Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಅವರಿಂದ ಪೈಕಾ ಬಂಡಾಯದ ಸ್ಮರಣಾರ್ಥ ಅಂಚೆ ಚೀಟಿ ಮತ್ತು ನಾಣ್ಯ ಬಿಡುಗಡೆ; ಭುವನೇಶ್ವರ ಐ.ಐ.ಟಿ. ಕ್ಯಾಂಪಸ್ ದೇಶಕ್ಕೆ ಅರ್ಪಣೆ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2018 ರ ಡಿಸೆಂಬರ್ 24 ರಂದು ಒಡಿಶಾಕ್ಕೆ ಭೇಟಿ ನೀಡಿದರು,

ಭುವನೇಶ್ವರದ ಐ.ಐ.ಟಿ. ಕ್ಯಾಂಪಸಿನಲ್ಲಿ ಪ್ರಧಾನಮಂತ್ರಿ ಅವರು ಪೈಕಾ ಬಂಡಾಯದ ಸ್ಮರಣಾರ್ಥ ಆಂಚೆ ಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಿದರು. ಒಡಿಶಾದಲ್ಲಿ 1817ರಲ್ಲಿ ಬ್ರಿಟಿಷರ ಆಡಳಿತದ ವಿರುದ್ಧ ಪೈಕಾ ಬಂಡಾಯ (ಪೈಕಾ ಬಿದ್ರೋಹ) ನಡೆದಿತ್ತು.

ಭುವನೇಶ್ವರದ ಉತ್ಕಲ್ ವಿಶ್ವವಿದ್ಯಾಲಯದಲ್ಲಿ ಪೈಕಾ ಬಂಡಾಯದ ಅಧ್ಯಯನ ಪೀಠ ಸ್ಥಾಪನೆಯನ್ನು ಘೋಷಿಸಲಾಯಿತು.

ಪ್ರಧಾನಮಂತ್ರಿ ಅವರು ಲಲಿತಗಿರಿ ವಸ್ತು ಸಂಗ್ರಹಾಲಯವನ್ನು ಉದ್ಘಾಟಿಸಿದರು. ಒಡಿಶಾದಲ್ಲಿಯ ಲಲಿತಗಿರಿ ಬುದ್ದ ದೇವನ ವಿಗ್ರಹ, ವಿಹಾರ, ಮತ್ತು ಸ್ಥೂಪಗಳನ್ನು ಹೊಂದಿರುವ ಪ್ರಾಚ್ಯ ವಸ್ತು ಮಹತ್ವದ ಪ್ರಖ್ಯಾತ ಭೌದ್ದ ಕೇಂದ್ರವಾಗಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭುವನೇಶ್ವರದ ಐ.ಐ.ಟಿ.ಕ್ಯಾಂಪಸ್ಸನ್ನು ದೇಶಕ್ಕೆ ಸಮರ್ಪಿಸಿದರು. ಅವರು ಭುವನೇಶ್ವರದಲ್ಲಿ ಹೊಸ ಇ.ಎಸ್.ಐ.ಸಿ. ಆಸ್ಪತ್ರೆಯನ್ನೂ ಉದ್ಘಾಟಿಸಿದರು. ಅವರು ಕೊಳವೆ ಮಾರ್ಗ ಮತ್ತು ರಸ್ತೆ ಯೋಜನೆಗಳಿಗೆ ಶಿಲಾನ್ಯಾಸ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು ಇಂದು ಉದ್ಘಾಟಿಸಿದ ಅಥವಾ ಶಿಲಾನ್ಯಾಸ ನೆರವೇರಿಸಿದ ಯೋಜನೆಗಳ ಒಟ್ಟು ಮೌಲ್ಯ 14,000 ಕೋ.ರೂ.ಗಳು. ಎಂದರು.ಕೇಂದ್ರ ಸರಕಾರವು ಪೂರ್ವ ಭಾರತವನ್ನು ಆಗ್ನೇಯ ಏಶ್ಯಾದ ಮಹಾದ್ವಾರವನ್ನಾಗಿ ಅಭಿವೃದ್ಧಿಪಡಿಸುವ ಇರಾದೆ ಹೊಂದಿದೆ ಎಂದರು.

ಭುವನೇಶ್ವರ ಐ.ಐ.ಟಿ.ಯು ಒಡಿಶಾದ ಕೈಗಾರಿಕಾ ಬೆಳವಣಿಗೆಗೆ ಪ್ರೇರಣಾದಾಯಕವಾಗಲಿದೆ ಮತ್ತು ಜನತೆಯ ಜೀವನ ಸುಧಾರಿಸುವ ತಂತ್ರಜ್ಞಾನದ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲಿದೆ ಎಂದೂ ಪ್ರಧಾನಮಂತ್ರಿ ಅವರು ಹೇಳಿದರು.

ಪ್ರಧಾನಮಂತ್ರಿ ಅವರು ರಾಜ್ಯದಲ್ಲಿ ಆರೋಗ್ಯ ರಕ್ಷಣೆ, ಮೂಲ ಸೌಕರ್ಯ , ರಸ್ತೆ ಜಾಲ, ತೈಲ ಮತ್ತು ಅನಿಲ ಕೊಳವೆ ಮಾರ್ಗ ಮೂಲಸೌಕರ್ಯವನ್ನು ವಿಸ್ತರಿಸುವುದಕ್ಕೆ ಸಂಬಂಧಿಸಿದ ಯೋಜನೆಗಳನ್ನು ಪ್ರಸ್ತಾಪಿಸಿದರು.

ಒಡಿಶಾದ ಸರ್ವತೋಮುಖ ಅಭಿವೃದ್ಧಿಗೆ ಕೇಂದ್ರ ಸರಕಾರದ ಬದ್ದತೆಯನ್ನು ಪ್ರಧಾನಮಂತ್ರಿ ಅವರು ಪುನರುಚ್ಚರಿಸಿದರು.