Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿಗಳು ವಿಡಿಯೊ ಸಂವಾದದ ಮೂಲಕ ಚೆನ್ನೈನಲ್ಲಿ ನಡೆದ 47ನೇ ತುಘಲಕ್  ಪತ್ರಿಕೆಯ ವಾರ್ಷಿಕೋತ್ಸವ – ಶ್ರೀ ಚೊ. ರಾಮಸ್ವಾಮಿ ಸ್ಮರಣೆ ಕಾರ್ಯಕ್ರಮದಲ್ಲಿ ಮಾಡಿದ ಭಾಷಣದ ಪಠ್ಯ

ಪ್ರಧಾನಮಂತ್ರಿಗಳು ವಿಡಿಯೊ ಸಂವಾದದ ಮೂಲಕ ಚೆನ್ನೈನಲ್ಲಿ ನಡೆದ 47ನೇ ತುಘಲಕ್  ಪತ್ರಿಕೆಯ ವಾರ್ಷಿಕೋತ್ಸವ – ಶ್ರೀ ಚೊ. ರಾಮಸ್ವಾಮಿ ಸ್ಮರಣೆ ಕಾರ್ಯಕ್ರಮದಲ್ಲಿ ಮಾಡಿದ ಭಾಷಣದ ಪಠ್ಯ


ಆತ್ಮೀಯ ಡಾ. ಪದ್ಮ ಸುಬ್ರಹ್ಮಣ್ಯಂ ಜಿ
ಶ್ರೀ ಎನ್. ರವಿ
ಶ್ರೀ ಜಿ. ವಿಶ್ವನಾಥನ್
ಶ್ರೀ ಎಸ್. ರಜನಿಕಾಂತ್
ಶ್ರೀ ಗುರುಮೂರ್ತಿ
 ತುಘಲಕ್    ಓದುಗರೆ
ದಿವಂಗತ ಶ್ರೀ ಚೊ. ರಾಮಸ್ವಾಮಿ ಅವರ ಅನುಯಾಯಿಗಳೆ 
 
ಮತ್ತು ತಮಿಳುನಾಡಿನ ಜನರೆ. 
 
ವಣಕ್ಕಂ. ಇನಿಯ ಪೊಂಗಲ್ ನಲ್ವಾಜುತುಕ್ಕಲ್ 
ನಾವು ಅತ್ಯಂತ ಪ್ರಶಸ್ತ ಸಮಯದಲ್ಲಿ ಇಲ್ಲಿ ಸೇರಿದ್ದೇವೆ.
 
ನಿನ್ನೆಯಷ್ಟೇ ನಮ್ಮ ತೆಲುಗು ಸಹೋದರ, ಸಹೋದರಿಯರು ಭೋಗಿ ಹಬ್ಬ ಆಚರಿಸಿದ್ದಾರೆ. 
ಉತ್ತರ ಭಾರತದ ಗೆಳೆಯರು ಅದರಲ್ಲೂ ವಿಶೇಷವಾಗಿ ಪಂಜಾಬ್ನೇಲ್ಲಿ ಲೋಹ್ರಿಯನ್ನು ಆಚರಿಸಲಾಗುತ್ತಿದೆ. 
ಇಂದು ಮಕರ ಸಂಕ್ರಾಂತಿ.
 
ಗುಜರಾತ್ ನಲ್ಲಿ  ಇಂದು ಆಗಸದ ತುಂಬೆಲ್ಲಾ ಗಾಳಿಪಟಗಳೇ ಕಾಣಿಸುತ್ತವೆ. ಅಲ್ಲಿ ಈ ದಿನವನ್ನು ಉತ್ತರಾಯಣ ಎಂದು ಕರೆಯಲಾಗುತ್ತದೆ. 
 
ಅಸ್ಸಾಂನ ಜನತೆ ಇದನ್ನು ‘ಮಾಘ ಬಿಹು’ ಎಂದು ಆಚರಿಸುತ್ತಾರೆ ಮತ್ತು ತಮಿಳುನಾಡಿನಲ್ಲಿ ನೀವು ಪೊಂಗಲ್ ಆಚರಣೆ ಮಾಡುತ್ತಿದ್ದೀರಿ. 
 
