Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಫೆಬ್ರವರಿ 22 ರಂದು ಮೀರತ್‌ ಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ 


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫೆಬ್ರವರಿ 22, 2026 ರಂದು ಉತ್ತರ ಪ್ರದೇಶದ ಮೀರತ್‌ ನಗರಕ್ಕೆ ಗೆ ಭೇಟಿ ನೀಡಲಿದ್ದಾರೆ. ಅಂದು ಮಧ್ಯಾಹ್ನ 12:30 ರ ಸುಮಾರಿಗೆ, ಶತಾಬ್ದಿ ನಗರ ನಮೋ ಭಾರತ್ ನಿಲ್ದಾಣದಲ್ಲಿ ಮೀರತ್ ಮೆಟ್ರೋ ಮತ್ತು ನಮೋ ಭಾರತ್ ರೈಲಿಗೆ ಪ್ರಧಾನಮಂತ್ರಿಯವರು ಚಾಲನೆ ನೀಡಲಿದ್ದಾರೆ. ಅಲ್ಲಿಂದ ಅವರು ಮೀರತ್ ದಕ್ಷಿಣ ನಿಲ್ದಾಣದವರೆಗೆ ಮೆಟ್ರೋ ಪ್ರಯಾಣ ಕೈಗೊಳ್ಳಲಿದ್ದಾರೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ, ಪ್ರಧಾನಮಂತ್ರಿ ಅವರು ಮೀರತ್‌ ನಲ್ಲಿ ಸುಮಾರು ₹12,930 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ  ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ನೆರೆದ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಪ್ರಧಾನಮಂತ್ರಿಯವರು 82 ಕಿ.ಮೀ. ದೆಹಲಿ-ಮೀರತ್ ನಮೋ ಭಾರತ್ ಕಾರಿಡಾರ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಭಾರತದ ಮೊದಲ ನಮೋ ಭಾರತ್ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಯ (ಆರ್‌.ಆರ್‌.ಟಿ.ಎಸ್.) ಉಳಿದ ವಿಭಾಗಗಳನ್ನು ಅವರು ಉದ್ಘಾಟಿಸಲಿದ್ದಾರೆ. ಇವುಗಳಲ್ಲಿ ದೆಹಲಿಯ ಸರಾಯ್ ಕಾಲೇ ಖಾನ್ ಮತ್ತು ನ್ಯೂ ಅಶೋಕ್ ನಗರ ನಡುವಿನ 5 ಕಿ.ಮೀ. ವಿಭಾಗ ಮತ್ತು ಮೀರತ್ ದಕ್ಷಿಣ ಮತ್ತು ಉತ್ತರ ಪ್ರದೇಶದ ಮೋದಿಪುರಂ ನಡುವಿನ 21 ಕಿ.ಮೀ. ವಿಭಾಗ ಸೇರಿವೆ.

ಇದು, ಗಂಟೆಗೆ 180 ಕಿ.ಮೀ.ವೇಗ ವಿನ್ಯಾಸದೊಂದಿಗೆ, ನಮೋ ಭಾರತ್ ಭಾರತದ ಮೊದಲ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಯಾಗಿದೆ. ಇದು ಸಾಹಿಬಾಬಾದ್, ಗಾಜಿಯಾಬಾದ್, ಮೋದಿನಗರ ಮತ್ತು ಮೀರತ್‌ನಂತಹ ಪ್ರಮುಖ ನಗರ ಕೇಂದ್ರಗಳನ್ನು ದೆಹಲಿಯೊಂದಿಗೆ ವೇಗವಾಗಿ ಸಂಪರ್ಕಿಸಲಿದೆ.

