Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬೆಂಗಳೂರಿನಲ್ಲಿ 2017 ಜನವರಿ 8ರಂದು ನಡೆದ 14ನೇ ಪ್ರವಾಸಿ ಭಾರತೀಯ ದಿವಸ್ ಸಮ್ಮೇಳನದ ಉದ್ಘಾಟನೆ ಸಂದರ್ಭವಾಗಿ ಪ್ರಧಾನಮಂತ್ರಿ ಯವರ ಭಾಷಣ

ಬೆಂಗಳೂರಿನಲ್ಲಿ 2017 ಜನವರಿ 8ರಂದು ನಡೆದ 14ನೇ ಪ್ರವಾಸಿ ಭಾರತೀಯ ದಿವಸ್ ಸಮ್ಮೇಳನದ ಉದ್ಘಾಟನೆ ಸಂದರ್ಭವಾಗಿ ಪ್ರಧಾನಮಂತ್ರಿ ಯವರ  ಭಾಷಣ

ಬೆಂಗಳೂರಿನಲ್ಲಿ 2017 ಜನವರಿ 8ರಂದು ನಡೆದ 14ನೇ ಪ್ರವಾಸಿ ಭಾರತೀಯ ದಿವಸ್ ಸಮ್ಮೇಳನದ ಉದ್ಘಾಟನೆ ಸಂದರ್ಭವಾಗಿ ಪ್ರಧಾನಮಂತ್ರಿ ಯವರ  ಭಾಷಣ

ಬೆಂಗಳೂರಿನಲ್ಲಿ 2017 ಜನವರಿ 8ರಂದು ನಡೆದ 14ನೇ ಪ್ರವಾಸಿ ಭಾರತೀಯ ದಿವಸ್ ಸಮ್ಮೇಳನದ ಉದ್ಘಾಟನೆ ಸಂದರ್ಭವಾಗಿ ಪ್ರಧಾನಮಂತ್ರಿ ಯವರ  ಭಾಷಣ


ಸ್ನೇಹಿತರೇ ಮತ್ತು ಗಣ್ಯರೇ,

ಮೊದಲಿಗೆ, ಪೊರ್ಚುಗಲ್’ನ ಮಾಜಿ ಅಧ್ಯಕ್ಷರು ಮತ್ತು ಪ್ರಧಾನಿಯಾದ ಮಿರಿಯೊ ಸೊರೆಸ್ ಅವರ ನಿಧನಕ್ಕೆ ಆ ದೇಶದ ಜನತೆ ಮತ್ತು ಸರ್ಕಾರಕ್ಕೆ ನಮ್ಮ ಸಾಂತ್ವನವನ್ನು ಹೇಳಲು ಬಯಸುತ್ತೇನೆ. ಅವರು ಪೊರ್ಚುಗಲ್’ನ ಅತ್ಯುತ್ತಮ ನಾಯಕ ಮತ್ತು ಜಾಗತಿಕ ರಾಜಕೀಯ ಮುತ್ಸದ್ದಿಯಾಗಿದ್ದರು. ಅವರು ಭಾರತ ಮತ್ತು ಪೋರ್ಚುಗಲ್ ನಡುವಿನ ರಾಜತಾಂತ್ರಿಕ ಸಂಬಂಧಗಳ ಮರುಸ್ಥಾಪನೆಯ ನಿರ್ಮಾತೃವಾಗಿದ್ದರು. ದುಃಖದ ಈ ಸಂದರ್ಭದಲ್ಲಿ ಪೋರ್ಚುಗಲ್’ಗೆ ನಾವು ಸಂಪೂರ್ಣ ಬೆಂಬಲವನ್ನು ನೀಡುತ್ತೇವೆ.

ಸುರಿನಾಮ್ ನ ಮಾನ್ಯ ಉಪಾಧ್ಯಕ್ಷರಾದ ಶ್ರೀ ಮೈಕೇಲ್ ಅಶ್ವಿನ್ ಅಧಿನ್ ಅವರೆ, ಪೋರ್ಚುಗಲ್’ನ ಪ್ರಧಾನ ಮಂತ್ರಿಗಳಾದ ಮಾನ್ಯ ಡಾ.ಆಂಥೋನಿಯೋ ಕೋಸ್ಟಾ ಅವರೆ, ಕರ್ನಾಟಕದ ರಾಜ್ಯಪಾಲರಾದ ಶ್ರೀ ವಜೂ ಭಾಯಿ ವಾಲಾ ಅವರೆ, ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರೆ, ಗೌರವನೀಯ ಸಚಿವರೇ, ಭಾರತ ಮತ್ತು ವಿದೇಶಗಳಿಂದ ಆಗಮಿಸಿರುವ ಗಣ್ಯರೇ, ಮತ್ತು ಸೀಮಾಂತರ ಭಾರತೀಯರ ಜಾಗತಿಕ ಕುಟುಂಬದ ಎಲ್ಲ ಪ್ರಮುಖರೇ,

ನಿಮ್ಮೆಲ್ಲರನ್ನೂ ಈ 14ನೇ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮಕ್ಕೆ ಆಹ್ವಾನಿಸಲು ನನಗೆ ಬಹಳ ಸಂತೋಷವಾಗಿದೆ. ಇಂದು ನಮ್ಮನ್ನು ಇಲ್ಲಿ ಸೇರಲು ನಿಮ್ಮಲ್ಲಿನ ಸಾವಿರಾರು ಮಂದಿ ಬಹು ದೂರದ ಪ್ರದೇಶಗಳಿಂದ ಆಗಮಿಸಿದ್ದೀರಿ. ಇನ್ನೂ ಲಕ್ಷಾಂತರ ಮಂದಿ ಡಿಜಿಟಲ್ ವೇದಿಕೆಗಳ ಮುಖಾಂತರ ನಮ್ಮೊಂದಿಗೆ ಸಂಪರ್ಕ ಹೊಂದಿದ್ದಾರೆ.

ಈ ದಿನವನ್ನು ಭಾರತದ ಪ್ರವಾಸಿಗಳಲ್ಲಿ ಪ್ರಖ್ಯಾತರಾದ-ಮಹಾತ್ಮಾ ಗಾಂಧಿಯವರು ದೇಶಕ್ಕೆ ಹಿಂದಿರುಗಿ ಬಂದಿದ್ದರ ಜ್ಞಾಪಕಾರ್ಥವಾಗಿ ಆಚರಿಸಲಾಗುತ್ತಿದೆ.

ये एक ऐसा पर्व है जिस में एक प्रकार से host भी आप ही हैं, guest भी आप ही हैं। यह पर्व एक ऐसा पर्व है जिसमें उसकी विदेश में रहनेवाली संतान से मिलने का अवसर है। अपनों को अपनों से मिलना, अपने लिए नहीं सबके लिए मिलना। इस event की असली पहचान आन-बान-शान जो कुछ भी है आप सब लोग हैं। आप का इस पर्व में सम्मिलित होना हमारे लिए बहुत-बहुत गर्व की बात है। आप सबका तहे दिल से स्वागत है |

ನಾವು ಈ ಕಾರ್ಯಕ್ರಮವನ್ನು ಸುಂದರ ನಗರ ಬೆಂಗಳೂರಿನಲ್ಲಿ ಆಚರಿಸುತ್ತಿದ್ದೇವೆ. ಈ ಕಾರ್ಯಕ್ರಮವನ್ನು ಆಯೋಜಿಸಲು, ಯಶಸ್ವಿಗೊಳಿಸಲು ಸಹಕರಿಸಿದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ, ಮತ್ತು ಅವರ ಇಡೀ ಸರ್ಕಾರಕ್ಕೆ ನಾನು ಧನ್ಯವಾದಗಳನ್ನು ತಿಳಿಸಲು ಬಯಸುತ್ತೇನೆ.
ಪೋರ್ಚುಗಲ್’ನ ಪ್ರಧಾನಿ, ಸುರಿನಾಮೆಯ ಉಪಾಧ್ಯಕ್ಷರು, ಮಲೇಷಿಯಾ ಮತ್ತು ಮಾರಿಷಸ್’ನ ಗೌರವಾನ್ವಿತ ಮಂತ್ರಿಗಳನ್ನು ಈ ಕಾರ್ಯಕ್ರಮಕ್ಕೆ ಸ್ವಾಗತಿಸಲು ನನಗೆ ಬಹಳ ಸಂತೋಷವಾಗಿದೆ.