ಪೊಂಗಲ್ ಕೃತಜ್ಞತೆ ಸಮರ್ಪಿಸುವ ಹಬ್ಬ – ಸೂರ್ಯದೇವನಿಗೆ ಮತ್ತು ಕೃಷಿ ಕೆಲಸಕ್ಕೆ ಸಹಕರಿಸುವ ಪ್ರಾಣಿಗಳಿಗೆ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಒದಗಿಸಿ ನಮ್ಮ ಉಳಿಯುವಿಕೆಗೆ ಸಹಕರಿಸುತ್ತಿರುವ ನಿಸರ್ಗಕ್ಕೆ ವಂದನೆಗಳನ್ನು ಅರ್ಪಿಸಲಾಗುವುದು. ನಿಸರ್ಗದೊಂದಿಗೆ ಸೌಹಾರ್ದತೆಯಿಂದ ಬದುಕುವುದು ನಮ್ಮ ಸಂಸ್ಕೃತಿ  ಮತ್ತು ಸಂಪ್ರದಾಯಗಳ ಸಾಮರ್ಥ್ಯವಾಗಿದೆ .
 
ಉತ್ತರದಿಂದ ದಕ್ಷಿಣದವರೆಗೆ, ಪೂರ್ವದಿಂದ ಪಶ್ಚಿಮದವರೆಗೆ ದೇಶಾದ್ಯಂತ ನಾವು ಹಬ್ಬದ ಸಡಗರ-ಸಂಭ್ರಮವನ್ನು ಕಾಣಬಹುದಾಗಿದೆ. 
ಹಬ್ಬಗಳು ಜೀವನೋತ್ಸಾಹದ ಆಚರಣೆಗಳು. 
ಹಬ್ಬಗಳು ಒಟ್ಟಾಗಿ ಬದುಕುವ ಸ್ಫೂರ್ತಿಯನ್ನು ತುಂಬುತ್ತವೆ. 
ಅವು ಐಕ್ಯತೆಯ ಸುಂದರ ಬೆಸುಗೆಯನ್ನು ಬೆಸೆಯುತ್ತವೆ. 
ಈ ಎಲ್ಲ ಹಬ್ಬಗಳನ್ನು ಆಚರಿಸುತ್ತಿರುವ ಭಾರತದಾದ್ಯಂತ ಎಲ್ಲ ಜನರಿಗೂ ನನ್ನ ಶುಭಕಾಮನೆಗಳು. 
ಮಕರ ಸಂಕ್ರಾಂತಿ, ಸೂರ್ಯ ತನ್ನ ಪಥವನ್ನು ಬದಲಿಸಿ, ಮಕರ ರಾಶಿಯನ್ನು ಪ್ರವೇಶಿಸುವ ಬದಲಾವಣೆಯ ಸಂಕೇತ. ಬಹುತೇಕ ಜನರಿಗೆ ಮಕರ ಸಂಕ್ರಾಂತಿ ಎಂದರೆ ಚಳಿಗಾಲದಿಂದ ಬೇಸಿಗೆ ಕಾಲಕ್ಕೆ, ಪ್ರಕಾಶಿಸುವ ದಿನಗಳಿಗೆ ವರ್ಗವಾಗುವ ಕಾಲ. 
ನಾವು ಇಂದು ಆಚರಿಸುತ್ತಿರುವ ಹಬ್ಬ ಸುಗ್ಗಿ ಹಬ್ಬವಾಗಿದೆ. 
