Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪುರಾತನ ಸ್ಮಾರಕ ಮತ್ತು ಪುರಾತತ್ವ ತಾಣಗಳು ಮತ್ತು ರಕ್ಷಣೆ ಕಾಯಿದೆ 1958ರ ತಿದ್ದುಪಡಿಗಳಿಗೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಪುರಾತನ ಸ್ಮಾರಕ ಮತ್ತು ಪುರಾತತ್ವ ತಾಣಗಳ ರಕ್ಷಣೆ (ತಿದ್ದುಪಡಿ) ಕಾಯಿದೆ 2017ನ್ನು ಸಂಸತ್ತಿನಲ್ಲಿ ಮಂಡಿಸಲು ತನ್ನ ಅನುಮೋದನೆ ನೀಡಿದೆ.

ನಿರ್ಬಂಧಿತ ಪ್ರದೇಶಗಳಲ್ಲಿ ಕೆಲವು ನಿರ್ದಿಷ್ಟ ನಿರ್ಮಾಣಗಳಿಗೆ ದಾರಿ ಮಾಡಿಕೊಡಲು, ಆದರೆ ಸಾರ್ವಜನಿಕ ಕಾಮಗಾರಿಗಳನ್ನು ಮತ್ತು ಸಾರ್ವಜನಿಕರಿಗೆ ಅಗತ್ಯವಾದ ಯೋಜನೆಗಳಿಗೆ ಮಾತ್ರ ಸೀಮಿತಗೊಳಿಸಿ ಈ ಕೆಳಗಿನ ತಿದ್ದುಪಡಿಗಳಿಗೆ ಅನುಮೋದನೆ ನೀಡಲಾಗಿದೆ.:

i) ಕಾಯಿದೆಯ ಸೆಕ್ಷನ್ 2ರಲ್ಲಿ ‘ಸಾರ್ವಜನಿಕ ಕಾಮಗಾರಿ’ ಎಂಬುದಕ್ಕೆ ಹೊಸ ವ್ಯಾಖ್ಯೆಯ ಸೇರ್ಪಡೆ.

ii) ಕಾಯಿದೆಯ ಸೆಕ್ಷನ್ 20 ಎಗೆ ತಿದ್ದುಪಡಿ, ಆ ಮೂಲಕ ಕೇಂದ್ರ ಸರ್ಕಾರದ ಯಾವುದೇ ಇಲಾಖೆ ಅಥವಾ ಕಚೇರಿಗೆ ನಿರ್ಬಂಧಿತ ಪ್ರದೇಶದಲ್ಲಿ ಕೇಂದ್ರ ಸರ್ಕಾರದ ಅನುಮತಿಯನ್ನು ಪಡೆದು ಸಾರ್ವಜನಿಕ ಕಾಮಗಾರಿ ಕೈಗೊಳ್ಳಲು ಅವಕಾಶ ನೀಡುತ್ತದೆ.

iii) ಪ್ರಧಾನ ಅಧಿನಿಯಮದ ಸೆಕ್ಷನ್ 20-I ಗೆ ಹೊಸ ಉಪವಾಕ್ಯ (ಇಎ) ಅಳವಡಿಕೆ
ಹಿನ್ನೆಲೆ:

ಪುರಾತನ ಸ್ಮಾರಕಗಳು ಮತ್ತು ಪುರಾತತ್ವ ತಾಣಗಳ ರಕ್ಷಣೆ ಕಾಯಿದೆ 1958 (2010ರಲ್ಲಿ ತಿದ್ದುಪಡಿ ಆಗಿರುವಂತೆ) ಕೇಂದ್ರದಿಂದ ಸಂರಕ್ಷಿತವಾದ ಸ್ಮಾರಕ/ತಾಣಗಳ ನಿರ್ಬಂಧಿತ ಪ್ರದೇಶದಲ್ಲಿ ಯಾವುದೇ ನಿರ್ಮಾಣಕ್ಕೆ ಅನುಮತಿ ನೀಡುವುದನ್ನು ನಿರ್ಬಂಧಿಸುತ್ತದೆ.
ನಿರ್ಬಂಧಿತ ಪ್ರದೇಶಗಲ್ಲಿನ ಹೊಸ ನಿರ್ಮಾಣದ ನಿರ್ಬಂಧಿಸುವಿಕೆಯು ಕೇಂದ್ರ ಸರ್ಕಾರದ ಹಲವು ಸಾರ್ವಜನಿಕ ಕಾಮಗಾರಿ ಮತ್ತು ಅಭಿವೃದ್ಧಿ ಯೋಜನೆಗಳ ಮೇಲೂ ಪ್ರತೀಕೂಲ ಪರಿಣಾಮ ಬೀರುತ್ತಿದೆ.

ಈ ತಿದ್ದುಪಡಿಯು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಮತ್ತು ನಿರಂಬಂಧಿತ ಪ್ರದೇಶದೊಳಗೆ ಕಟ್ಟುನಿಟ್ಟಾಗಿ ಅಗತ್ಯ ಸಾರ್ವಜನಿಕ ಕಾಮಗಾರಿ ಮತ್ತು ಯೋಜನೆಗಳನ್ನು ಮಾತ್ರವೇ ಕೈಗೊಳ್ಳಲು ಅವಕಾಶ ನೀಡುತ್ತದೆ.

*****

AKT/VBA/SH