯಪುರ ತನ್ನ ಪ್ರವಾಸಿಗರು ಹಾದು ಹೋಗುವ ಮಾರ್ಗಗಳಲ್ಲಿ ದೀಪದ ವ್ಯವಸ್ಥೆ, ಸುರಕ್ಷತೆಯ ವ್ಯವಸ್ಥೆ. ಮಾಡಿದಲ್ಲಿ ಅದರಿಂದ ಪ್ರವಾಸಿಗರಿಗೆ ಸೌಲಭ್ಯದೊರೆತು ನೋಡುಗರ ಸಂಖ್ಯೆ ಹೆಚ್ಚಾಗುತ್ತದೆ. ಊರು ರಾತ್ರಿಯ ವೇಳೆಯಲ್ಲಿಯೂ ಸಹ ಜಯಜಯಕಾರ ಹಾಕುವುದರಿಂದ ಅದು ನಿಜಕ್ಕೂ ಜಯಪುರ ಆಗಲಿದೆ.
 
ಪ್ರತಿಯೊಂದು ನಗರವು ಇಂದಿಗೂ ತನ್ನದೆ ಆದ ಛಾಪನ್ನು ಮೂಡಿಸಿರುತ್ತದೆ. ಅದೇ ಬನಾರಸ್ ಧಾರ್ಮಿಕ ಕಾರಣಗಳಿಂದ ಪ್ರಸಿದ್ಥಿ ಪಡೆದಿದ್ದರು, ಇಂದಿಗೂ ಬನಾರಸ್ ಸೀರೆಯ ಬಗ್ಗೆ ತಿಳಿಯದ ಮಹಿಳೆಯೆ ಇಲ್ಲ ಅಂತಾ ಹೇಳಬಹುದು. ಹೀಗೆ ಪ್ರತಿಯೊಂದು ಊರು ತನ್ನದೆ ಆದ ಛಾಪನ್ನು ಮೂಡಿಸಿರುತ್ತದೆ. 21ನೇಯ ಶತಮಾನದಲ್ಲಿ ಇಂಥ ಊರಿಗೆ ಧಾರ್ಮಿಕ ಸಂಸ್ಕೃತಿಕ ಪರಂಪರೆಯೊಂದಿಗೆ ಹೊಸ ಚೈತನ್ಯ ತುಂಬುವುದು ಹೇಗೆ. ಆಧುನಿಕ ಬೆಡಗು ಬಿನ್ನಾಣಗಳನ್ನು ತುಂಬುವುದು ಹೇಗೆ. ಒಳಗಿನ ಆತ್ಮವನ್ನು ಉಳಿಸಿಕೊಂಡು ಕಾಯಕಲ್ಪವನ್ನು ಮಾಡಬೇಕಿದೆ. ಈ ದೃಷ್ಟಿಯಿಂದಲೆ ನಾನು ಹೇಳಿದ್ದು ಸ್ಮಾರ್ಟ್ ಸಿಟಿ ಎಂದಾಕ್ಷಣ ಕೇವಲ ಕಟ್ಟಡಗಳಲ್ಲ.ಬದಲಾದ ಬಾಳಿನಲ್ಲಿ ವ್ಯವಸ್ಥೆಗೊಂದು ಗತಿ ದೊರಕಿಸಿಕೊಡಬೇಕಾಗಿದೆ. ಕಡಿಮೆ ವೆಚ್ಚದಲ್ಲಿ ತ್ಯಾಜ್ಯ ಅಥವಾ ವ್ಯರ್ಥ ಆಗುವುದನ್ನು ತಪ್ಪಿಸ ಬೇಕಾಗಿದೆ.
 
ಇಂದಿನ ತಂತ್ರಜ್ಞಾನದ ಯುಗದಲ್ಲಿ ವ್ಯಕ್ತಿ ತನ್ನ ಸ್ಮಾರ್ಟ್ ಮೊಬೈಲ್ ನಿಂದ ತಂತ್ರಜ್ಞಾನವನ್ನು ತನಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುತ್ತಾನೆ. ಇದನ್ನೆ ಸಾಮೂಹಿಕ ಬಳಕೆಗೆ ಬಳಸಲು ಬರುವುದಿಲ್ಲವೆ. ಚಂದ್ರಬಾಬುರವರಿಂದ ಕೇಳಿರುತ್ತೇನೆ. Digital worldನ ಉಪಯೋಗ ಜನ ಸಾಮಾನ್ಯರಿಗೆ ಹೇಗೆ ತಲುಪಿಸಬಹುದು ಎಂಬುದನ್ನು ಚಂದ್ರಬಾಬುರವರಿಂದ ಕೇಳಿರುತ್ತೇನೆ.  ಇಂದು ಪುಣೆಯಲ್ಲಿ   ಪ್ರಾರಂಭವಾಗಿರುವ ಯೋಜನೆ  digital worldನ ಉಪಯೋಗದಿಂದ  ಜನ ಸಾಮಾನ್ಯರಿಗೆ ಹೇಗೆ ಬಾಳನ್ನು ಹಸನ್ನು ಮಾಡಬಹುದು ಎಂಬುದಾಗಿರುತ್ತದೆ. ಎಲ್.ಇ.ಡಿ ಬಲ್ಬುಗಳ ಪ್ರಚಾರ ಇಡೀ ರಾಷ್ಟ್ರದಲ್ಲಿ ನಿರಂತರವಾಗಿ ಸಾಗಿದೆ .   
 
