ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಇಂದು ಅಂಟಾರ್ಕ್ಟಿಕಾದ ಮೌಂಟ್ ವಿನ್ಸನ್ ಪರ್ವತಾರೋಹಣ ಯಾತ್ರೆಯ ಆರಂಭದ ಸೂಚಕವಾಗಿ ಅರುಣಿಮಾ ಸಿನ್ಹಾರವರಿಗೆ ತ್ರಿವರ್ಣ ಧ್ವಜವನ್ನು ಹಸ್ತಾಂತರಿಸಿದರು.
ಮೌಂಟ್ ಎವರೆಸ್ಟ್ ಪರ್ವತವನ್ನು ಏರಿದ ಪ್ರಥಮ ದಿವ್ಯಾಂಗ ಮಹಿಳೆಯಾದ ಕುಮಾರಿ ಅರುಣಿಮಾ ಸಿನ್ಹಾರವರು ಪ್ರಧಾನಮಂತ್ರಿಯವರನ್ನು ದೆಹಲಿಯಲ್ಲಿ ಭೇಟಿ ಮಾಡಿದರು ಮತ್ತು ಅವರು ಮುಂದೆ ಕೈಗೊಳ್ಳಲಿರುವ ಯಾತ್ರೆಯ ಬಗ್ಗೆ ವಿವರಿಸಿದರು. ಶ್ರೀ ಮೋದಿಯವರು ಅರುಣಿಮಾರವರ ಅದ್ಭುತ ಸಾಧನೆಗಳನ್ನು ಶ್ಲಾಘಿಸಿದರು ಮತ್ತು ಅವರ ಹೊಸ ಸಾಹಸಕ್ಕಾಗಿ ಶುಭಾಶಯಗಳನ್ನು ಕೋರಿದರು.
ಕುಮಾರಿ ಅರುಣಿಮಾ ಸಿನ್ಹಾರವರು ಈ ಮೊದಲು ಐದು ಖಂಡಗಳಲ್ಲಿರುವ ಅತ್ಯಂತ ಎತ್ತರದ ಪರ್ವತ ಶಿಖರಗಳನ್ನು ಏರಿದ್ದಾರೆ ಹಾಗೂ ಈ ಸಾಧನೆಯನ್ನು ಮಾಡಿದ ಪ್ರಥಮ ದಿವ್ಯಾಂಗ ಮಹಿಳೆಯಾಗಿದ್ದಾರೆ.
It was a delight to interact with @sinha_arunima.
— Narendra Modi (@narendramodi) December 12, 2018
Handed over the Tricolour and wished her the very best as she embarks on an expedition to Mount Vinson, Antarctica.
India is proud of Arunima’s accomplishments and her fortitude inspires us all. pic.twitter.com/sj39QvHvH7