ಅವರ ಸಾಧನೆಗಳು, ತಮ್ಮದೇ ಆದ ಸಮಾಜಗಳಲ್ಲಿ ಮತ್ತು ಜಾಗತಿಕವಾಗಿ ಅವರು ಗಳಿಸಿದ ಹೆಸರು ನಮ್ಮೆಲ್ಲರಿಗೂ ಉತ್ತಮ ಸ್ಫೂರ್ತಿಯಾಗಿದೆ. ಪ್ರಪಂಚದಾದ್ಯಂತ ಇರುವ ಭಾರತೀಯ ವಲಸಿಗರ ಯಶಸ್ಸು, ವೈಭವ ಮತ್ತು ಪರಿಶ್ರಮವನ್ನು ಇದು ಪ್ರತಿಬಿಂಬಿಸುತ್ತದೆ. ಸುಮಾರು 30 ಮಿಲಿಯನ್ ವಿದೇಶಗಳಲ್ಲಿ ವಾಸಿಸುತ್ತಿರುವ ಅನಿವಾಸಿ ಭಾರತೀಯರು ಇದ್ದಾರೆ. ಅವರ ಹೆಜ್ಜೆ ಗುರುತು ಪ್ರಪಂಚದಾದ್ಯಂತ ಇದೆ. ಆದರೆ, ವಿದೇಶಗಳಲ್ಲಿರುವ ಭಾರತೀಯರು ತಮ್ಮ ಸಂಖ್ಯಾಬಲಕ್ಕೆ ಮಾತ್ರವಲ್ಲ. ಭಾರತಕ್ಕೆ ಮತ್ತು ಅವರು ವಾಸಿಸುವ ಸಮಾಜಗಳು ಮತ್ತು ರಾಷ್ಟ್ರಗಳಿಗೆ ನೀಡುತ್ತಿರುವ ಕೊಡುಗೆಗಳಿಗೆ ಅವರು ಗೌರವಾನ್ವಿತರಾಗಿದ್ದಾರೆ. ಅವರು ತೆಗೆದುಕೊಳ್ಳುವ ಮಾರ್ಗ, ಅವರು ಅನುಸರಿಸುವ ಗುರಿ ಯಾವುದಾದರೂ ಪ್ರಪಂಚದಾದ್ಯಂತ ಅನಿವಾಸಿ ಭಾರತೀಯರು ವಿದೇಶಿ ಪ್ರದೇಶಗಳು ಮತ್ತು ಸಮುದಾಯಗಳಲ್ಲಿ, ಅತ್ಯುತ್ತಮ ಭಾರತೀಯ ಸಂಸ್ಕೃತಿ, ಧಾರ್ಮಿಕತೆ ಮತ್ತು ಮೌಲ್ಯಗಳನ್ನು ಪ್ರತಿನಿಧಿಸುತ್ತಿದ್ದಾರೆ. ಅವರ ಕಠಿಣ ಪರಿಶ್ರಮ, ಶಿಸ್ತು, ಕಾನೂನು-ಪಾಲಿಸುವ ಮತ್ತು ಶಾಂತಿಯನ್ನು ಪ್ರೀತಿಸುವ ಸ್ವಭಾವವು ವಿದೇಶದಲ್ಲಿ ಇತರ ವಲಸಿಗ ಸಮುದಾಯಗಳಿಗೆ ಆದರ್ಶಪ್ರಾಯರಾಗಿದ್ದಾರೆ.

आप की प्रेरणा कई प्रकार की है, उद्देश्य अनेक हैं, आपके मार्ग भिन्‍न–भिन्‍न हैं, हर किसी की मंजिल भी अलग है लेकिन हम सबकेभीतर एक ही भाव विश्‍व है, और वो भाव जगत है भारतीयता। प्रवासी भारतीय जहां रहे उस धरती को उन्‍होंने कर्मभूमि माना, औरजहां से आए उसे मर्मभूमि माना। आज आप उस कर्मभूमि की सफलताओं को, उसकी गठरी बांध करके उस मर्मभूमि में पधारे हैं जहां सेआपको, आपके पूर्वजों को, अविरत् प्रेरणा मिलती रही है। प्रवासी भारतीय जहां रहे वहांका विकास किया और जहां के हैं वहां भी अपनाअप्रतिम रिश्‍ता जोड़ करके रखा, हो सके उतना योगदान किया।

ಸ್ನೇಹಿತರೇ, ನನ್ನ ಸರ್ಕಾರಗಳು ಮತ್ತು ವೈಯಕ್ತಿಕವಾಗಿ ನನಗೆ, ಸಾಗರೋತ್ತರ ಭಾರತೀಯ ಸಮುದಾಯದೊಂದಿಗೆ ಸಂಪರ್ಕದಲ್ಲಿರುವುದು ಆದ್ಯತೆಯ ಅತಿಮುಖ್ಯ ಕ್ಷೇತ್ರವಾಗಿದೆ. ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಯುಎಇ, ಕತಾರ್, ಸಿಂಗಾಪುರ್, ಫಿಜಿ, ಚೀನಾ, ಜಪಾನ್, ದಕ್ಷಿಣ ಕೊರಿಯಾ, ಕೀನ್ಯಾ, ಮಾರಿಷಸ್, ಸೇಶೆಲ್ಸ್, ಮತ್ತು ಮಲೇಷಿಯಾಗಳಲ್ಲಿ ನಾನು ಪ್ರವಾಸ ಮಾಡಿದ ಸಂದರ್ಭಗಳಲ್ಲಿ ನಾನು ನೂರಾರು, ಸಾವಿರಾರು ಭಾರತೀಯ ಸಹೋದರರು ಮತ್ತು ಸಹೋದರಿಯರೊಂದಿಗೆ ಭೇಟಿಯಾಗಿ ಮಾತನಾಡಿದ್ದೇನೆ..

ಪರಿಣಾಮವಾಗಿ, ನಮ್ಮ ನಿರಂತರ ಮತ್ತು ಕ್ರಮಬದ್ಧವಾದ ಸಂಪರ್ಕದ ಪರಿಣಾಮವಾಗಿ, ಭಾರತದ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಯೊಂದಿಗೆ ಹೆಚ್ಚು ಶಕ್ತಿಶಾಲಿ ಮತ್ತು ಅನಿವಾಸಿ ಭಾರತೀಯರ ನಡುವೆ ಬಲಿಷ್ಟವಾದ ಸಂಪರ್ಕ ಕಲ್ಪಿಸಲು ಹೊಸ ಶಕ್ತಿ, ತೀವ್ರ ಬಯಕೆ ಮತ್ತು ಬಲವಾದ ಚಾಲನೆ ದೊರೆತಿದೆ.