ಈ ಹಬ್ಬಗಳು ಎಲ್ಲರಿಗೂ ಶ್ರೇಯಸ್ಸನ್ನು ಉಂಟುಮಾಡಲಿ ಮತ್ತು ನಮ್ಮ ರಾಷ್ಟ್ರಕ್ಕೆ ಆಹಾರ ಒದಗಿಸಲು ಶ್ರಮಿಸುತ್ತಿರುವ ನಮ್ಮ ರೈತರ ಜೀವನದಲ್ಲಿ ಆನಂದ ತರಲಿ.
ಗೆಳೆಯರೆ, 
ನಾನು ಈ ಕಾರ್ಯಕ್ರಮದಲ್ಲಿ ನಿಮ್ಮ ಮುಂದೆ ಇರಬೇಕಾಗಿತ್ತು ಆದರೆ, ಕಾರ್ಯ ಬಾಹುಳ್ಯದಿಂದಾಗಿ ನಾನು ಭೌತಿಕವಾಗಿ ನಿಮ್ಮ ಮುಂದಿಲ್ಲ. 47ನೇ ತೊಗಲಕ್ ಪತ್ರಿಕೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಾನು ಆತ್ಮೀಯ ಗೆಳೆಯ ಶ್ರೀ ಚೊ. ರಾಮಸ್ವಾಮಿ ಅವರನ್ನು ಸ್ಮರಿಸಿ, ನಮನ ಸಲ್ಲಿಸುತ್ತೇನೆ. 
ಚೊ. ರಾಮಸ್ವಾಮಿ ಅವರ ಅಗಲಿಕೆಯಿಂದಾಗಿ ನಾವು ಬೆಲೆಕಟ್ಟಲಾಗದಂತಹ ಗೆಳೆಯನನ್ನು ಕಳೆದು ಕೊಂಡಿದ್ದೇವೆ ಅವರು ತಮ್ಮ ಹಾದಿಯಲ್ಲಿ ಬಂದ ಎಲ್ಲರಿಗೂ ಜ್ಞಾನ ದರ್ಶನ ಮಾಡಿಸಿದರು. 
ನಾನು ಅವರನ್ನು ಸುಮಾರು ನಾಲ್ಕು ದಶಕಗಳಿಂದ ವೈಯಕ್ತಿಕವಾಗಿ ಬಲ್ಲೆ. ಅವರ ಅಗಲಿಕೆ ನನಗೂ ವೈಯಕ್ತಿಕ ನಷ್ಟವಾಗಿದೆ. 
ಅವರದು ಬಹುಮುಖಿ ವ್ಯಕ್ತಿತ್ವ, ಅಂತಹವರನ್ನು ನಾನು ಕಂಡಿಲ್ಲ. ಅವರು ನಟರು, ನಿರ್ದೇಶಕರು, ಪತ್ರಕರ್ತ, ಸಂಪಾದಕ, ಬರಹಗಾರ, ಸಂಭಾಷಣೆಕಾರ, ರಾಜಕಾರಣಿ, ರಾಜಕೀಯ ವಿಶ್ಲೇಷಣೆಕಾರ,ಸಾಂಸ್ಕೃತಿಕ  ವಿಮರ್ಶಕ ಮತ್ತು ಓರ್ವ ಪ್ರತಿಭಾವಂತ ಬರಹಗಾರ ಮತ್ತು ಧಾರ್ಮಿಕ ಹಾಗೂ ಸಾಮಾಜಿಕ ವಿಮರ್ಶಕ. ಓರ್ವ ವಕೀಲ ಹೀಗೆ ಹತ್ತು ಹಲವು ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದರು. 
 
