ಪಿಎಂಇಂಡಿಯಾ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಪ್ರಜಾಪ್ರಭುತ್ವವಾದೀ ರಾಷ್ಟ್ರ ಬಾಂಗ್ಲಾದೇಶದ ಪ್ರಧಾನ ಮಂತ್ರಿ ಗೌರವಾನ್ವಿತ ಶೇಖ್ ಹಸೀನಾ ಅವರ ಜೊತೆ ಮಾತುಕತೆ ನಡೆಸಿದರು.
ಬಾಂಗ್ಲಾದೇಶದ ಪ್ರಧಾನಮಂತ್ರಿ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಎನ್.ಡಿ.ಎ. ಸರಕಾರಕ್ಕೆ ಭಾರತದ ಜನತೆ ಸ್ಪಷ್ಟ ತೀರ್ಪು ನೀಡಿರುವುದಕ್ಕೆ ದೂರವಾಣಿ ಮೂಲಕ ಅಭಿನಂದನೆ ಸಲ್ಲಿಸಿದರು. ಹೀಗೆ ಮಾಡುವ ಮೂಲಕ , ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರು ಪ್ರಧಾನ ಮಂತ್ರಿ ಅವರನ್ನು ಅಭಿನಂದಿಸಿದ ಮೊದಲ ವಿದೇಶೀ ನಾಯಕರಾದರು. ಆ ಮೂಲಕ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ವಿಶೇಷವಾದ ನಿಕಟ ಮತ್ತು ಸೌಹಾರ್ದ ಬಾಂಧವ್ಯ ಮತ್ತು ಉಭಯ ನಾಯಕರು ಹೊಂದಿರುವ ಉತ್ತಮ ಗೌರವಯುತ ನಡವಳಿಕೆಯನ್ನು ಪ್ರತಿಬಿಂಬಿಸಿದರು.
ಉಭಯ ನಾಯಕರೂ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಬಾಂಧವ್ಯವನ್ನು ಹಿಂದೆಂದಿಗಿಂತಲೂ ಹೆಚ್ಚು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲು ಬದ್ದರಾಗುವುದಾಗಿ ಹೇಳಿದರು. ಭದ್ರತಾ ವ್ಯಾಪಾರ, ಸಾರಿಗೆ, ಇಂಧನ ಮತ್ತು ಜನತೆ ಹಾಗು ಜನತೆ ನಡುವಿನ ಬಾಂಧವ್ಯ ವರ್ಧನೆಗೆ ಸಂಬಂಧಿಸಿದ ಚಾಲ್ತಿಯಲ್ಲಿರುವ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ಆವಶ್ಯಕತೆಯನ್ನು ಉಭಯ ನಾಯಕರೂ ಮನವರಿಕೆ ಮಾಡಿಕೊಂಡರು. ಹಾಗೆ ಮಾಡುವುದರಿಂದ 2020 ರಲ್ಲಿ ಬರುವ ವಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರ ಜನ್ಮ ಶತಮಾನೋತ್ಸವ ಮತ್ತು 2021 ರಲ್ಲಿ ಬರುವ ಬಾಂಗ್ಲಾದೇಶ ವಿಮೋಚನೆಯ 50 ನೇ ವಾರ್ಷಿಕೋತ್ಸವಗಳ ಹಿನ್ನೆಲೆಯಲ್ಲಿ ಈ ಕಾರ್ಯಗಳಿಗೆ ಹೆಚ್ಚಿನ ಮಹತ್ವ ದೊರೆಯಲಿದೆ .
ದ್ವಿಪಕ್ಷೀಯ ಸಂಬಂಧ ನಿಟ್ಟಿನಲ್ಲಿ ಕಾರ್ಯಗಳನ್ನು ಪುನರಾರಂಭಿಸಲು ಸಭೆಯನ್ನು ನಡೆಸುವುದಕ್ಕಾಗಿ ದಿನಾಂಕಗಳನ್ನು ಗುರುತಿಸಲು ನಾಯಕರು ಒಪ್ಪಿಕೊಂಡರು.