ಪಿಎಂಇಂಡಿಯಾ
ರಶ್ಯನ್ ಒಕ್ಕೂಟದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ವ್ಲಾದಮೀರ್ ವಿ. ಪುಟಿನ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ಸಾರ್ವತ್ರಿಕ ಚುನಾವಣೆಗಳಲ್ಲಿ ಅವರ ವಿಜಯಕ್ಕಾಗಿ ಅಭಿನಂದಿಸಿದರು. ಅಧ್ಯಕ್ಷರಾದ ಪುಟಿನ್ ಅವರು ಉಭಯ ದೇಶಗಳ ಜನತೆಯ ನಡುವಣ ಧೀರ್ಘಕಾಲೀನ ಗೆಳೆತನವನ್ನು ಇನ್ನಷ್ಟು ಬಲಪಡಿಸಲು ಪ್ರಧಾನ ಮಂತ್ರಿ ಅವರು ಬದ್ದರಿರುವರು ಎಂಬ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದರು. ಮತ್ತು ಉಭಯ ದೇಶಗಳನ್ನು ನಿಕಟವಾಗಿಸಿರುವ ವಿಶೇಷ ವ್ಯೂಹಾತ್ಮಕ ಸಹಭಾಗಿತ್ವವನ್ನು ಇನ್ನಷ್ಟು ವಿಸ್ತರಿಸಲೂ ಅವರು ಬದ್ದತೆ ಹೊಂದಿರುವ ಬಗ್ಗೆ ಭರವಸೆ ವ್ಯಕ್ತಪಡಿಸಿದರು.
ಪ್ರಧಾನ ಮಂತ್ರಿ ಅವರು ಅಧ್ಯಕ್ಷರಾದ ಪುಟಿನ್ ಅವರ ಹಾರ್ದಿಕ ಅಭಿನಂದನಾ ಮಾತುಗಳಿಗೆ ಕೃತಜ್ಞತೆ ವ್ಯಕ್ತಪಡಿಸಿದರು . ಉಭಯ ರಾಷ್ಟ್ರಗಳ ನಡುವೆ ಸಹಕಾರ ವರ್ಧಿಸುತ್ತಿರುವುದನ್ನು ತಾವು ಮನಗಂಡಿರುವುದಾಗಿ ಹೇಳಿದ ಅವರು ಕಳೆದ ಕೆಲವು ತಿಂಗಳುಗಳಲ್ಲಿ ಅಧ್ಯಕ್ಷ ಪುಟಿನ್ ಜತೆ ತಮ್ಮ ವೈಯಕ್ತಿಕ ನೆಲೆಯ ಮಾತುಕತೆಯನ್ನೂ ಸ್ಮರಿಸಿಕೊಂಡರು. ಭಾರತ ಮತ್ತು ರಶ್ಯಾ ನಡುವೆ ಸುಧೀರ್ಘ ಅವಧಿಯಿಂದ ಇರುವ ದ್ವಿಪಕ್ಷೀಯ ಸಹಭಾಗಿತ್ವವನ್ನು ಇನ್ನಷ್ಟು ಬಲಪಡಿಸುವ ಮತ್ತು ಪೋಷಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪುಟಿನ್ ಜೊತೆ ನಡೆಯಲಿರುವ ಮಾತುಕತೆಗಳನ್ನು ಎದುರು ನೋಡುತ್ತಿರುವುದಾಗಿಯೂ ಪ್ರಧಾನ ಮಂತ್ರಿ ಅವರು ಈ ಸಂದರ್ಭದಲ್ಲಿ ತಿಳಿಸಿದರು.
******
Thank you @KremlinRussia, and my dear friend, for your warm greetings. Your support for taking our special and privileged strategic partnership to new heights is invaluable. I look forward to our meeting soon. https://t.co/4JG3OPvZNe
— Narendra Modi (@narendramodi) May 24, 2019