ಅವರು ನಿರ್ವಹಿಸಿದ ಎಲ್ಲ ಪಾತ್ರಗಳಿಗಿಂತ ‘ತುಘಲಕ್ ‘ ವಾರಪತ್ರಿಕೆಯ ಸಂಪಾದಕರಾಗಿದ್ದು ಅವರ ಕಿರೀಟಕ್ಕೆ ಸೇರಿದ ಒಂದು ಮಕುಟಮಣಿ. 47 ವರ್ಷಗಳ ಕಾಲ  ‘ತುಘಲಕ್ ‘       ವಾರಪತ್ರಿಕೆಯ ಮೂಲಕ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ರಕ್ಷಿಸುವುದು ಮತ್ತು ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಪಾಡುವುದರಲ್ಲಿ ಮಹತ್ವದ ಪಾತ್ರವಹಿಸಿದ್ದರು. 
 ತುಘಲಕ್ ‘  ಮತ್ತು ಚೊ. – ಒಬ್ಬರಿಲ್ಲದೆ ಇನ್ನೊಂದನ್ನು ಊಹಿಸಿಕೊಳ್ಳುವುದು ಕಷ್ಟ. ಸುಮಾರು ಐದು ದಶಕಗಳ ಕಾಲ ಅವರು  ಪತ್ರಿಕೆಯ  ನೇತೃತ್ವ ವಹಿಸಿದ್ದರು. ಭಾರತದ ರಾಜಕೀಯ ಇತಿಹಾಸವನ್ನು ಯಾರಾದರು ಬರೆಯಬೇಕಾದರೆ ಅವರು, ಚೊ. ರಾಮಸ್ವಾಮಿ ಮತ್ತು ಅವರ ರಾಜಕೀಯ ವಿಶ್ಲೇಷಣೆಗಳನ್ನು ಉಲ್ಲೇಖಿಸದೆ ಬರೆಯುವುದು ಅಸಾಧ್ಯ. 
ಚೊ. ಅವರನ್ನು ಮೆಚ್ಚಿಕೊಳ್ಳುವುದು ಸುಲಭ. ಆದರೆ ಅವರನ್ನು ಅರ್ಥ ಮಾಡಿಕೊಳ್ಳುವುದು ಸುಲಭದ ಕೆಲಸವಲ್ಲ. ಅವರನ್ನು ಯಾರಾದರು ಅರ್ಥ ಮಾಡಿಕೊಳ್ಳಬೇಕೆಂದರೆ ಮೊದಲು ಅವರ ಧೈರ್ಯ, ಬದ್ಧತೆ ಅವರ ರಾಷ್ಟ್ರೀಯತೆಯ ಭಾವನೆಯನ್ನು ಅರ್ಥೈಸಿಕೊಳ್ಳಬೇಕು. ಅವರು ಪ್ರದೇಶ, ಪ್ರಾಂತೀಯ ಮತ್ತು ಭಾಷೆ ಸೇರಿದಂತೆ ಎಲ್ಲ ವಿಭಾಗಗಳನ್ನು ಮೀರಿದ ಭಾವನೆ ಹೊಂದಿದ್ದರು. 
 
ಅವರ ಮಹತ್ವದ ಸಾಧನೆ ಎಂದರೆ  ‘ತುಘಲಕ್ ‘  ಅನ್ನು       ಎಲ್ಲ ವಿಭಜಕ ಶಕ್ತಿಗಳ ವಿರುದ್ಧ ಅಸ್ತ್ರವನ್ನಾಗಿ ಬಳಸಿದ್ದು, ಅವರು ಶುದ್ಧ ಹಾಗೂ ಭ್ರಷ್ಟಾಚಾರ ರಹಿತ ರಾಜಕೀಯ ವ್ಯವಸ್ಥೆಗಾಗಿ ಹೋರಾಡಿದ್ದರು. ಅವರು ಈ ಹೋರಾಟದಲ್ಲಿ ಯಾರನ್ನೂ ಬಿಡಲಿಲ್ಲ. ಅವರು ದಶಕಗಳ ಕಾಲ ತಮ್ಮ ಜೊತೆ ನಟಿಸಿದ್ದ ಜನರನ್ನು ವಿಮರ್ಶಿಸಿದರು. ಅವರು ಯಾರನ್ನೂ ಬಿಡಲಿಲ್ಲ, ತನ್ನ ಮಾರ್ಗದರ್ಶಕರು ಎಂದು ತಿಳಿದಿದ್ದವರನ್ನೂ ಸಹ ಬಿಡಲಿಲ್ಲ. ಅವರು ವ್ಯಕ್ತಿಗಳನ್ನು ನೋಡುತ್ತಿರಲಿಲ್ಲ, ವಿಷಯಗಳನ್ನಷ್ಟೆ ನೋಡುತ್ತಿದ್ದರು.
 
