ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜೆರುಸಲೆಮ್ ನಲ್ಲಿ ಇಂದು ಇಸ್ರೇಲ್ ಅಧ್ಯಕ್ಷರಾದ ಮಾನ್ಯ ಶ್ರೀ ಐಸಾಕ್ ಹೆರ್ಜಾಗ್ ಅವರನ್ನು ಭೇಟಿ ಮಾಡಿದರು.
ಪ್ರಧಾನಮಂತ್ರಿಗಳು 2017 ರಲ್ಲಿನ ತಮ್ಮ ಇಸ್ರೇಲ್ ಭೇಟಿಯ ಸಮಯದಲ್ಲಿ ಮತ್ತು 2023ರಲ್ಲಿ ದುಬೈನಲ್ಲಿ ಅಧ್ಯಕ್ಷ ಹರ್ಜೋಗ್ ಅವರೊಂದಿಗಿನ ತಮ್ಮ ಹಿಂದಿನ ಭೇಟಿಯನ್ನು ಆತ್ಮೀಯವಾಗಿ ನೆನಪು ಮಾಡಿಕೊಂಡರು. ಭಾರತ-ಇಸ್ರೇಲ್ ಬಾಂಧವ್ಯವನ್ನು “ಶಾಂತಿ, ನಾವೀನ್ಯತೆ ಮತ್ತು ಸಮೃದ್ಧಿಗಾಗಿ ವಿಶೇಷ ಕಾರ್ಯತಂತ್ರದ ಪಾಲುದಾರಿಕೆ” ಯ ಮಟ್ಟಕ್ಕೆ ಹೆಚ್ಚಿಸಿರುವುದು ದ್ವಿಪಕ್ಷೀಯ ಸಂಬಂಧಗಳಲ್ಲಿ ಹೊಸ ಆರಂಭವನ್ನು ಸೂಚಿಸುತ್ತದೆ ಮತ್ತು ಇದು ಎರಡೂ ದೇಶಗಳ ನಡುವಿನ ಆಳವಾದ ನಂಬಿಕೆ, ಹಂಚಿತ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ವಿಶೇಷ ಮೈತ್ರಿಯನ್ನು ಪ್ರತಿಬಿಂಬಿಸುತ್ತದೆ ಎಂದು ಇಬ್ಬರೂ ನಾಯಕರು ಹೇಳಿದ್ದಾರೆ. ಭಯೋತ್ಪಾದನೆ ನಿಗ್ರಹ ಸೇರಿದಂತೆ ವ್ಯಾಪಾರ ಮತ್ತು ತಂತ್ರಜ್ಞಾನ, ನಾವೀನ್ಯತೆ ಮತ್ತು ಉದ್ಯಮ, ರಕ್ಷಣೆ ಮತ್ತು ಭದ್ರತೆ ವಲಯಗಳಲ್ಲಿನ ಪ್ರಸ್ತುತದ ಸಹಕಾರದ ಬಗ್ಗೆ ಇಬ್ಬರೂ ನಾಯಕರು ತೃಪ್ತಿ ವ್ಯಕ್ತಪಡಿಸಿದರು.
ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ವಿಷಯಗಳ ಬಗ್ಗೆಯೂ ಇಬ್ಬರೂ ನಾಯಕರು ಚರ್ಚಿಸಿದರು. ಗಾಜಾ ಶಾಂತಿ ಯೋಜನೆಗೆ ಬೆಂಬಲ ವ್ಯಕ್ತಪಡಿಸಿದ ಪ್ರಧಾನಮಂತ್ರಿ, ಪಶ್ಚಿಮ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಸಾಧಿಸುವ ಉಪಕ್ರಮದಲ್ಲಾಗುತ್ತಿರುವ ಪ್ರಗತಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.
ಪರಿಸರವನ್ನು ಪೋಷಿಸುವಲ್ಲಿ ಎರಡೂ ರಾಷ್ಟ್ರಗಳ ಹಂಚಿತ ಮೌಲ್ಯಗಳನ್ನು ಪ್ರತಿಬಿಂಬಿಸುವ ವಿಶೇಷ ಅಭಿವ್ಯಕ್ತಿಯಾಗಿ ಪ್ರಧಾನಮಂತ್ರಿಯವರು, ಅಧ್ಯಕ್ಷ ಹರ್ಜೋಗ್ ಮತ್ತು ಪ್ರಥಮ ಮಹಿಳೆ ಅವರೊಂದಿಗೆ, ಏಕ್ ಪೆಡ್ ಮಾ ಕೆ ನಾಮ್ (ತಾಯಿಯ ಹೆಸರಿನಲ್ಲಿ ಒಂದು ಮರ) ಉಪಕ್ರಮದಡಿಯಲ್ಲಿ ಅಧ್ಯಕ್ಷರ ಉದ್ಯಾನದಲ್ಲಿ ಒಂದು ಸಸಿಯನ್ನು ನೆಟ್ಟರು.
ಭಾರತ-ಇಸ್ರೇಲ್ ಪಾಲುದಾರಿಕೆಗೆ ನೀಡಿದ ಬೆಂಬಲ, ಆತಿಥ್ಯ ಹಾಗೂ ಆತ್ಮೀಯತೆಗಾಗಿ ಅಧ್ಯಕ್ಷ ಹರ್ಜೋಗ್ ಅವರಿಗೆ ಪ್ರಧಾನಮಂತ್ರಿ ಧನ್ಯವಾದ ಅರ್ಪಿಸಿದರು.
*****
PM @narendramodi and President @Isaac_Herzog had a wonderful meeting today. They discussed various aspects of the India-Israel partnership. The two leaders noted the strong potential for cooperation in emerging sectors such as technology, innovation and startups. pic.twitter.com/LbQkC1s8Q9
— PMO India (@PMOIndia) February 26, 2026
Fully agree with you, President Herzog.
— Narendra Modi (@narendramodi) February 26, 2026
It was a delight to meet you and discuss diverse aspects of the India-Israel friendship. There is immense scope in futuristic areas such as technology, innovation, StartUps and more.
My gratitude to you for supporting the ‘Ek Ped Maa Ke… https://t.co/jBrmzWdkmw
הנחתי זר ביד ושם, המרכז העולמי להנצחת השואה. אסיר תודה לראש הממשלה בנימין נתניהו על שליווה אותי במהלך הביקור הזה.
— Narendra Modi (@narendramodi) February 26, 2026
ביקרתי גם בהיכל השמות, חלל מעורר כבוד המשמר את זכרם של אלו שסבלו ונספו במהלך השואה.
השואה ניצבת כאחד הפרקים האפלים ביותר בתולדות האנושות. היא תזכורת נצחית לצורך… pic.twitter.com/uFCa0exO8m