ನಾನು ಇಲ್ಲಿ ಹೇಳಬಯಸುವುದೇನೆಂದರೆ ನಮ್ಮ ದೇಶದಲ್ಲಿ ಯಾವುದೇ ಒಂದು ಸರ್ಕಾರ ಮುಂಬರುವ ದಿನಗಳಲ್ಲಿ  ಒಂದು ಲಕ್ಷ ಕೋಟಿ ರೂಪಾಯಿಗಳನ್ನು energy sectorನಲ್ಲಿ ಬಂಡವಾಳ ಹೂಡಿ ವಿದ್ಯುತ್ ಉತ್ಪಾದನೆಯನ್ನು ಮಾಡುತ್ತೇವೆ, 20 ಸಾವಿರ ಮೆಗಾವಾಟ್ಸ್ ವಿದ್ಯುತ್ ಉತ್ಪಾದಿಸುತ್ತೇವೆ ಎಂದರೆ  ಅದು ಮುಖ್ಯ ದಿನ ಪತ್ರಿಕೆಯ ಮುಖ ಪುಟದಲ್ಲಿ ಪ್ರಮುಖ ಸುದ್ದಿಯಾಗುತ್ತದೆ. ವಾಹ್..ವಾಹ್ ಮೋದಿ ಒಂದು ಲಕ್ಷ ಕೋಟಿಯಲ್ಲಿ 20 ಸಾವಿರ ಮೆಗಾವಾಟ್ಸ್ ವಿದ್ಯುತ್ ಉತ್ಪಾದನೆಯೆ ವಾಹ್…ವಾಹ್………..ಆದರೆ ಎಲ್.ಇ.ಡಿ ಬಲ್ಬುಗಳ ಪ್ರಚಾರ ದೇಶದಲ್ಲಿ ಸಂಪೂರ್ಣವಾಗಿ ಪ್ರಭಾವಶಾಲಿಯಾಗಿ ಆದಲ್ಲಿ ನನ್ನ ದೇಶವಾಸಿಗಳೆಲ್ಲರು ಸಂಪೂರ್ಣವಾಗಿ ಸಂತಸಗೊಳ್ಳುತ್ತಾರೆ.  ಕಾರಣ 20 ಸಾವಿರ ಮೆಗಾವಾಟ್ಸ್ ವಿದ್ಯುತ್ ಉಳಿತಾಯ ಇದರಿಂದ ಆಗುತ್ತದೆ ಮತ್ತು ಒಂದು ಲಕ್ಷ ಕೋಟಿ ರೂಪಾಯಿ ಹಣ ಉಳಿತಾಯವಾಗುತ್ತದೆ. ಈ ಹಣ ನಮ್ಮ ಬಡ ಜನರ ಉದ್ಥಾರ  ಕಾರ್ಯಗಳಿಗೆ ವಿನಿಯೋಗವಾಗಬಹುದು.
 
ಈಗ ಇನ್ನೊಂದು ಆಲೋಚನೆ, ಸೌರ ಶಕ್ತಿಯ ಬಳಕೆಯ ಪ್ರಚಾರ, ಪುಣೆ ನಗರ ಈಗಾಗಲೇ ಸೌರ ಶಕ್ತಿ ಯೋಜನೆಯನ್ನು ಕೈಗೆತ್ತಿ ಕೊಂಡಿದೆ. ಅದು ಈಗಾಗಲೇ ಚಾಲನೆಯಲ್ಲಿ ಇದೆ. ಉತ್ಪಾದನೆಯಲ್ಲಿ ದೊಡ್ಡ ಗುರಿಯನ್ನೆ ಇಟ್ಟು ಕೊಳ್ಳಲಾಗಿದೆ. ಮನೆಗಳ ಅಂಗಡಿ ಮುಂಗಟ್ಟುಗಳ ಛಾವಣಿಯ ಮೇಲೆ ಸೌರ ಶಕ್ತಿಯನ್ನು ಉತ್ಪಾದಿಸುವ ಕಾರ್ಯಕ್ಕೆ ಪ್ರೋತ್ಸಾಹಿಸಲಾಗಿದೆ. ಮನೆ ಬಳಕೆಯ ನಂತರ ಉಳಿಯುವ ಹೆಚ್ಚು ಉತ್ಪಾದನೆ ವಿದ್ಯುತ್ ಅನ್ನು ಸರ್ಕಾರವೇ ಖರೀದಿ ಮಾಡಲಿದೆ. ಇದರಿಂದ ವಿದ್ಯುತ್ ಅಭಾವವನ್ನು ಹೇಗೆ ಎದುರಿಸಬಹುದು , ಹೇಗೆ ಬದಲಾವಣೆಯನ್ನು ತರಬಹುದು ಮತ್ತು ವಿದ್ಯುತ್ ಉತ್ಪಾದನೆಯಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರಬಹುದು ಎಂಬುದನ್ನು ಮನಗಾಣಬಹುದು. ಎಲ್ಲಿಯವರೆವಿಗೂ ಸಣ್ಣ ಸಣ್ಣದಾಗಿ ಆಲೋಚಿಸುವುದಿಲ್ಲವೋ ಅಲ್ಲಿಯವರೆವಿಗೂ ಬದಲಾವಣೆ ಅಸಾಧ್ಯ. Comprehensive ಆಗಿರಬೇಕು,  interconnectedಆಗಿ  result oriented ಆಗಿರಬೇಕು.
 
