Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಮುಖ ಡಚ್ ಕಂಪನಿಗಳ ʻಸಿಇಒʼಗಳನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

ಪ್ರಮುಖ ಡಚ್ ಕಂಪನಿಗಳ ʻಸಿಇಒʼಗಳನ್ನು ಭೇಟಿ ಮಾಡಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ನೆದರ್‌ಲ್ಯಾಂಡ್ಸ್ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ರಾಬ್ ಜೆಟ್ಟನ್ ಅವರು ಇಂದು ಇಂಧನ, ಬಂದರುಗಳು, ಆರೋಗ್ಯ, ಕೃಷಿ ವ್ಯಾಪಾರ ಮತ್ತು ತಂತ್ರಜ್ಞಾನದಂತಹ ವಿವಿಧ ಕ್ಷೇತ್ರಗಳ ಪ್ರಮುಖ ಡಚ್ ಕಂಪನಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ (ಸಿಇಒ) ಜೊತೆ ಚರ್ಚೆ ನಡೆಸಿದರು. ಉದ್ಯಮ ಮುಖಂಡರು ಮೂರು ಕ್ಲಸ್ಟರ್‌ಗಳ ಬಗ್ಗೆ ಪ್ರಸ್ತುತಿಗಳನ್ನು ನೀಡಿದರು ಮತ್ತು ಭಾರತಕ್ಕಾಗಿ ತಮ್ಮ ಕಾರ್ಯತಂತ್ರಗಳನ್ನು ವಿವರಿಸಿದರು, ಅವುಗಳೆಂದರೆ: ಸೆಮಿಕಂಡಕ್ಟರ್‌ಗಳು, ತಂತ್ರಜ್ಞಾನ ಮತ್ತು ನಾವೀನ್ಯತೆ; ಮೂಲಸೌಕರ್ಯ, ಸರಕು-ಸಾಗಣೆ ಮತ್ತು ಕಡಲಯಾನ; ಸುಸ್ಥಿರತೆ, ಇಂಧನ ಮತ್ತು ಕೃಷಿ.

ಸಭೆಗೆ ಮುನ್ನ, ಉಭಯ ನಾಯಕರ ಸಮ್ಮುಖದಲ್ಲಿ ʻಎಎಸ್ಎಂಎಲ್ʼ ಮತ್ತು ʻಟಾಟಾ ಎಲೆಕ್ಟ್ರಾನಿಕ್ಸ್ʼ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಗುಜರಾತ್‌ನ ಧೋಲೆರಾದಲ್ಲಿ ಭಾರತದ ಮೊದಲ ಫ್ರಂಟ್-ಎಂಡ್ ಸೆಮಿಕಂಡಕ್ಟರ್ ಫ್ಯಾಬ್‌ಗಾಗಿ ಟಾಟಾ ಎಲೆಕ್ಟ್ರಾನಿಕ್ಸ್ ಮತ್ತು ʻಎಎಸ್ಎಂಎಲ್ʼ ಪಾಲುದಾರರಾಗುವ ನಿರ್ಧಾರವನ್ನು ಅವರು ಸ್ವಾಗತಿಸಿದರು.

ಪ್ರಧಾನಮಂತ್ರಿ ಮೋದಿ ಅವರು ಭಾರತ ಮತ್ತು ನೆದರ್‌ಲ್ಯಾಂಡ್ಸ್‌ ನಡುವಿನ ವಾಣಿಜ್ಯ-ವ್ಯಾಪಾರ ಸಂಬಂಧಗಳು ಗಾಢವಾಗುತ್ತಿರುವುದನ್ನು ಸ್ವಾಗತಿಸಿದರು ಮತ್ತು ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಡಚ್ ಕಂಪನಿಗಳ ಆಸಕ್ತಿ ಹೆಚ್ಚುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇತ್ತೀಚಿನ ಸುಧಾರಣೆಗಳು ಮತ್ತು ಉಪಕ್ರಮಗಳನ್ನು ಎತ್ತಿ ತೋರಿಸಿದ ಪ್ರಧಾನಮಂತ್ರಿಯವರು, ವ್ಯಾಪಾರೋದ್ಯಮವನ್ನು ಸುಗಮವಾಗಿಸುವ ಮತ್ತು ಸ್ಥಿರ, ಪರಿಣಾಮಕಾರಿ ಮತ್ತು ಊಹಿಸಬಹುದಾದ ನೀತಿ ವಾತಾವರಣವನ್ನು ಸ್ಥಾಪಿಸುವ ಪ್ರಯತ್ನಗಳನ್ನು ಒತ್ತಿ ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಾರತದಲ್ಲಿ ಅದರಲ್ಲೂ ಸಾಗರಯಾನ, ನವೀಕರಿಸಬಹುದಾದ ಇಂಧನ, ಡಿಜಿಟಲ್ ತಂತ್ರಜ್ಞಾನ, ಸೆಮಿಕಂಡಕ್ಟರ್‌ಗಳು, ಕೃತಕ ಬುದ್ಧಿಮತ್ತೆ ಮತ್ತು ಆರೋಗ್ಯ ರಕ್ಷಣಾ ವಲಯಗಳಲ್ಲಿ ಅವಕಾಶಗಳನ್ನು ಅನ್ವೇಷಿಸುವಂತೆ ಡಚ್ ಕಂಪನಿಗಳನ್ನು ಪ್ರೋತ್ಸಾಹಿಸಿದರು.

