Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಮತ್ತು ಫ್ರೆಂಚ್ ಗಣರಾಜ್ಯದ ಅಧ್ಯಕ್ಷ ಇಮ್ಯಾನುಯಲ್ ಮಾಕ್ರಾನ್ ನಡುವೆ ದೂರವಾಣಿ ಸಮಾಲೋಚನೆ


ಹೊಸ ವರ್ಷಾಚರಣೆ ವೇಳೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಫ್ರೆಂಚ್ ಗಣರಾಜ್ಯದ ಅಧ್ಯಕ್ಷ ಇಮ್ಯಾನುಯಲ್ ಮಾಕ್ರಾನ್ ಜೊತೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಿದರು.

ಪ್ರಧಾನಿ ಅವರು, ಅಧ್ಯಕ್ಷ ಮಾಕ್ರಾನ್ ಅವರಿಗೆ ಭಾರತದ ಪರವಾಗಿ ಹಾಗೂ ವೈಯಕ್ತಿಕವಾಗಿ ಹೊಸ ವರ್ಷದ ಶುಭಾಶಯಗಳನ್ನು ಕೋರಿದರು.

ಪ್ರಧಾನಮಂತ್ರಿ ಅವರು, ಅಧ್ಯಕ್ಷ ಮಾಕ್ರಾನ್ ಜೊತೆಗಿನ ಬೈರ್ರಿಟ್ಜ್ ಮತ್ತು ಚಾಂಟಿಲ್ಲಿ ಸೇರಿದಂತೆ ಹಿಂದಿನ ಸಭೆಗಳನ್ನು ನೆನಪು ಮಾಡಿಕೊಂಡರು. ಭಾರತ ಮತ್ತು ಫ್ರಾನ್ಸ್ ನಡುವಿನ ಕಾರ್ಯತಂತ್ರ ಪಾಲುದಾರಿಕೆ ಮತ್ತಷ್ಟು ಬಲವರ್ಧನೆಗೆ ಅವರು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಎರಡೂ ದೇಶಗಳ ನಡುವೆ ಬಹು ಆಯಾಮದ ಸಂಬಂಧಗಳ ಸ್ಥಿರ ಪ್ರಗತಿಯ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು.

ಉಭಯ ನಾಯಕರು ಪರಸ್ಪರ ಹಿತಾಸಕ್ತಿಯ ದ್ವಿಪಕ್ಷೀಯ ಸಂಬಂಧಗಳು ಮಾತ್ರವಲ್ಲದೆ, ಪ್ರಾದೇಶಿಕ ಮತ್ತು ಜಾಗತಿಕ ಸ್ಥಿತಿಗತಿಗಳ ಕುರಿತ ವಿಷಯಗಳ ಬಗ್ಗೆ ಅಭಿಪ್ರಾಯ ವಿನಿಮಯ ಮಾಡಿಕೊಂಡರು.

ಉಭಯ ನಾಯಕರು ನಿರಂತರ ಸಂಪರ್ಕದಲ್ಲಿರುವ ಒಪ್ಪಿದರು ಮತ್ತು ರಕ್ಷಣೆ, ನಾಗರಿಕ ಅಣು ಇಂಧನ, ಸಾಗರ ಭದ್ರತೆ ಸೇರಿದಂತೆ ಎರಡೂ ದೇಶಗಳ ನಡುವೆ ಸಮಗ್ರ ಕಾರ್ಯತಂತ್ರ ಪಾಲುದಾರಿಕೆಯನ್ನು ಮತ್ತಷ್ಟು ವೃದ್ಧಿಸಲು ಸಮ್ಮತಿಸಿದರು.

********