ಪಿಎಂಇಂಡಿಯಾ
ದ್ವಿಪಕ್ಷೀಯ ಜಂಟಿ ಆಯೋಗದ ಏಳನೇ ಸಭೆಯ ಹಿನ್ನೆಲೆಯಲ್ಲಿ ಭಾರತಕ್ಕೆ ಭೇಟಿ ನೀಡಿರುವ ಈಜಿಪ್ಟಿನ ವಿದೇಶಾಂಗ ಸಚಿವರಾದ ಶ್ರೀ ಸಮೇಹ್ ಹಸ್ಸನ್ ಶೌಕ್ರಿ ಅವರು ಇಂದು ಪ್ರಧಾನ ಮಂತ್ರಿ ಅವರನ್ನು ಭೇಟಿಯಾದರು.
ಸಚಿವರು ಮೋದಿ ಅವರಿಗೆ ಈಜಿಪ್ಟಿನ ದೊರೆ ಸಿಸಿ ಅವರ ಶುಭಾಶಯಗಳನ್ನು ತಿಳಿಸಿದರು. ಪ್ರಧಾನ ಮಂತ್ರಿ ಮೋದಿ ಅವರು ಅಧ್ಯಕ್ಷ ಸಿಸಿ ಅವರಿಗೆ ತಮ್ಮ ಶುಭ ಹಾರೈಕೆಗಳನ್ನು ತಿಳಿಸಲು ಕೋರಿಕೊಂಡರು.
ಇಬ್ಬರು ಗಣ್ಯರೂ ಭಾರತ ಮತ್ತು ಈಜಿಪ್ಟ್ ನಡುವೆ ದ್ವಿಪಕ್ಷೀಯ ಸಂಬಂಧ ಬಲಪಡಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಿದರಲ್ಲದೆ ಈ ನಿಟ್ಟಿನಲ್ಲಿ ಬದ್ದತೆಯನ್ನು ಪುನರುಚ್ಚರಿಸಿದರು. ಮೂಲಸೌಕರ್ಯ, ವ್ಯಾಪಾರ ಮತ್ತು ಹೂಡಿಕೆಯಲ್ಲಿ ಸಹಕಾರವನ್ನು ವೃದ್ದಿಸುವ ಹಾಗು ಪರಸ್ಪರ ಜನತೆಯ ನಡುವಿನ ಬಾಂಧವ್ಯದ ಬಗ್ಗೆಯೂ ಅವರು ಮಾತುಕತೆ ನಡೆಸಿದರು.
Mr. Sameh Shoukry, Foreign Minister of the Arab Republic of Egypt met PM @narendramodi in Delhi. pic.twitter.com/zT0W5spv0B
— PMO India (@PMOIndia) March 23, 2018