ಭಾರತ-ಐರೋಪ್ಯ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ಒಪ್ಪಂದವನ್ನು(ಎಫ್‌ಟಿಎ) ಶೀಘ್ರ ಅನುಷ್ಠಾನಗೊಳಿಸುವಂತೆ ಉಭಯ ಪ್ರಧಾನಮಂತ್ರಿಗಳು ಕರೆ ನೀಡಿದರು. ಮುಕ್ತ ವ್ಯಾಪಾರ ಒಪ್ಪಂದವು ಭಾರತ ಮತ್ತು ಐರೋಪ್ಯ ಒಕ್ಕೂಟವನ್ನು ವಿಶ್ವಾಸಾರ್ಹ ಮತ್ತು ವಿಶ್ವಾಸಾರ್ಹ ಪಾಲುದಾರರಾಗಿ ಬಲಪಡಿಸುತ್ತದೆ. ಜೊತೆಗೆ ಮುಕ್ತ ಮಾರುಕಟ್ಟೆಗಳು, ಎಲ್ಲರನ್ನೂ ಒಳಗೊಂಡ ಬೆಳವಣಿಗೆ ಮತ್ತು ಸುಸ್ಥಿರ ಪೂರೈಕೆ ಸರಪಳಿಗಳಿಗೆ ಬದ್ಧವಾಗಿಸುತ್ತದೆ.

ಉದ್ಯಮದ ಮುಖಂಡರು ಭಾರತ ಸರ್ಕಾರದ ಸುಧಾರಣಾ ಕಾರ್ಯಸೂಚಿಯನ್ನು ಶ್ಲಾಘಿಸಿದರು ಮತ್ತು ಭಾರತಕ್ಕಾಗಿ ತಮ್ಮ ಭವಿಷ್ಯದ ಯೋಜನೆಗಳನ್ನು ಹಂಚಿಕೊಂಡರು. ಭಾರತದಲ್ಲಿ ತಮ್ಮ ಅಸ್ತಿತ್ವವನ್ನು ಹೆಚ್ಚಿಸುವ ಅವಕಾಶಗಳನ್ನು ಅನ್ವೇಷಿಸಲು ಅವರು ಆಸಕ್ತಿ ವ್ಯಕ್ತಪಡಿಸಿದರು. ಸಭೆಯಲ್ಲಿ ಈ ಕೆಳಗಿನ ಸಿಇಓಗಳು ಭಾಗವಹಿಸಿದ್ದರು:

 

1. ಎಪಿಎಂ ಟರ್ಮಿನಲ್ಸ್‌
ಶ್ರೀ ಕೀತ್ ಸ್ವೆಂಡ್ಸನ್ – ಸಿಇಒ
ಕ್ಷೇತ್ರ: ಬಂದರುಗಳು, ಸರಕು-ಸಾಗಣೆ ಮತ್ತು ಪೂರೈಕೆ ಸರಪಳಿ ಮೂಲಸೌಕರ್ಯ

2. ಎಎಸ್‌ಎಂಎಲ್
ಶ್ರೀ ಕ್ರಿಸ್ಟೋಫ್ ಫೌಕೆಟ್ – ಅಧ್ಯಕ್ಷರು ಮತ್ತು ಸಿಇಒ
ಕ್ಷೇತ್ರ: ಸೆಮಿಕಂಡಕ್ಟರ್

3.  ಡಾಮೆನ್ ಶಿಪ್ ಯಾರ್ಡ್ ಗ್ರೂಪ್
ಶ್ರೀ ಅರ್ನೌಟ್ ಡಾಮೆನ್ – ಸಿಇಒ
ಕ್ಷೇತ್ರ: ಹಡಗು ನಿರ್ಮಾಣ

4. ಹೈನೆಕೆನ್ಮಿ.
ಶ್ರೀ ಡಾಲ್ಫ್ ವ್ಯಾನ್ ಡೆನ್ ಬ್ರಿಂಕ್,  ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷರು ಮತ್ತು ಸಿಇಒ ಕ್ಷೇತ್ರ: ಮದ್ಯ ತಯಾರಿಕೆ