ಇಂದು ನಾವು ಸ್ವಚ್ಛತೆಯ ಬಗ್ಗೆ ಮಾತಾನಾಡುತ್ತೇವೆ. 
 
ಭೂಮಿಯ ಬೆಲೆ ಗಗನಕ್ಕೇರುತ್ತಿರುವ ಸಂದರ್ಭದಲ್ಲಿ ಕಸ ಕಡ್ಡಿಯನ್ನು ತುಂಬುವುದಾದರು ಎಲ್ಲಿ. ಕಸ ತುಂಬಲು ಕೊರಕಲು ಹಾಗೂ ಕಂದರಗಳ ಬಂಜರು ಭೂಮಿಯಾದರು ಎಲ್ಲಿ. ನಗರಗಳ ಬೆಳವಣಿಗೆ ದಿನೇ ದಿನೇ ನಾಗಾಲೋಟದಲ್ಲಿ ಸಾಗಿದೆ.ದೂರ  ಸಾಗಿದಷ್ಟು ವಾಹನ ವೆಚ್ಚ ಎರಲಿದೆ. ಆದರೀಗ ನಮ್ಮ ಆಲೋಚನೆ ಕಸದಿಂದ ರಸ ತೆಗೆಯುವ ಪ್ರಯತ್ನ. ಮೊದಲ ಬಾರಿಗೆ ನಮ್ಮ ದೇಶದಲ್ಲಿ ನಗರ ನಿಗಮಗಳು, ಪಾಲಿಕೆಗಳು ದ್ರವ ಪದಾರ್ಥಗಳ ಕಸದಿಂದ ಮಿಶ್ರಗೊಬ್ಬರ, ರಸಗೊಬ್ಬರ ತಯಾರು ಮಾಡುವ ಮತ್ತು ಅದನ್ನು ರೈತರಿಗೆ ಮಾರುವ ಪದ್ದತಿಯನ್ನು ಅಳವಡಿಸಿ ಕೊಂಡಿದ್ದಾರೆ. ಯೂರಿಯ ಖರೀದಿಗೆ ಸಬ್ಸೀಡಿ ನೀಡುತ್ತಿದ್ದಂತೆ ಮಿಶ್ವ ಗೊಬ್ಬರಕ್ಕೂ ಸಬ್ಸೀಡಿ ನೀಡಲು ತೀರ್ಮಾನಿಸಿದ್ದೇವೆ. ಇದರಿಂದ ಈಗ ರಾಸಯನಿಕ ಗೊಬ್ಬರಗಳಿಂದ ಭೂಮಿ ಹಾಳಾಗುತ್ತಿದ್ದುದನ್ನು ತಪ್ಪಿಸಿದ್ದೇವೆ. ರೈತನ ಜಮೀನನ್ನು ಫಲವತ್ತಾಗಿಸುವಲ್ಲಿ ಸಹಕರಿಸಿದ್ದೇವೆ. ಇದರಿಂದ ರೈತನ ಜಮೀನು ಹಾಳಾಗುವುದನ್ನ ತಪ್ಪಿಸುವಂತೆಯೆ ನಗರದ ಕಸ ವಿಲೇವಾರಿಗೂ ಮಾರ್ಗೋಪಾಯ ಕಂಡುಕೊಂಡತಾಗಿದೆ. ತ್ಯಾಜ್ಯ ನಿರ್ಮೂಲನೆಯ ಆಯಿತು, ರಸಗೊಬ್ಬರ ತಯಾರು ಮಾಡಿಕೊಟ್ಟಂತೆಯು ಆಯಿತು. ಇಬ್ಬರಿಗೂ ಇದರಿಂದ ಗೆಲುವಿನ ಸಂಭ್ರಮ  (win win situation). ಜೊತೆಗೆ ಸಂಬಂಧಪಟ್ಟ ನಗರ ಪಾಲಿಕೆಗೂ ಹಣ ಸಂಪಾದಿಸುವ ಮಾರ್ಗ ತೆರೆದಂತಾಯಿತು. ಮಹಾನಗರ ಪಾಲಿಕೆಗಳಿಗೂ ಹಣ ಸಂಗ್ರಹಿಸುವ ಮೂಲ ದೊರೆತಂತಾಯಿತು.
 
