ಪ್ರವಾಸೋದ್ಯಮ ಕ್ಷೇತ್ರದಲ್ಲಿ ಭಾರತ ಮತ್ತು ಬಲ್ಗೇರಿಯಾ ನಡುವಿನ ತಿಳುವಳಿಕೆಯ ಒಪ್ಪಂದದ (MoU) ಅಂಕಿತಕ್ಕೆ ಸಂಪುಟ ಸಮ್ಮತಿ
29 Aug, 2018
ಪ್ರವಾಸೋದ್ಯಮ ಕ್ಷೇತ್ರದ ಸಹಕಾರವನ್ನು ಬಲಿಷ್ಠಗೊಳಿಸಲು ಭಾರತ ಮತ್ತು ಬಲ್ಗೇರಿಯಾ ನಡುವೆ ತಿಳುವಳಿಕೆಯ ಒಪ್ಪಂದದ (MoU) ಅಂಕಿತಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆ ಅಂಗೀಕಾರ ನೀಡಿದೆ.
ವಿವರಗಳು:
ತಿಳುವಳಿಕೆಯ ಒಪ್ಪಂದದ (MoU) ಮುಖ್ಯ ಉದ್ದೇಶಗಳು:
ಎ) ಪ್ರವಾಸೋದ್ಯಮ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರಗಳ ವಿಸ್ತಾರಕ್ಕಾಗಿ
ಬಿ) ಪ್ರವಾಸೋದ್ಯಮ ಕ್ಷೇತ್ರದ ಮಾಹಿತಿ ಮತ್ತು ದತ್ತಾಂಶಗಳ ವಿನಿಮಯಕ್ಕಾಗಿ
ಸಿ) ಹೋಟೆಲ್ ಗಳು ಮತ್ತು ಪ್ರವಾಸ ಏರ್ಪಡಿಸುವ ಸಂಸ್ಥೆಗಳು ಸೇರಿದಂತೆ ಪ್ರವಾಸೋದ್ಯಮ ಕ್ಷೇತ್ರದ ಭಾಗೀದಾರರ ನಡುವೆ ಸಹಕಾರವನ್ನು ಪ್ರೋತ್ಸಾಹಿಸುವುದಕ್ಕಾಗಿ.
ಡಿ) ಮಾನವ ಸಂಪನ್ಮೂಲ ಅಭಿವೃದ್ಧಿ ಸಹಕಾರಕ್ಕಾಗಿ, ವಿನಿಮಯ ಕಾರ್ಯಕ್ರಮಗಳಿಗಾಗಿ
ಇ) ಧ್ವಿ-ಪಥ ಪ್ರವಾಸೋದ್ಯಮ ಪ್ರೋತ್ಸಾಹ (ಪ್ರಚಾರ)ಕ್ಕಾಗಿ ಪ್ರವಾಸ ಏರ್ಪಡಿಸುವ ಸಂಸ್ಥೆಗಳು / ಮಾಧ್ಯಮಗಳು / ಅಭಿಪ್ರಾಯ ರೂಪಿಸುವವರು (ಒಪಿನಿಯನ್ ಮೇಕರ್ಸ್)ಗಳ ವಿನಿಮಯ ಭೇಟಿಗಾಗಿ
ಈ) ಪ್ರಚಾರ, ಮಾರ್ಕೆಟಿಂಗ್, ಪ್ರವಾಸಸ್ಥಳ ಅಭಿವೃದ್ಧಿ ಮತ್ತು ಆಡಳಿತ ಕ್ಷೇತ್ರದಲ್ಲಿ ವಿನಿಮಯ ಅನುಭವಕ್ಕಾಗಿ
ಉ) ಎರಡೂ ದೇಶಗಳ ಆಕರ್ಷಣೀಯ ಪ್ರವಾಸ ಸ್ಥಳಗಳ ಪ್ರೋತ್ಸಾಹ (ಪ್ರಚಾರ)ಕ್ಕಾಗಿ ದ್ವಿಪಕ್ಷೀಯ ಸಹಕಾರ ಪೋಷಿಸುವುದಕ್ಕಾಗಿ
ಊ) ಪ್ರವಾಸೋದ್ಯಮದಲ್ಲಿ ಸುರಕ್ಷತೆ, ಗೌರವಭಾವ ಮತ್ತು ಸುಸ್ಥಿರತೆ ಗಾಗಿ
ಹಿನ್ನಲೆ:
ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಭಾರತ ಮತ್ತು ಬಲ್ಗೇರಿಯಾ ಈ ಹಿಂದೆ 26-05-1994 ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಭಾರತಕ್ಕಾಗಿ ಉತ್ತಮ ಪ್ರವಾಸೋದ್ಯಮ ಮಾರುಕಟ್ಟೆಯನ್ನು ಬಲ್ಗೇರಿಯಾ ಹೊಂದಿದೆ (2017ರಲ್ಲಿ ಅಂದಾಜು 5288 ಬಲ್ಗೇರಿಯಾ ಪ್ರವಾಸಿಗಳನ್ನು ಭಾರತ ಸ್ವೀಕರಿಸಿದೆ) ಈ ಪ್ರಮುಖ ಮಾರುಕಟ್ಟೆ ಮೂಲದಿಂದ ಪ್ರವಾಸಿಗಳ ಆಗಮನ ವೃದ್ಧಿಯಾಗಲು ಬಲ್ಗಾರಿಯ ನಡುವಿನ ತಿಳುವಳಿಕೆಯ ಒಪ್ಪಂದವು (MoU) ಮುಖ್ಯ ಸಾಧನವಾಗಲಿದೆ