ಸೀಮಾಂತರ ಭಾರತೀಯರು ಪ್ರತಿವರ್ಷ ಸುಮಾರು ಅರವತ್ತೊಂಬತ್ತು ಶತಕೋಟಿ ಡಾಲರ್ ಹಣವನ್ನು ರವಾನೆ ಮಾಡುವ ಮೂಲಕ ಭಾರತೀಯ ಆರ್ಥಿಕತೆಗೆ ಅಮೂಲ್ಯ ಕೊಡುಗೆ ನೀಡುತ್ತಿದ್ದಾರೆ.

प्रवासी भारतीयों में देश के विकास के लिए अदम्य इच्छाशक्ति है; वे देश की प्रगति में सहयात्री हैं। Co-traveler हैं। हमारी विकास यात्रामें आप हमारे एक Valuable साथी हैं, Partner हैं, stakeholder हैं। कभी चर्चा हुआ करती थी Brain-Drain. हर कोई सवाल पूछता थाBrain-Drain, और मैं उस समय लोगों को कहता था; तब तो न मुख्‍यमंत्री था न प्रधानमंत्री था; जब लोग कहते थे कि Brain-Drain, Brain-Drain हो रहा था तो मैं कह रहा था क्‍या बुद्धु लोग ही यहां बचे हैं क्‍या? लेकिन आज मैं बड़े विश्‍वास के साथ कहना चाहता हूं हमलोग जो Brain-Drain की चर्चा करते थे, वर्तमान सरकार के initiatives उस Brain-Drain में से भी Brain-Gain के लिए है। हम Brain-Drain को Brain-Gain में बदलना चाहते हैं, और वो सब आप सबकी सहभागिता से ही संभव होने वाला है, और होके रहने वाला है, येमेरा विश्‍वास है।

ಅನಿವಾಸಿ ಭಾರತೀಯರು ಮತ್ತು ಭಾರತೀಯ ಮೂಲದ ವಿದೇಶೀ ಪ್ರಜೆಗಳು ತಮ್ಮ ಆಯ್ಕೆಯ ಕ್ಷೇತ್ರಗಳಿಗೆ ಅತ್ಯುತ್ತಮ ಕೊಡುಗೆಯನ್ನು ನೀಡಿದ್ದಾರೆ. ಅವರಲ್ಲಿ ಕೆಲವರು ಉನ್ನತ ಮಟ್ಟದ ರಾಜಕಾರಣಿಗಳು, ಖ್ಯಾತ ವಿಜ್ಞಾನಿಗಳು, ಅತ್ಯುತ್ತಮ ವೈದ್ಯರು, ಅದ್ಭುತ ಶಿಕ್ಷಣ ತಜ್ಞರು, ಅರ್ಥಶಾಸ್ತ್ರಜ್ಞರು, ಸಂಗೀತಗಾರರು, ಪ್ರಸಿದ್ಧ ಸಮಾಜ ಸೇವಕರು, ಪತ್ರಕರ್ತರು, ಬ್ಯಾಂಕರ್’ಗಳು, ಎಂಜಿನಿಯರುಗಳು ಮತ್ತು ವಕೀಲರು ಇದ್ದಾರೆ. ಮತ್ತು, ಕ್ಷಮಿಸಿ! ನಮ್ಮ ಪ್ರಸಿದ್ಧ ಮಾಹಿತಿ ತಂತ್ರಜ್ಞಾನ ವೃತ್ತಿಪರರನ್ನು ನಾನು ಉಲ್ಲೇಖಿಸುವುದನ್ನು ಮರೆತಿದ್ದೆ. ನಾಳೆ, 30 ಸೀಮಾಂತರ ಭಾರತೀಯರಿಗೆ, ಭಾರತ ಮತ್ತು ವಿದೇಶದಲ್ಲಿ ವಿವಿಧ ಕ್ಷೇತ್ರಗಳಿಗೆ ಅವರು ನೀಡಿರುವ ಕೊಡುಗೆಗಳನ್ನು ಗುರುತಿಸಿ, ರಾಷ್ಟ್ರಪತಿಗಳಿಂದ ಪ್ರತಿಷ್ಠಿತ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಸ್ನೇಹಿತರೇ, ಅವರ ಹಿನ್ನೆಲೆ ಮತ್ತು ವೃತ್ತಿಯನ್ನು ಬದಿಗಿರಿಸಿ, ವಿದೇಶಗಳಲ್ಲಿರುವ ಎಲ್ಲ ಭಾರತೀಯರ ಕಲ್ಯಾಣ ಮತ್ತು ಸುರಕ್ಷತೆಗೆ ನಾವು ಗರಿಷ್ಠ ಆದ್ಯತೆಯನ್ನು ನೀಡುತ್ತಿದ್ದೇವೆ. ಇದಕ್ಕಾಗಿ, ನಮ್ಮ ಆಡಳಿತಾತ್ಮಕ ವ್ಯವಸ್ಥೆಗಳ ವ್ಯವಸ್ಥೆಯನ್ನು ನಾವು ಸಂಪೂರ್ಣವಾಗಿ ಬಲಪಡಿಸುತ್ತಿದ್ದೇವೆ. ಅದು ಅವರು ಪಾಸ್’ಪೋರ್ಟ್’ಗಳನ್ನು ಕಳೆದುಕೊಂಡಿರುವುದಾಗಿರಬಹುದು, ಕಾನೂನು ಸಲಹೆ, ವೈದ್ಯಕೀಯ ನೆರವು, ಆಶ್ರಯ ಅಥವಾ ಪಾರ್ಥಿವ ಶರೀರಗಳನ್ನು ಭಾರತಕ್ಕೆ ಸಾಗಿಸುವ ಅವಶ್ಯಕತೆ ಇರಬಹುದು. ವಿದೇಶದಲ್ಲಿರುವ ಭಾರತೀಯ ಪ್ರಜೆಗಳ ಸಮಸ್ಯೆಗಳನ್ನು ಪರಿಹರಿಸಲು ಸಕ್ರಿಯವಾಗಿರಲು ನಾನು ಎಲ್ಲಾ ಭಾರತೀಯ dootaವಾಸಗಳಿಗೆ ನಿರ್ದೇಶನ ನೀಡಿದ್ದೇನೆ.

ಸಂಪರ್ಕ ಸಾಧ್ಯತೆ, ಸಂವೇದನೆ, ವೇಗ ಮತ್ತು ಪ್ರಾಮಾಣಿಕತೆಯಿಂದ ಸಾಗರೋತ್ತರ ಭಾರತೀಯರ ಅಗತ್ಯಗಳಿಗೆ ನಮ್ಮ ಸ್ಪಂದನೆಯನ್ನು ವ್ಯಾಖ್ಯಾನಿಸಲಾಗುತ್ತದೆ. ಭಾರತೀಯ ದೂತಾವಾಸಗಳಿಂದ ನಿರಂತರ ಸಹಾಯವಾಣಿಗಳು, ಭಾರತೀಯ ಪ್ರಜೆಗಳೊಂದಿಗೆ ಮುಕ್ತ ಮಾತುಕತೆಯ ಸಭೆಗಳು; ಸಲಹಾ ಶಿಬಿರಗಳು; ಪಾಸ್’ಪೋರ್ಟ್ ಸೇವೆಗಳಿಗಾಗಿ ಟ್ವಿಟರ್ ಸೇವಾ; ಮತ್ತು ತಕ್ಷಣದ ಸಂಪರ್ಕಕ್ಕಾಗಿ ಸಾಮಾಜಿಕ ಮಾಧ್ಯಮ ವೇದಿಕೆಗಳ ಬಳಕೆ; ನಿಮ್ಮ ಅಗತ್ಯಕ್ಕೆ ತಕ್ಕನಾಗಿ ನಮ್ಮ ಇರುವಿಕೆಯನ್ನು ತಿಳಿಸಲು ನಾವು ಕೈಗೊಂಡಿರುವ ಕೆಲವು ಕ್ರಮಗಳಾಗಿವೆ.

ವಿದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯ ಪ್ರಜೆಗಳ ಭದ್ರತೆ ನಮಗೆ ಅತ್ಯಂತ ಮಹತ್ವದ್ದಾಗಿದೆ. ನಾವು ಪಾಸ್ಪೋರ್ಟ್ ನ ಬಣ್ಣವನ್ನು ನೋಡುವುದಿಲ್ಲ, ರಕ್ತದ ಸಂಬಂಧವನ್ನು ಯೋಚಿಸುತ್ತೇವೆ. ಭಾರತೀಯ ರಾಷ್ಟ್ರೀಯರಿಗೆ ಎದುರಾದ ದುಃಖದ ಸಂದರ್ಭಗಳಲ್ಲಿ, ಅವರ ಸುರಕ್ಷತೆ, ರಕ್ಷಣೆ ಮತ್ತು ವಾಪಸಾತಿಯನ್ನು ಖಚಿತಪಡಿಸಿಕೊಳ್ಳಲು ನಾವು ಯಾವಾಗಲೂ ಸಿದ್ಧರಾಗಿರುತ್ತೇವೆ. ನಮ್ಮ ವಿದೇಶಾಂಗ ಸಚಿವೆ ಶ್ರೀಮತಿ. ಸುಷ್ಮಾ ಸ್ವರಾಜ್’ರವರು, ಸಾಮಾಜಿಕ ಮಾಧ್ಯಮದ ಬಳಕೆಯ ಮೂಲಕ ವಿದೇಶಗಳಲ್ಲಿ ತೊಂದರೆಗೀಡಾದ ಭಾರತೀಯರಿಗೆ ತಲುಪುವಲ್ಲಿ ಮುಂದಿದ್ದಾರೆ.

‘ಸಂಕಟ್ ಮೋಚನ್’ ಕಾರ್ಯಾಚರಣೆಯ ಅಡಿಯಲ್ಲಿ ಜುಲೈ 2016ರಲ್ಲಿ ನಾವು ದಕ್ಷಿಣ ಸೂಡಾನ್’ನಿಂದ ನೂರ ಐವತ್ತು ಭಾರತೀಯ ರಾಷ್ಟ್ರೀಯರನ್ನು 48 ಗಂಟೆಗಳ ಒಳಗೆ ಸ್ಥಳಾಂತರಿಸಿದೆವು. ಇದಕ್ಕೂ ಮುನ್ನ, ನಾವು ಯೆಮೆನ್’ನ ಸಂಘರ್ಷದ ಸಂದರ್ಭದಲ್ಲಿ ಸಾವಿರಾರು ಮಂದಿ ನಮ್ಮ ನಾಗರಿಕರನ್ನು ಸುಸಂಗತವಾದ ಮತ್ತು ಸುಸಜ್ಜಿತ ಸಹ-ಕಾರ್ಯಾಚರಣೆಗಳಲ್ಲಿ ಸ್ಥಳಾಂತರಿಸಿದ್ದೆವು. ಮತ್ತು ಕಳೆದ ಎರಡು ವರ್ಷ 2014 ಮತ್ತು 2016ರಲ್ಲಿ, ನಾವು ಸುಮಾರು 54 ದೇಶಗಳಿಂದ ತೊಂಭತ್ತು ಸಾವಿರ ಭಾರತೀಯ ಪ್ರಜೆಗಳಿಗೆ ಸ್ವದೇಶಕ್ಕೆ ಮರಳಲು ಅನುವು ಮಾಡಿಕೊಟ್ಟಿದ್ದೇವೆ. ಭಾರತೀಯ ಸಮುದಾಯ ಕಲ್ಯಾಣ ನಿಧಿಯ ಮೂಲಕ ನಾವು ವಿದೇಶಗಳಲ್ಲಿರುವ ಎಂಬತ್ತು ಸಾವಿರಕ್ಕೂ ಹೆಚ್ಚು ಭಾರತೀಯ ರಾಷ್ಟ್ರೀಯರಿಗೆ ಅವರು ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ಸಹಾಯವನ್ನು ಒದಗಿಸಿದ್ದೇವೆ.

ವಿದೇಶಗಳಲ್ಲಿರುವ ಪ್ರತಿಯೊಬ್ಬ ಭಾರತೀಯನಿಗೂ, ಅವರ ಸ್ವದೇಶ ತುಂಬಾ ದೂರವಿದೆ ಎನ್ನುವ ಭಾವನೆ ಬಾರದಂತೆ ನೋಡುವುದು ನಮ್ಮ ಗುರಿಯಾಗಿದೆ. हम लोग छोटे तब सुनते थे, मामा का घर कितना दूर तोबोले दीया जले उतना दूर। भारत कितना दूर, उसको लगना चाहिए दीया जले उतना दूर, इतनी निकटता उसको महसूस होनी चाहिए।दुनिया के किसी भी देश में क्‍यों न रहता हो, उसको ये अपनापन महसूस होना चाहिए। ವಿದೇಶದಲ್ಲಿ ಆರ್ಥಿಕ ಅವಕಾಶಗಳನ್ನು ಹುಡುಕುತ್ತಿರುವ ಕಾರ್ಮಿಕರಿಗೆ, ಅವರು ತೊಂದರೆಗೆ ಸಿಲುಕುವುದನ್ನು ಕಡಿಮೆ ಮಾಡಲು ಹೆಚ್ಚು ಹೆಚ್ಚು ಸೌಲಭ್ಯಗಳನ್ನು ಒದಗಿಸುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ನಮ್ಮ ಧ್ಯೇಯವು: “ಭದ್ರತೆ, ತರಬೇತಿ, ಉದ್ಯೋಗಗಳನ್ನು ಜತೆಗೂಡಿಸುವುದು” ಆಗಿದೆ. ಇದಕ್ಕಾಗಿ, ನಾವು ನಮ್ಮ ವ್ಯವಸ್ಥೆಗಳನ್ನು ಸುವ್ಯವಸ್ಥಿತಗೊಳಿಸಿದ್ದೇವೆ ಮತ್ತು ಭಾರತೀಯ ಕಾರ್ಮಿಕರ ವಲಸೆಯನ್ನು ರಕ್ಷಿಸಲು ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ.ಎಂಟು ಲಕ್ಷ ವಲಸಿಗ ಇಂಜಿನಿಯರ್’ಗಳಿಗೆ ವಿದೇಶಗಳಲ್ಲಿ ಉದ್ಯೋಗಕ್ಕಾಗಿ ಎಮಿಗ್ರೇಷನ್ ಕ್ಲಿಯರೆನ್ಸ್ ಅನ್ನು ಆನ್’ಲೈನ್’ನಲ್ಲಿ ನೋಂದಾಯಿತ ನೇಮಕಾತಿ ಏಜೆಂಟ್ ಮುಖಾಂತರ ನೀಡಲಾಗಿದೆ. ವಿದೇಶಿ ಉದ್ಯೋಗದಾತರು ಇ-ಮೈಗ್ರೇಟ್ ಪೋರ್ಟಲ್’ನಲ್ಲಿ ಆನ್’ಲೈನ್ ನೋಂದಣಿ ಮಾಡಿಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ.