ಘನ ತ್ಯಾಜ್ಯ ನಿರ್ವಹಣೆ (solid waste management),ದ್ರವ ತ್ಯಾಜ್ಯ ನಿರ್ವಹಣೆ (liquid waste management)ನೀರಿನ ಸಂಕಟ ಎದುರಾಗಿದೆ. ಕೆಲವೊಮ್ಮೆ ನಮ್ಮ ಸುದ್ದಿ ಮಾದ್ಯಮಗಳವರು ಸಣ್ಣ ಸಣ್ಣ ವಿಷಯಗಳನ್ನು ದೊಡ್ಡದು ಮಾಡಿ ಬಿಡುತ್ತಾರೆ. ಎಲ್ಲಿ ಸ್ಟೆಡಿಯಮ್ ಇದೆಯೊ, ಎಲ್ಲಿ ಕ್ರಿಕೆಟ್ ಆಡಲು ಸಾಧ್ಯವೊ  ಅಲ್ಲಿ ಮುಂದೋಂದು ದಿನ ಅದು ಸಾಧ್ಯವಿಲ್ಲ ಮುಂತಾಗಿ ಬರೆದು ಬಿಡುತ್ತಾರೆ. ಕ್ರಿಕೆಟ್ ಪಂದ್ಯ ಆಡಲಿ ಬಿಡಲಿ ವರ್ಷಕ್ಕೆ 365 ದಿನಗಳು ನೀರಿನ ಸಿಂಚನೆ ಮೈದಾನಕ್ಕೆ ಆಗಲೇ ಬೇಕು. ಪಂದ್ಯ ಮುಗೀತ್ತಿದ್ದಂತೆ ನೀರು ಉಣಿಸುವ ಕಾರ್ಯ ಮುಗಿದಂತಲ್ಲ. ಮೈದಾನವನ್ನು ಪಿಚ್ ಅನ್ನು ಹಸಿರನ್ನಾಗಿ ಇಡಬೇಕಾದಲ್ಲಿ 365 ದಿನಗಳು ನೀರಿನ ಅಗತ್ಯ ಬೇಕೆ ಬೇಕು. ಹಾಗಾದಾಗಲೇ ಮೈದಾನ ನಿರ್ವಹಣೆ ಸಾಧ್ಯ. ನೀರಿನ ಸಂಕಟ ಇರುವಂತಹ ಸಂದರ್ಭದಲ್ಲಿ ಪರಿಹಾರವಾದರು ಏನು.  ಭೂಮಿ ಹಸಿರಿಲ್ಲದಿದ್ದಲ್ಲಿ ಕ್ರಿಕೆಟ್ ಪಂದ್ಯ ಎರಡು ವರ್ಷವಾದರೂ  ಸಾಧ್ಯವಿಲ್ಲ. ನಮ್ಮ ಸುದ್ದಿ ಮಾದ್ಯಮಗಳ ಪಂಡಿತರು ಇಂಥದೊಂದು ಸುದ್ದಿ ಚರ್ವಿತ ಚರ್ವಣವಾಗಿ ನಿರೂಪಿಸಿ ಬಿಡುತ್ತಾರೆ. ಇದರಿಂದಾಗಿ ಮಹಾರಾಷ್ಟ್ರ ಸಾಕಷ್ಟು ನಷ್ಟ ಆನುಭವಿಸ ಬೇಕಾಯಿತು. ಘನ ತ್ಯಾಜ್ಯ ದಂತೆ ದ್ರವ ತ್ಯಾಜ್ಯವನ್ನು ಸಹ ಪ್ರಭಾವಕಾರಿ ಬಳಸಿದ್ದೇಆದಲ್ಲಿ, ಒಳ ಚರಂಡಿ ನೀರನ್ನು ಶುದ್ದೀಕರಿಸಿ ಸದ್ಬಳಕೆ ಮಾಡಬಹುದಾದಲ್ಲಿ ಇಂಥ ಸಮಸ್ಯೆ ಎದುರಾಗದು. ಇಂಥಹ ನೀರನ್ನು ತೋಟಗಾರಿಕೆಗೂ ಬಳಸಬಹುದು. ಹೀಗೆ ಮಾಡುವುದರಿಂದ ಆಟದ ಮೈದಾನಗಳ ನಿರ್ವಹಣೆ, ಉದ್ಯಾನವನಗಳ ನಿರ್ವಹಣೆ ಇತ್ಯಾದಿಯಾಗಿ ಬಳಸಿಕೊಳ್ಳುವುದರ ಮೂಲಕ ತ್ಯಾಜ್ಯ ನೀರನ್ನು ಸದ್ಬಳಕೆ ಮಾಡಿಕೊಳ್ಳ ಬಹುದು. ಜನರ ಆಗತ್ಯಗಳನ್ನು ಗುರುತಿಸಿ ನೀರಿನ ಲಭ್ಯತೆಯನ್ನು ನಿರ್ವಹಿಸ ಬಹುದು. ಅಂತರ ರಾಷ್ಟ್ರೀಯ ಮಾನದಂಡಗಳ ಪ್ರಕಾರ ನೀರಿನ ಆಗತ್ಯಗಳನ್ನು ಪೂರೈಕೆ ಸಾಧ್ಯವಿಲ್ಲವೆ. ಪ್ರತಿಯೊಂದು ಮನೆಯೂ ಅನಗತ್ಯವಾಗಿ ಬಳಸುವ ಮಿತ ಬಳಕೆ ಮಾಡಿ ಅಪವ್ಯಯ ವಾಗುವುದನ್ನು ತಪ್ಪಿಸಿ ಒಂದು ಲೀಟರ್, ಐದು ಲೀಟರ್, ಏಳು ಲೀಟರ್ ನೀರನ್ನು ಉಳಿಸುವ ಪ್ರಯತ್ನ ಮಾಡಬಹುದಲ್ವೇ.
 
