Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬಾಹ್ಯಾಕಾಶ ತಂತ್ರಜ್ಞಾನ ಸಹಕಾರಕ್ಕಾಗಿ ಭಾರತ ಮತ್ತು ನೆದರ್ಲ್ಯಾಂಡ್ಸ್ ನಡುವೆ ಆಗಿರುವ ಎಂ.ಓ.ಯು ಬಗ್ಗೆ ಸಂಪುಟಕ್ಕೆ ವಿವರಣೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ಭಾರತ ಮತ್ತು ನೆದರ್ಲ್ಯಾಂಡ್ಸ್ ನಡುವೆ ಬಾಹ್ಯಾಕಾಶದ ಶೋಧನೆ ಮತ್ತು ಶಾಂತಿಯುತ ಉದ್ದೇಶದ ಬಳಕೆಯ ಸಹಕಾರಕ್ಕಾಗಿ ಆಗಿರುವ ತಿಳಿವಳಿಕೆ ಒಪ್ಪಂದ (ಎಂ.ಓ.ಯು.) ಬಗ್ಗೆ ವಿವರ ನೀಡಲಾಯಿತು. ಈ ತಿಳಿವಳಿಕೆ ಒಪ್ಪಂದಕ್ಕೆ 2017ರ ಮೇ 11 ಮತ್ತು 22ರಂದು ಬೆಂಗಳೂರಿನಲ್ಲಿ ಮತ್ತು ಹೇಗ್ ನಲ್ಲಿ ಅನುಕ್ರಮವಾಗಿ ಅಂಕಿತ ಹಾಕಲಾಗಿತ್ತು.

ಪ್ರಯೋಜನಗಳು:

ಈ ತಿಳಿವಳಿಕೆ ಒಪ್ಪಂದವು ಈ ಕೆಳಕಂಡ ಕ್ಷೇತ್ರಗಳ ಸಹಕಾರವನ್ನು ಅಂದರೆ, ಭೂ ದೂರ ಸಂವೇದಿ ಸೇರಿದಂತೆ ಬಾಹ್ಯಾಕಾಶ ವಿಜ್ಞಾನ, ತಂತ್ರಜ್ಞಾನ ಮತ್ತು ಆನ್ವಯಿಕಗಳ; ಉಪಗ್ರಹ ಸಂವಹನ ಮತ್ತು ಉಪಗ್ರಹ ಆಧಾರಿತ ಪಥದರ್ಶನ; ಬಾಹ್ಯಾಕಾಶ ವಿಜ್ಞಾನ ಮತ್ತು ಗ್ರಹಗಳ ಪರಿಶೋಧನೆ; ಬಾಹ್ಯಾಕಾಶ ನೌಕೆ ಮತ್ತು ಬಾಹ್ಯಾಕಾಶ ವ್ಯವಸ್ಥೆ ಮತ್ತು ಭೂ ವ್ಯವಸ್ಥೆಯ ಬಳಕೆ; ಮತ್ತು ಬಾಹ್ಯಾಕಾಶ ತಂತ್ರಜ್ಞಾನದ ಆನ್ವಯಿಕಗಳ ಸಹಕಾರಕ್ಕೆ ಅವಕಾಶ ನೀಡುತ್ತದೆ.

ವಿಧಾನಗಳು:

ಈ ತಿಳಿವಳಿಕೆ ಒಪ್ಪಂದವು, ಬಾಹ್ಯಾಕಾಶ ಇಲಾಖೆ/ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಡಿಓಎಸ್/ಇಸ್ರೋ), ಮತ್ತು ನೆದರ್ಲ್ಯಾಂಡ್ಸ್ ನ ಬಾಹ್ಯಾಕಾಶ ಕಚೇರಿ (ಎನ್.ಎಸ್.ಓ)ಯಿಂದ ಸದಸ್ಯರನ್ನು ಸೇರಿಸಿಕೊಂಡು ಜಂಟಿ ಕಾರ್ಯಪಡೆಯನ್ನು ಸ್ಥಾಪಿಸಲು ಅವಕಾಶ ನೀಡುತ್ತದೆ, ಇದು ಎಂ.ಓ.ಯು. ಅನುಷ್ಠಾನದ ವಿಧಾನ ಮತ್ತು ಕಾಲಮಿತಿಯ ಬಗೆಗಿನ ಕ್ರಿಯಾ ಯೋಜನೆಗಳನ್ನು ರೂಪಿಸುತ್ತದೆ. ಇದು ಭೂ ದೂರ ಸಂವೇದಿ ಕ್ಷೇತ್ರದ ಹೊಸ ಸಂಶೋಧನಾ ಚಟುವಟಿಕೆ ಮತ್ತು ಆನ್ವಯಿಕಗಳ ಸಾಧ್ಯತೆ; ಉಪಗ್ರಹ ಸಂವಹನ; ಉಪಗ್ರಹ ಪಥದರ್ಶನ; ಬಾಹ್ಯಾಕಾಶ ವಿಜ್ಞಾನ ಮತ್ತು ಬಾಹ್ಯಾಕಾಶದ ಪರಿಶೋಧನೆಗೆ ಇಂಬು ನೀಡುತ್ತದೆ
ಈ ತಿಳಿವಳಿಕೆ ಒಪ್ಪಂದವು ಮನುಕುಲದ ಅನುಕೂಲಕ್ಕಾಗಿ ಬಾಹ್ಯಾಕಾಶ ತಂತ್ರಜ್ಞಾನದ ಆನ್ವಯಿಕಗಳ ಕ್ಷೇತ್ದಲ್ಲಿ ಜಂಟಿ ಚಟುವಟಿಕೆ ಅಭಿವೃದ್ಧಿಪಡಿಸಲು ದಾರಿ ಮಾಡಿಕೊಡುತ್ತದೆ. ಇದರಿಂದ ದೇಶದ ಎಲ್ಲ ಭಾಗಗಳು ಮತ್ತು ವಿಭಾಗಗಳು ಪ್ರಯೋಜನ ಪಡೆಯಲಿವೆ.

