Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರಿಗೆ ಪ್ರಧಾನಿ ಉಡುಗೊರೆ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಭಾರತದಲ್ಲಿನ ಸುದೀರ್ಘ ಯಹೂದಿ ಇತಿಹಾಸದ ಪ್ರಮುಖ ಕಲಾಕೃತಿಗಳೆಂದು ಪರಿಗಣಿಸಲಾದ ಕೇರಳದ 2 ಕುರುಹುಗಳ ಪ್ರತಿಕೃತಿಗಳನ್ನು ಇಸ್ರೇಲ್ ಪ್ರಧಾನಮಂತ್ರಿ ಶ್ರೀ. ಬೆಂಜಮಿನ್ ನೆತನ್ಯಾಹು ಅವರಿಗೆ ಸಮರ್ಪಿಸಿದರು.

ಅವುಸಾಮಾನ್ಯ ಶಕೆಯ 9-10 ನೇ ಶತಮಾನದಲ್ಲಿ ಕೆತ್ತಲಾದ ಎರಡು ಪ್ರತ್ಯೇಕ ತಾಮ್ರ ಫಲಕಗಳ ಜೊತೆಯನ್ನು ಒಳಗೊಂಡಿವೆ.

ತಾಮ್ರದ ಫಲಕಗಳ ಮೊದಲ ಸೆಟ್ ಭಾರತದಲ್ಲಿ ಕೊಚ್ಚಿನಿ ಯಹೂದಿಗಳಿಗೆ ಪ್ರೀತಿಪಾತ್ರವಾದ ಸ್ಮಾರಕವೆನಿಸಿದೆ. ಹಿಂದು ದೊರೆ, (ಭಾಸ್ಕರ ರವಿವರ್ಮಾ ಎಂದು ಗುರುತಿಸಲಾಗುವ) ಚೆರಮಾನ್ ಪೆರುಮಾಳ್ ಅವರು ಯಹೂದಿ ಮುಖಂಡ ಜೋಸೆಫ್ ರಾಬ್ಬಾನ್ ರಿಗೆ ವಂಶಪಾರಂಪರ್ಯವಾಗಿ ರಾಜ ಮರ್ಯಾದೆ ಮತ್ತು ರಾಜಭೋಗ ಅನುಭವಿಸಲು ಅಧಿಕಾರ ನೀಡಿದ ಬಗ್ಗೆ ಉಲ್ಲೇಖವಿರುವ ಇದನ್ನು ನೀಡಿದ್ದೆಂದು ಹೇಳಲಾಗುತ್ತದೆ. ಸಾಂಪ್ರದಾಯಿಕ ಯಹೂದಿ ದಾಖಲೆಯಲ್ಲಿ ಜೋಸೆಫ್ ರಬ್ಬಾನ್ ಅವರು ನಂತರ ಕ್ರಾಂಗನೋರ್ ಅಥವಾ ಅದಕ್ಕೆ ಸಮನೆಂದ ಹೇಳಲಾದ ಶಿಂಗ್ಲಿ ದೊರೆಯಾಗಿ ಪಟ್ಟಾಭಿಷಿಕ್ತರಾದರೆಂದು ತಿಳಿಯುತ್ತದೆ.

ಕೊಚ್ಚಿನ್ ಮತ್ತು ಮಲಬಾರ್ ನ ಇತರ ಪ್ರದೇಶಗಳಿಗೆ ಯಹೂದಿಗಳು ತೆರಳುವ ಮುನ್ನ ಕ್ರಾಂಗನೋರ್ ನಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಸ್ವಾತಂತ್ರ್ಯವನ್ನು ಅನುಭವಿಸಿದ್ದರು. ಸ್ಥಳೀಯ ಯಹೂದಿಗಳು ಒಮ್ಮೆ ಶಿಂಗ್ಲಿ / ಕ್ರಾಂಗನೋರ್ ನಿಂದ ಹಿಡಿ ಮಣ್ಣು ತಂದು ಪ್ರತಿ ಶವಪೆಟ್ಟಿಗೆಯಲ್ಲಿ ಇಡಲಾಗಿದ್ದು ಅದನ್ನು “ಎರಡನೇ ಜೆರುಸಲೆಮ್” ಮತ್ತು ಪವಿತ್ರ ಸ್ಥಳ ಎಂದು ಸ್ಮರಿಸಲಾಗುತ್ತದೆ. ಕೊಚ್ಚಿಯ ಮಟ್ಟನ್ಚೇರಿಯ ಪರದೇಶಿ ಸಿನಗಾಗ್ (ಯಹೂದಿಗಳ ಗುಡಿ) ಸಹಕಾರದಿಂದ ಈ ಪ್ರತಿಕೃತಿಗಳ ಫಲಕವನ್ನು ನಿರ್ಮಿಸಲು ಸಾಧ್ಯವಾಗಿದೆ.