ನಾವು ಪ್ರತಿಯೊಬ್ಬ ವ್ಯಕ್ತಿಗೂ, ಕುಟುಂಬಕ್ಕೂ ಮನೆಯನ್ನು ಪಡೆಯುವ ಅವಕಾಶ ನೀಡ ಬಯಸುತ್ತೇವೆ. ನಗರದಲ್ಲಿರುವ  ಗುಡಿಸಲುಗಳ ಪುಣೆ ಯೋಜನೆಯನ್ನು ಹಾಕಿಕೊಂಡಿದೆ. ಅದರಂತೆ ಗುಡಿಸಲುಗಳ ಬದಲಿಗೆ ಅವಾಸ್ ಯೋಜನೆಯಡಿ ಮನೆ ಕಟ್ಟಿಕೊಡುವ ವಿಚಾರವಿದೆ. ಇದರಿಂದ ಜೀವನ ಸಾಕಷ್ಟು ಬದವಾಗುತ್ತದೆ. ಬಡವ ಬಲ್ಲಿದನಲ್ಲಿಯೂ ಸಹ ಬದವಾವಣೆ ಉಂಟಾಗಲಿದೆ. ಗುಡಿಸಿಲಿನಲ್ಲಿರುವ ಬಡವನಿಗ ಬರುವ ಆಲೋಚನೆಗಳು ತಲೆಯ ಮೇಲೊಂದು ಸೂರು ಬಂದಾಗ ಬರುವ ಆಲೋಚನೆಗಳಲ್ಲಿ ಅಂತರವಿರುತ್ತದೆ. ಅದು ಬದಲಾವಣೆಗೆ ಪ್ರೇರಪಿಸುತ್ತದೆ. ಪರದೆ ಬದಲಾಯಿಸೋಣಾ, ಕಿಟಕಿ ಬಾಗಿಲು ಬದಲಾಯಿಸೋಣಾ, ಬಣ್ಣ ಬಳಿಸೋಣಾ ಎಂಬ ಯೋಚನೆಗಳು ಬರಲಾರಂಭಿಸುತ್ತದೆ. ಕಾಲೊರುಸುವ ಚಾಪೆ, ಬಂದವರಿಗೆ ಕುಳಿತುಕೊಳ್ಳಲು ಮಣೆ ಹೀಗೆ ವಿಚಾರಗಳು ಬರುತ್ತಾ ಹೋಗುತ್ತವೆ.
 
ಮನೆ ಸಿಕ್ಕೊಡನೆಯೆ ನಾಲ್ಕು ಗೋಡೆಗಳು ಸಿಕ್ಕಂತೆಲ್ಲ. ತಲೆಯ ಮೇಲೊಂದು ಸೂರು ದೊರೆತಂತೆಲ್ಲ. ಬದುಕಿಗೊಂದು ಆಲೋಚನೆ ದೊರೆತಂತಾಗುತ್ತದೆ. ಅವನ ಅಂತರಾಳದಲ್ಲಿ ಅಭಿವ್ಯಕ್ತಿಯ ವಿಚಾರಗಳು ಹೊರಸೂಸುತ್ತವೆ. ಪ್ರಗತಿಗೊಂದು ಯಾವುದೇ ಶಕ್ತಿಯಿದ್ದಲ್ಲಿ ಅದು ಯೋಜನೆಯ ರೂಪ ಪಡೆಯುವುದು. 125 ಕೋಟಿ ದೇಶವಾಸಿಗಳಿಗೆ ತಮ್ಮ ಅನಿಸಿಕೆಗಳನ್ನು ಅಭಿವ್ಯಕ್ತಿ ಪಡಿಸಲು ಅವಕಾಶ ಕಲ್ಪಸಿ ಕೊಡುವುದು. ಇದರಿಂದಾಗಿ ದೇಶ ವಿಶಾಲ ಹಾಗೂ ಭವ್ಯತೆಯೆಡೆಗೆ ಸಾಗಲು ಅವಕಾಶ ದೊರೆತಂತಾಗುತ್ತದೆ ಹಾಗೂ ಇದು ಸ್ಪರ್ದಾತ್ಮಕ ಯುಗ. ಹೀಗಾಗೀ ಎಲ್ಲ ನಗರಗಳನ್ನು ನಿಮಂತ್ರಿಸುತ್ತೇನೆ. ಇದೊಂದು ಸವಾಲಾಗಿ ಸ್ವೀಕರಿಸಿ. ಕೇವಲ ಪಾಲಿಕೆ ಹಾಗೂ ಅದರ 
 