ಹಿನ್ನೆಲೆ:

ಡಿಓಎಸ್/ಇಸ್ರೋ ಕೇಂದ್ರಗಳು ನೆದರ್ಲ್ಯಾಂಡ್ಸ್ ನ ಐಟಿಸಿ (ಟ್ವೆಂಟೆ ವಿಶ್ವವಿದ್ಯಾಲಯದ ಭೂ ಮಾಹಿತಿ ವಿಜ್ಞಾನ ಮತ್ತು ಭೂ ನಿಗಾ ಕುರಿತ ಅಂತಾರಾಷ್ಟ್ರೀಯ ಸಂಸ್ಥೆ)ಯೊಂದಿಗೆ ಸಾಮರ್ಥ್ಯ ವರ್ಧನೆ; ಮತ್ತು ರಾಯಲ್ ನೆದರ್ಲ್ಯಾಂಡ್ಸ್ ಹವಾಮಾನ ಸಂಸ್ಥೆ (ಕೆ.ಎನ್.ಎಂ.ಐ.) ಯೊಂದಿಗೆ ಭೂಮಿಯ ವೀಕ್ಷಣೆಗೆ ಮಾಪನಾಂಕ ನಿರ್ಣಯ / ಮೌಲ್ಯಮಾಪನ ಪ್ರಯೋಗಗಳನ್ನು ನಡೆಸುವುದರಲ್ಲಿ ದೀರ್ಘಕಾಲದ ಸಂಪರ್ಕವನ್ನು ಹೊಂದಿವೆ. ಬಾಹ್ಯಾಕಾಶ ಇಲಾಖೆ (ಡಿಓಎಸ್)ನ ವಾಣಿಜ್ಯ ವಿಭಾಗ ಅಂತರಿಕ್ಷ ನಿಗಮವು ನೆದರ್ಲ್ಯಾಂಡ್ಸ್ ಗೆ ಸೇರಿದ ಉಪಗ್ರಹವನ್ನು (ಡಿಇ.ಎಲ್.ಎಫ್.ಐ – ಸಿ 3)ನ್ನು 2008ರಲ್ಲಿ ಉಡಾವಣೆ ಮಾಡಿತ್ತು. ಇಸ್ರೋ ಮತ್ತು ನೆದರ್ಲ್ಯಾಂಡ್ಸ್ ಬಾಹ್ಯಾಕಾಶ ಕಚೇರಿ (ಎನ್.ಎಸ್.ಓ) ಅಧಿಕಾರಿಗಳು ಎರಡೂ ದೇಶಗಳ ನಡುವೆ ಬಾಹ್ಯಾಕಾಶ ಸಹಕಾರ ವರ್ಧನೆಯ ವಿಧಾನಗಳ ಬಗ್ಗೆ ಚರ್ಚಿಸಿದ್ದರು. ಆ ಪ್ರಕಾರವಾಗಿ, ಎರಡೂ ಕಡೆಯವರು ಶಾಂತಿಯುತ ಉದ್ದೇಶಕ್ಕಾಗಿ ಬಾಹ್ಯಾಕಾಶದ ಬಳಕೆ ಮತ್ತು ಪರಿಶೋಧನೆಯ ಸಹಕಾರಕ್ಕಾಗಿ ಪರಸ್ಪರರ ಒಪ್ಪಿತವಾದ ತಿಳಿವಳಿಕೆ ಒಪ್ಪಂದಕ್ಕೆ ಬಂದಿದ್ದರು.

****

AKT/VBA/SH