Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಡಿಯಲ್ಲಿ ಬರುವ ಎಲ್ಲ ಸಾರ್ವಜನಿಕ ವಲಯದ ಉದ್ದಿಮೆಗಳಿಗೆ ಖರೀದಿ ಆದ್ಯತೆ (ಸ್ಥಳೀಯ ವಸ್ತು ಆಧಾರಿತ (ಪಿಪಿ-ಎಲ್ಸಿ)ಒದಗಿಸುವ ನೀತಿಗೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಡಿಯಲ್ಲಿ ಬರುವ ಎಲ್ಲ ಸಾರ್ವಜನಿಕ ವಲಯದ ಉದ್ದಿಮೆಗಳಿಗೆ ಖರೀದಿ ಆದ್ಯತೆ (ಸ್ಥಳೀಯ ವಸ್ತು ಆಧಾರಿತ (ಪಿಪಿ-ಎಲ್ಸಿ)ಒದಗಿಸುವ ನೀತಿಗೆ ತನ್ನ ಅನುಮೋದನೆ ನೀಡಿದೆ.

ಈ ನೀತಿಯು ಐದು ವರ್ಷಗಳಿಗೆ ಅನ್ವಯವಾಗುತ್ತದೆ. ನೀತಿಯ ಜಾರಿ ಮತ್ತು ವಾರ್ಷಿಕ ಪರಿಶೀಲನೆ ಹಾಗೂ ನೀತಿಯನ್ನು ವರ್ಷದಿಂದ ವರ್ಷದ ಆಧಾರದ ಮೇಲೆ ಮುಂದುವರಿಸಲು ಶಿಫಾರಸು ಮಾಡುವ ಬಗ್ಗೆ ನಿಗಾ ಇಡಲು ಸಂಚಾಲನಾ ಸಮಿತಿಯೊಂದನ್ನು ರಚಿಸಲಾಗುತ್ತದೆ.

ಈ ನೀತಿಯ ಅಡಿಯಲ್ಲಿ, ಸ್ಥಳೀಯ ವಸ್ತು ( ಲೋಕಲ್ ಕಂಟೆಂಟ್)ಗಳನ್ನು ಕೆಲವು ತೈಲ ಮತ್ತು ಅನಿಲ ವಾಣಿಜ್ಯ ಚಟುವಟಿಕೆಗಳಿಗೆ ನಿರ್ದಿಷ್ಟಪಡಿಸಲಾಗುವುದು. ಸ್ಥಳೀಯ ವಸ್ತು ಗುರಿಯನ್ನು ಯಾರು ಪೂರೈಸುತ್ತಾರೋ ಮತ್ತು ಅವರು ಉಲ್ಲೇಖಿಸುವ ದರ ಅರ್ಹವಾದ ಅತಿ ಕಡಿಮೆ ಬಿಡ್ ಮೊತ್ತದ ಶೇಕಡ 10ರ ಒಳಗಿರುತ್ತದೋ ಅಂಥ ಸ್ಥಳೀಯ ಉತ್ಪಾದಕರು/ಸೇವಾ ಪೂರೈಕೆದಾರರು ನಿರ್ದಿಷ್ಟಪಡಿಸಲಾದ ಭಾಗದ ಖರೀದಿಗೆ ಅಂತ ದರ ಹೊಂದಾಣಿಕೆಯೊಂದಿಗೆ ಖರೀದಿ ಆದ್ಯತೆಗೆ ಅರ್ಹರಾಗಿರುತ್ತಾರೆ.

ಈ ನೀತಿಯು ಮೇಕ್ ಇನ್ ಇಂಡಿಯಾ ಪದ್ಧತಿಗಳು ಮತ್ತು ದೇಶದೊಳಗೆ ತಮ್ಮ ಸರಕು ಮತ್ತು ಸೇವೆಗಳಿಗೆ ಮೌಲ್ಯ ಸೇರ್ಪಡೆ ಮಾಡಿ, ಪ್ರಗತಿದಾಯಕತೆ ಅಳವಡಿಸಿಕೊಂಡ ಸೇವೆಗಳ ಪೂರೈಕೆದಾರರು ಮತ್ತು ವಿತರಕರನ್ನು ಉತ್ತೇಜಿಸುವ ಸಾಧ್ಯತೆ ಇದೆ.

ಈ ನೀತಿಯು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಎಲ್ಲ ಸಾರ್ವಜನಿಕ ವಲಯದ ಉದ್ದಿಮೆಗಳು ಮತ್ತು ಅವರ ಸಂಪೂರ್ಣ ಒಡೆತನದ ಅಧೀನ ಸಂಸ್ಥೆಗಳು, ಜಂಟಿ ಸಹಭಾಗಿತ್ವದ ಅಂದರೆ ಶೇ.51 ಅಥವಾ ಅದಕ್ಕಿಂತ ಹೆಚ್ಚಿನ ಈಕ್ವಿಟಿ ಹೊಂದಿರುವ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಸಾರ್ವಜನಿಕ ವಲಯದ ಉದ್ದಿಮೆಗಳು, ಅದಕ್ಕೆ ಹೊಂದಿಕೊಂಡ ಅಥವಾ ಅಧೀನ ಕಚೇರಿಗಳಿಗೆ ಅನ್ವಯಿಸುತ್ತದೆ.

ಹಿನ್ನೆಲೆ:

ಪ್ರಧಾನಮಂತ್ರಿಯವರು 2014ರ ಸೆಪ್ಟೆಂಬರ್ ನಲ್ಲಿ ಆರಂಭಿಸಿದ ಮೇಕ್ ಇನ್ ಇಂಡಿಯಾ ಉಪಕ್ರಮವು, ಭಾರತವನ್ನು ಜಾಗತಿಕ ವಿನ್ಯಾಸಕ್ಕೆ ಮತ್ತು ಉತ್ಪಾದನಾ ತಾಣವಾಗಿ ಪರಿವರ್ತಿಸಲು ವಿಸ್ತೃತ ಸ್ವರೂಪದಲ್ಲಿ ರಾಷ್ಟ್ರ ನಿರ್ಮಾಣ ಉಪಕ್ರಮದ ಭಾಗವಾಗಿದೆ. ಈ ಅಭಿಯಾನದಲ್ಲಿ ಸರ್ಕಾರ ತೈಲ ಮತ್ತು ನೈಸರ್ಗಿಕ ಅನಿಲ ಯೋಜನೆಯನ್ನು ಭಾರತದಲ್ಲಿ ಅನುಷ್ಠಾನಗೊಳಿಸುವ ವೇಳೆ ತೈಲ ಮತ್ತು ಅನಿಲ ವಾಣಿಜ್ಯ ಚಟುವಟಿಕೆಯಲ್ಲಿ ಸ್ಥಳೀಯ ಕಂಟೆಟ್ ಗುರಿಗಳನ್ನು ಪೂರೈಸುವಂಥ ಉತ್ಪಾದಕರು/ಸೇವಾ ಪೂರೈಕೆದಾರರಿಂದ ಆದ್ಯತೆಯ ಖರೀದಿ ಸೌಲಭ್ಯ ಒದಗಿಸಲು ನೀತಿಯ ಮೂಲಕ ಸ್ಥಳೀಯವಾಗಿ ದೊರಕುವ ಸರಕು ಮತ್ತು ಸೇವೆಗಳಿಗೆ ಒತ್ತು ನೀಡಲು ನಿರ್ಧರಿಸಿತ್ತು.

***

AKT/VBA/SH