Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಶ್ರೀ. ಮೋದಿ ಅವರನ್ನು ಅಭಿನಂದಿಸಿದ ಜಪಾನ್ ಪ್ರಧಾನ ಮಂತ್ರಿ ಶ್ರೀ.ಶಿಂಜೊ ಅಬೆ


ಪ್ರಧಾನ ಮಂತ್ರಿ ಶ್ರೀ. ಮೋದಿ ಅವರನ್ನು ಅಭಿನಂದಿಸಿದ ಜಪಾನ್ ಪ್ರಧಾನ ಮಂತ್ರಿ ಶ್ರೀ. ಶಿಂಜೊ ಅಬೆ

ಜಪಾನ್ ದೇಶದ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ.ಶಿಂಜೊ ಅಬೆ ಅವರು ಭಾರತದ ಪ್ರಧಾನಮಂತ್ರಿ ಶ್ರೀ.ನರೇಂದ್ರ ಮೋದಿ ಅವರಿಗೆ 2019ರ ಭಾರತದ ಸಾರ್ವತ್ರಿಕ ಚುನಾವಣೆಗಳಲ್ಲಿ ಅವರ ಪಕ್ಷದ ಅಭೂತಪೂರ್ವ ಗೆಲುವಿಗಾಗಿ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಪ್ರಧಾನಿ ಶ್ರೀ.ಶಿಂಜೊ ಅಬೆ ಅವರ ಅಭಿನಂದನೆಗೆ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಧನ್ಯವಾದ ತಿಳಿಸಿದ್ದಾರೆ.

ಇಬ್ಬರೂ ನಾಯಕರು ಪರಸ್ಪರ ಮಾತುಕತೆಯ ಸಂದರ್ಭದಲ್ಲಿ, ಕಳೆದ ಐದು ವರ್ಷಗಳಲ್ಲಿ ಸಾಧಿಸಲಾದ ದ್ವಿಪಕ್ಷೀಯ ಸಂಬಂಧಗಳ ಬಲವರ್ಧನೆ ಹಾಗೂ ಬರುವ ದಿನಗಳಲ್ಲಿ ಶಾಂತಿ, ಪ್ರಗತಿ ಹಾಗೂ ಸಮೃದ್ಧಿಗಳ ಗುರಿ ಸಾಧನೆಗೆ ಭಾರತ-ಜಪಾನ್ ದೇಶಗಳ ವ್ಯೂಹಾತ್ಮಕ ಕಾರ್ಯತಂತ್ರಗಳನ್ನು ಮತ್ತಷ್ಟು ಬಲಪಡಿಸುವ ಕುರಿತು ಬದ್ಧತೆಯ ಬಗ್ಗೆ ಚರ್ಚೆ ಮಾಡಿದರು.

ಮುಂದಿನ ತಿಂಗಳು ಒಸಾಕಾದಲ್ಲಿ ನಡೆಯಲಿರುವ ಜಿ-20 ಸಮ್ಮೇಳನದಲ್ಲಿ ಇಬ್ಬರೂ ಪರಸ್ಪರ ಭೇಟಿಯಾಗುವ ಬಗ್ಗೆ ಚರ್ಚಿಸಿದರು.

ಈ ವರ್ಷದ ಅಂತ್ಯದಲ್ಲಿ ಭಾರತದಲ್ಲಿ ನಡೆಯಲಿರುವ ಮುಂದಿನ ಭಾರತ-ಜಪಾನ್ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸುವಂತೆ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿಯವರು ಜಪಾನಿನ ಪ್ರಧಾನ ಮಂತ್ರಿ ಶ್ರೀ.ಶಿಂಜೊ ಅಬೆ ಅವರಿಗೆ ಆಹ್ವಾನ ನೀಡಿದರು.

ಹೊಸ ದೆಹಲಿ

23 ಮೇ 2019