Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನ ಮಂತ್ರಿ ಶ್ರೀ ಮೋದಿ ಅವರಿಗೆ ಫ್ರೆಂಚ್ ಅಧ್ಯಕ್ಷರಿಂದ ದೂರವಾಣಿ ಕರೆ ಮೂಲಕ ಅಭಿನಂದನೆ


ಫ್ರಾನ್ಸ್ ಅಧ್ಯಕ್ಷ ಗೌರವಾನ್ವಿತ ಇಮ್ಯಾನುಯೆಲ್ ಮ್ಯಾಕ್ರೋನ್ ಅವರು 2019 ರ ಮೇ 23 ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ಚುನಾವಣಾ ವಿಜಯಕ್ಕಾಗಿ ಅಭಿನಂದಿಸಿದರು.

ಉಭಯ ನಾಯಕರೂ ಭಾರತ ಮತ್ತು ಫ್ರಾನ್ಸ್ ನಡುವೆ ವ್ಯೂಹಾತ್ಮಕ ಸಹಭಾಗಿತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗುವ ಬದ್ದತೆಯನ್ನು ಪುನರುಚ್ಚರಿಸಿದರು. ಪಧಾನಮಂತ್ರಿ ಶ್ರೀ ಮೋದಿ ಅವರು ಸಂಕೀರ್ಣ ವಿಷಯಗಳಲ್ಲಿ ಫ್ರಾನ್ಸ್ ನಿರಂತರ ನೀಡುವ ಬೆಂಬಲಕ್ಕಾಗಿ ಧನ್ಯವಾದ ಸಲ್ಲಿಸಿದರು.

ಪ್ರಜಾಸತ್ತಾತ್ಮಕ ವಿಶ್ವದ ಮುಂಚೂಣಿ ನಾಯಕರಲ್ಲಿ ಶ್ರೀ ಮೋದಿ ಒಬ್ಬರು ಎಂದು ಬಣ್ಣಿಸಿದ ಅಧ್ಯಕ್ಷರಾದ ಮ್ಯಾಕ್ರೋನ್ ಅವರು ಪ್ರಧಾನ ಮಂತ್ರಿ ಶ್ರೀ ಮೋದಿ ಅವರಿಗೆ ದ್ವಿಪಕ್ಷೀಯ ಮಾತುಕತೆಗಾಗಿ ಮತ್ತು ಬಿಯಾರಿಟ್ಜ್ ನಲ್ಲಿ ನಡೆಯುವ ಜಿ-7 ಸಮಾವೇಶದಲ್ಲಿ ಪಾಲ್ಗೊಳ್ಳಲು 2019 ರ ಆಗಸ್ಟ್ ತಿಂಗಳಲ್ಲಿ ಫ್ರಾನ್ಸ್ ಗೆ ಭೇಟಿ ನೀಡುವಂತೆ ತಾವು ನೀಡಿದ ಆಹ್ವಾನವನ್ನು ಪುನರುಚ್ಚರಿಸಿದರು.

******