Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಿಯವರ ಮುಂಬರುವ ಗುಜರಾತ್ ಪ್ರವಾಸ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು 2017ರ ಜೂನ್ 29ರಿಂದ 2017ರ ಜೂನ್ 30ರವರೆಗೆ ಗುಜರಾತ್ ಗೆ ಭೇಟಿ ನೀಡಲಿದ್ದಾರೆ.

ಪ್ರಧಾನಮಂತ್ರಿಯವರು ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಸರಣಿ ಟ್ವೀಟ್ ಮಾಡಿದ್ದು..

“ನಾಳೆಯಿಂದ ಎರಡು ದಿನಗಳ ಕಾಲ ಗುಜರಾತ್ ನಲ್ಲಿರುತ್ತೇನೆ. ನಾನು ಅಹಮದಾಬಾದ್, ರಾಜಕೋಟ್, ಮೋದಸಾ ಮತ್ತು ಗಾಂಧೀನಗರಗಳಲ್ಲಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದೇನೆ.

ನನ್ನ ಮೊದಲ ಎರಡು ಕಾರ್ಯಕ್ರಮಗಳು ಸಬರಮತಿ ಆಶ್ರಮದಲ್ಲಿವೆ. ನಾನು ಸಬರಮತಿ ಆಶ್ರಮದ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಕಾತರದಿಂದ ಎದಿರು ನೋಡುತ್ತಿದ್ದೇನೆ.

ಸಬರಮತಿ ಆಶ್ರಮದಲ್ಲಿ ನಡೆವ ಎರಡನೇ ಕಾರ್ಯಕ್ರಮ ಮಹಾತ್ಮಾ ಗಾಂಧೀಜಿ ಅವರ ಗುರು ಶ್ರೀಮದ್ ರಾಜ್ ಚಂದ್ರಜೀ ಅವರ 150ನೇ ಜಯಂತಿಯ ಅಂಗವಾಗಿದೆ.

ಬಳಿಕ ನಾನು ಅಲ್ಲಿಂದ ರಾಜಕೋಟ್ ಗೆ ಪ್ರಯಾಣ ಮಾಡುತ್ತೇನೆ, ಅಲ್ಲಿ ನಾನು ಸಾಮಾಜಿಕ ಅಧಿಕಾರಿತ ಶಿಬಿರದಲ್ಲಿ ಭಾಗಿಯಾಗುತ್ತೇನೆ ಮತ್ತು ದಿವ್ಯಾಂಗದ ನನ್ನ ಸಹೋದರ ಮತ್ತು ಸಹೋದರಿಯರೊಂದಿಗೆ ಸಂವಾದ ನಡೆಸಲಿದ್ದೇನೆ.

ನಾನು ಅಜಿ ಧಾಮ್ ನಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದೇನೆ. ಅಲ್ಲಿ ನೀರಾವರಿ ಮತ್ತು ಜಲ ಸಂಬಂಧಿತ ಉಪಕ್ರಮಗಳನ್ನು ದೇಶಕ್ಕೆ ಸಮರ್ಪಿಸಲಾಗುತ್ತದೆ.

30ರಂದು ಬೆಳಗ್ಗೆ, ಮೊದಸಾದಲ್ಲಿ ವತರಕ್, ಮಜುಮ್ ಮತ್ತು ಮೆಸೌ ಆಧಾರಿತ ನೀರು ಪೂರೈಕೆ ಯೋಜನೆಗಳ ಲೋಕಾರ್ಪಣೆ ಇದೆ.
30ರಂದು ಮಧ್ಯಾಹ್ನ ಟೆಕ್ಸ್ ಟೈಲ್ಸ್ ಇಂಡಿಯಾ 2017 ಶೃಂಗವನ್ನು ಉದ್ಘಾಟಿಸಲಾಗುವುದು. ಭಾರತ ಸರ್ಕಾರವು ಜವಳಿ ಉದ್ಯಮಕ್ಕೆ ಬೆಂಬಲ ನೀಡಲು ಹಲವು ಉಪಕ್ರಮಗಳನ್ನು ಕೈಗೊಂಡಿದೆ., ಇದು ಹಲವು ಭಾರತೀಯರಿಗೆ ಉದ್ಯೋಗದ ಮೂಲವಾಗಿದೆ.
30ರ ಸಂಜೆ, ನಾನು ಸಮಗ್ರ ಕ್ರೀಡಾ ಮತ್ತು ಮನರಂಜನಾ ‘ಅರೇನಾ ಯೋಜನೆ’ಉದ್ಘಾಟಿಸಲಿದ್ದೇನೆ.”

*****

AK