ಅಲ್ಲದೆ, ವಲಸೆ ಕಾರ್ಮಿಕರ ಕುಂದುಕೊರತೆಗಳು, ದೂರುಗಳು ಮತ್ತು ಅರ್ಜಿಗಳು ಇ-ಮೈಗ್ರೇಟ್ ಮತ್ತು “ಮದದ್” ವೇದಿಕೆಗಳ ಮೂಲಕ ಆನ್’ಲೈನ್’ನಲ್ಲಿ ಇತ್ಯರ್ಥ ಮಾಡುವುದನ್ನು ಮುಂದುವರೆಸಲಾಗಿದೆ. ನಾವು ಭಾರತದಲ್ಲಿನ ಕಾನೂನುಬಾಹಿರ ನೇಮಕಾತಿ ಏಜೆಂಟ್’ಗಳ ವಿರುದ್ಧ ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಕಾನೂನುಬಾಹಿರ ಏಜೆಂಟ್’ಗಳ ವಿರುದ್ಧ ಸಿಬಿಐ ಅಥವಾ ರಾಜ್ಯ ಪೋಲಿಸರಿಂದ ಬಂಧನಕ್ಕೆ ಆದೇಶಿಸಲಾಗುವುದು; ಮತ್ತು ನೇಮಕಾತಿ ಏಜೆಂಟ್’ಗಳ ಬ್ಯಾಂಕ್ ಖಾತರಿ ಮೊತ್ತವನ್ನು 20 ಲಕ್ಷದಿಂದ 50 ಲಕ್ಷಕ್ಕೆ ಹೆಚ್ಚಿಸಲಾಗಿದೆ; ಈ ನಿಟ್ಟಿನಲ್ಲಿ ಇವು ನಮ್ಮ ಕೆಲವು ಕ್ರಮಗಳಾಗಿವೆ. ಭಾರತೀಯ ವಲಸೆ ಕಾರ್ಮಿಕರು ಉತ್ತಮ ಆರ್ಥಿಕ ಅವಕಾಶಗಳನ್ನು ಅನುಭವಿಸುವುದನ್ನು ಖಚಿತಪಡಿಸಿಕೊಳ್ಳಲು, ವಿದೇಶಿ ಉದ್ಯೋಗಗಳನ್ನು ಹುಡುಕುತ್ತಿರುವ ಭಾರತೀಯ ಯುವಜನರನ್ನು ಉದ್ದೇಶಿಸಿ ಶೀಘ್ರದಲ್ಲೇ ನಾವು “ಪ್ರವಾಸಿ ಕೌಶಲ್ ವಿಕಾಸಯೋಜನಾ” ಎಂಬ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದ್ದೇವೆ .

कभी-कभी जो पहली बार विदेश जाते हैं, ज्‍यादा पढ़े-लिखे नहीं हैं; अगर उनका वहां के देश की आवश्‍यकता के अनुसार यहीं पर उसका 15 दिन, एक महीने का कोर्स हो, उसकी development हो। मान लीजिए वो किसी देश में house keeping के काम के लिए जा रहा है, अगर यहां उसकी training होगी तो बड़े विश्‍वास के साथ जायेगा। और इसलिए ये ‘’प्रवासी कौशल विकास योजना’’ भारत से बाहरजाने वाले लोग एक value-added अवस्‍था में जाएं जिसके कारण एक नया वश्विास पैदा हो, उस‍ दिशा में हम प्रयास कर रहे हैं, औरउससे मुझे लगता है जो गरीब तबके के लोग छोटे-छोटे काम करने के लिए जा रहे हैं, उनको ज्‍यादा लाभ होगा। कुछ लोगों को उस देशके कुछ sentences हैं, कुछ उस देश के manners हैं, कुछ cultural चीजें सीखने की जरूरी होती हैं। वो भी कितने ही पढ़े-लिखे व्‍यक्तिक्‍यों न हों, उसको काम आती हैं; उस पर भी हम बल दे रहे हैं, जिसको हम soft-skill कहते हैं। तो ऐसी व्‍यवस्‍थाएं जिसके कारण भारतका व्‍यक्ति विश्‍व में पैर रखते ही उसको कुछ भी पराया न लगे; औरों को भी वो अपना लगे और उसका आत्‍मविश्‍वास उस ऊंचाइयोंको पार करने वाला हो जैसे वो सालों से उस भूमि को जानता है; वहां के लोगों को जानता है; वो तुरंत ही अपने आपको set कर सकता है, तो उस रूप में उसकी चिन्‍ता, व्‍यवस्‍था हम कर रहे हैं।

ಸ್ನೇಹಿತರೇ. ಗಿರಿಮಿತಿಯಾ ದೇಶಗಳಲ್ಲಿ ವಾಸಿಸುವ ಭಾರತೀಯ ವಲಸಿಗರೊಂದಿಗೆ ನಾವು ವಿಶೇಷ ಅನುಬಂಧವನ್ನು ಹೊಂದಿದ್ದೇವೆ – ಅವರು ತಮ್ಮ ಮೂಲ ಸ್ಥಳದಿಂದ ಆಳವಾದ ಮತ್ತು ಭಾವನಾತ್ಮಕವಾದ ಅನುಬಂಧವನ್ನು ಹೊಂದಿರುತ್ತಾರೆ. ಈ ದೇಶಗಳಲ್ಲಿನ ಭಾರತೀಯ ಮೂಲದ ವ್ಯಕ್ತಿಗಳು ನಾಲ್ಕು ಅಥವಾ ಐದು ತಲೆಮಾರುಗಳ ಹಿಂದೆ ಅವರು ವಿದೇಶದಲ್ಲಿ ಹೋಗಿದ್ದು ಒಸಿಐ ಕಾರ್ಡ್ ಪಡೆದುಕೊಳ್ಳಲು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ನಮಗೆ ತಿಳಿದಿದೆ. ನಾವು ಅವರ ಕಾಳಜಿಯನ್ನು ಅರ್ಥಮಾಡಿಕೊಂಡಿದ್ದೇವೆ ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಗಳನ್ನು ಮಾಡಿತ್ತಿದ್ದೇವೆ.

ಗಿರಿಮಿತಿಯಾ ವಂಶಸ್ಥರು ಒಸಿಐ ಕಾರ್ಡುಗಳಿಗೆ ಅರ್ಹರಾಗಲು ಸಾಧ್ಯವಾಗುವಂತೆ ನಾವು ಹೊಸ ವಿಧಾನಗಳು ಮತ್ತು ದಾಖಲಾತಿ ಅಗತ್ಯಗಳನ್ನು ಪೂರೈಸಲು ಮಾರಿಷಸ್ ನಿಂದ ಪ್ರಾರಂಭಿಸುತ್ತಿರುವುದನ್ನು ಘೋಷಿಸಲು ನನಗೆ ಸಂತಸವಿದೆ, ಹಾಗೆಯೇ ಫಿಜಿ, ರಿಯೂನಿಯನ್ ದ್ವೀಪಗಳು, ಸುರಿನಾಮ್, ಗಯಾನಾ ಮತ್ತು ಇತರ ಕೆರಿಬಿಯನ್ ರಾಜ್ಯಗಳಲ್ಲಿನ ಪಿಐಒಗಳ ಇದೇ ರೀತಿಯ ತೊಂದರೆಗಳನ್ನು ಪರಿಹರಿಸಲು ನಾವು ಬದ್ಧರಾಗಿದ್ದೇವೆ.