ಅಧಿಕಾರ-ನೌಕರ ವರ್ಗ ಮಾತ್ರವೆ ಅಲ್ಲ. ನಾಗರೀಕರು ಭಾಗವಹಿಸುವಂತಾಗಬೇಕು. ಅದು ಸ್ವಚ್ಛತೆಯ ವಿಷಯ ಆಗಿರಲಿ ಅಥವಾ ಸ್ಮಾರ್ಟ್ ಸಿಟಿ ನೊಂದಾವಣಿಯಾಗಿರಲಿ. ನಗರಗಳನ್ನು ಸ್ಮಾರ್ಟ್ ಮಾಡಲು ಅವರ ಭಾಗವಹಿಸುವಿಕೆ ಅಗತ್ಯ. ಅವರ ದೃಡ ಸಂಕಲ್ಪದಿಂದ ಮಾತ್ರವೆ ಸಾಧ್ಯ. ನಾನು  ಇಂಟರ್ ನೆಟ್ ನಲ್ಲಿ ಮೈ ಗೋವಾ ಡಾಟ್ ಇನ್ ಗೆ ಹೋಗಿ ಜನರಿಗೆ ತಮ್ಮ ಸಲಹೆಗಳನ್ನು ರವಾನಿಸಿ ಎಂದೆ.  ನಿಮಗಿದು ತಿಳಿದು ಅಶ್ಚರ್ಯವಾಗಬಹುದು. 25 ಲಕ್ಷಕ್ಕೂ ಹೆಚ್ಚು ಜನ ನನ್ನ ಆಹ್ವಾನವನ್ನು ಮನ್ನಿಸಿ ಗಂಭೀರ ಸ್ಪರೂಪದ ಸಲಹೆಗಳನ್ನು ನೀಡಿದ್ದಾರೆ. ಆನಂತರ ಸರ್ಕಾರ ಈ 25 ಲಕ್ಷ ಜನರ ಕೊಡುಗೆಯನ್ನು ತಳ್ಳಿಹಾಕುವಂತಿರಲ್ಲಿಲ್ಲ, ಪರಿಗಣಿಸುವಂತಾಯಿತು. ನಾನು ಒಮ್ಮೆ ರೇಡಿಯೊದ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ನಮ್ಮ ನಗರಗಳ ರೈಲು ನಿಲ್ದಣಗಳಲ್ಲಿ ಊರಿನ ಸಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಕೆಲಸ ಮಾಡಿ ಎಂದೆ. ನಮ್ಮನ್ನಾಳಿದ ಇಂಗ್ಲೀಷರು ರೈಲು ನಿಲ್ದಣಗಳನ್ನು ಒಂದೇ ರೀತಿಯಲ್ಲಿ ನಿರ್ಮಿಸಿರುತ್ತಾರೆ. ಅದನ್ನು ಅವರು ಫೀಜಾ ಹೌಸ್ ನಂತೆ ಕಂಡಿರುತ್ತಾರೆ.  
 
ಅಮೇರಿಕೆಯಲ್ಲಿ ಎಲ್ಲಿಹೋದರು ಒಂದೇ ರೀತಿಯಲ್ಲಿ ಫೀಜಾ ಹೌಸ್ ನಂತಿರುವುದು ಕಂಡುಬರುತ್ತದೆ. ನಮ್ಮ ರೈಲು ನಿಲ್ದಾಣಗಳು ಸಹ ಒಂದೇ ರೀತಿಯಲ್ಲಿವೆ. ನಿಲ್ದಾಣಗಳಿಗೆ ಹೋಗಿ ನೋಡಿದಾಗ ಎಡಗಡೆ ಇದು. ಬಲಗಡೆ ಆದು ಎಂಬಂತಿರುತ್ತದೆ. ಎಕರೂಪತೆಯನ್ನು  ಹೋಗಲಾಡಿಸಬೇಕು. ನಮ್ಮ ದೇಶ ಹಲವು ಹತ್ತು ವೈಶಿಷ್ಟ್ಯಗಳಿಂದ ಕೂಡಿದೆ. ಅವುಗಳಿಗೆ ನವೀನತೆಯನ್ನು ತಂದು ಕೊಡಬೇಕಾಗಿದೆ. ನಾನು ಹೇಳಿದೆ. ಗೋಡೆಗಳನ್ನೇನು ಒಡೆಯ ಬೇಕಾಗಿಲ್ಲ. ಗೋಡೆಗಳಿಗೆ ಬಣ್ಣ ಬಳಿಯುವುದರ ಮೂಲಕ, ಚಿತ್ರ ಬಿಡಿಸುವುದರ ಮೂಲಕ ನಿಮ್ಮ ನಿಮ್ಮ ಊರಿನ ಕಲಾ ಪ್ರಪಂಚವನ್ನು ಬಿಡಿಸಿಡಿ. ಇದರಿಂದ ಪರಂಪರಾಗತ ಕಲೆಗೆ ಪ್ರೋತ್ಸಾಹ ನೀಡಿ ಎಂದೆ. 
 
ನಿಮಗೆ ಅಶ್ಟರ್ಯವಾಗಬಹುದು ತಿಂಗಳೊಳಗೆ ಹಳ್ಳಿಯ, ನಗರ ಪ್ರದೇಶಗಳ ಕಲಾಕಾರರು, ಶಾಲೆಯ ಮಕ್ಕಳು, ಶಾಲೆಯ ಡ್ರಾಯಿಂಗ್ ಮಾಸ್ತರರು  ಎಲ್ಲರೂ ನಿಲ್ದಾಣದ ಬಳಿ  ಸೇರಿ ತಮ್ಮ ತಮ್ಮ ಬಳಿಯಿದ್ದ ಬಣ್ಣಗಳಿಂದ ಚಿತ್ರ ಬಿಡಿಸುವುದರ ಮೂಲಕ ಗೋಡೆಗಳನ್ನು ಶೃಂಗರಿಸಿದರು. ಇದರಿಂದಾಗಿ ಸಣ್ಣ ಸಣ್ಣ ನಿಲ್ದಾಣಗಳು ತಮ್ಮ ಹಳ್ಳಿಯ ಮತ್ತು ನಗರಗಳ ಕಲಾ ಪ್ರಪಂಚವನ್ನು ಹೊತ್ತು ನಿಂತವು,
 
