Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಹಕಾರವನ್ನು ಬಲಪಡಿಸಲು ಭಾರತ ಮತ್ತು ಪರಾಗ್ವೆ ನಡುವಿನ ಒಪ್ಪಂದಕ್ಕೆ  ಸಚಿವ ಸಂಪುಟವು ಅನುಮೋದನೆ ನೀಡಿದೆ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಉಭಯ ದೇಶಗಳಸಹಕಾರವನ್ನು ಬಲಪಡಿಸುವ ಸಲುವಾಗಿ ಭಾರತ ಮತ್ತು ಪರಾಗ್ವೆ ನಡುವಿನ ತಿಳುವಳಿಕೆ ಒಪ್ಪಂದಕ್ಕೆ ಅನುಮೋದನೆ ನೀಡಿದೆಸೆಪ್ಟೆಂಬರ್ 27 2019 ರಂದು ನವದೆಹಲಿಯಲ್ಲಿ  ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಒಪ್ಪಂದದ ಪ್ರಮುಖ ಲಕ್ಷಣಗಳು ಮತ್ತು ಮುಖ್ಯ ಉದ್ದೇಶಗಳು:

1) ಪ್ರವಾಸೋದ್ಯಮ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರದ ವಿಸ್ತರಣೆ;

2) ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ದತ್ತಾಂಶಗಳ ವಿನಿಮಯ;

3) ಹೋಟೆಲ್ಗಳು ಮತ್ತು ಟೂರ್ ಆಪರೇಟರ್ಗಳು ಮತ್ತು ವಿಮಾನಯಾನ ಸಂಸ್ಥೆಗಳು ಸೇರಿದಂತೆ ಪ್ರವಾಸೋದ್ಯಮ ಮಧ್ಯಸ್ಥಗಾರರ ನಡುವೆ ಸಹಕಾರವನ್ನು ಉತ್ತೇಜಿಸುವುದು;

4) ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಸಹಕಾರಕ್ಕಾಗಿ ವಿನಿಮಯ ಕಾರ್ಯಕ್ರಮಗಳನ್ನು ಸ್ಥಾಪಿಸುವುದು;

5) ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರಗಳಲ್ಲಿ ಹೂಡಿಕೆ;

6) ದ್ವಿಮುಖ ಪ್ರವಾಸೋದ್ಯಮದ ಪ್ರಚಾರಕ್ಕಾಗಿ ಟೂರ್ ಆಪರೇಟರ್ಗಳು / ಮಾಧ್ಯಮ / ತಜ್ಞರ ವಿನಿಮಯದ ಭೇಟಿಗಳು ;

7) ಪ್ರಚಾರ ತಾಣಗಳ ಜಾಹೀರಾತುಅಭಿವೃದ್ಧಿ ಮತ್ತು ನಿರ್ವಹಣೆ ಕ್ಷೇತ್ರಗಳಲ್ಲಿ ಅನುಭವದ ವಿನಿಮಯ;

8) ಪರಸ್ಪರರ ದೇಶದಲ್ಲಿ ಪ್ರವಾಸ ಮೇಳಗಳು / ಪ್ರದರ್ಶನಗಳಲ್ಲಿ ಭಾಗವಹಿಸುವಿಕೆಮತ್ತು

9) ಸುರಕ್ಷಿತಗೌರವಾನ್ವಿತ ಮತ್ತು ಸುಸ್ಥಿರ ಪ್ರವಾಸೋದ್ಯಮವನ್ನು ಉತ್ತೇಜಿಸುವುದು.

ಪ್ರಯೋಜನಗಳು:

 ಭಾರತ ಮತ್ತು ಪರಾಗ್ವೆ ನಡುವಿನ ಒಪ್ಪಂದವು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಹಕಾರವನ್ನು ಹೆಚ್ಚಿಸಲು ಸಾಂಸ್ಥಿಕ ಕಾರ್ಯವಿಧಾನವನ್ನು ರಚಿಸಲು ಉಭಯ ರಾಷ್ಟ್ರಗಳಿಗೆ ಸಹಾಯ ಮಾಡುತ್ತದೆ.  ಪರಾಗ್ವೆಯಿಂದ ಪ್ರವಾಸಿಗರ ಆಗಮನವನ್ನು ಹೆಚ್ಚಿಸಲು ಇದು ಭಾರತಕ್ಕೆ ಮತ್ತಷ್ಟು ಸಹಾಯ ಮಾಡುತ್ತದೆಇದರಿಂದಾಗಿ ಆರ್ಥಿಕ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯಾಗುತ್ತದೆ.  

ಪ್ರವಾಸೋದ್ಯಮದ ಸಹಕಾರದ ಕ್ಷೇತ್ರಗಳಲ್ಲಿನ  ವಿಶಾಲ ಚೌಕಟ್ಟಿನೊಳಗೆ ಎಲ್ಲಾ ಸಂಬಂಧಪಟ್ಟವರಿಗೆ  ಪರಸ್ಪರ ಲಾಭಕ್ಕಾಗಿ ಇದು ದೀರ್ಘಾವಧಿಯ  ಅನುಕೂಲಕರ ಪರಿಸ್ಥಿತಿಗಳನ್ನು ಸೃಷ್ಟಿಸುತ್ತದೆ

 ಒಪ್ಪಂದದಲ್ಲಿ ನಿಗದಿಪಡಿಸಿರುವ ಉದ್ದೇಶಗಳನ್ನು ಸಾಕಾರಗೊಳಿಸುವ ಕ್ರಮಗಳನ್ನು ಕಾರ್ಯಗತಗೊಳಿಸಲು ಉತ್ತಮ ಮಾರ್ಗಗಳನ್ನು  ಅನ್ವೇಷಿಸುತ್ತದೆ.