ರಾಷ್ಟ್ರ ಎಂಬುದು ಅವರ ಮುಖ್ಯ ಸಂದೇಶವಾಗಿತ್ತು. ಅದನ್ನು ಅವರು ತಮ್ಮ ಬರಹಗಳಲ್ಲಿ, ಚಿತ್ರಗಳಲ್ಲಿ, ನಾಟಕಗಳಲ್ಲಿ ಮತ್ತು ನಿರ್ದೇಶಿಸಿದ ಧಾರಾವಾಹಿಗಳಲ್ಲಿ ಹಾಗು ಅವರು ಚಿತ್ರಕಥೆ ಬರೆದ ಸಿನಿಮಾಗಳಲ್ಲಿ ಬಿಂಬಿಸಿದ್ದರು. 
ಅವರ ಅಪಹಾಸ್ಯ ಮತ್ತು ವಿಡಂಬನೆ ಅವರನ್ನು ಪ್ರೀತಿಸುವವರಿಗಷ್ಟೇ ಅಲ್ಲ, ಅವರನ್ನು ಟೀಕಿಸುವವರಿಗೂ ಇಷ್ಟವಾಗುತ್ತಿತ್ತು. ಅಂತಹ ಸದ್ಗುಣ ಬೆಳೆಸಿಕೊಳ್ಳುವುದು ಕಷ್ಟ. ಅದು ಅವರಿಗೆ ದೇವರಿಂದ ಸಿಕ್ಕ ದೊಡ್ಡ ಉಡುಗೊರೆ. ಅದನ್ನು ಅವರು ಸಾರ್ವಜನಿಕ ಹಿತಾಸಕ್ತಿಗಾಗಿ ಬಳಸಿಕೊಂಡರು. ತಮ್ಮ ಆಲೋಚನೆಗಳನ್ನು ಒಂದು ದೊಡ್ಡ ಪುಸ್ತಕ ಅಥವಾ ಪುಸ್ತಕಗಳ ಸಂಪುಟಗಳಲ್ಲಿ ಹೇಳಲಾಗದ್ದನ್ನುಒಂದು ಕಾರ್ಟೂನ್(ವ್ಯಂಗ್ಯಚಿತ್ರ)ನಲ್ಲಿ ಹೇಳುವ ಕೊಡುಗೆ ನೀಡಿದ್ದೇ ಅವರು. 
 
