Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬೆಲ್ಜಿಯಂನೊಂದಿಗೆ ಹಣಕಾಸು ವಂಚನೆ ತಡೆ ಮತ್ತು ದ್ವಿತೆರಿಗೆ ತಪ್ಪಿಸಲು ಒಪ್ಪಂದದ ತಿದ್ದುಪಡಿ ಶಿಷ್ಟಾಚಾರಕ್ಕೆ ಸಚಿವ ಸಂಪುಟ ಸಮ್ಮತಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಆದಾಯದ ಮೇಲಿನ ತೆರಿಗೆಗೆ ಸಂಬಂಧಿಸಿದಂತೆ ದ್ವಿ ತೆರಿಗೆ ತಪ್ಪಿಸಲು ಮತ್ತು ಹಣಕಾಸು ವಂಚನೆ ತಡೆಯಲು ಭಾರತ ಮತ್ತು ಬೆಲ್ಜಿಯಂನೊಂದಿಗೆ ಒಪ್ಪಂದ ತಿದ್ದುಪಡಿ ಶಿಷ್ಟಾಚಾರಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

ಶಿಷ್ಟಾಚಾರದಲ್ಲಿನ ತಿದ್ದುಪಡಿಗಳು ಎರಡು ರಾಷ್ಟ್ರಗಳ ನಡುವೆ ತೆರಿಗೆಗೆ ಸಂಬಂಧಿತ ಮಾಹಿತಿಯ ವಿನಿಮಯದ ಹಾಲಿ ಚೌಕಟ್ಟಿನ ವ್ಯಾಪ್ತಿಯನ್ನು ವಿಸ್ತರಿಸುತ್ತದೆ, ಇದು ತೆರಿಗೆ ವಂಚನೆ ಮತ್ತು ತೆರಿಗೆ ತಪ್ಪಿಸಿಕೊಳ್ಳುವುದನ್ನು ತಡೆಯುತ್ತದೆ. ಈ ಶಿಷ್ಟಾಚಾರವು ತೆರಿಗೆ ಸಂಗ್ರಹಣೆಯ ಪರಸ್ಪರ ಸಹಕಾರದ ಮೇಲಿನ ಹಾಲಿ ಒಪ್ಪಂದದ ನಿಯಮಗಳನ್ನು ಪರಿಷ್ಕರಿಸುತ್ತದೆ.