ಇಂದು ಜನರಿಗೆ ಬದಲಾವಣೆ ಬೇಕಿದೆ. ಈ ಬದಲಾವಣೆಯಲ್ಲಿ ತಾವು ಭಾಗಿಗಳಾಗ ಬೇಕೆಂದು ಬಯಸುತ್ತಾರೆ. ಸ್ಮಾರ್ಟ್ ಸಿಟಿಯ ಪರಿಕಲ್ಪನೆಯ ವಿಶೇಷತೆಯೆ ಇದು.  ಕೆಲವರಿಗೆ ಸ್ಮಾರ್ಟ್ ಎಂಬ ಶಬ್ಧ ಕೇಳಿದೊಡನೆಯೆ ಬೆಚ್ಚಿ ಬೀಳುವಂತಾಗುತ್ತದೆ. ಯಾರು ಆಲೋಚಿಸಿದ ಕಂಡು ಕಾಣದ ಕೆಲಸವೇನು ಮಾಡುತ್ತಿಲ್ಲ. ನಾನು ಕಂಡ ಸ್ಮಾರ್ಟ್ ಪರಿಕಲ್ಪನೆ ತುಂಬಾ ಸರಳವಾದದ್ದು. ಎಲ್ಲರಿಗೂ ಸುಲಭವಾಗಿ ಸಾಕಷ್ಟು ನೀರು ದೊರಕುವಂತಾಗಲಿ ಎಂಬುದು. ಸೊಸೈಟಿಯ ಮೊದಲ ಮನೆಗೆ ನೀರು ದೊರೆತು ಕೊನೆಯ ಮನೆಯ ದೊರಕದಿರುವಂತಾಗಲಿ ಎಂದಲ್ಲ. ಹಿಂದಿನ ಬಡಾವಣೆ ನೀರು ದೊರೆತು ಮುಂದಿನ ಬಡಾವಣೆಗೆ ನೀರು ದೊರೆಯದಿರಲಿ ಅಂತಲ್ಲ. ವಿದ್ಯುತ್ ಎಲ್ಲರಿಗೂ ದೊರಕಬೇಕು. ಒಬ್ಬರಿಗೆ ದೊರೆತು ಇನೊಬ್ಬರಿಗೆ ದೊರೆಯದಿರಲಿ ಎಂಬುದಲ್ಲ. ಎಲ್ಲರಿಗೂ ಸಮಾನವಾಗಿ ದೊರಕಲಿ ಎಂಬುದೇ ಆಗಿದೆ. ಸಾರ್ವಜನಿಕ ಸೌಲಭ್ಯಗಳೆಲ್ಲವು ಹೊಸ ಚೌಕಟ್ಟಿನಲ್ಲಿ ಪರಿಪೂರ್ಣವಾಗಿ ದೊರೆಯಬೇಕು ಎಂಬುದೇ ಆಗಿದೆ. 
 
ನನ್ನ ಪ್ರಯತ್ನ ನಗರಗಳ  ಅರ್ಥಿಕ ಬೆಳವಣಿಗೆ ಸಮಾನವಾಗಿ ವಿಕಾಸ ಕೇಂದ್ರವಾಗಲಿ  ಎಂಬುದೇ ಆಗಿದೆ. ಪ್ರಗತಿಯೆಂಬುದು ಪರಿಸರ ಸ್ನೇಹಿ ಮತ್ತು ಹಸಿರನ್ನು ಕಾಪಾಡಿಕೊಂಡು ಬರುವಂತಾಗಬೇಕು. ಬಡವರಿಗೆ ಬಡತನ ಅರಗಿಸಿಕೊಳ್ಳುವ ಶಕ್ತಿ ನಗರಗಳು ತುಂಬ ಬೇಕು. ಅದು ಸಾಧ್ಯವಾದಾಗಲೇ ನಗರದ ಬೆಳವಣಿಗೆ ಸರಿ ದಿಕ್ಕಿನಲ್ಲಿ ಸಾಗುತ್ತಿದೆ ಎಂದರ್ಥ. ಬಡ ಜನರ ಕೈಗಳಿಗೆ ಸಾಕಷ್ಟು ಕೆಲಸ ದೊರೆಯುವಂತೆ ಮಾಡಿದಾಗಲೆ ನಗರದ ಅರ್ಥಿಕ ಬೆಳವಣಿಗೆ ಸುಧಾರಿಸಿದೆ ಎಂದರ್ಥ. ಬಡವ ತನ್ನ ಮನೆಗೆ ಬಂದ ಅತಿಥಿಗೆ ಹೊಟ್ಟೆ ತುಂಬ  ಊಟ ಹಾಕಬೇಕಾದಲ್ಲಿ ತನ್ನ ಹೊಟ್ಟೆಗೆ ಎರಡು ಹೊತ್ತು ಸಾಕಾಗುವಷ್ಟು ಊಟ ದೊರೆತಾಗಲೇ ಸಾಧ್ಯ. ಹಾಗಿಲ್ಲದೆ ಹೋದಲ್ಲಿ ಬಂದ ಅತಿಥಿಗಳನ್ನು ಸತ್ಕಾರಿಸುವುದಾದರು ಹೇಗೆ ಸಾಧ್ಯ. ಬಡತನವನ್ನು ಹೊಡೆದೊಡಿಸುವ,  ಶಕ್ತಿ ನಗರಗಳಿಗಿರಬೇಕು. 
 
