ಪಿಎಂಇಂಡಿಯಾ
ಸ್ಲೋವಾಕ್ ಗಣರಾಜ್ಯದ ಅಧ್ಯಕ್ಷರಾದ ಮಾನ್ಯ ಶ್ರೀ ಪೀಟರ್ ಪೆಲ್ಲೆಗ್ರಿನಿ ಅವರು ವಿಶೇಷ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಸ್ಲೋವಾಕಿಯಾದ ಅತ್ಯುನ್ನತ ಗೌರವವಾದ “ದಿ ಆರ್ಡರ್ ಆಫ್ ದಿ ವೈಟ್ ಡಬಲ್ ಕ್ರಾಸ್, ಫಸ್ಟ್ ಕ್ಲಾಸ್” ಅನ್ನು ಪ್ರದಾನ ಮಾಡಿದರು.
ಈ ವಿಶಿಷ್ಟ ಗೌರವಕ್ಕಾಗಿ ಸ್ಲೋವಾಕಿಯಾದ ಅಧ್ಯಕ್ಷರು, ಸರ್ಕಾರ ಮತ್ತು ಜನರಿಗೆ ಪ್ರಧಾನಮಂತ್ರಿ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ. ಪ್ರಶಸ್ತಿಯನ್ನು ಸ್ವೀಕರಿಸುತ್ತಾ ಅವರು, ಈ ಗೌರವವು ಭಾರತದ 1.4 ಶತಕೋಟಿ ಜನರಿಗೆ ಹಾಗೂ ಭಾರತ ಮತ್ತು ಸ್ಲೋವಾಕಿಯಾ ನಡುವಿನ ಶಾಶ್ವತ ಸ್ನೇಹ ಬಂಧಗಳಿಗೆ ಸಂದ ಗೌರವವಾಗಿದೆ ಎಂದು ಹೇಳಿದರು.
ಭಾರತ ಮತ್ತು ಸ್ಲೋವಾಕಿಯಾದ ಜನರನ್ನು ಒಗ್ಗೂಡಿಸುವ ಆತ್ಮೀಯತೆ, ನಂಬಿಕೆ ಮತ್ತು ವಾತ್ಸಲ್ಯಕ್ಕೆ ಈ ಪ್ರಶಸ್ತಿ ಸಾಕ್ಷಿ ಎಂದು ಬಣ್ಣಿಸಿರುವ ಪ್ರಧಾನಮಂತ್ರಿಗಳು, ಎರಡೂ ದೇಶಗಳಲ್ಲಿನ ಭವಿಷ್ಯದ ಪೀಳಿಗೆಗಳ ಜನರು ಈ ವಿಶೇಷ ಸ್ನೇಹವನ್ನು ಪೋಷಿಸಲು ಈ ಗೌರವ ಸ್ಫೂರ್ತಿ ನೀಡಲಿದೆ ಎಂದು ಆಶಿಸಿದರು.
*****
President @PellegriniP_ of Slovakia conferred upon PM @narendramodi The Order of the White Double Cross (1st Class). The PM dedicated the award to the 140 crore people of India. pic.twitter.com/XQSaFqs3KK
— PMO India (@PMOIndia) June 15, 2026
Honoured to receive The Order of the White Double Cross (1st Class) in Bratislava this evening. My gratitude to the people and Government of Slovakia for this honour, which belongs to the 140 crore people of India. I dedicate this award to the enduring friendship between India… pic.twitter.com/FXs96XremQ
— Narendra Modi (@narendramodi) June 15, 2026
Je pre mňa cťou, že som dnes večer v Bratislave prevzal Rad Bieleho dvojkríža (I. triedy). Ďakujem občanom a vláde Slovenskej republiky za toto ocenenie, ktoré patrí všetkým 1,4 miliardy obyvateľov Indie. Toto vyznamenanie venujem trvalému priateľstvu medzi Indiou a Slovenskom.… pic.twitter.com/hotzZ9jhoo
— Narendra Modi (@narendramodi) June 15, 2026