ಕಳೆದ ಪ್ರವಾಸಿ ಭಾರತೀಯ ದಿವಸ್ ದಿಂದ ನಾನು ವಿನಂತಿಸಿದಂತೆ, ಎಲ್ಲಾ ಪಿಐಒ ಕಾರ್ಡುದಾರರು ತಮ್ಮ ಪಿಐಒ ಕಾರ್ಡುಗಳನ್ನು ಒಸಿಐ ಕಾರ್ಡುಗಳಿಗೆ ಪರಿವರ್ತಿಸಿಕೊಳ್ಳಲು ನಾನು ಮತ್ತೊಮ್ಮೆ ಕೋರುತ್ತಿದ್ದೇನೆ. मैं बोलता रहता हूं, आग्रह भी करता हूं, लेकिन मैं जानता हूं कि आप लोग बहुत व्‍यस्‍त हैं और इसीलिए येशायद काम रह जाता है। तो आपकी इस व्‍यस्‍तता को देखते हुए, ಅಂತಹ ಪರಿವರ್ತನೆಗಾಗಿ ಗಡುವನ್ನು 2016ರ ಡಿಸೆಂಬರ್ 31 ರಿಂದ ಜೂನ್ 30, 2017ರ ವರೆಗೆ ರವರೆಗೆ ಯಾವುದೇ ದಂಡವಿಲ್ಲದೆಯೇ ನಾವು ವಿಸ್ತರಿಸಿದ್ದೇವೆ ಎಂದು ಘೋಷಿಸಲು ನನಗೆ ಸಂತೋಷವಾಗುತ್ತಿದೆ. ಈ ವರ್ಷದ ಜನವರಿಯಿಂದ ದೆಹಲಿ ಮತ್ತು ಬೆಂಗಳೂರಿನ ವಿಮಾನ ನಿಲ್ದಾಣಗಳ ಮೂಲಕ ಪ್ರಾರಂಭಿಸಿ, ಒಸಿಐ ಕಾರ್ಡುದಾರರಿಗೆ ನಮ್ಮ ವಿಮಾನ ನಿಲ್ದಾಣಗಳಲ್ಲಿನ ವಲಸೆ ಕೇಂದ್ರಗಳಲ್ಲಿ ವಿಶೇಷ ಕೌಂಟರ್’ಳನ್ನು ಏರ್ಪಾಡು ಮಾಡುತ್ತಿದ್ದೇವೆ.

ಸ್ನೇಹಿತರೇ, ಪ್ರಸಕ್ತ, ಸುಮಾರು 7 ಲಕ್ಷ ಭಾರತೀಯ ವಿದ್ಯಾರ್ಥಿಗಳು ವಿದೇಶಗಳಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. और मुझे भली भाति ज्ञात हैकिविदेश मे रह रहा हर भारतीय, भारत की प्रगति से जुड़ने के लए आतुर है। उनका ज्ञान, विज्ञान और भारत के ज्ञान का मिलन, भारतकोआर्थिक प्रगति को असीम उंचाईयों पर ले जायेगा।

मेरा सदैव यह प्रयास और विश्वास रहा है कि सक्षम तथा successful प्रवासियो को भारत की विकास गाथासे जुड़ने का सम्पूर्ण मौकामिलना चाहिए, खास तौर से विज्ञान तथा तकनीकी क्षेत्रों में and technology के field में।

ಅದಕ್ಕಾಗಿ ನಾವು ಕೆಲವು ಕ್ರಮಗಳನ್ನು ಕೈಗೊಂಡಿದ್ದೇವೆ. ಅವುಗಳಲ್ಲಿ ಒಂದೆಂದರೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಪ್ರಾರಂಭಿಸುತ್ತಿರುವ ಸಂದರ್ಶಕ ಸಹಾಯಕ ಜಂಟಿ ಸಂಶೋಧನಾ ಸಿಬ್ಬಂದಿ ಅಥವಾ ’ವಜ್ರ‘ಯೋಜನೆಯು ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಲು ಮತ್ತು ಕೊಡುಗೆ ನೀಡಲು ಅನಿವಾಸಿ ಭಾರತೀಯರು ಮತ್ತು ಸಾಗರೋತ್ತರ ವೈಜ್ಞಾನಿಕ ಸಮುದಾಯಕ್ಕೆ ಅನುವು ಮಾಡಿಕೊಡುತ್ತದೆ. ಈ ಯೋಜನೆಯಡಿಯಲ್ಲಿ ಸಾಗರೋತ್ತರ ಭಾರತೀಯರು ಭಾರತ ಸರ್ಕಾರದ, ಅನುದಾನಿತ ಸಂಸ್ಥೆಯೊಂದರಲ್ಲಿ ಒಂದರಿಂದ ಮೂರು ತಿಂಗಳು ಕೆಲಸ ಮಾಡಬಹುದು. ಮತ್ತು, ಅದೂ ಒಳ್ಳೆಯ ಸಂಭಾವನೆಯೊಂದಿಗೆ. ಮತ್ತು ಎಲ್ಲದಕ್ಕೂ ಮಿಗಿಲಾಗಿ ಈ ಮೂಲಕ ಅನಿವಾಸಿ ಭಾರತೀಯರು ದೇಶದ ಪ್ರಗತಿಯಲ್ಲಿ ತಮ್ಮ ಒಂದು ಕೊಡುಗೆಯನ್ನು ನೀಡಬಹುದಾಗಿರುತ್ತದೆ.

ಸ್ನೇಹಿತರೇ, ಭಾರತ ಮತ್ತು ಸಾಗರೋತ್ತರ ಭಾರತೀಯರ ನಡುವೆ ಸಂಪರ್ಕ ಸಾಧಿಸುವುದು ಮತ್ತು ಎರಡೂ ಪಕ್ಷಗಳನ್ನು ಸಮೃದ್ಧಗೊಳಿಸುವ ಅಗತ್ಯವಿದೆಯೆಂಬುದು ನನ್ನ ದೃಢ ನಂಬಿಕೆಯಾಗಿದೆ. ಈ ಗುರಿಯನ್ನು ತಲುಪಲು, ಕಳೆದ ವರ್ಷ ಅಕ್ಟೋಬರ್’ನಲ್ಲಿ, ಮಹಾತ್ಮ ಗಾಂಧಿಯವರ ಜನ್ಮದಿನದಂದು, ನವದೆಹಲಿಯಲ್ಲಿ ಪ್ರವಾಸಿ ಭಾರತಿಯ ಕೇಂದ್ರವನ್ನು ಉದ್ಘಾಟಿಸುವ ಅವಕಾಶ ನನಗೆ ದೊರೆತಿತ್ತು. ಈ ಕೇಂದ್ರವು ಸಾಗರೋತ್ತರ ಭಾರತೀಯ ಸಮುದಾಯಕ್ಕೆ ಸಮರ್ಪಿತವಾಗಿದೆ. ಅದು ಭಾರತೀಯರ ಜಾಗತಿಕ ವಲಸೆ, ಅನುಭವಗಳು, ಹೋರಾಟಗಳು, ಸಾಧನೆಗಳು ಮತ್ತು ಆಕಾಂಕ್ಷೆಗಳ ಸಂಕೇತವಾಗಿ ಇರಬೇಕೆಂದು ನಾವು ಬಯಸುತ್ತೇವೆ. ಸಾಗರೋತ್ತರ ಭಾರತೀಯ ಸಮುದಾಯದೊಂದಿಗೆ ಸಂಪರ್ಕವನ್ನು ಪುನರ್ ವ್ಯಾಖ್ಯಾನಿಸಲು, ಕೇಂದ್ರದ ಪ್ರಯತ್ನಗಳನ್ನು ಬಲಿಷ್ಟಗೊಳಿಸಲು ಆ ಕೇಂದ್ರವು ಮತ್ತೊಂದು ಪ್ರಮುಖ ವೇದಿಕೆಯಾಗುವುದೆಂಬ ಭರವಸೆಯನ್ನು ನಾನು ಹೊಂದಿದ್ದೇನೆ.