ಒಂದು ಹೊಸ ಬದಲಾವಣೆ, ಒಂದು ಹೊಸ ಪದ್ದತಿಯಲ್ಲಿ ಬದಲಾವಣೆ ಬಯಸುವ, ಜನರ ಭಾಗವಹಿಸುವಿಕೆ ಬದಲಾವಣೆ ತರುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ.
 
ನಾನು ಕೆಲವು ದಿನಗಳ ಹಿಂದೆ ಕೆಲಸ ಏನು-ಏನಾಗಿದೆ ಎಂಬುದರ ಬಗ್ಗೆ ಸಮೀಕ್ಷೆಯನ್ನು ನಡೆಸಿದೆ. ಜನರ ವಿಶ್ವಾಸ ಪಡೆದು ಮಾಡುವ ಕೆಲಸದಲ್ಲಿ ಎಷ್ಟು ಶಕ್ತಿಯಿರುತ್ತದೆ ಎಂಬುದನ್ನು ಮಾನಗಂಡೆ. ಇದರ ಉದಾಹರಣೆಯೆ ಸ್ಮಾರ್ಟ್  ಸಿಟಿ. ಇದರಲ್ಲಿ ಎಷ್ಟೊಂದು ಜನರು ತಮ್ಮನ್ನು ತೊಡಗಿಸಿಕೊಳ್ಳುತ್ತಾರೆಂದರೆ ಮೊದಲಿಗೆ  architectureಗೆ ಹೇಳುತ್ತೇವೆ ಅನಂತರ Archetecture ಟೆಂಡರ್ ಯಾವಾಗ ಹೋರಬೀಳಬಹುದು ಎಂಬುದಾಗಿ ವಿಚಾರಿಸುತ್ತಾರೆ. ಅನಂತರ  ನಾವು ಇದರಲ್ಲಿ ಪಾಲ್ಗೋಳಲಿದ್ದೇವೆ ಎಂದು ಮುಂದೆ ಬರುವವರಿದ್ದಾರೆ. ಹೀಗೆ ಸಂಪೂರ್ಣವಾಗಿ ಸ್ಪರ್ದಾತ್ಮಕ ಪರಿಸರ ಉಂಟಾಗುತ್ತದೆ. ಮತ್ತೋಮ್ಮೆ ಶ್ರೀಮಾನ್ ವೆಂಕಯ್ಯನಾಯ್ಡುರವರಿಗೆ ಮತ್ತು ಸಹೋದ್ಯೋಗಿ ಮಿತ್ರರಿಗೆ ಧನ್ಯವಾದಗಳನ್ನು ಹೇಳುತ್ತೇನೆ. ಪುಣೆ ನಗರವಾಸಿಗಳಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. 
 
ಪುಣೆಯವರಿಗೆ ಒಂದು ಮಾತನ್ನು ನೆನಪು ಮಾಡಿಕೊಡಬಯಸುತ್ತೇನೆ. ನೀವು ಕೇವಲ ಎರಡುವರೆ ಅಂಕಗಳಿಂದ ಹಿಂದೆ ಬಿದ್ದಿದ್ದೀರಾ. ಹೀಗಾಗಿ ಭುವನೇಶ್ವರ ಮೊದಲ ಸ್ಥಾನಕ್ಕೇರಿದೆ. ಮುಂದಿನ ಬಾರಿ ಯಾವುದೇ ಸ್ಪರ್ದೆ ಎರ್ಪಟ್ಟರು ಪುಣೆ ಮೊದಲ ಸ್ದಾನ ಪಡೆಯುವುದನ್ನು ಕಾಣ ಬಯಸುತ್ತೇನೆ. ಇದು ಛತ್ರಪತಿ ಶಿವಾಜಿ ಮಹಾರಾಜರ ಸರಹದ್ದು., ಲೋಕಮಾನ್ಯ ತಿಲಕರ ಅಸ್ತಿಯೂ ಹೌದು. ಅದೇ ಹುರುಪುನಿಂದ ಪುಣೆಯನ್ನು ಮುನ್ನಡೆಸೋಣ ಮತ್ತು ನಂಬರ್ ಓನ್ ಆಗುವುದನ್ನು ಕಾಣೋಣಾ. ಹಾಗೇಯೆ ದೇಶವಾಸಿಗಳಿಗೂ ನನ್ನದೊಂದು ಮಾತು ನೀವು ಸಹ ಪುಣೆಯ ಹಿಂದೆ ಇರಬೇಡಿ. ಸದಾ ಮುನ್ನುಗ್ಗಿ. ನಂಬರ್  ಒನ್ ಆಗುವೆವು ಎಂದು ತೀರ್ಮಾನ ತೆಗೆದುಕೊಳ್ಳಿ. ನೋಡಿ ಇದರ ಮಜಾ…
 
ಎಲ್ಲರಿಗೂ ನನ್ನ ವಂದನೆಗಳು.