5. ಕೆಎಲ್ಎಂ ರಾಯಲ್ ಡಚ್ ಏರ್ಲೈನ್ಸ್

ಶ್ರೀ ಮಾರ್ಜಾನ್ ರಿಂಟೆಲ್ – ಅಧ್ಯಕ್ಷರು ಮತ್ತು ಸಿಇಒ
ಕ್ಷೇತ್ರ: ವಿಮಾನಯಾನ

6. ಎನ್‌ಎಕ್ಸ್‌ಪಿ ಸೆಮಿಕಂಡಕ್ಟರ್ಸ್
ಶ್ರೀ ಮಾರಿಸ್ ಗೆರೆಟ್ಸ್ – ಸಿಇಒ ಎನ್‌ಎಕ್ಸ್‌ಪಿ ಸೆಮಿಕಂಡಕ್ಟರ್ಸ್ ನೆದರ್‌ಲ್ಯಾಂಡ್ಸ್‌
ಕ್ಷೇತ್ರ: ಸೆಮಿಕಂಡಕ್ಟರ್

7. ಫಿಲಿಪ್ಸ್‌
ಶ್ರೀ  ರಾಯ್ ಜಾಕೋಬ್ಸ್ – ಸಿಇಒ
ಕ್ಷೇತ್ರ: ಆರೋಗ್ಯ

8. ಪೋರ್ಟ್ ಆಫ್ ರೋಟರ್ಡ್ಯಾಮ್
ಶ್ರೀ ಬೌಡೆವಿಜ್ನ್ ಸೀಮನ್ಸ್ – ಸಿಇಒ
ಕ್ಷೇತ್ರ: ಸರಕು-ಸಾಗಣೆ/ ಬಂದರು ನಿರ್ವಹಣೆ

9. ಪವರ್2ಎಕ್ಸ್
ಶ್ರೀ ಒಕೊ ರೋಲೋಫ್ಸೆನ್ – ಸಿಇಒ
ಕ್ಷೇತ್ರ:  ಸ್ವಚ್ಛ ಇಂಧನ ಮತ್ತು ಇಂಧನ ಪ್ರಸರಣ

10. ಪ್ರೊಸಸ್
ಶ್ರೀ ಫ್ಯಾಬ್ರಿಸಿಯೊ ಬ್ಲೋಸಿ – ಸಿಇಒ
ಕ್ಷೇತ್ರ: ಗ್ರಾಹಕ ಇಂಟರ್ನೆಟ್ ಮತ್ತು ತಂತ್ರಜ್ಞಾನ ಹೂಡಿಕೆ ವಲಯ

11. ರಾಂಡ್ ಸ್ಟಾಡ್
ಶ್ರೀ. ಸ್ಯಾಂಡರ್ ವ್ಯಾನ್’ಟಿ ನೂರ್ಡೆಂಡೆ – ಸಿಇಒ
ಕ್ಷೇತ್ರ: ಮಾನವ ಸಂಪನ್ಮೂಲ (ಎಚ್ಆರ್) ಸೇವೆಗಳು

12. ರಿಜಿಕ್‌ ಜ್ವಾನ್‌ ಜಾಡ್‌ಟೀಲ್ಟ್‌ ಎನ್‌ ಜಾಧಾಂಡ್ಲ್‌
ಶ್ರೀ ಮಾರ್ಟಿನ್ ಎಗ್ಗಿಂಕ್ – ವ್ಯವಸ್ಥಾಪಕ ನಿರ್ದೇಶಕರು
ವಲಯ: ಕೃಷಿ ವ್ಯವಹಾರ

13. ರಾಯಲ್ ಎಚ್‌ಝಡ್ ಪಿಸಿ ಗ್ರೂಪ್
ಶ್ರೀ ಹ್ಯಾನ್ಸ್ ಹುಯಿಸ್ಟ್ರಾ – ಸಿಇಒ
ಕ್ಷೇತ್ರ:: ಕೃಷಿ ವ್ಯವಹಾರ ಮತ್ತು ಬೀಜ

14. ರಾಯಲ್ ಐಎಚ್‌ಸಿ
ಶ್ರೀ ಡೆರ್ಕ್ ಟೆ ಬೊಕೆಲ್ – ಸಿಇಒ
ಕ್ಷೇತ್ರ: ಹಡಗು ನಿರ್ಮಾಣ

15. ರಾಯಲ್ ವೊಪಾಕ್
ಶ್ರೀ ಡಿಕ್ ರಿಚೆಲ್ – ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷರು ಮತ್ತು ಸಿಇಒ
ಕ್ಷೇತ್ರ: ಇಂಧನ ಮೂಲಸೌಕರ್ಯ ಮತ್ತು ಕೈಗಾರಿಕಾ ಸರಕು-ಸಾಗಣೆ

16. ವ್ಯಾನ್ ಊರ್ಡ್‌
ಶ್ರೀ ಗೋವರ್ಟ್ ವ್ಯಾನ್ ಊರ್ಡ್ – ಸಿಇಒ
ಕ್ಷೇತ್ರ: ಮೂಲ ಸೌಕರ್ಯ

 

*****