Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬಿಹಾರದ ಪ್ರವಾಹ ಪರಿಸ್ಥಿತಿ ಕುರಿತಂತೆ ಆ ರಾಜ್ಯದ ಮುಖ್ಯಮಂತ್ರಿಯೊಂದಿಗೆ ಮಾತನಾಡಿದ ಪ್ರಧಾನಿ; ಬಿಹಾರ ಸರ್ಕಾರಕ್ಕೆ ಎಲ್ಲ ಅಗತ್ಯ ನೆರವಿನ ಭರವಸೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ತಲೆದೋರಿರುವ ಪ್ರವಾಹ ಪರಿಸ್ಥಿತಿ ಕುರಿತಂತೆ ಬಿಹಾರ ರಾಜ್ಯದ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದರು.

ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಬಿಹಾರ ಸರ್ಕಾರಕ್ಕೆ ಎಲ್ಲ ಅಗತ್ಯ ನೆರವಿನ ಭರವಸೆಯನ್ನು ಕೇಂದ್ರ ನೀಡಿದೆ ಮತ್ತು ಪರಿಸ್ಥಿತಿಯ ಬಗ್ಗೆ ನಿಕಟ ನಿಗಾ ವಹಿಸಿದೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

“ಬಿಹಾರದ ಕೆಲವು ಭಾಗದಲ್ಲಿ ಉಂಟಾಗಿರುವ ಪ್ರವಾಹದಿಂದ ಬಾಧಿತರಾಗಿರುವ ಎರೆಲ್ಲರೊಂದಿಗೆ ನನ್ನ ಸಂವೇದನೆ ಇದೆ. ಪರಿಸ್ಥಿತಿಯ ಬಗ್ಗೆ ನಿಕಟವಾಗಿ ನಿಗಾ ವಹಿಸಲಾಗಿದೆ.

ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಿಸಲು ಬಿಹಾರ ಸರ್ಕಾರಕ್ಕೆ ಕೇಂದ್ರ ಎಲ್ಲ ಅಗತ್ಯ ನೆರವು ಒದಗಿಸಲಿದೆ. ಎನ್.ಡಿ.ಆರ್.ಎಫ್.ನ ತಂಡಗಳು ಬಿಹಾರದಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯದಲ್ಲಿ ತೊಡಗಿವೆ”, ಎಂದು ಪ್ರಧಾನಿ ತಿಳಿಸಿದ್ದಾರೆ.

******

AKT/NT