ಇನ್ನು ಎರಡನೇ ತಾಮ್ರ ಫಲಕಗಳ ಜೊತೆಯು ಭಾರತದೊಂದಿಗೆ ಯಹೂದಿಗಳು ವಾಣಿಜ್ಯ ಆರಂಭಿಸಿದ ದಾಖಲಾತಿ ಎಂದು ನಂಬಲಾಗಿದೆ. ಈ ಫಲಕಗಳು ಚರ್ಚ್ ಮತ್ತು ಪಶ್ಚಿಮ ಏಷ್ಯಾ ಮತ್ತು ಭಾರತೀಯ ವಾಣಿಜ್ಯ ಸಂಘಟನೆಗಳಿಗೆ ಕೊಲ್ಲಂನ ವಾಣಿಜ್ಯ ನೋಡಿಕೊಳ್ಳಲು ಸ್ಥಳೀಯ ಹಿಂದೂ ಅರಸರು ಭೂಮಿ ಮಂಜೂರು ಮಾಡಿದ ಮತ್ತು ತೆರಿಗೆ ಸವಲತ್ತು ನೀಡಿದ ಬಗ್ಗೆ ಉಲ್ಲೇಖವನ್ನು ವಿವರಿಸುತ್ತವೆ.

ಪಶ್ಚಿಮ ಏಷ್ಯಾ ಸಂಘಟನೆಯು ಮುಸ್ಲಿಮರು, ಕ್ರಿಶ್ಚಿಯನ್ನರು, ಜೋರಾಷ್ಟ್ರೀಯನ್ನರು, ಯಹೂದಿಗಳ ಗುಂಪನ್ನು ಒಳಗೊಂಡಿದ್ದು, ಅವರೆಲ್ಲರೂ ಜೂಡೋ-ಪರ್ಷಿಯನ್ ಮತ್ತು ಅರೇಬಿಕ್ ಮತ್ತು ಪಹ್ಲವಿ (ಮಧ್ಯ ಪರ್ಷಿಯನ್)ನಲ್ಲಿ ಸಹಿ ಮಾಡಿರುತ್ತಾರೆ. ಅವರ ಸಹಿಗಳನ್ನು ಒಳಗೊಂಡ ಈ ಫಲಕದಲ್ಲಿನ ಲಿಪಿಯ ಪರಿಚಯ ಇಲ್ಲದ ಸ್ಥಳೀಯ ಕೆಲಸಗಾರನೊಬ್ಬ ಈ ಫಲಕಗಳನ್ನು ಕತ್ತರಿಸಿರಬಹುದೆಂದು ಕಾಣುತ್ತದೆ. ಈ ಫಲಕಗಳ ಪ್ರತಿಕೃತಿವನ್ನು ಕೇರಳದ ತಿರುವಲ್ಲಾದ ಮಲಂಕರ ಮಾರ್ ಥೋಮ ಸೆರಿಯನ್ ಚರ್ಚ್ ಸಹಕಾರದಿಂದ ರೂಪಿಸಲಾಗಿದೆ.

ಇದರ ಜೊತೆಗೆ ಪ್ರಧಾನಮಂತ್ರಿಯವರು ಕೇರಳದ ಪರದೇಶೀ ಯಹೂದಿ ಸಮುದಾಯ ಕೊಡುಗೆಯಾಗಿ ನೀಡಿದ ಟೋರಹ್ (ಯಹೂದಿಗಳ ಪವಿತ್ರ ಗ್ರಂಥ) ಚರ್ಮದ ಕಾಗದದ ಸುರುಳಿಯನ್ನು ಪ್ರಧಾನಿ ನೆತನ್ಯಾಹು ಅವರಿಗೆ ಸಮರ್ಪಿಸಿದರು. ನೂರಾರು ವರ್ಷಗಳ ಹಿಂದೆ ಕೈ ಯಲ್ಲಿ ಬರೆದ ಈ ಚರ್ಮದ ಸುರುಳಿ 1568ರಲ್ಲಿ ನಿರ್ಮಿಸಲಾದ ಕೊಚ್ಚಿಯ ಪರದೇಶಿ ಸಿನಗೋಗೆ (ಯಹೂದಿ ಗುಡಿ)ಗೆ ಸಮರ್ಪಿತವಾದುದಾಗಿದೆ. ಈ ಟೋರಹ್ ಗೆ ವರ್ತುಲಾಕಾರದ ಮರದ ತುಂಡುಗಳನ್ನು ಅಳವಡಿಸಿ ಅದನ್ನು ದಕ್ಷಿಣ ಭಾರತದ ದೀಪಗಳು ಮತ್ತು ಹೂ ಅಲಂಕಾರಗಳ ವಿಶಿಷ್ಟ ಲಕ್ಷಣಗಳನ್ನು ಹೊಂದಿರುವ ಬೆಳ್ಳಿಯ ಹಾಳೆಗಳು ಮತ್ತು ಆಭರಣ ಶೈಲಿಯ ಚಿನ್ನದ ಹಾಳೆಗಳನ್ನು ಹೊದಿಸಿದ ಮರದ ಸಂಪುಟದಲ್ಲಿಡಲಾಗಿದೆ.

****

AKT/NT