Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪುನರ್ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತ ಮತ್ತು ಮೊರಾಕ್ಕೋ ನಡುವೆ ಸಹಕಾರ ಕುರಿತ ತಿಳುವಳಿಕಾ ಒಡಂಬಡಿಕೆಗೆ ಸಂಪುಟದ ಅಂಗೀಕಾರ.


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಪುನರ್ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತ ಮತ್ತು ಮೊರಾಕ್ಕೋ ನಡುವಿನ ಸಹಕಾರ ಕುರಿತ ತಿಳುವಳಿಕಾ ಒಡಂಬಡಿಕೆಗೆ ಪೂರ್ವಾನ್ವಯಗೊಂಡಂತೆ ತನ್ನ ಅನುಮೋದನೆ ನೀಡಿತು. ಈ ಒಡಂಬಡಿಕೆಗೆ 2018 ರ ಏಪ್ರಿಲ್ 10ರಂದು ಅಂಕಿತ ಹಾಕಲಾಗಿತ್ತು.

ಈ ಒಡಂಬಡಿಕೆಯನ್ವಯ ಉಭಯ ದೇಶಗಳು ಹೊಸ ಮತ್ತು ಪುನರ್ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಪರಸ್ಪರ  ಲಾಭದಾಯಕವಾಗುವ ಮತ್ತು ಸಮಾನತೆ ಹಾಗು ಪೂರಕ ಮಾದರಿಯಲ್ಲಿ ದ್ವಿಪಕ್ಷೀಯ ತಾಂತ್ರಿಕ ಸಹಕಾರ ಉತೇಜಿಸುವ ಮತ್ತು ಸಹಕಾರೀ ಸಾಂಸ್ಥಿಕ ಬಾಂಧವ್ಯ ಸ್ಥಾಪಿಸುವ ಉದ್ದೇಶವನ್ನು ಹೊಂದಿವೆ. ಈ ಒಡಂಬಡಿಕೆಯು ಸಹಕಾರದ ಕ್ಷೇತ್ರಕ್ಕೆ  ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲು ಮತ್ತು ಅದರ ಪರಾಮರ್ಶೆ ನಡೆಸಲು ಹಾಗು ನಿಗಾ ಇಡಲು ಜಂಟಿ ಕಾರ್ಯ ಸಮಿತಿಯನ್ನು ಸ್ಥಾಪಿಸುವ ಇರಾದೆಯನ್ನು ಹೊಂದಿದೆ. ಮಾತ್ರವಲ್ಲ ಒಡಂಬಡಿಕೆಯು ತಜ್ಞತೆ ವಿನಿಮಯ ಮತ್ತು ಮಾಹಿತಿ ಜಾಲವನ್ನು  ಸ್ಥಾಪಿಸುವ ಉದ್ದೇಶವನ್ನೂ ಒಳಗೊಂಡಿದೆ.

ಈ ತಿಳುವಳಿಕಾ ಒಡಂಬಡಿಕೆ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸಲು ಸಹಾಯ ಮಾಡಲಿದೆ.