ಚೊ. ಅವರ ಕಾರ್ಟೂನ್ ಇದನ್ನು ನೆನಪಿಸುತ್ತದೆ. ಜನರು   ನನ್ನನ್ನು ಗುರಿಯಾಗಿಟ್ಟುಕೊಂಡಿರುವುದು ಮತ್ತು ಇನ್ನೊಂದೆಡೆ ಸಾಮಾನ್ಯ ಜನರು ನನ್ನ ಮುಂದೆ ನಿಂತಿರುವುದು. ಚೊ. ಅವರು ಕೇಳುತ್ತಾರೆ ಯಾರು ನಿಜವಾದ ಗುರಿ ? ನಾನಾ ಅಥವಾ ಸಾಮಾನ್ಯ ಜನರ ? ಇಂದಿನ ಸ್ಥಿತಿಗತಿಗೆ ಅಥವಾ ಪ್ರಸಕ್ತ ಸಂದರ್ಭಕ್ಕೆ ಈ ಕಾರ್ಟೂನ್ ಎಷ್ಟೊಂದು ಸೂಕ್ತವಾಗಿದೆಯಲ್ಲವೇ ! 
ಈ ಸಂದರ್ಭದಲ್ಲಿ ನನಗೆ ಚೊ. ಅವರಿಗೆ ಸಂಬಂಧಿಸಿದ ಒಂದು ಘಟನೆ ನೆನಪಾಗುತ್ತದೆ. ಒಮ್ಮೆ ಚೊ. ಅವರ ವಿರುದ್ಧ ಕೆರಳಿದ್ದವರು, ಅವರ ಮೇಲೆ ಮೊಟ್ಟೆಗಳನ್ನು ಎಸೆಯಲು ಆರಂಭಿಸಿದರು. ಆಗ ಚೊ. “ಏಕೆ ನನ್ನ ಮೇಲೆ ಹಸಿ ಮೊಟ್ಟೆಗಳನ್ನು ಎಸೆಯುತ್ತೀರಾ, ನನ್ನನ್ನೇನು ಆಮ್ಲೆಟ್ ಮಾಡಲು ಹೊರಟಿದ್ದೀರ” ಎಂದಿದ್ದರು. ಮೊಟ್ಟೆ ಎಸೆಯುತ್ತಿದ್ದವರು ನಗಲಾರಂಭಿಸಿದರು. ಈ ರೀತಿ ಅವರು ಸಂದರ್ಭಗಳನ್ನು ತಮ್ಮ ಪರ ಮಾಡಿಕೊಳ್ಳುವ ಅಸಮಾನ್ಯ ಸಾಮರ್ಥ್ಯವನ್ನು ಹೊಂದಿದ್ದರು. 
ತೊಘಲಕ್  ಎಲ್ಲರಿಗೂ ಒಂದು ವೇದಿಕೆಯಾಗಿತ್ತು. ಚೊ. ಅವರು ತದ್ವಿರುದ್ಧ ಅಭಿಪ್ರಾಯಗಳನ್ನೂ ಸಹ ಪ್ರಕಟಿಸುತ್ತಿದ್ದರು. ಪ್ರತಿಕೂಲ ನಿಲುವುಗಳನ್ನು ಹಾಗೂ ನಿಂದನಕಾರಿ ಬರಹಗಳನ್ನು ಅವರು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದರು. ಇದರಿಂದಾಗಿ ತೊಘಲಕ್ ನಿಂದ  ಯಾರನ್ನೂ ಹೊರಗಿಟ್ಟಿರಲಿಲ್ಲ. ಚೊ. ಅವರು  ತೊಘಲಕ್ ನಲ್ಲಿ      ತಮ್ಮನ್ನು ಟೀಕಿಸುವವರ ಅಭಿಪ್ರಾಯಗಳನ್ನೂ ಕೂಡ ಅಷ್ಟೇ ಪ್ರಮುಖವಾಗಿ ಪ್ರಕಟಿಸುತ್ತಿದ್ದರು. ಇದು ಮಾಧ್ಯಮ ಮತ್ತು ಸಾರ್ವಜನಿಕ ಜೀವನದಲ್ಲಿನ  ನಿಜವಾದ ಪ್ರಜಾಪ್ರಭುತ್ವದ ಸ್ಫೂರ್ತಿ.
 