Friends, हमारे प्रवासी भारतीय कई पीढि़यों से विदेशो में है। हर पीढ़ी के अनुभव ने भारत को और सक्षम बनाया है. जैसे नए पौधे परहमारे भीतर अलग से एक स्नेह उभर आता है, उसी तरह विदेश में रह युवा प्रवासी भारतीय भी हमारे लिए अनमोल हैं, विशेष हैं। हमप्रवासी भारतीयों की युवा पीढ़ीयों से, young Pravasis से करीबी और मज़बूत और संपर्क और गहरा बनाना चाहते हैं।

ಭಾರತೀಯ ಮೂಲದ ಯುವಜನರು ತಮ್ಮ ತಾಯಿನಾಡಿಗೆ ಭೇಟಿ ಮಾಡುವ ಮತ್ತು ಅವರ ಭಾರತೀಯ ಸಂಬಂಧಗಳು, ಸಂಸ್ಕೃತಿ ಮತ್ತು ಪರಂಪರೆಯನ್ನು ಮರುಜೋಡಿಸಿಕೊಳ್ಳಲು ಅವಕಾಶವನ್ನು ಒದಗಿಸುವ ಸಲುವಾಗಿ- ಸರಕಾರದ ಭಾರತವನ್ನು ಅರಿತುಕೊಳ್ಳಿ ಕಾರ್ಯಕ್ರಮವನ್ನು ವಿಸ್ತರಿಸಿದ್ದೇವೆ. ಅದರ ಅಡಿಯಲ್ಲಿ ಮೊದಲ ಬಾರಿಗೆ, ಯುವ ಭಾರತೀಯರ ಆರು ಗುಂಪುಗಳು ಈ ವರ್ಷ ಭಾರತಕ್ಕೆ ಭೇಟಿ ನೀಡುತ್ತಿವೆ.

ಸದರಿ ಯುವ ಸಾಗರೋತ್ತರ ಭಾರತೀಯರು ಪ್ರವಾಸಿ ಭಾರತಿಯ ದಿವಸ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಂದು ಇಲ್ಲಿಗೆ ಬಂದಿರುವುದನ್ನು ತಿಳಿದು ನನಗೆ ಖುಷಿಯಾಗಿದೆ. ಯುವ ಪ್ರವಾಸಿಗಳಿಗೆ ವಿಶೇಷ ಸ್ವಾಗತ ಕೋರುತ್ತಿದ್ದೇನೆ. ನಿಮ್ಮ ದೇಶಗಳಿಗೆ ಹಿಂದಿರುಗಿದ ಮೇಲೆ, ನೀವು ನಮ್ಮೊಂದಿಗೆ ಸಂಪರ್ಕದಲ್ಲಿ ಇರುತ್ತೀರೆಂದು, ನೀವು ಎಲ್ಲಿಯೇ ಇರಲಿ, ಮತ್ತೆ ಮತ್ತೆ ಭಾರತಕ್ಕೆ ಭೇಟಿ ನೀಡುತ್ತೀರಿ ಎಂದು ನಾನು ಭಾವಿಸುತ್ತೇನೆ. ಕಳೆದ ವರ್ಷ, ಯುವ ಸಾಗರೋತ್ತರ ಭಾರತೀಯರಿಗೆ “ಭಾರತ್ ಕೋ ಜಾನೊ” ಎಂಬ ಆನ್’ಲೈನ್ ರಸಪ್ರಶ್ನೆ ಸ್ಪರ್ಧೆಯ ಮೊದಲ ಆವೃತ್ತಿಯಲ್ಲಿ 5000 ಕ್ಕಿಂತ ಹೆಚ್ಚು ಯುವ ಅನಿವಾಸಿ ಭಾರತೀಯರು ಮತ್ತು ಭಾರತೀಯ ಮೂಲದ ಪ್ರಜೆಗಳು ಭಾಗವಹಿಸಿದ್ದರು. ಈ ವರ್ಷ ಎರಡನೇ ಆವೃತ್ತಿಯಲ್ಲಿ ಕನಿಷ್ಠ ಐವತ್ತು ಸಾವಿರ ಯುವ ಸಾಗರೋತ್ತರ ಭಾರತೀಯರ ಪಾಲ್ಗೊಳ್ಳುವರೆಂದು ನಾನು ಭರವಸೆಯನ್ನು ಹೊಂದಿದ್ದೇನೆ.

ಯುವ ಸ್ನೇಹಿತರೇ, ಈ ಆಂದೋಲನದಲ್ಲಿ ನೀವು ನನಗೆ ನೆರವು ನೀಡುತ್ತೀರಾ? ನೀವು ನನ್ನೊಂದಿಗೆ ಕೆಲಸ ಮಾಡಲು ಸಿದ್ಧರಿದ್ದೀರಾ? ಹಾಗಾದರೆ ನಾವು 50 ಸಾವಿರ ಮಂದಿಯನ್ನು ಏಕೆ ನೋಡಬಾರದು?

