Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಅವರಿಂದ ಕ್ರಿಜಿಗ್ ರಿಪಬ್ಲಿಕ್ ಅಧ್ಯಕ್ಷರ ಭೇಟಿ


ಕ್ರಿಜಿಗ್ ರಿಪಬ್ಲಿಕ್ ದೇಶದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಸೊರೋನ್ ಬೇ ಶರಿಪೋವಿಚ್ ಜೀನ್ ಬೆಕೋವ್ ಅವರು 2019 ರ ಮೇ 30 ರಂದು ಹೊಸದಿಲ್ಲಿಯಲ್ಲಿ ನಡೆದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಶುಭ ಹಾರೈಸಿದರು.

ಕ್ರಿಜಿಗಿಸ್ತಾನವು ಶಾಂಘೈ ಸಹಕಾರ ಸಂಘಟನೆಯ ಅಧ್ಯಕ್ಷ ರಾಷ್ಟ್ರವಾಗಿದೆ ಮತ್ತು ಕೇಂದ್ರೀಯ ಏಶ್ಯಾದಲ್ಲಿ ಭಾರತದ ಪ್ರಮುಖ ಭಾಗೀದಾರ ರಾಷ್ಟ್ರವಾಗಿದೆ. ಅಧ್ಯಕ್ಷ ಜೀನ್ ಬೆಕೋವ್ ಅವರು ಪ್ರಧಾನ ಮಂತ್ರಿ ಅವರನ್ನು ಹಾರ್ದಿಕವಾಗಿ ಅಭಿನಂದಿಸಿದರು ಮತ್ತು ಎಸ್.ಸಿ.ಒ. ಶೃಂಗಕ್ಕಾಗಿ ಹಾಗು ದ್ವಿಪಕ್ಷೀಯ ಭೇಟಿಗಾಗಿ 2019 ರ ಜೂನ್ 13-15 ರ ಅವಧಿಯಲ್ಲಿ ಕ್ರಿಜಿಗಿಸ್ತಾನಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದರು.

ಭಾರತ ಮತ್ತು ಕ್ರಿಜಿಗಿಸ್ತಾನಗಳು ಸೌಹಾರ್ದಯುತ ಸ್ನೇಹ ಸಂಬಂಧ ಹೊಂದಿರುವುದನ್ನು ಸ್ಮರಿಸಿದ ಪ್ರಧಾನಮಂತ್ರಿ ಅವರು ಕಳೆದ ವರ್ಷಗಳಲ್ಲಿ ದ್ವಿಪಕ್ಷೀಯ ಸಹಕಾರ ಬಲವರ್ಧನೆ ನಿಟ್ಟಿನಲ್ಲಿ ಆಗಿರುವ ಪ್ರಗತಿಗೆ ತೃಪ್ತಿ ವ್ಯಕ್ತಪಡಿಸಿದರು.ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಹಾಜರಾದುದಕ್ಕೆ ಅಧ್ಯಕ್ಷ ಜೀನ್ ಬೆಕೋವ್ ಅವರಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನ ಮಂತ್ರಿ ಅವರು ಕ್ರಿಜಿಗಿಸ್ತಾನಕ್ಕೆ ಭೇಟಿ ನೀಡಲು ನೀಡಿರುವ ಆಹ್ವಾನಕ್ಕೂ ಕೃತಜ್ಞತೆ ವ್ಯಕ್ತಪಡಿಸಿದರು ಮತ್ತು ಆ ಭೇಟಿಗಾಗಿ ತಾವು ಕಾತರದಿಂದಿರುವುದಾಗಿ ಹೇಳಿದರು.