ಅವರ ವಿಚಾರ ಮತ್ತು ಕೊಡುಗೆ ಕೇವಲ ತಮಿಳು ಭಾಷೆಗೆ ಮತ್ತು ಜನಾಂಗಕ್ಕೆ ಸೀಮಿತವಾದುದಲ್ಲ. ಅವರು, ಹಲವು ತಲೆಮಾರುಗಳ ಕಾಲ ಪತ್ರ್ರಕರ್ತರಾಗಲಿಚ್ಚಿಸುವವರನ್ನು ಮತ್ತು ಭಾರತದ ಹಲವು ಸಮಾಜಗಳಲ್ಲಿನ ರಾಜಕಾರಿಣಿಗಳಿಗೆ ಸ್ಫೂರ್ತಿಯಾಗಿದ್ದರು. 
ನಮಗೆಲ್ಲ ತಿಳಿದಿರುವ ಅಂಶವೆಂದರೆ,  ತುಘಲಕ್   ವಾರಪತ್ರಿಕೆ ಕೇವಲ ಒಂದು ರಾಜಕೀಯ ವಿಶ್ಲೇಷಣಾತ್ಮಕ ಪತ್ರಿಕೆಯಾಗಿರಲಿಲ್ಲ. ಅದು ಸಹಸ್ರಾರು ತಮಿಳು ಜನರ ಕಣ್ಣು ಮತ್ತು ಕಿವಿಗಳಾಗಿದ್ದವು. ಚೊ. ಅವರು ತುಘಲಕ್   ಮೂಲಕ ಜನಸಮೂಹ ಮತ್ತು ಆಡಳಿತದ ನಡುವಿನ ಸಂಪರ್ಕ ಸೇತುವಾಗಿದ್ದರು. 
ಚೊ. ಅವರ ಆಶಯದಂತೆ ವಾಸ್ತುನಿಷ್ಟ   ಪತ್ರಿಕೋದ್ಯಮದ ಯಾತ್ರೆಯನ್ನು     ತುಘಲಕ್  ಮುಂದುವರಿಸಿಕೊಂಡು ಹೋಗುತ್ತಿರುವುದು ಹರ್ಷ ತಂದಿದೆ.  ತುಘಲಕ್   ಗತವೈಭವವನ್ನು ಮೈಗೂಡಿಸಿಕೊಂಡಿರುವವರ ಮೇಲೆ ಹೆಚ್ಚಿನ ಹೊಣೆಗಾರಿಕೆ ಇದೆ. ಚೊ. ಅವರ ದೂರದೃಷ್ಟಿ ಮತ್ತು ಬದ್ಧತೆಯ ಮಾರ್ಗದರ್ಶನ ಪಡೆದು ಮುನ್ನಡೆಯುವುದು ದೊಡ್ಡ ಸವಾಲು. ಅವರ ದೂರದೃಷ್ಟಿ, ತಮಿಳುನಾಡಿನ ಜನತೆಗೆ ದೊಡ್ಡ ಸೇವೆಯನ್ನು ಒದಗಿಸಿದೆ. 
ನಾನು ಶ್ರೀ ಗುರುಮೂರ್ತಿ ಮತ್ತು ಅವರ ತಂಡಕ್ಕೆ ಈ ಕಾರ್ಯದಲ್ಲಿ ಯಶಸ್ಸು ಸಿಗಲಿ  ಎಂದು ಆಶಿಸುತ್ತೇನೆ. ಗುರುಮೂರ್ತಿ ಅವರು ನನಗೆ ಚೆನ್ನಾಗಿ ಗೊತ್ತು, ಹಾಗಾಗಿ ಅವರು ಇದರಲ್ಲಿ ಯಶಸ್ವಿಯಾಗುತ್ತಾರೆಂಬ ನಂಬಿಕೆ ನನಗಿದೆ.
ಚೊ. ಅವರು ಅಪಹಾಸ್ಯ, ವಿಡಂಬನೆ ಮತ್ತು ಅಣಕ ಕಲೆಯನ್ನು ಮೈಗೂಡಿಸಿಕೊಂಡಿದ್ದರು.  
ನಮಗೆ ವಿಡಂಬನೆ ಮತ್ತು ಹಾಸ್ಯದ ಅಗತ್ಯ ಹೆಚ್ಚಿದೆ ಅನಿಸುತ್ತದೆ. ಹಾಸ್ಯ ನಮ್ಮ ಜೀವನಕ್ಕೆ ಸಂತೋಷ ತರುತ್ತದೆ. ಹಾಸ್ಯ ಹಲವು ರೋಗಗಳಿಗೆ ಚಿಕಿತ್ಸಕ.
ನಗುವಿನ ಶಕ್ತಿ ಅಥವಾ ನಗುವಿಗಿರುವ ಶಕ್ತಿ,  ಇನ್ನೊಬ್ಬರನ್ನು ನಿಂದಿಸುವ ಅಥವಾ ಅಸ್ತ್ರಗಳಿಗಿಂತ ಹೆಚ್ಚಿನ ಶಕ್ತಿಯನ್ನು ಹೊಂದಿದೆ. ಹಾಸ್ಯ, ಸೇತುವೆಗಳನ್ನು ಬೆಸೆಯುತ್ತದೆಯೇ ಹೊರತು, ಅವುಗಳನ್ನು ಮುರಿಯುವುದಿಲ್ಲ. 
ಇದು ಇಂದು ನಮಗೆ ಅಗತ್ಯವಿರುವಂತಹದು, ಜನರ ಜನರ ನಡುವೆ ಸೇತುವೆಯನ್ನು ಬೆಸೆಯುವುದು, ಸಮುದಾಯಗಳ ನಡುವೆ ಮತ್ತು ಸಮಾಜಗಳ ನಡುವೆ ಭಾಂಧವ್ಯ  ಗಳನ್ನೂ  ನಿರ್ಮಿಸಬೇಕಾದ ಅಗತ್ಯವಿದೆ. 
ಹಾಸ್ಯ ಮನುಷ್ಯರಲ್ಲಿನ ಕ್ರಿಯಾಶೀಲತೆಯನ್ನು ಹೊರಹಾಕುತ್ತದೆ. ನಾವು ಇಂದು ಎಂತಹ ಕಾಲದಲ್ಲಿದ್ದೇವೆಂದರೆ, ಒಂದು ಭಾಷಣ ಅಥವಾ ಒಂದು ಕಾರ್ಯಕ್ರಮ ಬಹುವಿಧದ ನೆನಪುಗಳನ್ನು ಸೃಷ್ಟಿಸಿ, ಅವುಗಳನ್ನು ಮುನ್ನಡೆಸಿಕೊಂಡು ಹೋಗುವಂತೆ ಮಾಡುತ್ತದೆ. 
 