ಸ್ನೇಹಿತರೇ, ಇಂದು ಭಾರತ ಅಭಿವೃದ್ಧಿಶೀಲ ದೇಶಗಳಲ್ಲಿ ಮುಂಚೂಣಿಯಲ್ಲಿ ಇದೆ. ಅಂತಹ ಅಭಿವೃದ್ಧಿ ಕೇವಲ ಆರ್ಥಿಕವಾಗಿ ಆಗಬಾರದು. ಬದಲಿಗೆ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವಾಗಿ ಬೆಳೆಯಬೇಕು. ಭಾರತೀಯ ಮೂಲದ ವಿದೇಶಿ ಪ್ರಜೆಗಳು ಮತ್ತು ಅನಿವಾಸಿ ಭಾರತೀಯರಿಗೆ ವಿದೇಶೀ ನೇರ ಬಂಡವಾಳ ನಿಯಮಗಳನ್ನು ಸಂಪೂರ್ಣವಾಗಿ ಸಡಿಲಿಸಲಾಗಿದೆ. ಮತ್ತು ಎಫ್’ಡಿಐ ಕುರಿತು ನನ್ನ ಭಾವನೆಯೆಂದರೆ, ಒಂದು ವ್ಯಾಖ್ಯಾನದಲ್ಲಿ ಎಫ್’ಡಿಐ ಎಂದರೆ ವಿದೇಶಿ ನೇರ ಬಂಡವಾಳ, ಮತ್ತು ಎರಡನೆಯದು ಮೊದಲು ಭಾರತವನ್ನು ಅಭಿವೃದ್ಧಿಸು ಎನ್ನುವುದಾಗಿದೆ. ಪಿಐಒಗಳಿಂದ ವಾಪಸಾತಿ ಇಲ್ಲದ ಆಧಾರದ ಮೇಲೆ ಬಂಡವಾಳ ಹೂಡಿಕೆ; ಮತ್ತು ಅವರ ಮಾಲೀಕತ್ವ ಹೊಂದಿರುವ ಕಂಪನಿಗಳು, ಟ್ರಸ್ಟ್’ಗಳು ಮತ್ತು ಪಾಲುದಾರಿಕೆಗಳು, ಈಗ ನಿವಾಸಿ ಭಾರತೀಯರು ಮಾಡಿದ ಹೂಡಿಕೆಯ ರೀತಿಯಲ್ಲಿಯೇ ದೇಶೀಯ ಬಂಡವಾಳ ಎಂದು ಪರಿಗಣಿಸಲಾಗುತ್ತದೆ.ನಮ್ಮ ಇತರೆ ಕಾರ್ಯಕ್ರಮಗಳಾದ, ಸ್ವಚ್ಛ ಭಾರತ, ಡಿಜಿಟಲ್ ಇಂಡಿಯಾ ಆಂದೋಲನ, ಸ್ಟಾರ್ಟ್ ಅಪ್ ಇಂಡಿಯಾ ಮೊದಲಾದವುಗಳ ಮೂಲಕ ಅನಿವಾಸಿ ಭಾರತೀಯರು ಭಾರತದ ಸಾಮಾನ್ಯ ಜನರ ಅಭಿವೃದ್ಧಿಯಲ್ಲಿ ನೇರವಾಗಿ ಪಾಲ್ಗೊಳ್ಳಬಹುದಾಗಿದೆ. ನಿಮ್ಮಲ್ಲಿ ಕೆಲವರು ವ್ಯವಹಾರ ಮತ್ತು ಹೂಡಿಕೆಗಳಲ್ಲಿ ಕೊಡುಗೆ ನೀಡಲು ಇಷ್ಟಪಡುತ್ತಿದ್ದರೆ, ಇತರೆ ಕೆಲವರು ಸ್ವಚ್ಛ ಭಾರತ್, ನಮಾಮಿ ಗಂಗೆ ಮತ್ತು ಇತರೆ ಯೋಜನೆಗಳಿಗೆ ದೇಣಿಗೆಯನ್ನು ನೀಡುವ ಮೂಲಕ ನೆಮ್ಮದಿಯಿಂದ ಇರಬಹುದೆಂದು ಭಾವಿಸುತ್ತಿದ್ದಾರೆ.

ಇನ್ನು ಕೆಲವರು ಇಲ್ಲಿನ ಕುಂದು ಕೊರತೆಗಳ ನಿವಾರಣೆ, ವಿವಿಧ ಕ್ಷೇತ್ರಗಳಲ್ಲಿ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮಗಳಿಗೆ ನೆರವಾಗುವುದು ಅಥವಾ ಕೊಡುಗೆ ನೀಡುವುದರಲ್ಲಿ ಅವರ ಅಮೂಲ್ಯವಾದ ಸಮಯ ಮತ್ತು ಪರಿಶ್ರಮವನ್ನು ಮೀಸಲಿಡುವ ಪ್ರೇರಣೆಯನ್ನು ಹೊಂದಿರಬಹುದು.
ಸಾಗರೋತ್ತರ ಭಾರತೀಯ ಸಮುದಾಯದೊಂದಿಗೆ ಭಾರತದ ಪಾಲುದಾರಿಕೆಯನ್ನು ಬಲಪಡಿಸಲು ಅಗತ್ಯವಾದ ನಿಮ್ಮ ಎಲ್ಲಾ ಪ್ರಯತ್ನಗಳನ್ನು ನಾವು ಸ್ವಾಗತಿಸುತ್ತೇವೆ. ಪ್ರವಾಸಿ ಭಾರತೀಯ ಸಮ್ಮೇಳನ(ಪಿಬಿಡಿ ಕನ್ವೆನ್ಷನ್)ದಲ್ಲಿ ಪ್ರದರ್ಶನವನ್ನು ಸಂದರ್ಶಿಸಲು ಮಾಡಲು ನಾನು ನಿಮ್ಮನ್ನು ಆಮಂತ್ರಿಸುತ್ತೇನೆ. ಅದು ನಾವು ಜಾರಿ ಗೊಳಿಸುತ್ತಿರುವ ಕೆಲವು ಪ್ರಮುಖ ಕಾರ್ಯಕ್ರಮಗಳ ಒಂದು ನೋಟವನ್ನು ನೀಡುತ್ತದೆ ಮತ್ತು ನಮ್ಮೊಂದಿಗೆ ನೀವು ಹೇಗೆ ಪಾಲುದಾರರಾಗಬಹುದು ಎಂಬುದನ್ನು ಆಲೋಚಿಸಲು ನೆರವಾಗುತ್ತದೆ.

Friends, यहां आने के बाद आपने सुना होगा, देखा होगा हमने भ्रष्टाವचार के खिलाफ, काले धन के खिलाफ corruption और black money के खिलाफ एक बहुत बड़ा बीड़ा उठाया है। black money तथा corruption हमारी राजनीति तथा देश तथा समाज तथा शासनको धीरे, धीरे, धीरे, धीरे खोखला करता रहा है। और ये दुर्भाग्‍य है कि black money के कुछ राजनैतिक पुजारी हमारे प्रयासों को जनताके विरोधी दर्शाते हैं। corruption और काले धन को समाप्त करने में भारत सरकार की नीतियों का जो समर्थन प्रवासी भारतीयों नेकिया है उसके लिए मैं आपका अभिनन्दन करता हूँ, आपका साधुवाद करता हूं, आपका धन्यथवाद करता हूं।

ಸ್ನೇಹಿತರೇ, ಅಂತಿಮವಾಗಿ, ನಾನು ಹೇಳಲು ಇಚ್ಚಿಸುವುದೇನೆಂದರೆ ಭಾರತೀಯರಾಗಿ, ಒಂದು ಸಾಮಾನ್ಯ ಪರಂಪರೆ ನಮ್ಮೆಲ್ಲರನ್ನು ಒಟ್ಟಿಗೆ ತಂದಿದೆ. ಮತ್ತು, ನಾವು ಎಲ್ಲಿದ್ದೇವೆಂಬುದು ಪ್ರಶ್ನೆಯಲ್ಲ. ನಾವು ಜಗತ್ತಿನಾದ್ಯಂತ ಎಲ್ಲಿಯಾದರೂ ಇರಬಹುದು. ಆ ಸಾಮಾನ್ಯ ಅನುಬಂಧವು ನಮ್ಮನ್ನು ಗಟ್ಟಿಯಾಗಿ ಬೆಸೆಯುತ್ತದೆ. और इसलिएमेरे प्याುरे देशवासियो आपने जो सपने संजो के रखे हुए हैं, आपके सपने हमारे संकल्‍प हैं और हम सब मिल करके उन सपनों को साकारकरने के लिए अगर व्यಇवस्था್ में बदलाव जरूरी हो, अगर कानून नियमों में बदलाव की जरूरत हो, साहसिक कदम उठाने की जरूरत हो, हर एक को साथ लेकर चलने के लिए जो कुछ भी करना पड़े, करने की आवश्यखकता हो ये सब करते हुए मैं विश्वांस से कहता हूं 21वीं सदीहिन्दुिस्तालन की सदी है। बहुत-बहुत धन्य वाद ।
ಧನ್ಯವಾದಗಳು ಮತ್ತು ಜೈ ಹಿಂದ್.

*****