ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ಇಸ್ಮಾಯಿಲಿ ಸಮುದಾಯದ 50ನೇ ಇಮಾಮ್ ಆಗಿರುವ ಯುವರಾಜ 5ನೇ ರಹೀಮ್ ಆಗಾ ಖಾನ್ ಅವರನ್ನು ಭೇಟಿಯಾದರು. ಶ್ರೀ ಮೋದಿ ಅವರು ಈ ಭೇಟಿಯ ಸಂದರ್ಭದಲ್ಲಿ, ಮಾನ್ಯ ಯುವರಾಜ 5ನೇ ರಹೀಮ್ ಆಗಾ ಖಾನ್ ಅವರ ತಂದೆ ದಿವಂಗತ 4ನೇ ಆಗಾ ಖಾನ್ ಅವರನ್ನು ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಅವರು ನೀಡಿದ ಚಿರಸ್ಮರಣೀಯ ಕೊಡುಗೆಗಳನ್ನು ಒಲುಮೆಯಿಂದ ನೆನಪು ಮಾಡಿಕೊಂಡರು.
ಆರೋಗ್ಯ ರಕ್ಷಣೆ, ಕೃಷಿ, ಗ್ರಾಮೀಣಾಭಿವೃದ್ಧಿ, ಯುವ ಸಬಲೀಕರಣ ಮತ್ತು ಮಹಿಳಾ ಸಬಲೀಕರಣದಂತಹ ಪ್ರಮುಖ ಕ್ಷೇತ್ರಗಳಲ್ಲಿ ‘ಆಗಾ ಖಾನ್ ಅಭಿವೃದ್ಧಿ ಜಾಲ’ದೊಂದಿಗೆ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಬಗ್ಗೆಯೂ ಪ್ರಧಾನಮಂತ್ರಿ ಚರ್ಚಿಸಿದರು.
ಶ್ರೀ ಮೋದಿ ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:
“ಮಾನ್ಯ ಯುವರಾಜ 5ನೇ ರಹೀಮ್ ಆಗಾ ಖಾನ್ ಅವರನ್ನು ಭೇಟಿಯಾಗಿ ಸಂತೋಷವಾಗಿದೆ. ಅವರ ತಂದೆ, ದಿವಂಗತ 4ನೇ ಆಗಾ ಖಾನ್ ಅವರನ್ನು ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಅವರು ನೀಡಿದ ಚಿರಸ್ಥಾಯಿ ಕೊಡುಗೆಗಳನ್ನು ಈ ಸಂದರ್ಭದಲ್ಲಿ ನಲ್ಮೆಯಿಂದ ನೆನಪು ಮಾಡಿಕೊಂಡೆ.
ಆರೋಗ್ಯ ರಕ್ಷಣೆ, ಕೃಷಿ, ಗ್ರಾಮೀಣಾಭಿವೃದ್ಧಿ, ಯುವಜನ ಮತ್ತು ಮಹಿಳಾ ಸಬಲೀಕರಣ ಕ್ಷೇತ್ರಗಳಲ್ಲಿ ‘ಆಗಾ ಖಾನ್ ಅಭಿವೃದ್ಧಿ ಜಾಲ’ದೊಂದಿಗೆ ನಮ್ಮ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಕುರಿತು ಚರ್ಚಿಸಿದೆ.
@akdn”
*****
Happy to meet His Highness Prince Rahim Aga Khan V. Fondly recalled his father, the late Aga Khan IV and his enduring contributions to development efforts.
— Narendra Modi (@narendramodi) September 10, 2026
Discussed ways to further strengthen our partnership with the Aga Khan Development Network in healthcare, agriculture,… pic.twitter.com/momsfAjgOi