ಕಾರಿಡಾರ್‌ ನ ಮೂಲ ನಿಲ್ದಾಣವಾದ ಸರಾಯ್ ಕಾಲೇ ಖಾನ್, ಈ ಉದ್ಘಾಟನೆಯೊಂದಿಗೆ ಕಾರ್ಯಾರಂಭ ಮಾಡಲಿರುವ ನಾಲ್ಕು ನಮೋ ಭಾರತ್ ನಿಲ್ದಾಣಗಳಲ್ಲಿ ಒಂದಾಗಿದೆ.  ಇದು ಕಾರ್ಯತಂತ್ರದ ನೆಲೆಯಲ್ಲಿದ್ದು, ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣ, ದೆಹಲಿ ಮೆಟ್ರೋದ ಪಿಂಕ್ ಲೈನ್, ವೀರ್ ಹಕೀಕತ್ ರೈ ಐಎಸ್‌ಬಿಟಿ ಮತ್ತು ರಿಂಗ್ ರಸ್ತೆಯನ್ನು ಸರಾಗವಾಗಿ ಸಂಪರ್ಕಿಸುವ ಪ್ರಮುಖ ಬಹು-ಮಾದರಿ ಕೇಂದ್ರವಾಗಿದೆ. ಮೀರತ್‌ ನಲ್ಲಿ ಕಾರ್ಯಾರಂಭ ಮಾಡುತ್ತಿರುವ ಇತರ ಮೂರು ನಮೋ ಭಾರತ್ ನಿಲ್ದಾಣಗಳಾದ ಶತಾಬ್ದಿ ನಗರ, ಬೇಗಂಪುಲ್ ಮತ್ತು ಮೋದಿಪುರಂಗಳು ಮೀರತ್‌ ನಲ್ಲಿವೆ.

ದೇಶದಲ್ಲಿ ಇದೇ ಮೊದಲ ಬಾರಿಗೆ ನಮೋ ಭಾರತ್‌ ನಂತೆಯೇ ಅದೇ ಮೂಲಸೌಕರ್ಯದಲ್ಲಿ ಕಾರ್ಯನಿರ್ವಹಿಸುವ ಮೀರತ್ ದಕ್ಷಿಣ ಮತ್ತು ಮೋದಿಪುರಂ ನಡುವಿನ ಮೀರತ್ ಮೆಟ್ರೋ ಸೇವೆಗಳನ್ನು ಪ್ರಧಾನಮಂತ್ರಿ ಅವರು ಉದ್ಘಾಟಿಸಲಿದ್ದಾರೆ. ಮೀರತ್ ಮೆಟ್ರೋ ಸುಮಾರು 120 ಕಿ.ಮೀ. ಗರಿಷ್ಠ ಕಾರ್ಯಾಚರಣೆಯ ವೇಗದೊಂದಿಗೆ ಭಾರತದ ಅತ್ಯಂತ ವೇಗದ ಮೆಟ್ರೋ ವ್ಯವಸ್ಥೆಯಾಗಲಿದೆ. ಮೆಟ್ರೋ ಕೇವಲ 30 ನಿಮಿಷಗಳಲ್ಲಿ ಇಡೀ ಪ್ರದೇಶವನ್ನು ಕ್ರಮಿಸುತ್ತದೆ, ಮಾರ್ಗದಲ್ಲಿ ಎಲ್ಲಾ ನಿಗದಿತ ನಿಲುಗಡೆಗಳನ್ನು ಹೊಂದಿರುತ್ತದೆ. ನಮೋ ಭಾರತ್ ಮತ್ತು ಮೀರತ್ ಮೆಟ್ರೋಗಳ ಈ ಸರಾಗವಾದ ಏಕೀಕರಣವು ಅತಿ ವೇಗದ ಅಂತರ-ನಗರ ಪ್ರಯಾಣ ಮತ್ತು ತ್ವರಿತ ನಗರದೊಳಗಿನ ಚಲನೆಯನ್ನು ಖಚಿತಪಡಿಸುತ್ತದೆ, ಇದು ಭಾರತದಲ್ಲಿ ಸಮಗ್ರ ನಗರ ಮತ್ತು ಪ್ರಾದೇಶಿಕ ಸಾರಿಗೆಗೆ ಮಾನದಂಡವನ್ನು ಸ್ಥಾಪಿಸುತ್ತದೆ. ಇದು ರಸ್ತೆ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಪರಿಣಾಮವಾಗಿ ವಾಹನ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಗುತ್ತದೆ.

ನಗರ ಚಲನಶೀಲತೆಯನ್ನು ಪರಿವರ್ತಿಸುವ ಮತ್ತು ನಾಗರಿಕರ ಜೀವನ ಸುಗಮತೆಯನ್ನು ಸುಧಾರಿಸುವ ಸುಗಮ, ದಕ್ಷ, ಆಧುನಿಕ ಮತ್ತು ಸುಸ್ಥಿರ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳುವ ಪ್ರಧಾನಮಂತ್ರಿಯವರ ಪರಿಕಲ್ಪನೆಯ ದೃಷ್ಟಿಕೋನಕ್ಕೆ ಈ ಯೋಜನೆಗಳು ಮತ್ತಷ್ಟು ಉತ್ತೇಜನ ನೀಡುತ್ತವೆ. 

 

*****