Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿಯವರು ಕೇರಳದ ಮುಖ್ಯಮಂತ್ರಿ ಜೊತೆ ಅಲ್ಲಿನ ಪ್ರವಾಹ ಸ್ಥಿತಿಗತಿ ಕುರಿತು ಮಾತನಾಡಿದರು, ಸಾಧ್ಯ ಎಲ್ಲಾ ನೆರವಿನ ಭರವಸೆ ನೀಡಿದರು


ರಾಜ್ಯದ ನೆರೆಪ್ರವಾಹ ಸ್ಥಿತಿಗತಿಗಳ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇರಳ ಮುಖ್ಯಮಂತ್ರಿ ಶ್ರೀ ಪಿಣರಾಯಿ ವಿಜಯನ್ ಅವರೊಂದಿಗೆ ಮಾತನಾಡಿದರು.

“ಕೇರಳ ಮುಖ್ಯಮಂತ್ರಿ ಶ್ರೀ ಪಿಣರಾಯಿ ವಿಜಯನ್ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ನೆರೆಪ್ರವಾಹದಿಂದಾಗಿ ರಾಜ್ಯದ ವಿವಿದಡೆ ಉಂಟಾಗಿರುವ ಪರಿಸ್ಥಿತಿಗಳ ಬಗ್ಗೆ ಚರ್ಚಿ ನಡೆಸಲಾಗಿದೆ. ಹಾನಿಗೊಳಗಾದವರಿಗೆ ಸಾಧ್ಯವಾದ ಎಲ್ಲ ಸಹಾಯಗಳ ಭರವಸೆ ನೀಡಿದ್ದೇವೆ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಕೇರಳದ ಜನತೆಯೊಂದಿಗೆ ಅವರ ಭುಜಕ್ಕೆ ಭುಜ ಸಮನಾಗಿ ನಾವು ಜೊತೆಗಿರುತ್ತೇವೆ” ಎಂದು ಪ್ರಧಾನಮಂತ್ರಿ ಹೇಳಿದರು

*****