ಗೆಳೆಯರೆ,
ನಾನು ಈ ಮೊದಲು ಚೆನ್ನೈನಲ್ಲಿ ನಡೆದ ತುಘಲಕ್  ನ  ಓದುಗರ ವಾರ್ಷಿಕ ಸಭೆಯಲ್ಲಿ ಭಾಗವಹಿಸಿದ್ದೆ. 
ನೀವು ಚೊ. ಅವರ ಧ್ವನಿಯಲ್ಲಿರುವ ಶ್ರೀಮದ್ ಭಗವದ್ಗೀತೆಯನ್ನು ಕೇಳುವ ಸಂಪ್ರದಾಯವನ್ನು ಆಚರಿಸಿಕೊಂಡು ಬರುತ್ತಿದ್ದೀರಿ, . ಈ ಶ್ಲೋಕದ ಮೂಲಕ ಚೊ. ಅವರನ್ನು ಗೌರವಿಸೋಣ:
 
ಈ ಸಂದರ್ಭದಲ್ಲಿ ಚೊ. ಅವರು ಕೈಯಾಡಿಸಿದ ಎಲ್ಲಾ ಕ್ಷೇತ್ರಗಳಲ್ಲಿ ನೀಡಿರುವ ಕೊಡುಗೆಗೆ ಎಲ್ಲರೂ ಸೇರಿ ಅವರನ್ನು ಅಭಿನಂದಿಸೋಣ.
ಎಲ್ಲದಕ್ಕಿಂತ ಮುಖ್ಯವಾಗಿ ಚೊ. ರಾಮಸ್ವಾಮಿ ಅವರಿಗೆ ಅವರೇ ಸಾಟಿ. ಅವರಿಗೆ ಧನ್ಯವಾದಗಳನ್ನು ಸಮರ್ಪಿಸೋಣ. 
ನಾವು ವಾಸಿಸಲು ಹೊಸ ಮನೆಯನ್ನು ಕಟ್ಟುತ್ತೇವೆ. ಆದರೆ ಅದು ಕಾಲಾನು ಕಾಲದಲ್ಲಿ ಹಳೆಯದಾಗುತ್ತದೆ, ಹಾಗೆಯೇ ನಮ್ಮ ಶರೀರವು ಬರುಬರುತ್ತಾ ಮುಪ್ಪು ಆವರಿಸಿ ಅನಂತದಲ್ಲಿ ಲೀನವಾಗುತ್ತದೆ. 
ಹಳೆಯ ಬಟ್ಟೆಗಳನ್ನು ಕಳಚಿ ಹೊಸ ಬಟ್ಟೆಗಳನ್ನು ಧರಿಸುತ್ತಾರೆಯೋ ಹಾಗೆ ಶರೀರವು ಶಿಥಿಲವಾದಾಗ ಆತ್ಮವು ಬೇರೊಂದು ದೇಹವನ್ನು ಪ್ರವೇಶಿಸುತ್ತದೆ.